ಅದೊಂದು ಕಾಲವಿತ್ತು, ದೇಶಕ್ಕಾಗಿ ಮತ್ತು ದೇಶದ ಏಳಿಗೆಗಾಗಿ ದುಡಿಯುತ್ತಿದ್ದ ರಾಜಕೀಯ ವ್ಯಕ್ತಿಗಳು ಪ್ರಪಂಚದ ಎಲ್ಲಾ ದೇಶಗಳಲ್ಲೂ ಇದ್ದರು. ಅಬ್ರಾಹಮ್ ಲಿಂಕನ್, ಜಾನ್ ಎಫ್ ಕೆನಡಿ, ಲಾಲ್ ಬಹದ್ದೂರ್ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿ ಹೀಗೆ ಅನೇಕ ರಾಜಕೀಯ ವ್ಯಕ್ತಿಗಳು ದೇಶದ ಒಳಿತಿಗಾಗಿ ತಮ್ಮ ಪ್ರಾಣವನ್ನು ಕೂಡ ಕೊಡಲು ಹಿಂಜರಿಯದೆ ದೇಶದ ಪ್ರಗತಿಗಾಗಿ ದುಡಿಯುತ್ತಿದ್ದರು. ಆದರೆ ಕಾಲ ನಿಧಾನವಾಗಿ ಬದಲಾಗತೊಡಗಿತು, ಮನುಷ್ಯನ ಸ್ವಾರ್ಥ ಹೆಚ್ಚಾಗತೊಡಗಿತು, ದೇಶದ ಮೇಲಿನ ಅಭಿಮಾನ ಕಡಿಮೆಯಾಗತೊಡಗಿತು. ಇದರ ಪರಿಣಾಮವೇ ಜನರ ಹಣವನ್ನು ಅವರಿಗೆ ತಿಳಿಯದ ಹಾಗೆ ಕೊಳ್ಳೆ ಹೊಡೆಯುವುದು. ದೇಶವನ್ನು ರಕ್ಷಿಸಲಿ,ಅದರ ಏಳಿಗೆಗಾಗಿ ದುಡಿಯಲಿ ಎಂದು ಆಯ್ಕೆ ಮಾಡಿದ ಜನರ ವಿರುದ್ದವೇ ಕತ್ತಿ ಮಸಿಯಲು ಶುರು ಮಾಡಿದರು ಜನನಾಯಕರು. ತನ್ನನ್ನು ಆಯ್ಕೆ ಮಾಡಿದ ಜನರನ್ನು ಲೂಟಿ ಮಾಡಲು ಶುರು ಮಾಡಿದ ನಾಯಕರು ಸ್ವಾರ್ಥದ ಜೀವನ ನಡೆಸಲು ಶುರು ಮಾಡಿ ಕೋಟಿಗಟ್ಟಲೆ ಹಣ ಮಾಡತೊಡಗಿದರು. ಹೀಗೆ ಒಬ್ಬೊಬ್ಬರಾಗಿ ಹಣ ಮಾಡಲೆಂದೆ ರಾಜಕೀಯಕ್ಕೆ ಬರತೊಡಗಿದರು. ಇದರ ಪರಿಣಾಮವೆ ಎಲ್ಲೆಡೆ “ಭ್ರಷ್ಟಾಚಾರ” ಎನ್ನುವುದು ಹುಟ್ಟಿಕೊಂಡಿತು. ದೇಶದ ಏಳಿಗೆಗಾಗಿ ದುಡಿಯಬೇಕಿದ್ದ ನಾಯಕರೆ ಹಣ ಲೂಟಿ ಮಾಡಲು ಶುರು ಮಾಡಿದಾಗ ದೇಶವು ಹೇಗೆ ಏಳಿಗೆ ಆಗುತ್ತದೆ ನೀವೇ ಹೇಳಿ. ಬನ್ನಿ ಇಂದು ನಿಮಗೆ ಈ ರೀತಿ ಭ್ರಷ್ಟಾಚಾರಕ್ಕೆ ಇಳಿದು ಪ್ರಪಂಚದಲ್ಲಿಯೇ ಅತ್ಯಂತ “ಭ್ರಷ್ಟಾಚಾರಿ ರಾಜಕಾರಣಿ” ಎಂದು ಕೆಟ್ಟ ಹೆಸರು ಹೊತ್ತ ಕೆಲ ರಾಜಕೀಯ ನಾಯಕರುಗಳ ಬಗ್ಗೆ ತಿಳಿಸಿಕೊಡುತ್ತೇವೆ.

