ಯಾವಾಗ ಅಧರ್ಮ ಅನ್ನುವುದು ತಲೆ ಎತ್ತಿ ನಿಲ್ಲುವುದೋ ಆಗ ಅದನ್ನು ತುಳಿದು ಧರ್ಮದ ಸ್ಥಾಪನೆಗಾಗಿ ನಾನು ಮತ್ತೆ ಹುಟ್ಟಿ ಬರುವೆ“. ಹೀಗೆಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದು ನಮಗೆಲ್ಲ ಗೊತ್ತೇ ಇದೆ. ಹಾಗಂತ ಇದೇನಪ್ಪ ಪ್ರತಿ ದಿನ ಎಲ್ಲೆಡೆ ಅಧರ್ಮ ನಡೆಯುತ್ತಿದೆ ಆದರೂ ಈ ಕೃಷ್ಣ ಪರಮಾತ್ಮ ಮಾತ್ರ ಬರುತ್ತಾನೆ ಇಲ್ಲ ಎಂದು ಯೋಚಿಸುತ್ತಿದ್ದೀರಾ? ಆತನು ಬಂದು ಅದೆಷ್ಟೋ ವರ್ಷಗಳೇ ಆಗಿವೆ, ಆದರೆ ಈ ಬಾರಿ ಕೈಯಲ್ಲಿ ಸುದರ್ಶನ ಚಕ್ರವನ್ನಾಗಲಿ ಅಥವ ಗಧೆಯನ್ನಾಗಲಿ ಹಿಡಿದು ಬಂದಿಲ್ಲ ಅದರ ಬದಲು ಹೆಗಲ ಮೇಲೆ ನಕ್ಷತ್ರಗಳನ್ನು ಇರುವಂತಹ ಖಾಕೀ ಬಟ್ಟೆಯನ್ನು ತೊಟ್ಟು ಕೈಯ್ಯಲ್ಲಿ ಬಂದೂಕನ್ನು ಹಿಡಿದು ಬಂದಿದ್ದಾನೆ. ಹೌದು ಸಮಾಜದಲ್ಲಿ ದುಷ್ಟ ಶಕ್ತಿಗಳು ಬಡವರ ಹೊಟ್ಟೆಯ ಮೇಲೆ ಹೊಡೆದು ನಡೆಸುತ್ತಿರುವ ಅಕ್ರಮ ದಂದೆಗಳನ್ನು ಮಟ್ಟ ಹಾಕಿ ಅವರನ್ನು ಶಿಕ್ಷಿಸಲು ಐ.ಪಿ.ಎಸ್. ಹಾಗು ಐ.ಏ.ಎಸ್ ಅಧಿಕಾರಿಗಳ ರೂಪದಲ್ಲಿ ಬಂದಿದ್ದಾನೆ. ಹಾಗಂತ ಎಲ್ಲಾ ಐ.ಪಿ.ಎಸ್. ಹಾಗು ಐ.ಏ.ಎಸ್ ಅಧಿಕಾರಿಗಳು ಭಗವಂತನ ರೂಪ ಎಂದು ಹೇಳುತ್ತಿಲ್ಲ. ಏಕೆಂದರೆ ಅದರಲ್ಲೂ ಕೆಲವರು ಭ್ರಷ್ಟರಿದ್ದಾರೆ. ಇಂದು ನಾವು ನಿಮಗೆ ನಮ್ಮ ದೇಶದಲ್ಲಿ ಇರುವ ದುಷ್ಟರನ್ನು ಮಟ್ಟ ಹಾಕಿ ದೇಶಕ್ಕಾಗಿ ದುಡಿದು ಕೊನೆಗೆ ಪ್ರಾಣವನ್ನೂ ಕಳೆದುಕೊಂಡ 10 ಪ್ರಸಿದ್ದ ಐ.ಪಿ.ಎಸ್, ಐ.ಎ.ಎಸ್ ಹಾಗು ಐ.ಇ.ಎಸ್ ಅಧಿಕಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಮುಂದೆ ಓದಿ.
