"ಟಾಪ್ 10"
ಭಾರತದ ಸನಾತನ ಧರ್ಮವು ಪ್ರಾಚೀನ ಮತ್ತು ವೈವಿಧ್ಯಮಯವಾದ ಆಚರಣೆಗಳನ್ನು ಹೊಂದಿದೆ, ಮತ್ತು ಇವುಗಳಲ್ಲಿ ದೇವಾಲಯಗಳ ಮಹತ್ವವೂ ಅಪಾರವಾಗಿದೆ. ಈ ಬ್ಲಾಗ್‌ನಲ್ಲಿ, ಪ್ರಪಂಚದ ಅತಿದೊಡ್ಡ ಹಿಂದೂ ದೇವಾಲಯಗಳ ಬಗ್ಗೆ ತಿಳಿದುಕೊಳ್ಳುತ್ತೇವೆ, ಅವುಗಳ ಐತಿಹಾಸಿಕ ಮತ್ತು ಶಿಲ್ಪಕಲೆಯ ವೈಶಿಷ್ಟ್ಯಗಳನ್ನು ಅನಾವರಣ ಮಾಡುತ್ತೇವೆ.
ಭಾರತದ ಧಾರ್ಮಿಕ ಪರಂಪರೆ
ಭಾರತವು ತನ್ನ ವೈವಿಧ್ಯಮಯ ಧಾರ್ಮಿಕ ಪರಂಪರೆಯೊಂದಿಗೆ ಹೆಸರಾಗಿದ್ದು, ಇಲ್ಲಿನ ದೇವಾಲಯಗಳು ಮಾತ್ರವಲ್ಲದೆ, ಇತರ ಧಾರ್ಮಿಕ ಸಂಕೇತಗಳು ಕೂಡ ಈ ದೇಶದ ಆಧ್ಯಾತ್ಮಿಕತೆಯನ್ನು ಪ್ರತಿಬಿಂಬಿಸುತ್ತವೆ. ಈ ದೇಶದಲ್ಲಿ ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ ಮತ್ತು ಇಸ್ಲಾಂ ಸೇರಿದಂತೆ ಹಲವಾರು ಧರ್ಮಗಳು ಸಹಜವಾಗಿ ಬೆರೆಯುವ ಮೂಲಕ ನವೀನ ಸಾಂಸ್ಕೃತಿಕ ಸಂವೇದನೆಯನ್ನು ರೂಪಿಸುತ್ತವೆ.
ಬೇಲೂರು ಮಠ: ಸರ್ವಧರ್ಮ ಸಮ್ಮೇಳನ
ಧಾರ್ಮಿಕ ಕ್ಷೇತ್ರಗಳಲ್ಲಿ 125 ವರ್ಷ ಇತಿಹಾಸ ಹೊಂದಿರುವಂತಹ ಬೇಲೂರು ಮಠ ಸರ್ವಧರ್ಮ ಸಮ್ಮೇಳನ (West Bengal) ರಾಜ್ಯದಲ್ಲಿ ಕಾಣಿಸಿಕೊಳ್ಳುವ ಈ ಮಠವನ್ನು ಯೋಗ ಜ್ಞಾನಿಯಾಗಿರುವಂತಹ ಸ್ವಾಮಿ ವಿವೇಕಾನಂದವರು ಸರ್ವಧರ್ಮ ಸಮ್ಮೇಳನ ಸಲುವಾಗಿ ಈ ಮಠವನ್ನು ಜನವರಿ 1897 ರಂದು ನಿರ್ಮಾಣ ಮಾಡಲಾಯಿತು. ಸರಿ ಸುಮಾರು 40 ಎಕರೆ ಜಾಗದಲ್ಲಿ ನಿರ್ಮಾಣ ಮಾಡಿರುವ ಈ ಮಠ ಶಾಂತಿಯ ಸಂಕೇತ ಮತ್ತು ಸರ್ವಧರ್ಮ ಸಂಕೇತವಾಗಿ ಹೊರಹೊಮ್ಮಿದೆ. ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮವನ್ನು ಪ್ರತಿನಿಧಿಸುವ ಈ ಮಠವು ಹೊರಗಿನಿಂದ ನೋಡಿದರೆ ಹಿಂದೂ ಮತ್ತು ಮುಸ್ಲಿಂ ಧರ್ಮದ ಆಕೃತಿಯಾಗಿ ಕಾಣುತ್ತದೆ ಅದೇ ಒಳಗಿನಿಂದ ನೋಡಿದರೆ ಕ್ರೈಸ್ತ ಧರ್ಮದ ಆಕೃತಿಯಾಗಿ ಕಾಣಿಸಿಕೊಳ್ಳುತ್ತದೆ. ಜಗತ್ತಿನಲ್ಲಿ ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರನ್ನು ಪ್ರತಿನಿಧಿಸುವ ಎಷ್ಟೋ ಮಠಗಳಿವೆ ಆದರೆ ಮುಖ್ಯ ಮಠ ಇರುವುದು ಭಾರತದ west Bengal ರಾಜ್ಯದಲ್ಲಿದೆ. ಪ್ರತಿದಿನ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅನಾಥ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಬಂದ ಭಕ್ತಾದಿಗಳಿಗೆ ಅನ್ನದಾಸೋಹ ಕೂಡ ಮಾಡಲಾಗುತ್ತೆ.