1) ಜೋಸೆಫ್ ಎಸ್ಟ್ರಡ – Joseph Estrada

ಫಿಲಿಪೈನ್ಸ್ ದೇಶದ ಪ್ರಸಿದ್ದ ಸಿನೆಮಾ ನಟನಾಗಿದ್ದ ಈತನು 100 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸುವ ಮೂಲಕ ಆ ದೇಶದ ಜನರ ಮನಸ್ಸನ್ನು ಗೆದ್ದಿದ್ದ. ತನ್ನ ಸಿನೆಮಾಗಳಿಂದ ದೇಶದ ತುಂಬೆಲ್ಲ ಪ್ರಸಿದ್ದಿಯಾಗಿದ್ದ ಈತನು ಇದನ್ನೇ ಬಳಸಿಕೊಂಡು ರಾಜಕೀಯಕ್ಕೆ ಪ್ರವೇಶ ಮಾಡಿ 1969 ರಲ್ಲಿ ಫಿಲಿಪೈನ್ಸ್ ದೇಶದ “ಸ್ಯಾನ್ ಜುಯನ್” ನಗರದ ಮೇಯರ್ ಆಗಿ ಆಯ್ಕೆಯಾಗಿ 1969 ರಿಂದ 1986 ರವರೆಗು ಕಾರ್ಯನಿರ್ವಹಿಸಿದ. ಇದರ ನಂತರ 1987 ರಿಂದ 1992 ರವರೆಗು “ಸೇನೆಟರ್” ಆದ. ಕೊನೆಗೆ 1992 ರಲ್ಲಿ ಫಿಲಿಪೈನ್ಸ್ ದೇಶದ ಒಂಬತ್ತನೆಯ ಉಪಾದಕ್ಷನಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ. ಈ ಅಚ್ಚರಿಯ ನಂತರ 1998 ರಲ್ಲಿ ಫಿಲಿಪೈನ್ಸ್ ದೇಶದ 13 ನೆಯ ಆದ್ಯಕ್ಷನಾಗಿ ಆಯ್ಕೆ ಆಗುವ ಮೂಲಕ ದೇಶದ ಮೊಟ್ಟ ಮೊದಲ ಆದ್ಯಕ್ಷನಾದ ಸಿನೆಮಾ ತಾರೆ ಎನ್ನುವ ಹೆಗ್ಗಳಿಕೆಗೆ ಪಾತ್ರನಾದ. 1969 ರಿಂದ ನಿಧಾನವಾಗಿ ರಾಜಕೀಯದಲ್ಲಿ ಯಶಸ್ಸು ಗಳಿಸುತ್ತಾ ಬಂದ ಈತನು ಜನರು ತನ್ನ ಮೇಲೆ ಇಟ್ಟಿದ್ದ ನಂಬಿಕೆ ಮತ್ತು ಪ್ರೀತಿಯನ್ನು ಉಳಿಸುಕೊಳ್ಳುವಲ್ಲಿ ವಿಪಲನಾದ. ಬರೋಬ್ಬರಿ 80 ಮಿಲಿಯನ್ ಡಾಲರ್ ಹಣವನ್ನು ಲಂಚ ಪಡೆದ ಆರೋಪದಲ್ಲಿ ಈತನು ಮಾಡಿದ ಭ್ರಷ್ಟಾಚಾರದ ಕೆಲಸವು ಕೋರ್ಟಿನಲ್ಲಿ ಸಾಭೀತಾಯಿತು. ಇದರೊಂದಿಗೆ ಈತನಿಗೆ ಜೀವಾವಧಿ ಶಿಕ್ಷೆ ವಿದಿಸಿ ಸಾಯುವವರೆಗು ಜೈಲಿನಲ್ಲಿ ಇರುವ ಹಾಗೆ ಮಾಡಲಾಯಿತು.