1. ನರೇಂದ್ರ ಕುಮಾರ್
ಇವರು ತಮ್ಮ ಐ.ಪಿ.ಎಸ್. ಜೀವನವನ್ನು 2009ರಲ್ಲಿ ಬಿಹಾರದಲ್ಲಿ ಪ್ರಾರಂಬಿಸಿದ್ದರು. ಆರಂಭದಿಂದಲೂ ಖಡಕ್ ಅಧಿಕಾರಿ ಎಂದು ಹೆಸರು ಪಡೆದಿದ್ದ ಇವರು ದುಷ್ಟರಿಗೆ ಸಿಂಹಸ್ವಪ್ನವಾಗಿದ್ದರು. ಇವರ ಕಾರ್ಯವೈಖರಿ ಕಂಡು ಮದ್ಯಪ್ರದೇಶದ ಮೊರೆನ ನಗರದ ಸುತ್ತ ಮುತ್ತಲು ನಡೆಯುತ್ತಿದ್ದ ಅಕ್ರಮ ಮೈನಿಂಗ್ ದಂದೆಯನ್ನು ತಡೆಯಲು ಅಲ್ಲಿಗೆ ಕಳುಹಿಸಿದರು. ಇವರು ಅಲ್ಲಿಗೆ ಹೋಗುತ್ತಿದ್ದಂತೆ ದುಷ್ಟರ ಎದೆಯಲ್ಲಿ ಭಯ ಆವರಿಸಿತ್ತು. ಅದೊಂದು ದಿನ ಅಕ್ರಮ ಮೈನಿಂಗ್ ಕಲ್ಲುಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ನಿಲ್ಲಿಸಲು ಹೋದಾಗ ಅದರ ಚಾಲಕನು ಇವರ ಮೈ ಮೇಲೆ ಟ್ರ್ಯಾಕ್ಟರ್ ಓಡಿಸಿ ಕೊಂದುಬಿಟ್ಟ. ಕೇವಲ 30 ವಯಸ್ಸಿನವರಾಗಿದ್ದ ಇವರು ಅಲ್ಲಿಯೇ ಕೊನೆಯುಸಿರೆಳೆದಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ದೇಶದ ತುಂಬೆಲ್ಲಾ ಅದೆಷ್ಟೋ ಜನರು ಕಣ್ಣೀರು ಹಾಕಿದ್ದರು. ಐ.ಎ.ಎಸ್ ಅಧಿಕಾರಿ ಆಗಿರುವ ಇವರ ಹೆಂಡತಿ ಈ ಸುದ್ದಿಯನ್ನು ಕೇಳಿ ಅಳದೆ ತನ್ನ ಗಂಡನ ಜೀವ ತೆಗೆದ ದುಷ್ಟರನ್ನು ಮಟ್ಟ ಹಾಕುವೆ ಎಂದು ಶಪತ ತೊಟ್ಟಿದ್ದರು. ಅದರಂತೆಯೇ ಆ ಟ್ರ್ಯಾಕ್ಟರ್ ಚಾಲಕ ಹಾಗು ಅದರ ಹಿಂದೆ ಇರುವ ದೊಡ್ಡ ವ್ಯಕ್ತಿಗಳಿಗೆ ಕೋರ್ಟ್ ಶಿಕ್ಷೆ ನೀಡಿಸಿದರು.
