"ಅಧ್ಯಾತ್ಮಿಕ ಮಾಹಿತಿ"

ಹಿಂದೂ ಧರ್ಮದಲ್ಲಿ ನಾನಾ ರೀತಿಯ ಹಬ್ಬಗಳಿವೆ. ಕೆಲವೊಂದು ಹಬ್ಬಗಳು ಅದರದೇ ಆದ ವಿಶೇಷತೆಯನ್ನು ಹೊಂದಿರುತ್ತವೆ. ಅದೇ ರೀತಿ ರಕ್ಷಾಬಂಧನ ಹಬ್ಬವು ಕೂಡ ಒಂದು ಈ ಹಬ್ಬವು ಅಣ್ಣ ತಂಗಿ, ಅಕ್ಕ ತಮ್ಮ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವ ಮತ್ತು ಶುಭ ಹಾರೈಸುವ ಒಂದು ಹಿಂದೂ ಸಂಪ್ರದಾಯದ ಹಬ್ಬವಾಗಿದೆ.

ರಕ್ಷಾಬಂಧನ ಹಬ್ಬದಲ್ಲಿ ಅಕ್ಕ ತಮ್ಮನಿಗೆ ಅಥವಾ ತಂಗಿ ಅಣ್ಣನಿಗೆ ರಕ್ಷೆದಾರ ಅಥವಾ ರಾಖಿಯನ್ನು ಕಟ್ಟುವ ಸಂಪ್ರದಾಯವಿದೆ. ರಾಖಿಯನ್ನು ಕಟ್ಟಿದ ಸಹೋದರಿ ತನ್ನ ಸಹೋದರನ ಆರೈಕೆ ಸದಾ ನನ್ನ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತಾಳೆ. ರಾಖಿಯನ್ನು ಕಟ್ಟಿಸಿಕೊಂಡ ಸಹೋದರ ಅದರ ಪ್ರತಿಯಾಗಿ ಜೀವವಿರುವ ವರೆಗೂ ನನ್ನ ಆಶೀರ್ವಾದ ನಿನ್ನ ಮೇಲಿರುತ್ತೆ ಎಂದು ಶುಭ ಹಾರೈಸುತ್ತಾನೆ. ಅಂದಹಾಗೆ ಈ ವರ್ಷ ರಕ್ಷಾ ಬಂಧನ ಯಾವ ದಿನದಲ್ಲಿದೆ ಮತ್ತು ರಕ್ಷಾ ಬಂಧನ ಹಬ್ಬದ ಮಹತ್ವ ಏನಿರಬಹುದು ಅನ್ನುವುದನ್ನು ಇಂದು ನಾವು ತಿಳಿದುಕೊಂಡು ಬರೋಣ ಬನ್ನಿ.

ಹಿಂದೂ ಸಂಪ್ರದಾಯದ ಮಹತ್ವದ ಹಬ್ಬವಾಗಿರುವ ರಕ್ಷಾಬಂಧನವನ್ನು ಈ ಸಲ ಆಗಸ್ಟ್ 19 ಸೋಮವಾರದಂದು ಆಚರಿಸಲಾಗುತ್ತದೆ. ಈ ತಿಂಗಳು ಶ್ರಾವಣಮಾಸದ ಹುಣ್ಣಿಮೆಗೆ ವಿಶೇಷ ಪ್ರಶಸ್ತ್ಯವಿದ್ದು, ಅತ್ಯಂತ ಶುಭಗಳಿಗೆ ಎಂದು ಪರಿಗಣಿಸಲಾಗಿದೆ. ಈ ರಕ್ಷಾ ಬಂಧನ ಹಬ್ಬವನ್ನು 16ನೇ ಶತಮಾನದಿಂದ ನಡೆಸಿಕೊಂಡು ಬಂದರೂ ಕೂಡ, ಇದರ ಮೂಲ ಮಹಾಭಾರತ ಕಾಲದಿಂದ ಬಂದಿರುವದಾಗಿ ಹಿಂದುಗಳು ನಂಬಲಾಗುತ್ತದೆ. ಈ ರಕ್ಷಾ ಬಂಧನ ಹಬ್ಬವನ್ನು ಮೂಲತ ಶ್ರೀ ಕೃಷ್ಣ ಪರಮಾತ್ಮನೇ ಪ್ರಾರಂಭಿಸಿದ್ದು ಎಂದು ಹೇಳಲಾಗುತ್ತದೆ. ರಕ್ಷಾ ಬಂಧನ ಹಬ್ಬದ ಹಿಂದಿರುವ ಸುಂದರವಾದ ಕಥೆಯನ್ನ ನಾವು ನೀವೆಲ್ಲ ತಿಳಿಯೋಣ.