"ಏಕಾಂಬರೇಶ್ವರ ದೇವಾಲಯ: ಪಂಚಭೂತಗಳ ಪ್ರತೀಕ"
ಏಕಾಂಬರೇಶ್ವರ ದೇವಾಲಯ ಪಂಚಭೂತಗಳ ಪ್ರತೀಕವಾಗಿರುವ ಈ ದೇವಾಲಯ ತಮಿಳುನಾಡು ರಾಜ್ಯದಲ್ಲಿ ಕಾಣಿಸುತ್ತದೆ. ಈ ದೇವಾಲಯವು ಭೂಮಿ, ಆಕಾಶ, ನೀರು, ವಾಯು ಮತ್ತು ಅಗ್ನಿಯ ಪ್ರತಿಕವಾಗಿ ಒಂದೊಂದು ದೇವಾಲಯವು ಕಾಣಸಿಗುತ್ತದೆ. ಒಟ್ಟು 23 ಎಕರೆಗಳ ವಿಸ್ತಾರವಾದ ಪ್ರದೇಶದಲ್ಲಿ ಕ್ರಿಸ್ತ ಪೂರ್ವ 1685 ರಲ್ಲಿ ನಿರ್ಮಿತ ಗೊಂಡಿದೆ ಒಟ್ಟು 59 ಅಡಿ ಅಷ್ಟು ದೊಡ್ಡದಾಗಿರುವ ಏಕಾಂಬರೇಶ್ವರ ದೇವಾಲಯದ ಗೋಪುರವು ದೇವಸ್ಥಾನದ ಆಕರ್ಷಣೆಯನ್ನು ಇನ್ನು ಹೆಚ್ಚುತ್ತದೆ. ಈ ದೇವಸ್ಥಾನದ ಇನ್ನೊಂದು ವಿಶೇಷ ಏನೆಂದರೆ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಸೂರ್ಯನ ಬೆಳಕು ನೇರವಾಗಿ ದೇವರಿಗೆ ಸ್ಪರ್ಶಿಸುತ್ತದೆ ಇದರಿಂದ ದೇವರ ಮೂರ್ತಿಯು ಇನ್ನಷ್ಟು ಹೊಳಪು ಗೊಳ್ಳುತ್ತದೆ. ಚೋಳರ ಕಾಲದಲ್ಲಿ ನಿರ್ಮಿತವಾದ ಈ ದೇವಸ್ಥಾನದಲ್ಲಿ ಸರಿ ಸುಮಾರು ಸಾವಿರಕ್ಕೂ ಹೆಚ್ಚು ಶಿವಲಿಂಗಗಳನ್ನು ಕಾಣಬಹುದು ಮತ್ತು ದೇವಸ್ಥಾನದ ಒಳಗೆ ಇರುವಂತಹ ಮಂಟಪದಲ್ಲಿ ಒಟ್ಟು ಸಾವಿರಕ್ಕೂ ಹೆಚ್ಚು ಕಲಾಕೃತಿ ಹೊಂದಿರುವಂತಹ ಕಂಬಗಳನ್ನು ಕಾಣಬಹುದು. ವಿಶಾಲವಾದ ಪ್ರದೇಶದಲ್ಲಿ ನಿರ್ಮಿತ ಗೊಂಡಿರುವ ಈ ದೇವಾಲಯದಲ್ಲಿ ಇನ್ನೊಂದು ಅಚ್ಚರಿ ಪಡುವಂತಹ ಸಂಗತಿ ಏನೆಂದರೆ ಸರಿಸುಮಾರು 3500 ವರ್ಷಗಳ ಹಳೆಯ ಮಾವಿನ ಮರಗಿರುವುದು ವಿಶೇಷ. ಈ ಮಾವಿನ ಮರವನ್ನು ದೇವಸ್ಥಾನದ ಆಡಳಿತ ಮಂಡಳಿ ಸಂರಕ್ಷಣೆ ಮಾಡುತ್ತಿದ್ದು ಆ ಜಾಗದಲ್ಲಿ ಇನ್ನೊಂದು ಮಾವಿನ ಸಸಿಯನ್ನು ನೀಡಲಾಗಿದೆ.