2. ಅಜಿತ್ ದೋವೆಲ್
ಇವರ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಆಗಾಗ್ಗೆ ಟೀವಿಯಲ್ಲಿ ಇವರ ಬಗ್ಗೆ ನೀವು ಕೇಳುತ್ತಲೇ ಇರುತ್ತೀರ. “ಭಾರತದ ಜೇಮ್ಸ್ ಬಾಂಡ್” ಎಂದು ಖ್ಯಾತಿಯಾಗಿರುವ ಇವರು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರದ “ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್” ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1968 ರ ಐ.ಪಿ.ಎಸ್ ಬ್ಯಾಚೀನವರದಾರ ಇವರು ಮಿಜೊರಾಂ, ಪಂಜಾಬ್, ಕಾಶ್ಮೀರದಂತಹ ರಾಜ್ಯಗಳಲ್ಲಿ ಉಗ್ರರನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದರು. ಇದಲ್ಲದೆ 1971 ರಿಂದ 1999 ರವರೆಗೂ ಬಾರತದ ವಿಮಾನಗಳನ್ನು ಹೈಜ್ಯಾಕ್ ಮಾಡಲು ಪ್ರಯತ್ನಿಸಿದ್ದ ಉಗ್ರರ ಯೋಜನೆಯನ್ನು ವಿಪಲಗೊಳಿಸುವುದರಲ್ಲಿ ಯಶಸ್ವಿಯಾಗಿದ್ದರು. ಪಾಕಿಸ್ತಾನದ ಲಾಹೋರ್ ನಲ್ಲಿ ಬರೋಬ್ಬರಿ 9 ವರ್ಷಗಳ ಕಾಲ ಗೂಡಾಚಾರಿಯಾಗಿ ಕೆಲಸ ಮಾಡುವ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಯೋಜಿಸಿದ್ದ ಉಗ್ರರ ಅದೆಷ್ಟೋ ಯೋಜನೆಗಳನ್ನು ವಿಪಲಗೊಳಿಸಿದ್ದಾರೆ. ಇದಲ್ಲದೆ ಉಗ್ರರ ಮೇಲೆ ಭಾರತೀಯ ಸೇನೆಯು ನಡೆಸಿದ “ಸರ್ಜಿಕಲ್ ಸ್ಟ್ರೈಕ್” ನ ಹಿಂದಿರುವ ಮಾಸ್ಟರ್ ಮೈಂಡ್ ಇವರೇ.
3. ಕಿರಣ್ ಬೇಡಿ
ಇವರ ಬಗ್ಗೆ ಕೂಡ ನಿಮಗೆಲ್ಲ ಗೊತ್ತೇ ಇದೆ. ದೇಶ ಕಂಡ ಮೊಟ್ಟ ಮೊದಲ ಮಹಿಳಾ ಐ.ಪಿ.ಎಸ್ ಅಧಿಕಾರಿ ಇವರು. 1970 ರಲ್ಲಿ ಪೊಲಿಟಿಕಲ್ ಸೈನ್ಸ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದ ಇವರು 1972 ರಲ್ಲಿ ಮೊಟ್ಟ ಮೊದಲ ಮಹಿಳಾ ಐ.ಪಿ.ಎಸ್ ಅಧಿಕಾರಿಯಾಗುವುದರ ಮೂಲಕ ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಏನಾದರು ಆಗಬಹುದು ಎಂದು ದೇಶಕ್ಕೆ ತೋರಿಸಿಕೊಟ್ಟರು. ತಮ್ಮ ಅಧಿಕಾರಾವಧಿಯಲ್ಲಿ ದುಷ್ಟರಿಗೆ ಸಿಂಹಸ್ವಪ್ನವಾಗಿದ್ದ ಇವರು ರಾಷ್ಟ್ರದೆಲ್ಲೆಡೆ ಹೆಸರು ಮಾಡಿದರು. 1993 ರಲ್ಲಿ ದೆಹಲಿಯ ಐ.ಐ.ಟಿ ಯಲ್ಲಿ ಪಿ.ಎಚ್.ಡಿ ಮಾಡಿ ನಿವೃತ್ತಿ ಹೊಂದಿದ ಬಳಿಕ ರಾಜಕೀಯ ಪ್ರವೇಶ ಮಾಡಿ ಒಬ್ಬ ಉತ್ತಮ ರಾಜಕಾರಣಿಯಾಗುವುದರ ಮೂಲಕ ದೇಶ ಸೇವೆ ಮಾಡಿದರು. ತಮ್ಮ ಸಂಪೂರ್ಣ ಜೀವನವನ್ನು ದೇಶ ಸೇವೆಗೆ ಮುಡಿಪಾಗಿಡುವುದರ ಮೂಲಕ ಅದೆಷ್ಟೋ ಹೆಣ್ಣು ಮಕ್ಕಳಿಗೆ ಆದರ್ಶ ವ್ಯಕ್ತಿಯಾಗಿದ್ದಾರೆ.