ಒಮ್ಮೆ ಶ್ರೀ ಕೃಷ್ಣ ಮತ್ತು ಪಾಂಡವರು ಎಲ್ಲಾ ಒಟ್ಟಿಗೆ ಇರುವಂತಹ ಸಂದರ್ಭದಲ್ಲಿ ಶ್ರೀ ಕೃಷ್ಣ ಪರಮಾತ್ಮನು ಗಾಳಿಯಲ್ಲಿ ಗಾಳಿಪಟವನ್ನು ಹಾರಿಸುತ್ತಿದ್ದಾಗ ಆ ಗಾಳಿಪಟದ ದಾರವೂ ಕೃಷ್ಣನ ಬೆರಳಿಗೆ ಗಾಯ ಉಂಟು ಮಾಡಿತು. ಆಗ ಪಾಂಡವರ ಮಡದಿಯಾದ ದ್ರೌಪದಿ ಈ ದೃಶ್ಯವನ್ನು ಕಂಡು ಕೃಷ್ಣನ ಬಳಿಗೆ ಓಡೋಡಿ ಬಂದು ತಾನು ಉಟ್ಟಿರುವ ಸೀರೆಯ ಒಂದು ಭಾಗವನ್ನು ಕತ್ತರಿಸಿ ಕೃಷ್ಣನ ಬೆರಳಿಗೆ ಕಟ್ಟುತ್ತಾಳೆ. ಆಗ ಶ್ರೀ ಕೃಷ್ಣ ಪರಮಾತ್ಮ ಮುಖದಲ್ಲಿ ಮಂದಹಾಸವನ್ನು ಮೂಡಿಸಿ ದ್ರೌಪದಿ ನೀನು ಕಟ್ಟಿರುವ ಬಟ್ಟೆಯ ತುಂಡನ್ನು ನಾನು ರಕ್ಷಾ ಸೂತ್ರವಾಗಿ ಪರಿಗಣಿಸುತ್ತೇನೆ. ಹಾಗೆ ನಿನ್ನ ಎಲ್ಲಾ ಕಷ್ಟದ ಸಮಯದಲ್ಲೂ ಕೂಡ ನಿನ್ನ ಜೊತೆಯಾಗಿ ನಾನಿರುತ್ತೇನೆ ಎಂದು ಕೃಷ್ಣ ದ್ರೌಪದಿಗೆ ಮಾತು ನೀಡುತ್ತಾನೆ. ಇದರಂತೆ ದುರ್ಯೋಧನನ ತಮ್ಮ ದುಶ್ಯಾಸನ, ನೆರೆದಿರುವ ಎಲ್ಲರ ಸಮ್ಮುಖದಲ್ಲಿ ದ್ರೌಪದಿಯ ವಸ್ತ್ರಾಭರಣ ಮಾಡುವ ಸಮಯದಲ್ಲಿ ಕೃಷ್ಣನು ದ್ರೌಪದಿಯನ್ನ ಕಾಪಾಡುತ್ತಾನೆ. ಇದೇ ರೀತಿ ಹಲವಾರು ಸಂದರ್ಭದಲ್ಲಿ ಕೃಷ್ಣ ದ್ರೌಪದಿಯ ಪರವಾಗಿ ಇದ್ದ ಅನ್ನುವುದನ್ನ ಮಹಾಭಾರತ ಕಥೆಯನ್ನು ಓದಿದವರಿಗೆ ಗೊತ್ತೇ ಇರುತ್ತದೆ.

ರಕ್ಷಾ ಬಂಧನ ಹಬ್ಬವು ಒಂದು ಪ್ರೀತಿಯ ಸಂಕೇತ:

ರಕ್ಷಾ ಬಂಧನವು ರಾಖಿ ಕಟ್ಟುವ ಸರಳ ಕ್ರಿಯೆಯನ್ನು ಮೀರಿದ್ದು, ಒಡಹುಟ್ಟಿದವರ ನಡುವೆ ಆಳವಾದ ಭಾವನಾತ್ಮಕ ಬಂಧವನ್ನು ಬೆಳೆಸುತ್ತದೆ. ಈ ಪಾಲಿಸಬೇಕಾದ ಹಬ್ಬವು ಸಹೋದರರು ಮತ್ತು ಸಹೋದರಿಯರನ್ನು ಒಟ್ಟಿಗೆ ತರುತ್ತದೆ, ಹಿರಿಯ ಮತ್ತು ಕಿರಿಯ ಒಡಹುಟ್ಟಿದವರಿಗೆ ತಮ್ಮ ಸಂಬಂಧಗಳನ್ನು ಮರುಸಂಪರ್ಕಿಸಲು ಮತ್ತು ಬಲಪಡಿಸಲು ಅವಕಾಶಗಳನ್ನು ಸೃಷ್ಟಿಸುತ್ತದೆ. ರಕ್ಷಾ ಬಂಧನವನ್ನು ಆಚರಿಸುವ ಮೂಲಕ, ನಾವು ರಕ್ತ ಸಂಬಂಧಗಳ ಅಮೂಲ್ಯವಾದ ಮಹತ್ವವನ್ನು ಅಂಗೀಕರಿಸುತ್ತೇವೆ ಮತ್ತು ಕುಟುಂಬ ಸದಸ್ಯರ ನಡುವೆ ನಿಕಟತೆ, ಮೆಚ್ಚುಗೆ ಮತ್ತು ರಕ್ಷಣೆಯ ಭಾವವನ್ನು ಪೋಷಿಸುತ್ತೇವೆ.

