ದೆವ್ವ ಭೂತಗಳೆಂದರೆ ಯಾರಿಗೆ ಭಯವಿಲ್ಲ ನೀವೇ ಹೇಳಿ. ಕಣ್ಣಿಗೆ ಕಾಣುವ ವ್ಯಕ್ತಿಗಳ ಜೊತೆಗೆ ಅದೆಷ್ಟೇ ಕಷ್ಟವಾದರೂ ಹೊಡೆದಾಡಬಹುದು ಆದರೆ ಕಣ್ಣಿಗೆ ಕಾಣದ ಆತ್ಮದ ಜೊತೆಗೆ ಹೊಡೆದಾಡುವುದು ತುಂಬಾ ಕಷ್ಟ. ಇಂದು ನಿಮಗೆ ಪ್ರಪಂಚದಲ್ಲಿ ಇರುವ ಕೆಲವು ಭಯಾನಕ ಸ್ಥಳಗಳ ಕುರಿತು ತಿಳಿಸುತ್ತೇವೆ. ಆ ಸ್ಥಳದಲ್ಲಿ ನಡೆಯಬಾರದ ವಿಚಿತ್ರ ಘಟನೆಗಳು ನಡೆದಿವೆ. ಆ ಸ್ಥಳದ ರಹಸ್ಯ ಬಯಲು ಮಾಡಲು ಹೋಗಿ ಅದೆಷ್ಟೋ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆ ಸ್ಥಳಗಳ ಬಗ್ಗೆ ವಿಗ್ನ್ಯಾನಿಗಳ ಬಳಿಯೂ ಯಾವುದೇ ಉತ್ತರವಿಲ್ಲ. ಆ ವಿಚಿತ್ರ ಸ್ಥಳಗಳಿಗೆ ಹೋಗದಂತೆ ಸರ್ಕಾರವೇ ನಿರ್ಭಂದ ಹೇರಿದ್ದು ಅದರ ಕುರಿತು ತಿಳಿದುಕೊಳ್ಳಲು ಇನ್ನಷ್ಟು ಕುತೂಹಲ ಅದೆಷ್ಟೋ ಜನರಿಗೆ ಇದೆ.
1. ಓವರ್ ಟೌನ್ ಸೇತುವೆ – Overtoun bridge
ಈ ಸೇತುವೆಯು ಸ್ಕಾಟ್ಲೆಂಡ್ ದೇಶದ ಗ್ಲ್ಯಾಸ್ಗೋ ನಗರದಿಂದ ಸ್ವಲ್ಪದೂರದಲ್ಲಿದೆ. 1850 ರಲ್ಲಿ ನಿರ್ಮಿಸಿರುವ ಈ ಸೇತುವೆಯನ್ನು “ಸಾವಿನ ಸೇತುವ” ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಇದುವರೆಗೂ ಈ ಸೇತುವೆಯ ಮೇಲಿಂದ ಬರೋಬ್ಬರಿ 50 ನಾಯಿಗಳು ಜಿಗಿದು ಆತ್ಮಹತ್ಯೆ ಮಾಡಿಕೊಂಡಿವೆ. ನೋಡನೋಡುತ್ತಿದ್ದಂತೆ ಓಡೋಡಿ ಹೋಗಿ ಮೇಲಿಂದ ಜಿಗಿದು ಸತ್ತಿರುವ ದೃಶ್ಯವನ್ನು ಅನೇಕ ಜನರು ನೋಡಿದ್ದಾರೆ. ಇದಕ್ಕೆ ಕಾರಣವನ್ನು ಹುಡುಕಲು ಅದೆಷ್ಟೇ ಪ್ರಯತ್ನ ಪಟ್ಟರೂ ಇದುವರೆಗೂ ಅದಕ್ಕೆ ಉತ್ತರ ಸಿಕ್ಕಿಲ್ಲ. ಅಚ್ಚರಿ ಎಂದರೆ ಈ ಸ್ಥಳದಲ್ಲಿ ಕೇವಲ ನಾಯಿಗಳು ಮಾತ್ರ ಆತ್ಮಹತ್ಯೆಮಾಡಿಕೊಳ್ಳುತ್ತವೆ. ಇದುವರೆಗೂ ಒಬ್ಬ ಮನುಷ್ಯನೂ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿಲ್ಲ.