"ದಕ್ಷಿಣೇಶ್ವರ ಕಾಳಿ ದೇವಾಲಯ: ಶಕ್ತಿ ಮತ್ತು ಭಕ್ತಿ"
1855 ರಲ್ಲಿ ನಿರ್ಮಿತವಾದ ಈ ದೇವಾಲಯವು 25 ಎಕರೆಗಳ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ ಕಾಳಿಮಾತೆಯ ಪೂಜೆಯ ಮೂಲಕ ಭಕ್ತರು ಶಕ್ತಿಯ ಅನುಭವಿಸುತ್ತಾರೆ. ಈ ದೇವಾಲಯದ ಸುತ್ತಲೂ ಇರುವ ಶ್ರೇಷ್ಟ ಶಿಲ್ಪಕಲೆಯು ಭಕ್ತರನ್ನು ಆಕರ್ಷಿಸುತ್ತದೆ.
"ರಾಜಗೋಪಾಲಸ್ವಾಮಿ ದೇವಾಲಯ: ಐತಿಹಾಸಿಕ ಮಹತ್ವ"
ಈ ದೇವಾಲಯವು 10ನೇ ಶತಮಾನದಲ್ಲಿ ನಿರ್ಮಿತವಾಗಿದ್ದು, 23 ಎಕರೆಗಳಲ್ಲಿ ವಿಸ್ತಾರವಾಗಿದೆ. ದೇವಾಲಯದ ಗೋಪುರವು 190 ಅಡಿ ಎತ್ತರದಿದ್ದು, ಇದು ವೈಷ್ಣವ ದೇವಾಲಯಗಳಲ್ಲೊಂದು ಪ್ರಮುಖ ಸ್ಥಾನವನ್ನು ಹೊಂದಿದೆ.
"ಅರುಣಾಚಲೇಶ್ವರ ದೇವಾಲಯ: ಅಗ್ನಿತತ್ವದ ಪ್ರತೀಕ"
ಈ ದೇವಾಲಯವು 25 ಎಕರೆಗಳ ವಿಸ್ತೀರ್ಣವನ್ನು ಹೊಂದಿದ್ದು, ಶಿವನ ಅಗ್ನಿಲಿಂಗವಾಗಿ ಪೂಜಿಸಲಾಗುತ್ತದೆ. 217 ಅಡಿ ಎತ್ತರದ ರಾಜಗೋಪುರವು ವಿಜಯನಗರದ ಶ್ರಿಕೃಷ್ಣದೇವರಾಯರ ಕಾಲದಲ್ಲಿ ನಿರ್ಮಿತವಾಗಿದೆ.
"ನಟರಾಜ ದೇವಾಲಯ: ನೃತ್ಯದ ದೇವರು"
ತಮಿಳುನಾಡಿನ ಚಿದಂಬರದಲ್ಲಿ ಇರುವ ನಟರಾಜ ಸ್ವಾಮಿ ದೇವಾಲಯವು ನೃತ್ಯದ ದೇವನಾದ ಶಿವನನ್ನು ಆರಾಧಿಸುತ್ತದೆ. 40 ಎಕರೆಗಳ ವಿಸ್ತೀರ್ಣದಲ್ಲಿ ಹರಡಿರುವ ಈ ದೇವಾಲಯವು ಪಂಚಭೂತಗಳಲ್ಲಿ ಆಕಾಶದ ಪ್ರತೀಕವಾಗಿದೆ. ಇದರ ಗರ್ಭಗೃಹವನ್ನು ಆಕಾಶಲಿಂಗವೆಂದು ಕರೆಯಲಾಗುತ್ತದೆ. ದೇವಾಲಯದ ಸಾಮಾನ್ಯ ಶಿಲ್ಪಕಲೆಗೆ ಇದು ಹೆಸರಾಗಿದೆ, ಮತ್ತು ಈ ಸ್ಥಳದಲ್ಲಿ ನೃತ್ಯ ಮತ್ತು ಭಕ್ತಿ ಎರಡರಿಗೂ ಮಹತ್ವವಿದೆ. ಪಲ್ಲವರು, ಚೋಳರು ಮತ್ತು ವಿಜಯನಗರ ರಾಜರು ತಮ್ಮ ಕಾಲದಲ್ಲಿ ಈ ದೇವಾಲಯವನ್ನು ಅಭಿವೃದ್ಧಿಪಡಿಸಿದ್ದಾರೆ.