2) ಅರ್ನಾಲ್ದೋ ಅಲೆಮಾನ್ – Arnoldo Aleman

“ನಿಕರಗುಯ” ಎನ್ನುವ ದೇಶದ 81 ನೆಯ ಆದ್ಯಕ್ಷನಾಗಿ 1997 ರಿಂದ 2002 ರವರೆಗು ಕಾರ್ಯ ನಿರ್ವಹಿಸಿದ ಈತನು ಪ್ರಪಂಚ ಕಂಡ ಅತ್ಯಂತ ಭ್ರಷ್ಟ ರಾಜಕಾರಣಿಗಳ ಪಟ್ಟಿಯಲ್ಲಿ 9 ನೆಯ ಸ್ಥಾನದಲ್ಲಿದ್ದಾನೆ. ಲಾಯರ್ ಆಗಿದ್ದ ಈತನು ಹಲವಾರು ಬಾರಿ ಜೈಲಿಗೆ ಹೋಗಿ ಬಂದಿದ್ದನು. ಆದರೂ ರಾಜಕೀಯಕ್ಕೆ ಇಳಿದು ನಿಧಾನವಾಗಿ ಯಶಸ್ಸು ಕಾಣುತ್ತಾ ಕೊನೆಗೆ ಆ ದೇಶದ ಆದ್ಯಕ್ಷನಾದನು. ಈತನ ಆವದಿಯಲ್ಲಿ ತನಗಾಗಿ ಮತ್ತು ತನ್ನ ಹೆಂಡತಿಗಾಗಿ ಸಾಕಷ್ಟು ಆಸ್ತಿ ಮಾಡಿಕೊಂಡಿದ್ದನು. ಆ ದೇಶದ ಜನರು ಕಟ್ಟುತ್ತಿದ್ದ ಟ್ಯಾಕ್ಸ್ ನಿಂದ ತನ್ನ ಹೆಂಡತಿಯ ಜೊತೆ ಸೇರಿ ಅನೇಕ ದೇಶಗಳಿಗೆ ಮಜಾ ಮಾಡಲು ಹೋಗುತ್ತಿದ್ದ. ಭಾರತದ ಪ್ರಸಿದ್ದ ತಾಜ್ ಹೋಟಲ್ ನಲ್ಲಿ ತಂಗಿ ಭಾರತದಲ್ಲಿ ತನ್ನ ಹೆಂಡತಿಗೆಂದು ಬೆಲೆ ಬಾಳುವ ವಸ್ತುಗಳನ್ನು ಖರೀದಿಸಿ 68,506 ಡಾಲರ್ ಹಣವನ್ನು ಖರ್ಚು ಮಾಡಿದ್ದ. ಇದೇ ರೀತಿ ಇಂಡೋನೇಷ್ಯಾದ ಪ್ರಸಿದ್ದ ಪ್ರವಾಸಿ ತಾಣವಾದ “ಬಾಲಿ” ಯಲ್ಲಿರುವ “ರಿಟ್ಜ್ ಕಾರ್ಲ್ಟನ್” ಹೊಟೇಲ್ ನಲ್ಲಿ 13,775 ಡಾಲರ್, ಕೈರೋ ದೇಶದಲ್ಲಿ 22,350 ಡಾಲರ್, ಫ್ಲೋರಿಡಾದ “ಕೋರಲ್ ಗ್ಯಾಬ್ಲಸ್” ಹೋಟಲ್ ನಲ್ಲಿ 3867 ಡಾಲರ್, ತನ್ನ ಹನಿಮೂನ್ ಗೆಂದು ಇಟಲಿಯಲ್ಲಿ 25,955 ಡಾಲರ್ ಖರ್ಚು ಮಾಡಿದ್ದ ಈತನ ಮೇಲೆ ಅಲ್ಲಿರುವ ಜನರ ಹಾಗು ಕೋರ್ಟಿನ ಕಣ್ಣು ಬಿತ್ತು. ಏಕೆಂದರೆ “ನಿಕರಗುಯ” ದೇಶವು ಆರ್ಥಿಕವಾಗಿ ಸುದಾರಣೆ ಕಾಣದ ದೇಶವಾಗಿದೆ, ಈ ದೇಶದ ಪ್ರಜೆಗಳ ಗರಿಷ್ಠ ವೇತನವೆ 500 ಡಾಲರ್ ಇದೆ, ಅಂತಹದರಲ್ಲಿ ಈತನು ಇಷ್ಟೊಂದು ಹಣವನ್ನು ಖರ್ಚು ಮಾಡಿದ್ದನ್ನು ಗಮನಿಸಿದ ಅಲ್ಲಿನ ಜನರು ಮತ್ತು ಕೋರ್ಟ್ ಈತನ ಮೇಲೆ ತನಿಕೆ ನಡೆಸಲು ಶುರು ಮಾಡಿದಾಗ ಈತನ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂತು. ಕೊನೆಗೆ ಅಲ್ಲಿನ ನ್ಯಾಯಾಲಯವು ಈತನನ್ನು 20 ವರ್ಷಗಳ ಕಾಲ ಜೈಲಿಗೆ ಕಳುಹಿಸಿತು.

