ರಾಷ್ಟ್ರೀಯ ಹೈವೇಗಳಲ್ಲಿ ಚಲಿಸಲು ಯಾರಿಗೆ ತಾನೇ ಇಷ್ಟವಿಲ್ಲ ನೀವೇ ಹೇಳಿ. ಅದರಲ್ಲೂ ರಾತ್ರಿಯ ವೇಳೆ ಚಲಿಸಲು ಮತ್ತಷ್ಟು ಮಜ ಬರುತ್ತದೆ. ಆದರೆ ನಮ್ಮ ದೇಶದಲ್ಲಿ ಕೆಲವು ರಾಷ್ಟ್ರೀಯ ಹೈವೇಗಳಿದ್ದು ಅಲ್ಲಿ ಚಲಿಸಲು ಜನಗಳು ಸಾಕಷ್ಟು ಭಯ ಪಡುತ್ತಾರೆ. ಇದಕ್ಕೆ ಕಾರಣ ಆ ರಸ್ತೆಗಳಲ್ಲಿ ನಡೆದಂತಹ ಘಟನೆಗಳು. ಅಕಸ್ಮಾತ್ ನಿಮಗೆ ದೆವ್ವ ಭೂತಗಳಲ್ಲಿ ನಂಬಿಕೆ ಇದ್ದರೆ ಈ ರಸ್ತೆಯಲ್ಲಿ ನಡೆದಿರುವಂತಹ ಘಟನೆಗಳನ್ನು ಖಂಡಿತವಾಗಿ ನಂಬುತ್ತೀರಿ. ಅಂತಹ ಭಯಾನಕ ಘಟನೆಗಳು ಇಲ್ಲಿ ನಡೆದಿವೆ. ಬನ್ನಿ ಇನ್ನು ಹೆಚ್ಚು ಸಮಯ ವ್ಯರ್ಥ ಮಾಡದೆ ಅನೇಕ ಜನಗಳ ಪ್ರಾಣ ತೆಗೆದುಕೊಂಡಿರುವಂತಹ 5 ಭಯಾನಕ ರಾಷ್ಟ್ರೀಯ ಹೈವೇಗಳ ಕುರಿತು ತಿಳಿದುಕೊಳ್ಳೋಣ.

1. East Coast Road

ಚೆನ್ನೈ ನಗರದಿಂದ ಪಾಂಡಿಚೇರಿಗೆ ಹೋಗುವಾಗ ಸಿಗುವಂತಹ ಈ ರಾಷ್ಟ್ರೀಯ ಹೆದ್ದಾರಿಯು ನೋಡಲು ಬಲು ಸುಂದರ. ಸುತ್ತ ಮುತ್ತಲು ಹಚ್ಚ ಹಸಿರಿನಿಂದ ಕಂಗೊಳಿಸುವ ಈ ರಸ್ತೆಯು ಸಂಜೆಯಾಗುತ್ತಿದ್ದಂತೆ ತನ್ನ ನಿಜ ಸ್ವರೂಪ ಪಡೆದುಕೊಳ್ಳುತ್ತದೆ. ಈ ರಸ್ತೆಯ ಮೂಲಕ ಪ್ರಯಾಣ ಮಾಡಿರುವ ಅನೇಕ ಜನಗಳು ಹೇಳುವ ಪ್ರಕಾರ ರಾತ್ರಿಯ ವೇಳೆ ಇಲ್ಲಿ ವಿಚಿತ್ರ ಘಟನೆಗಳು ನಡೆಯುತ್ತವೆ. ವಾಹನವನ್ನು ಚಲಿಸುತ್ತಿರುವ ಚಾಲಕನ ನಿಯಂತ್ರಣ ತಪ್ಪುವ ಹಾಗೆ ಆಗಿ ಅಪಘಾತವಾಗಿರುವಂತಹ ಘಟನೆಗಳು ಅನೇಕ ಬಾರಿ ನಡೆದಿವೆಯಂತೆ. ಇದಷ್ಟೇ ಅಲ್ಲದೆ ಒಮ್ಮೆಲೇ ಸುತ್ತ ಮುತ್ತಲಿನ ವಾತಾವರಣದಲ್ಲಿ ತಾಪಮಾನ ಇಳಿಮುಖವಾಗುವ ರೀತಿಯು ಕೂಡ ಅನೇಕರಿಗೆ ಅನುಭವವಾಗಿದೆಯಂತೆ.

