ಅಧ್ಯಾತ್ಮಿಕ ಮಾಹಿತಿ
ಹಿಂದೂ ಧಾರ್ಮಿಕ ಪದ್ಧತಿಯಲ್ಲಿ ಹಣೆಯ ಮೇಲೆ ತಿಲಕ ಇಡುವುದು ವಾಡಿಕೆ ಈ ಪದ್ಧತಿಯು ಶತಮಾನಗಳಿಂದ ನಡೆಯುತ್ತಾ ಬಂದಿದೆ. ಹಣೆಯ ಮೇಲೆ ತಿಳ್ಕೊಂಡಿರುವಾಗ ಬಲಗೈನ ಉಂಗುರ ಬೆರಳನ್ನು ಬಹಳಷ್ಟು ಜನರು ಬಳಸುತ್ತಾರೆ. ಅಷ್ಟೇ ಅಲ್ಲ ಇನ್ನು ಉಳಿದ ಬೆರಳುಗಳು ಕೂಡ ತಿಲಕ ಇಡಲು ಯೋಗ್ಯವಾಗಿವೆ ಅನ್ನೋದು ನಿಮಗೆ ಗೊತ್ತಾ? ಒಂದೊಂದು ಬೆರಳು ಕೂಡ ದೇವರ ಸ್ಥಾನಗಳನ್ನ ಸೂಚಿಸುತ್ತದೆ ಹಾಗೂ ಅದರಿಂದ ಲಾಭದಾಯಕ ಪ್ರತಿಫಲವನ್ನು ಪಡೆದುಕೊಳ್ಳಬಹುದಾಗಿದೆ ಹಾಗಿದ್ದರೆ ಇಂದು ನಾವು ಹಣೆ ಮೇಲೆ ತಿಲಕ ಇಡಲು ಬಳಸುವ ಬೆರಳುಗಳ ಮಹತ್ವದ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ.
ಹಣೆಯ ಮೇಲೆ ತಿಳಕ ಇಡುವುದು ಹಿಂದೂ ಸಂಪ್ರದಾಯದಲ್ಲಿ ಒಂದು ಮುಖ್ಯವಾದ ಆಚಾರ ವಿಚಾರ. ಮಹಿಳೆಯರು ತಮ್ಮ ಗಂಡಂದಿರ ಆಯಸ್ಸು ಗಟ್ಟಿಯಾಗಿರಲಿ ಎಂದು ದೇವರ ಕೃಪೆಯನ್ನು ಪಡೆದು ಹಣೆ ಮೇಲೆ ತಿಲಕವನ್ನ ಇಟ್ಟುಕೊಳ್ಳುತ್ತಾರೆ. ಹಾಗೂ ದೇವರಿಗೆ ಪೂಜೆ ಮಾಡುವಾಗ ದೇವರ ಅನುಗ್ರಹದಿಂದ ಹಣೆಯ ಮೇಲೆ ದಿನಕವನ್ನು ಇಟ್ಟುಕೊಳ್ಳುತ್ತಾರೆ ಮತ್ತು ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯುವಾಗ ಹಣೆಯ ಮೇಲೆ ತಿಲಕವನ್ನು ಇಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಶಿವನ ಭಕ್ತರಾಗಿದ್ದರೆ ಹಣೆಯ ಮೇಲೆ ವಿಭೂತಿಯನ್ನು ಧರಿಸಿದ ವಿಷ್ಣುಭಕ್ತರಾದರೆ ಹಣೆಯ ಮೇಲೆ ನಾಮ ಹಾಕಿಕೊಳ್ಳುತ್ತಾರೆ. ಪದ್ಧತಿ ಯಾವುದೇ ಇದ್ದರೂ ಕೂಡ ಎಲ್ಲವೂ ತಿಲಕವಾಗಿ ಪರಿಗಣಿಸಲಾಗುತ್ತದೆ. ಮನೆಯಲ್ಲಿ ಹಿರಿಯರು ಕಿರಿಯರಿಗೆ ಆಯಸ್ಸು ಗಟ್ಟಿಯಾಗಿರಲೆಂದು ಹಣೆಯ ಮೇಲೆ ತಿಲಕವನ್ನು ಇಡುತ್ತಾರೆ. ಹಾಗಿದ್ದರೆ ಇಂದು ನಾವು ಯಾವ ಬೆರಳಿನಿಂದ ಹಣೆಗೆ ಕುಂಕುಮ ಅಥವಾ ತಿಲಕವನ್ನು ಇಟ್ಟುಕೊಂಡರೆ ಯಾವ ರೀತಿಯ ಪ್ರತಿಫಲ ಸಿಗುತ್ತದೆ ಅನ್ನುವುದನ್ನು ತಿಳಿಯೋಣ.