3) ಆಲ್ಬರ್ಟ್ ಫುಜಿಮೋರಿ – Albert Fujimori

ಪೆರು ದೇಶ ಕಂಡಂತಹ ಅತ್ಯಂತ ಭ್ರಷ್ಟ ರಾಜಕಾರಣಿ ಈತ. ಮೂಲತಃ ಜಪಾನ್ ದೇಶದ ಈತನು ಪೆರು ದೇಶದಲ್ಲಿ ಬಂದು ನೆಲೆಸಿ ಸತತ ಮೂರು ಬಾರಿ ಆದ್ಯಕ್ಷನಾಗಿದ್ದನು. ಪೆರು ದೇಶದ ಜನರ ಅಚ್ಚು ಮೆಚ್ಚಿನ ಆದ್ಯಕ್ಷನಾಗಿದ್ದ ಈತನ ನಿಜವಾದ ಮುಖವಾಡವು ತಾನು ಮೂರನೆಯ ಬಾರಿಗೆ ಆದ್ಯಕ್ಷನಾದಾಗ ಕಳಚಿತು. ಸರ್ಕಾರದ ಬರೋಬ್ಬರಿ 600 ಮಿಲಿಯನ್ ಡಾಲರ್ ಹಣವನ್ನು ಕೊಳ್ಳೆ ಹೊಡೆದು ದೇಶ ಬಿಟ್ಟು ಹೋಗಿ ಅಲ್ಲಿಂದ ತನ್ನ ಆದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಈತನನ್ನು ಕೊನೆಗೆ ಪೊಲೀಸರು ಬಂದಿಸಿ ನ್ಯಾಯಾಲದ ಮುಂದೆ ಹಾಜರಿ ಪಡಿಸಿದ ಮೇಲೆ ಈತನ ಒಂದೊಂದೇ ಭ್ರಷ್ಟಾಚಾರದ ಕೃತ್ಯಗಳು ಹೊರ ಬಂದವು. ಆಗ ನ್ಯಾಯಾಲಯವು ಈತನಿಗೆ 25 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿದಿಸಿತು.