4. ಸತ್ಯೆಂದ್ರ ದುಬೇ
ಇವರು ಐ.ಇ.ಎಸ್(ಇಂಡಿಯನ್ ಇಂಜಿನಿಯರಿಂಗ್ ಸರ್ವಿಸ್) ಆಫೀಸರ್ ಆಗಿದ್ದವರು. ದೇಶ ಕಂಡಂತಹ ನಿಷ್ಠಾವಂತ ಅಧಿಕಾರಿಗಳಲ್ಲಿ ಇವರೂ ಒಬ್ಬರು. ಭಾರತದ ಎನ್.ಎಚ್.ಎ.ಐ(NHAI – ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ) ನಲ್ಲಿ ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದ ಇವರು ಸರ್ಕಾರಕ್ಕೆ ಮೋಸ ಮಾಡಿ ಕಳಪೆ ಮಟ್ಟದ ರಸ್ತೆಗಳನ್ನು ನಿರ್ಮಿಸುತ್ತಿದ್ದ ಅಧಿಕಾರಿಗಳು ಹಾಗು ಅವರ ಹಿಂದೆ ಇರುವ ಪ್ರಭಾವಿ ರಾಜಕಾರಣಿಗಳನ್ನು ಮಟ್ಟ ಹಾಕಿದ್ದರು. ದೇಶದೆಲ್ಲೆಡೆ ನಡೆಯುತ್ತಿದ್ದ ಕಳಪೆ ರಸ್ತೆಯ ಕಾಮಗಾರಿಯ ಹಿಂದಿರುವ ರಾಜಕಾರಣಿಗಳ ಬಗ್ಗೆ ಆಗಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪತ್ರ ಬರೆದಿದ್ದರು. ಇದು ಎಲ್ಲರಿಗು ತಿಳಿದರೆ ಅವರ ಜೀವಕ್ಕೆ ತೊಂದರೆಯಾಗಬಹುದು ಎಂದು ವಾಜಪೇಯಿ ಅವರು ಅವರ ಹೆಸರನ್ನು ಗುಟ್ಟಾಗಿ ಇಟ್ಟು ಆ ಪ್ರಭಾವಿ ರಾಜಕಾರಣಿಗಳ ಮೇಲೆ ಶಿಸ್ತು ಕ್ರಮ ಕೈಗೊಂಡಿದ್ದರು. ಆದರೆ ಸಮಯ ಕಳೆದಂತೆ ಆ ಪತ್ರ ಬರೆದದ್ದು ಇವರೇ ಎಂದು ಗೊತ್ತಾದ ಮೇಲೆ ದುಷ್ಟರ ಗುಂಡಿಗೆ ಬಲಿಯಾಗಿ ಪ್ರಾಣ ಬಿಟ್ಟರು.