2. ಜಕಾಬ್ಸ್ ವೆಲ್ – Jacobs well
ಅಮೆರಿಕಾದ ಟೆಕ್ಸಾಸ್ ನಗರ ವಿಮ್ಬರ್ಲಿಯಲ್ಲಿ ಇರುವ ಈ ಸ್ಥಳವು ಇದುವರೆಗೂ ಅನೇಕ ಜನರ ಪ್ರಾಣ ತೆಗದುಕೊಂಡಿದೆ. ಸ್ಕ್ಯೂಬಾ ಡೈವಿಂಗ್ ಮಾಡುವಜನರಿಗೆ ಈ ಸ್ಥಳವು ಅಚ್ಚು ಮೆಚ್ಚಿನ ಸ್ಥಳವಾಗಿದೆ. ಆದರೆ ಇದರ ಒಳ ಹೋದಂತೆ ಪುಟ್ಟ ಪುಟ್ಟ ಗುಹೆಗಳ ತರಹ ಕಾಣುವ ಸ್ಥಳದಿಂದ ಬೆಳಕು ಆಚೆ ಬರುತ್ತದೆ. ಇದು ಹೊರ ಹೋಗಲು ದಾರಿ ಎಂದು ತಿಳಿದು ಅನೇಕ ಜನರು ಅದರ ಒಳ ಹೋಗಲು ಪ್ರಯತ್ನಿಸಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಬದುಕಿ ಉಳಿದು ಬಂದು ಕೆಲವರು ಆ ಸ್ಥಳದಲ್ಲಿ ಏನೋ ವಿಚಿತ್ರವಾದದ್ದು ಇದೆ ಎಂದು ಹೇಳಿದ್ದಾರೆ. ಇದನ್ನು ಪತ್ತೆ ಮಾಡಲು ಹೋಗಿಯೂ ಅನೇಕರು ಸತ್ತಿರುವುದರಿಂದ ಈ ಸ್ಥಳವನ್ನು ನಿಷೇದ ಮಾಡಲಾಗಿದೆ.
3. ಹೋಯಿಯ ಬಸಿಯು ಕಾಡು – Hoia Baciu Forest
ರೋಮಾನಿಯಾ ದೇಶದಲ್ಲಿ ಇರುವ ಈ ಕಾಡನ್ನು “ರೋಮಾನಿಯಾದ ಬರ್ಮುಡಾ ಟ್ರಯಾಂಗಲ್” ಎಂದು ಕರೆಯುತ್ತಾರೆ. ಪ್ರಪಂಚದಲ್ಲಿ ಇರುವ ಅತ್ಯಂತ ನಿಗೂಡ ರಹಸ್ಯಗಳನ್ನು ಹೊಂದಿರುವ ಕಾಡುಗಳ ಪಟ್ಟಿಯಲ್ಲಿ ಇದು ಮೊದಲ ಸ್ಥಾನದಲ್ಲಿದೆ. ಈ ಕಾಡಿನ ಒಳಗಡೆ ಹೋದರೆ ನಮ್ಮ ಮೈ ಮೇಲೆ ಯಾರೊ ಜೋರಾಗಿ ಹೊಡೆದಿರುವ ಕಲೆಯು ಮೂಡುತ್ತದೆ. ಇಷ್ಟೇ ಅಲ್ಲದೆ ಒಮ್ಮೆ ಈ ಕಾಡಿನ ಒಳಗೆ ಹೋದರೆ ಮೊಬೈಲ್ ತನ್ನಷ್ಟಕ್ಕೆ ತಾನೇ ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತದೆ. ಇನ್ನೊಂದು ಅಚ್ಚರಿ ಎಂದರೆ ಈ ಕಾಡಿನ ಒಳಗೆ ಹೋದರೆ ಸಮಯವು ಓಡುವುದು ಸಂಪೂರ್ಣವಾಗಿ ನಿಂತು ಬಿಡುತ್ತದೆ. ಕೆಲವರು ಹೇಳುವ ಪ್ರಕಾರ ಈ ಸ್ಥಳದಲ್ಲಿ ನಾಲ್ಕನೆಯ ಆಯಾಮದ ಜನರು ವಾಸವಿದ್ದಾರೆ ಅದಕ್ಕಾಗಿಯೇಈರೀತಿಆಗುತ್ತಿದೆ ಎಂದು ಹೇಳುತ್ತಾರೆ.