2. Sathyamangalam Wildlife Sanctuary road

ತಮಿಳುನಾಡಿನಲ್ಲಿರುವ Sathyamangalam Wildlife Sanctuary ಮೂಲಕ ರಾಷ್ಟ್ರೀಯ ಹೈವೇ 209ರ ಒಂದು ಭಾಗವು ಹಾದುಹೋಗುತ್ತದೆ. ಒಂದಾನೊಂದು ಕಾಲದಲ್ಲಿ ದಂತಚೋರ ವೀರಪ್ಪನ್ ಇದ್ದ ಈ ಅಭಯಾರಣ್ಯದ ಮೂಲಕ ಹಾದುಹೋಗುವ ರಸ್ತೆಯಲ್ಲಿ ರಾತ್ರಿಯ ವೇಳೆ ಪ್ರಯಾಣ ಮಾಡುವಾಗ ಅನೇಕ ಜನರಿಗೆ ಒಬ್ಬ ವ್ಯಕ್ತಿಯು ಜೋರಾಗಿ ಕಿರುಚಿದಂತಹ ಅನುಭವಗಳು ಆಗಿವೆ. ಇದರ ಜೊತೆಗೆ ಅನೇಕ ಘಟನೆಗಳು ಈ ರಸ್ತೆಯಲ್ಲಿ ನಡೆದಿದ್ದು ಅಲ್ಲಿನ ನೆರೆಯ ಜನಗಳು ಹೇಳುವ ಪ್ರಕಾರ ಇದು ಭೂತಗಳ ಚೇಷ್ಟೆಯಂತೆ

3. Kashedi Ghat

ಮುಂಬೈ ನಗರದಿಂದ ಗೋವಾಗೆ ಹೋಗುವಾಗ Kashedi Ghat ಮೂಲಕ ಹಾದುಹೋಗಬೇಕು. ಕೆಲವು ಜನಗಳಿಗೆ ಈ ಘಾಟ್ ಮೂಲಕ ಹೋಗುವಾಗ ಒಬ್ಬ ವ್ಯಕ್ತಿಯು ಲಿಫ್ಟ್ ಕೇಳಿದ ಅನುಭವಗಳಾಗಿದ್ದು ಅಕಸ್ಮಾತ್ ಕಾರು ನಿಲ್ಲಿಸದೆ ಹಾಗೆಯೇ ಹೋದರೆ ಕಾರು ಅಪಘಾತವಾಗಿರುವಂತಹ ಘಟನೆಗಳು ನಡೆದಿವೆ. ಈ ಅನುಭವವು ಬಹಳಷ್ಟು ಜನರಿಗೆ ಆಗಿದ್ದರಿಂದ ಈ ರಸ್ತೆಯಲ್ಲಿ ರಾತ್ರಿಯ ವೇಳೆ ಪ್ರಯಾಣ ಮಾಡುವುದು ಸೂಕ್ತವಲ್ಲ ಎಂದು ಅನೇಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