1) ಹಿಂದೂ ಸಂಪ್ರದಾಯ ಮತ್ತು ಶಾಸ್ತ್ರದ ಪ್ರಕಾರ ಮಧ್ಯದ ಬೆರಳಿನಿಂದ ತಿಲಕವನ್ನು ಹಣೆಯ ಮೇಲೆ ಇಟ್ಟುಕೊಂಡರೆ ಆಯಸ್ಸು ಹೆಚ್ಚಾಗುತ್ತದೆ ಅನ್ನೋದು ನಂಬಿಕೆ ಏಕೆಂದರೆ ಮಧ್ಯದ ಬೆರಳಿನಲ್ಲಿ ಶನಿಗ್ರಹದ ಸ್ಥಾನ ಇರುವುದು ಅದರಿಂದ ಮಧ್ಯದ ಬೆರಳಿನಿಂದ ಹಣೆಯ ಮೇಲೆ ತಿಲಕ ಇಡುವುದರಿಂದ ಆ ವ್ಯಕ್ತಿ ದೀರ್ಘವಾದ ಆಯಸ್ಸನ್ನು ಭಗವಂತನ ಕೃಪೆಯಿಂದ ಪಡೆಯುತ್ತಾನೆ.
2) ಇನ್ನು ಎರಡನೇದು ಉಂಗುರ ಹಾಕುವ ಬೆರಳಿನಿಂದ ಹಣೆಯ ಮೇಲೆ ಕುಂಕುಮ ಇಟ್ಟುಕೊಂಡರೆ ಮಾನಸಿಕವಾಗಿ ಪ್ರಶಾಂತವಾಗಿ ಬದುಕುತ್ತಾನೆ ಏಕೆಂದರೆ ಗುಂಗುರ ಹಾಕುವ ಬೆರಳಿನಲ್ಲಿ ಸೂರ್ಯದೇವರ ಸ್ಥಾನವಾಗಿರುತ್ತದೆ ಆ ಬೆರಳಿನಿಂದ ಹಣೆಯ ಮೇಲೆ ತಿಲಕ ಇಡುವುದರಿಂದ ಮನಸ್ಸು ಪ್ರಶಾಂತವಾಗಿ ಸೂರ್ಯನಲ್ಲಿರುವ ಶಕ್ತಿ ನಮಗೆ ಲಭಿಸುತ್ತದೆ.
3) ಹೆಬ್ಬೆರಳಿನಿಂದ ಹಣೆಯ ಮೇಲೆ ಕೆಳಗೆ ಇಟ್ಟುಕೊಂಡರೆ ದಹಿ ಕದೃಢತೆ ಧೈರ್ಯ ಮತ್ತು ಸಾಮರ್ಥ್ಯ ಲಭಿಸುತ್ತದೆ ಯಾಕೆಂದರೆ ಈ ಹೆಬ್ಬೆರಳಿನಲ್ಲಿ ಶುಕ್ರನ ಸ್ಥಾನವಾಗಿದೆ.