4) ಜಿಯನ್ ಕ್ಲೌಡೇ ದುವಲಿಯರ್– Jean claude duvalier

“ಹೈಟಿ” ಎನ್ನುವ ದೇಶದ ಸರ್ವಾಧಿಕಾರಿಯಾಗಿದ್ದ ಈತನು 1971ರಲ್ಲಿ ತನ್ನ ತಂದೆಯ ನಿಧನದ ನಂತರ ಅಧಿಕಾರದ ಚುಕ್ಕಾಣಿ ಹಿಡಿದನು. ಅಂದಿನಿಂದ ಆ ದೇಶದ ಕೊಳ್ಳೆ ಹೊಡೆಯಲು ನಿಂತ ಈತನನ್ನು ತಡೆಯುವವರು ಇರಲಿಲ್ಲ. ಈತನ ಅವಧಿಯಲ್ಲಿ ಆ ದೇಶದ ಅನೇಕ ಪ್ರಜೆಗಳು ದೇಶ ಬಿಟ್ಟು ಹೋದರು. ಈತನ ವಿರುದ್ದ ನಿಲ್ಲುತ್ತಿದ್ದ ಅನೇಕ ಜನರನ್ನು ಕೊಲ್ಲಿಸುತ್ತಿದ್ದ ಈತನು 800 ಮಿಲಿಯನ್ ಮೊತ್ತದ ಆಸ್ತಿಯನ್ನು ಮಾಡಿಕೊಂಡಿದ್ದನು. ತನ್ನ ದೇಶದಲ್ಲಿ ಬಡತನ ಎದ್ದು ಕಾಣುತ್ತಿದ್ದರು ಕೂಡ ಈತನು ಮಾತ್ರ ರಾಜನ ಹಾಗೆ ಮೆರೆಯುತ್ತಿದ್ದ. ಕೊನೆಗೆ ಈತನನ್ನು ಬಗ್ಗು ಬಡಿಯಲು ತೀರ್ಮಾನಿಸಿದ ಅಮೆರಿಕವು ಈತನನ್ನು ಆ ದೇಶದಿಂದ ಫ್ರಾನ್ಸ್ ದೇಶಕ್ಕೆ 1986 ರಲ್ಲಿ ಗಡಿಪಾರು ಮಾಡಿತು. ಆದರೆ 2011 ರಲ್ಲಿ ಮರಳಿ ಸ್ವದೇಶಕ್ಕೆ ಮರಳಿದ ಈತನನ್ನು ಅಲ್ಲಿನ ಪೊಲೀಸರು ಬಂದಿಸಿ ಹಲವಾರು ಭ್ರಷ್ಟಾಚಾರದ ಆರೋಪದ ಅಡಿಯಲ್ಲಿ ಜೈಲಿಗೆ ಕಳುಹಿಸಿದರು. ಕೊನೆಗೆ 2014 ರಲ್ಲಿ ಹೃದಯಾಘಾತದಿಂದ ಈತನು ನಿಧನ ಹೊಂದಿದನು.

5) ಜಿನ್ ಎಲ್ ಬೆನ್ ಅಲಿ – zin el abidine ben ali

1987 ರಿಂದ 2011 ರವರೆಗು ತುನಿಸಿಯ ದೇಶದ ಆದ್ಯಕ್ಷ್ಯನಾಗಿದ್ದ ಈತನು ಪ್ರತಿ ಬಾರಿ ಚುನಾವಣೆ ನಡೆದಾಗ ಮೋಸ ಮಾಡಿ ಗೆಲ್ಲುತ್ತಿದ್ದನು. ತನ್ನ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಹಣ ಕೊಳ್ಳೆ ಹೊಡೆದ ಈತನು 2.6 ಬಿಲಿಯನ್ ಮೊತ್ತದ ಆಸ್ತಿ ಮಾಡಿದ್ದನು. ಈತನ ಸರ್ವಾಧಿಕಾರಿ ಆಡಳಿತದಿಂದ ಕೊನೆಗೆ ರೊಚ್ಚಿಗೆದ್ದ ಅಲ್ಲಿನ ಜನರು ದೇಶದಲ್ಲಿ ದಂಗೆ ಎದ್ದರು. ಇದನ್ನು ಕಂಡು ತನ್ನ ಹೆಂಡತಿ ಮತ್ತು ಮಕ್ಕಳ ಜೊತೆ ಸೌದಿ ಅರೇಬಿಯಾ ದೇಶಕ್ಕೆ ಓಡಿ ಹೋಗಿದ್ದನ್ನು. ಆದರೆ ತುನಿಸಿಯ ದೇಶದ ಮಿಲಿಟರಿ ಮತ್ತು ಪೊಲೀಸ್ ಪಡೆಯು ಈತನನ್ನು ಬಂದಿಸಿ ನ್ಯಾಯಾಲಯದ ಮುಂದೆ ಹಾಜರಿ ಪಡಿಸಿತು. ತಾನು ಮಾಡಿದ ಭ್ರಷ್ಟಾಚಾರದ ಕುರಿತು ತಪ್ಪೊಪ್ಪಿಕೊಂಡ ಈತನಿಗೆ ಮತ್ತು ಈತನ ಹೆಂಡತಿಗೆ ಜೀವಾವಧಿ ಶಿಕ್ಷೆ ವಿದಿಸಲಾಗಿದ್ದು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

Follow Karunadu Today for more Interesting Facts & Stories. 

Click here to Join Our Whatsapp Group