ರಕ್ಷಾ ಬಂಧನ ಹಬ್ಬವನ್ನು ಹೇಗೆ ಅಚರಿಸಬೇಕು?

ರಕ್ಷಾ ಬಂಧನದಲ್ಲಿ ಪ್ರಮುಖವಾಗಿ ಬೇಕಾಗಿರುವುದು ರಾಖಿ. ಇದನ್ನ ಅಂಗಡಿಯಿಂದಲೂ ತರಬಹುದು. ಕೆಲವರು ಮನೆಯಲ್ಲೇ ತಯಾರಿಸಿ ತಮ್ಮ ಸಹೋದರನ ಕೈಯಿಗೆ ಕಟ್ಟುತ್ತಾರೆ. ಹಬ್ಬದ ದಿನ ಮಹಿಳೆಯರು/ಹುಡುಗಿಯರು ಒಂದು ಪೂಜಾ ತಟ್ಟೆಯನ್ನ ಸಿದ್ಧಪಡಿಸುತ್ತಾರೆ. ಅದರಲ್ಲಿ ರಾಖಿ, ಸಿಹಿತಿಂಡಿ, ಕುಂಕುಮ ಮತ್ತು ದೀಪ ಇರುತ್ತದೆ. ಸಹೋದರ-ಸಹೋದರಿ ಇಬ್ಬರೂ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಹೊಸ ಬಟ್ಟೆಯನ್ನ ಧರಿಸಬೇಕು. ಬಳಿಕ ಸಹೋದರನನ್ನ ಒಂದೆಡೆ ಕೂರಿಸಿ, ಅದರಲ್ಲೂ ದೇವರ ಮನೆಯ ಎದುರು ಕೂರಿಸಿದರೆ ಇನ್ನೂ ಒಳ್ಳೆಯದು..ಅವರ ಹಣೆಗೆ ಕುಂಕುಮ ಇಡಬೇಕು. ಬಳಿಕ ಕೈಯಿಗೆ ರಾಖಿ ಕಟ್ಟಿ, ಅಣ್ಣನಾಗಿದ್ದರೆ ಆಶೀರ್ವಾದ ಪಡೆಯಬೇಕು. ಅವರ ಆರೋಗ್ಯ-ಆಯುಷ್ಯ ವೃದ್ಧಿಗಾಗಿ ಪ್ರಾರ್ಥಿಸಬೇಕು. ಸಹೋದರಿ ರಾಖಿ ಕಟ್ಟಿದ್ದಕ್ಕೆ ಪ್ರತಿಯಾಗಿ ಸಹೋದರ ಏನಾದರೂ ಉಡುಗೋರೆ ಕೊಡುವುದು ಸಂಪ್ರದಾಯ. ಅಂದರೆ ತಾನು ಸದಾ ನಿನಗೆ ರಕ್ಷೆಯಾಗಿ ಇರುತ್ತೇನೆ ಎಂಬ ಭರವಸೆಯ ರೂಪವಾಗಿ ಉಡುಗೋರೆ ಕೊಡಬೇಕಾಗುತ್ತದೆ. ಬಳಿಕ ಪರಸ್ಪರರಿಗೆ ಸಹಿತಿನ್ನಿಸಿ ಶುಭ ಹಾರೈಸಿಕೊಳ್ಳಿ

ರಕ್ಷಾ ಬಂಧನದ ದಿನ ಒಡಹುಟ್ಟಿದವರ, ಇಡೀ ಕುಟುಂಬದ ಜೊತೆ ಕುಳಿತು ಹಬ್ಬದ ಊಟ ಮಾಡಿ..ಇನ್ನಷ್ಟು ಖುಷಿಯಾಗುತ್ತದೆ..

Follow Karunadu Today for more spiritual information like this

Click here to Join Our Whatsapp Group