5. ಆರ್ಮ್ ಸ್ಟ್ರಾಂಗ್ ಪಮೆ
ಮಣಿಪುರದ ಈ ಐ.ಎ.ಎಸ್ ಆಫೀಸರ್ ಮಾಡಿರುವ ಕೆಲಸಕ್ಕೆ ಇಡಿ ದೇಶವೇ ಚಪ್ಪಾಳೆ ತಟ್ಟಿತ್ತು. ಮಣಿಪುರದ ಒಂದು ಪರ್ವತ ಪ್ರದೇಶದಲ್ಲಿ ಇರುವ ಹಳ್ಳಿಗೆ ರಸ್ತೆ ಇಲ್ಲದೆ ಅಲ್ಲಿನ ಜನರು ಪರದಾಡುತ್ತಿದ್ದರು. ಅದೆಷ್ಟೇ ಬಾರಿ ಸರಕಾರಕ್ಕೆ ರಸ್ತೆ ನಿರ್ಮಿಸಲು ಕೋರಿಕೆ ಕೊಟ್ಟರೂ ಉಪಯೋಗಕ್ಕೆ ಬರಲಿಲ್ಲ. ಇದರಿಂದ ಬೇಸತ್ತ ಜನರು ಹೊಸದಾಗಿ ಐ.ಎ.ಎಸ್ ಆಫೀಸರ್ ಆಗಿ ಆಯ್ಕೆ ಆಗಿದ್ದ ಆರ್ಮ್ ಸ್ಟ್ರಾಂಗ್ ಪಮೆ ಅವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡಾಗ ಖುದ್ದು ಪಮೆ ಅವರೇ ಮುಂದೆ ನಿಂತು ತಾವು ಕೂಡಿಟ್ಟಿದ್ದ ಹಣದ ಜೊತೆಗೆ ಜನರ ಬಳಿ ಹೋಗಿ ಹಣವನ್ನು ಸಂಗ್ರಹಿಸಿ ಕೊನೆಗೆ ರಸ್ತೆ ನಿರ್ಮಿಸಿದರು. ಇದನ್ನು ಕಂಡ ಅಲ್ಲಿನ ಸರ್ಕಾರಕ್ಕೆ ನಾಚಿಕೆಯಾಗಿತ್ತು. ಅಲ್ಲಿನ ಜನರು ಇವರನ್ನು “ಮಿರಾಕಲ್ ಮ್ಯಾನ್” ಎಂದು ಕರೆಯುತ್ತಾರೆ.
6. ಬಿ. ಚಂದ್ರಕಲ
2008 ರ ಐ.ಎ.ಎಸ್ ಬ್ಯಾಚ್ ನಿಂದ ಹೊರಬಂದ ಈ ಸಿಂಹಿಣಿಯು ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಆಗಿದ್ದಾರೆ. ತನ್ನ ನಿಯತ್ತಿನಿಂದ ಹೆಸರಾಗಿರುವ ಇವರು ಅದೆಷ್ಟೋ ಬಾರಿ ಬೇರೆ ಬೇರೆ ಸ್ಥಳಗಳಿಗೆ ಟ್ರಾನ್ಸ್ಫರ್ ಆಗಿದ್ದಾರೆ. ಆಡಳಿತ ಪಕ್ಷದವರೇ ಭ್ರಷ್ಟಾಚಾರದಲ್ಲಿ ಇರುವುದನ್ನು ಕಂಡು ಸುಮ್ಮನಾಗದೆ ಅವರನ್ನು ಜೈಲಿಗೆ ಕಳುಹಿಸಿದ ದೈರ್ಯವಂತೆ ಇವರು.
7. ಶಿವದೀಪ್ ವಾಮನ್ ಲಂಡೆ
ಇವರ ಹೆಸರನ್ನು ಕೇಳಿದರೆ ಸಾಕು ಬಿಹಾರದ ಪಾಟ್ನಾ ನಗರದಲ್ಲಿ ಇರುವ ದುಷ್ಟರು ಕಣ್ಣು ಮುಚ್ಚಿ ನಿದ್ದೆ ಮಾಡಲು ಹೆದರುತ್ತಿದ್ದರು. 2006ರ ಐ.ಪಿ.