ದೇವಾಲಯದ ಶ್ರೇಷ್ಠತೆ:
- ನಟರಾಜ ಅಂದ್ರೆ ನೃತ್ಯಕ್ಕೆ ರಾಜ, ಇದು ಶಿವನ ನೃತ್ಯದ ಸ್ವರೂಪವನ್ನು ಪ್ರತಿಬಿಂಬಿಸುತ್ತವೆ.
- ಚಿತ್ಸಭಾ ಎಂಬ ವೇದಿಕೆಯ ಮೇಲೆ ಮೂಲಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
- ನಾಲ್ಕು ದಿಕ್ಕುಗಳಿಗೆ 250 ಅಡಿ ಎತ್ತರದ ಗೋಪುರಗಳು, ಇದು ದೇವಾಲಯದ ಶ್ರೇಷ್ಠತೆಯನ್ನು ವ್ಯಕ್ತಪಡಿಸುತ್ತದೆ.
"ಬೆಸಾಕಿ ದೇವಾಲಯ: ಬಾಲಿಯ ಪವಿತ್ರ ಸ್ಥಳ"
ಇಂಡೋನೇಷ್ಯಾದ ಬಾಲಿಯಲ್ಲಿರುವ ಬೆಸಾಕಿ ದೇವಾಲಯವು ಸ್ಥಳೀಯರ ನಂಬಿಕೆ ಮತ್ತು ಪರಂಪರೆಯ ಸಂಕೇತವಾಗಿದೆ. ಈ ದೇವಾಲಯವು 49 ಎಕರೆಗಳ ವಿಸ್ತೀರ್ಣವನ್ನು ಹೊಂದಿದ್ದು, ಸರ್ಪರಾಜ ವಾಸುಕಿಗೆ ಸಮರ್ಪಿತವಾಗಿದೆ. ಬೆಸಾಕಿ ದೇವಾಲಯವು 23 ವಿಭಿನ್ನ ದೇವಾಲಯಗಳನ್ನು ಒಳಗೊಂಡಿದೆ ಮತ್ತು ಇದರ ಶ್ರೇಷ್ಠ ಶಿಲ್ಪಕಲೆಯು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಸ್ಥಳವು ಹಿಂದೂ ಧರ್ಮದ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
"ಅಕ್ಷರಧಾಮ ದೇವಾಲಯ: ಆಧ್ಯಾತ್ಮಿಕತೆಯ ಸಂಕೇತ"
ದೇಶದ ರಾಜಧಾನಿಯಾದ ದೆಹಲಿಯಲ್ಲಿರುವ ಅಕ್ಷರಧಾಮ ದೇವಾಲಯವು 8 ಎಕರೆಗಳ ವಿಸ್ತೀರ್ಣವನ್ನು ಹೊಂದಿದ್ದು, ಇದು ಹಿಂದೂ ಸಾಂಸ್ಕೃತಿಕ ಕಲೆ ಮತ್ತು ಆಧ್ಯಾತ್ಮಿಕತೆಯ ದರ್ಶನವನ್ನು ನೀಡುತ್ತದೆ. ಈ ದೇವಾಲಯವು 141 ಅಡಿ ಎತ್ತರದ ಮತ್ತು 316 ಅಡಿ ಅಗಲದ ಶಿಖರವನ್ನು ಹೊಂದಿದೆ. ಸ್ವಾಮಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ನಿರ್ಮಿತವಾದ ಈ ದೇವಾಲಯವು ಭಾರತೀಯ ಶಿಲ್ಪಕಲೆಯ ಅದ್ಭುತ ನಿದರ್ಶನವಾಗಿದೆ. ಇಲ್ಲಿ ವಿವಿಧ ದೇವತೆಗಳ ವಿಗ್ರಹಗಳನ್ನು ನೋಡಿ ಭಕ್ತರು ಆಧ್ಯಾತ್ಮಿಕ ಶಾಂತಿಯನ್ನು ಅನುಭವಿಸುತ್ತಾರೆ.