4. Delhi-Jaipur Highway

ದೇಹಲಿಯಿಂದ ರಾಜಸ್ಥಾನದ ಜೈಪುರ್ ಗೆ ಹೋಗುವಾಗ ಅಕಸ್ಮಾತ್ ಅಲ್ವಾರ್ ಎನ್ನುವ ಸ್ಥಳದ ಮೂಲಕ ಹೋದರೆ ರಾಷ್ಟ್ರೀಯ ಹೈವೇ 11A ಸಿಗುತ್ತದೆ. ಈ ಹೈವೇ ಮೂಲಕ ಜೈಪುರ್ ಗೆ ಹೋಗುವಾಗ ಮಾರ್ಗ ಮಧ್ಯ “Bhangarh Fort” ಸಿಗುತ್ತದೆ. ಇದು ನಮ್ಮ ದೇಶದಲ್ಲಿರುವ ಅತ್ಯಂತ ಭಯಾನಕ ಕೋಟೆಯಾಗಿದ್ದು ಭಾರತ ಸರ್ಕಾರವೇ ಸಂಜೆ 6 ಗಂಟೆಯ ಮೇಲೆ ಈ ಕೋಟೆಯ ಒಳಗೆ ಯಾರೂ ಹೋಗಬಾರದು ಎಂದು ನಿಷೇಧಿಸಿದೆ. ಜೈಪುರ್ ತಲುಪಲು ಅದೆಷ್ಟೋ ಜನಗಳು ಈ ಭಯಾನಕ ಕೋಟೆಯ ಮೂಲಕ ಹಾದು ಹೋಗುವ ರಸ್ತೆಯ ಮುಖಾಂತರ ಹೋಗಿ ಪ್ರಾಣ ಕಳೆದುಕೊಂಡಿರುವಂತಹ ಘಟನೆಗಳು ಕೂಡ ನಡೆದಿದೆ. ಕೆಲವರಿಗೆ ಈ ರಸ್ತೆಯಲ್ಲಿ ಚಲಿಸುವಾಗ ಯಾವುದೋ ಶಕ್ತಿಗಳು ತಮ್ಮ ಮೇಲೆ ದಾಳಿ ಮಾಡಿದ ರೀತಿಯ ಅನುಭವ ಕೂಡ ಆಗಿದೆ.

5. Ranchi-Jamshedpur NH-33

ಈ ರಾಷ್ಟ್ರೀಯ ಹೈವೇಯಲ್ಲಿ ಇದುವರೆಗು ನಡೆದಿರುವಂತಹ ಘಟನೆಗಳನ್ನು ಗಮನಿಸಿರುವ ಜನಗಳು ಇದು ಶಾಪಗ್ರಸ್ತ ರಸ್ತೆಯಾಗಿದೆ ಎಂದು ಹೇಳುತ್ತಿದ್ದಾರೆ. ರಾತ್ರಿಯ ವೇಳೆ ಅಕಸ್ಮಾತ್ ವಾಹನ ಚಲಿಸುತ್ತಿರುವಂತಹ ಚಾಲಕನು ಸ್ವಲ್ಪ ಎಚ್ಚರ ತಪ್ಪಿದರೆ ಸಾಕು ಅಪಘಾತ ಕಟ್ಟಿಟ್ಟಬುತ್ತಿ. ಇದೇ ಕಾರಣಕ್ಕೆ ಈ ರಸ್ತೆಯ ಪ್ರತಿ ಎರಡು ಕಿಲೋಮೀಟರ್ ಅಂತರದಲ್ಲಿ ಬಲಗಡೆ ಹಾಗು ಎಡಗಡೆ ಪುಟ್ಟ ದೇವಸ್ಥಾನಗಳನ್ನು ನಿರ್ಮಿಸಲಾಗಿದ್ದು ಅಕಸ್ಮಾತ್ ದೇವರಿಗೆ ಕೈಮುಗಿಯದೆ ಹಾಗೆಯೇ ಹೋದರೆ ಕಣ್ಣಿಗೆ ಕಾಣದ ದುಷ್ಟಶಕ್ತಿಯೊಂದು ವಾಹನವನ್ನು ಅಪಘಾತವಾಗುವ ಹಾಗೆ ಮಾಡುತ್ತದೆ ಎಂದು ಜನಗಳು ನಂಬಿದ್ದಾರೆ.