ಎಸ್ ಬ್ಯಾಚ್ ನಿಂದ ಹೊರಹೊಮ್ಮಿದ ಖಡಕ್ ಸಿಂಹ ಇವರು. ಪಾಟ್ನಾ ಹಾಗು ಅದರ ಸುತ್ತ ಮುತ್ತ ನಡೆಯುತ್ತಿದ್ದ ಅಕ್ರಮ ದಂದೆಗಳನ್ನು ಬಯಲಿಗೆಳೆದು ಆರೋಪಿಗಳಿಗೆ ಶಿಕ್ಷೆ ಕೊಡಿಸುವುದಲ್ಲದೆ ಹೆಣ್ಣು ಮಕ್ಕಳನ್ನು ಕಾಡುತ್ತಿದ್ದ ಕಾಮುಕರ ಕಾಲನ್ನು ಮುರಿದು ಇನ್ನೊಮ್ಮೆ ಜೀವನದಲ್ಲಿ ಓಡಾಡದ ಹಾಗೆ ಮಾಡಿದ್ದರು. ಪ್ರತಿ ದಿನ ಇವರಿಗೆ ಸಾರ್ವಜನಿಕರಿಂದ ನೂರಾರು ದೂರುಗಳು ಬರುತ್ತಿದ್ದವು ಆದರೆ ಯಾವುದನ್ನೂ ಕಡೆಗಣಿಸದೆ ಎಲ್ಲವನ್ನು ಬಗೆಹರಿಸುತ್ತಿದ್ದರು. ಇವರ ಕಾರ್ಯವೈಖರಿ ಹೇಗಿತ್ತು ಎಂದರೆ ಮಾರು ವೇಷದಲ್ಲಿ ಹೋಗಿ ಲಂಚ ಪಡೆಯುವ ಅಧಿಕಾರಿಗಳನ್ನು ಹಿಡಿದು ಕೆಲಸದಿಂದ ತೆಗೆದು ಹಾಕುತ್ತಿದ್ದರು. ಪಾಟ್ನದಿಂದ ಅರೇರಿಯಾ ನಗರಕ್ಕೆ ಇವರನ್ನು ವರ್ಗಾವಣೆ ಮಾಡಿದ್ದಾಗ ಅಲ್ಲಿನ ಜನರು ಸರ್ಕಾರದ ಆದೇಶ ವಿರೋದಿಸಿ ರಸ್ತೆಯಲ್ಲಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ ಮಾಡಿದ್ದರು. ಇವರ ಕಾರ್ಯವೈಖರಿ ಕಂಡು ಸರ್ಕಾರವು ಇವರಿಗೆ ಉನ್ನತ ಅಧಿಕಾರಿಯ ಹುದ್ದೆ ನೀಡಿದ್ದು ಇಂದು ಮುಂಬೈ ನಗರದಲ್ಲಿ ಕಮೀಷನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಗೆ ಬರುತ್ತಿರುವ ಸಂಬಳದ ಶೇಖಡ 70 ರಷ್ಟು ಭಾಗವನ್ನು ಬಡ ಮಕ್ಕಳ ಓದಿಗಾಗಿ ಹಾಗು ಅವರು ಉಳಿದುಕೊಳ್ಳುವ ಹಾಸ್ಟಲ್ ಖರ್ಚಿಗೆಂದು ನೀಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.
8. ಸಗಯಂ
ಈ ಐ.ಎ.ಎಸ್ ಅಧಿಕಾರಿಯು ತಮ್ಮ 27 ವರ್ಷದ ಸೇವೆಯಲ್ಲಿ 25 ಬಾರಿ ವರ್ಗಾವಣೆ ಆಗಿದ್ದಾರೆ. ಇವರನ್ನು ಎಲ್ಲಿ ಟ್ರಾನ್ಸ್ಫರ್ ಮಾಡಿದರೂ ದುಷ್ಟರನ್ನು ಮಟ್ಟ ಹಾಕುವುದನ್ನು ಮಾತ್ರ ನಿಲ್ಲಿಸುತ್ತಿರಲಿಲ್ಲ. ಮದುರೈ ನಗರದ ಕಲೆಕ್ಟರ್ ಆಗಿದ್ದ ಇವರು ಅಲ್ಲಿ ನಡೆಯುತ್ತಿದ್ದ ಅಕ್ರಮ ಗ್ರ್ಯಾನೈಟ್ ದಂದೆಯನ್ನು ಬಯಲಿಗೆಳೆಯುವ ಮೂಲಕ ದೊಡ್ಡ ದೊಡ್ಡ ರಾಜಕಾರಣಿಗಳು ಹಾಗು ಬ್ಯುಸಿನೆಸ್ ಮ್ಯಾನ್ ಗಳನ್ನು ಜೈಲಿಗೆ ಕಳುಹಿಸಿದ್ದಾರೆ. ಇವರನ್ನು ಬೇರೆ ಊರಿಗೆ ವರ್ಗಾವಣೆ ಮಾಡಲು ಯತ್ನಿಸಿದಾಗ ಮದುರೈ ನಗರದಲ್ಲಿ ಸರ್ಕಾರದ ವಿರುದ್ದ ದೊಡ್ಡ ಪ್ರತಿಭಟನೆಯೇ ನಡೆದಿತ್ತು.