"ಚಾತುರ್ಪುರ್ ದೇವಾಲಯ: ಕಾತ್ಯಾಯನಿ ದೇವಿಯ ಆಶ್ರಯ
ದಿಲ್ಲಿಯ ಚಾತುರ್ಪುರ್ ದೇವಾಲಯವು ಕಾತ್ಯಾಯನಿ ದೇವಿಯ ಆರಾಧನೆಗೆ ವಿಶೇಷವಾಗಿದೆ. 1974 ರಲ್ಲಿ ನಿರ್ಮಿತವಾದ ಈ ದೇವಾಲಯವು 70 ಎಕರೆಗಳ ವಿಸ್ತೀರ್ಣವನ್ನು ಹೊಂದಿದ್ದು, ಇದು ಪ್ರಮುಖ ತೀರ್ಥ ಸ್ಥಳವಾಗಿದೆ. ಬಾಬಾರವರ ಸಮಾಧಿಯು ಈ ದೇವಾಲಯದ ಆವರಣದಲ್ಲಿ ಇರುವುದರಿಂದ, ಭಕ್ತರು ಇಲ್ಲಿ ಶ್ರದ್ಧೆ ಮತ್ತು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಶಿಲ್ಪಕಲೆಯು ಉತ್ತರ ಮತ್ತು ದಕ್ಷಿಣ ಶೈಲಿಯ ಮಿಶ್ರಣವನ್ನು ಹೊಂದಿದೆ, ಇದು ಈ ಸ್ಥಳದ ವೈಶಿಷ್ಟ್ಯವಾಗಿದೆ.
"ಆಂಕೋರ್ ವಾಟ್ ದೇವಾಲಯ: ವಿಶ್ವದ ಅತಿದೊಡ್ಡ ದೇವಾಲಯ"
ಕಾಂಬೋಡಿಯಾದ ಆಂಕೋರ್ ವಾಟ್ ದೇವಾಲಯವು 12ನೇ ಶತಮಾನದ ಶಿಲ್ಪಕಲೆಯ ಅದ್ಭುತ ನಿದರ್ಶನವಾಗಿದೆ. ಇದು 400 ಎಕರೆಗಳ ವಿಸ್ತೀರ್ಣವನ್ನು ಹೊಂದಿದ್ದು, ಇದು ವಿಶ್ವದಲ್ಲಿ ಅತಿದೊಡ್ಡ ದೇವಾಲಯವಾಗಿದೆ. ಈ ದೇವಾಲಯವು ಬೌದ್ಧ ಧರ್ಮವನ್ನು ಪ್ರತಿಬಿಂಬಿಸುತ್ತದೆ ಮತ್ತು ಇದನ್ನು ಯುನೆಸ್ಕೋ ಹೆರಿಟೇಜ್ ಸೈಟ್ ಎಂದು ಘೋಷಿಸಲಾಗಿದೆ. ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
ಈ ಎಲ್ಲಾ ದೇವಾಲಯಗಳೊಂದಿಗೆ, ಪ್ರಪಂಚದಾದ್ಯಂತ ಇನ್ನೂ ಹಲವಾರು ಅದ್ಭುತವಾದ ದೇವಾಲಯಗಳು ಇವೆ. ನೀವು ಯಾವ ದೇವಾಲಯಗಳನ್ನು ಭೇಟಿ ಮಾಡಿದ್ದಾರೆ ಅಥವಾ ಕೇಳಿದ್ದೀರಾ? ನಿಮ್ಮ ಅನುಭವಗಳನ್ನು ಕಾಮೆಂಟ್‌ನಲ್ಲಿ ಹಂಚಿಕೊಳ್ಳಿ.
ನಾವು ಇನ್ನು ಮುಂದೆ ಇತರ ದೇವಾಲಯಗಳ ಬಗ್ಗೆ ತಿಳಿಯಲು ಬಯಸುತ್ತೇವೆ.
Follow Karunadu Today for more Interesting Facts & Stories.
Click here to Join Our Whatsapp Group