4) ಹಾಗೆ ತೋರು ಬೆರಳಿನಿಂದ ಹಣೆಯ ಮೇಲೆ ಕುಂಕುಮ ಇಟ್ಟುಕೊಂಡರೆ ಮೋಕ್ಷ ಲಭಿಸುತ್ತದೆ ಎಂದು ನಂಬಲಾಗುತ್ತದೆ ಏಕೆಂದರೆ ಈ ಬೆರಳಿನಲ್ಲಿ ಗುರುವಿನ ಸ್ಥಾನ ವಾಗಿರುತ್ತದೆ. ಗುರು ನಮಗೆ ಜ್ಞಾನ ಮೋಕ್ಷ ಮತ್ತು ಸಮಸ್ಯೆಗಳಿಂದ ನಮ್ಮನ್ನ ರಕ್ಷಿಸುತ್ತಾನೆ.
5) ನಮ್ಮ ದೇಹದಲ್ಲಿ ಒಟ್ಟು 13 ಜಾಗಗಳಲ್ಲಿ ತಿಲಕ ಇಟ್ಟುಕೊಳ್ಳಬಹುದು. ಆದರೆ ಬಹಳಷ್ಟು ಮಂದಿ ಹಣೆಯ ಮೇಲೆ ತಿಲಕ ಧರಿಸುತ್ತಾರೆ. ಯಾಕೆಂದರೆ ಆ ಸ್ಥಾನ ಮಂಗಳನದು. ಅವನಿಗೆ ಕೆಂಪು ಎಂದರೆ ಇಷ್ಟ. ಹಾಗಾಗಿ ಕೆಂಪು ಬಣ್ಣದ ತಿಲಕವನ್ನು ಬಹಳಷ್ಟು ಮಂದಿ ಇಟ್ಟುಕೊಳ್ಳುತ್ತಾರೆ.
ಹಣೆಗೆ ಕುಂಕುಮವನ್ನು ಹಚ್ಚುವ ಎರಡು ಪ್ರಮುಖ ಪದ್ಧತಿಗಳು:
1. ಗೋಲಾಕಾರದಲ್ಲಿ ಕುಂಕುಮವನ್ನು ಹಚ್ಚುವುದು : ಇದರಿಂದ ಸ್ತ್ರೀಯರಲ್ಲಿ ದುರ್ಗಾದೇವಿಯ ತತ್ತ್ವವು ಅಧಿಕ ಪ್ರಮಾಣದಲ್ಲಿ ಕಾರ್ಯನಿರತವಾಗುತ್ತದೆ ಮತ್ತು ಅವಳ ಶಕ್ತಿಯು ಬಹಳಷ್ಟು ಪ್ರಮಾಣದಲ್ಲಿ ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತದೆ. ಇಂತಹ ಸ್ತ್ರೀಯರಿಗೆ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಲು ದುರ್ಗಾದೇವಿಯ ಸಗುಣ ಶಕ್ತಿ ಮತ್ತು ಚೈತನ್ಯವು ಅಧಿಕ ಪ್ರಮಾಣದಲ್ಲಿ ಸಿಗುತ್ತದೆ.
2. ಜ್ಯೋತಿಯಂತೆ ಕುಂಕುಮದ ಉದ್ದ ತಿಲಕವನ್ನು ಹಚ್ಚುವುದು : ಇದರಿಂದ ಪುರುಷರಲ್ಲಿ ಶಿವಜ್ಯೋತಿ ಸ್ವರೂಪ ಶಕ್ತಿ ಮತ್ತು ಚೈತನ್ಯ ಅಧಿಕ ಪ್ರಮಾಣದಲ್ಲಿ ಕಾರ್ಯನಿರತವಾಗಿ, ಅವರಿಗೆ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಲು ಶಿವನ ನಿರ್ಗುಣ ಶಕ್ತಿ ಮತ್ತು ಚೈತನ್ಯ ಅಧಿಕ ಪ್ರಮಾಣದಲ್ಲಿ ಸಿಗುತ್ತದೆ.
Follow Karunadu Today for more Spiritual information.
Click here to Join Our Whatsapp Group