9. ಡಿ.ಕೆ.ರವಿ
ಕರ್ನಾಟಕ ಜನರಿಗೆ ಇವರ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆಯೇ ಇಲ್ಲ. ದುಷ್ಟ ರಾಜಕಾರಣಿಗಳ ಕುತಂತ್ರಕ್ಕೆ ಸಿಕ್ಕು ಪ್ರಾಣ ತೆತ್ತ ನಿಷ್ಠಾವಂತ ಐ.ಎ.ಎಸ್ ಅದಿಕಾರಿ ಇವರು. ಟ್ಯಾಕ್ಸ್ ಕಟ್ಟದೆ ಅಕ್ರಮವಾಗಿ ಸರ್ಕಾರದ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದವರ ವಿರುದ್ದ ಹೋರಾಡಿದ ಇವರು ಸರಕಾರಕ್ಕೆ ಸೇರಬೇಕಿದ್ದ 138 ಕೋಟಿ ಟ್ಯಾಕ್ಸ್ ಹಣವನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡಿದ್ದರು. ಕೋಲಾರ ಜಿಲ್ಲೆಯ ಜನರು ಇವರನ್ನು ತಮ್ಮ ಮನೆಯ ಮಗನ ಹಾಗೆ ನೋಡಿಕೊಳ್ಳುತ್ತಿದ್ದರು. ಆದರೆ ದುಷ್ಟ ರಾಜಕಾರಣಿಗಳ ಕುತಂತ್ರಕ್ಕೆ ಸಿಕ್ಕು 2015 ರಲ್ಲಿ ಬೆಂಗಳೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ನಿಗೂಡವಾಗಿ ಸಾವನ್ನಪ್ಪಿದರು.
10. ವಿ.ವಿ.ಲಕ್ಷ್ಮಿನಾರಾಯಣ
ಇವರು ತುಂಬಾ ಸರಳ ಐ.ಪಿ.ಎಸ್ ಅದಿಕಾರಿಯಾಗಿದ್ದವರು. ಇವರ ಸರಳತೆ ಹೇಗಿತ್ತೆಂದರೆ ಕಚೇರಿಗೆ ಹೋಗಲು ಸರಕಾರದ ಕಾರನ್ನು ಬಳಸದೆ ಬಸ್ಸಿನಲ್ಲಿ ಹೋಗುತ್ತಿದ್ದರು. ಇವರ ನಿಷ್ಠೆಯನ್ನು ಕಂಡು ಕಾಲ ಕಳೆದಂತೆ ಇವರಿಗೆ ಸಿ.ಬಿ.ಐ.ಯಲ್ಲಿ ಮುಖ್ಯಸ್ತನ ಪದವಿ ನೀಡಲಾಯಿತು. ದೇಶದ ದೊಡ್ಡ ಹಗರಣಗಳಾದ ಕರ್ನಾಟಕದ ಜನಾರ್ಧನ್ ರೆಡ್ಡಿ ಅವರ “ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮ ದಂದೆ, ಸತ್ಯಂ ಹಗರಣ, ಸೊಹ್ರಾಬುದ್ದೀನ್ ಸುಳ್ಳು ಎನ್ಕೌಂಟರ್ ಹಗರಣ” ಹೀಗೆ ಹಲವಾರು ಹಗರಣಗಳನ್ನು ಇವರು ತನಿಖೆ ಮಾಡಿದ್ದಾರೆ.
Follow Karunadu Today for more Interesting Facts & Stories.
Click here to Join Our Whatsapp Group