4. ಸೆಡ್ಲೆಕ್ ಚರ್ಚ್ – Sedlec ossuary church
ಈ ವಿಚಿತ್ರವಾದ ಚರ್ಚ್ “ಜೆಕ್(Czech) ಗಣರಾಜ್ಯ”ದಲ್ಲಿದ್ದು ಇದರ ಗೋಡೆಗಳನ್ನು 40 ರಿಂದ 70 ಸಾವಿರ ಜನರ ಬುರುಡೆ ಹಾಗು ಎಲುಬುಗಳಿಂದ ನಿರ್ಮಿಸಲಾಗಿದೆ. ಈ ರೀತಿ ನಿರ್ಮಿಸಲು ಅಲ್ಲಿನ ಜನರು ಒಂದು ಕಾರಣ ನೀಡುತ್ತಾರೆ. 16 ನೆಯ ಶತಮಾನದಲ್ಲಿ ಆ ಚರ್ಚ್ ಇರುವ ಊರಿನಲ್ಲಿ ಸಾವುಗಳು ಹೆಚ್ಚಾಗಿ ಸಂಭವಿಸಿದ್ದರಿಂದ ಹೆಣಗಳನ್ನು ಹೂಳಲು ಸ್ಮಶಾನದಲ್ಲಿ ಜಾಗವಿರಲಿಲ್ಲವಂತೆ. ಆಗ ಮೂವರು ಪೂಜಾರಿಗಳು ಅಲ್ಲಿನ ರಾಜನಿಗೆ ಕೆಲ ಹೆಣಗಳನ್ನು ಸ್ಮಶಾನದಿಂದ ಹೊರ ತೆಗೆದು ಅವುಗಳ ಮೂಳೆ ಹಾಗು ಎಲುಬುಗಳಿಂದ ಒಂದು ಚರ್ಚ್ ಅನ್ನು ನಿರ್ಮಾಣ ಮಾಡಿ ಇದರಿಂದ ಜಾಗವೂ ಉಳಿದಂತೆ ಆಗುತ್ತದೆ ಹಾಗು ಯಾವುದೇ ದೆವ್ವಗಳ ಕಾಟ ಇರದ ಹಾಗೆ ಚರ್ಚ್ ಒಳಗೆ ಇರುವ ಯೇಸು ಕ್ರಿಸ್ತನು ಊರನ್ನು ಕಾಪಾಡುತ್ತಾನೆ ಎಂದು ಹೇಳಿದ್ದರಂತೆ. ಆದ ಕಾರಣ ಈ ರೀತಿಯಾಗಿ ನಿರ್ಮಿಸಲಾಗಿದೆ. ಈ ಭಯಾನಕ ಸ್ಥಳ ನೋಡಲು ಪ್ರಪಂಚದ ಮೂಲೆ ಮೂಲೆಯಿಂದ ಲಕ್ಷಾಂತರ ಜನರು ಬರುತ್ತಾರೆ.
5. ಆತ್ಮಹತ್ಯೆಯ ಕಾಡು – The Suicide Forest
ಈ ಕಾಡಿನ ಹೆಸರು Aokigahara. ಜಪಾನ್ ದೇಶದ ಪ್ರಸಿದ್ದ ಪರ್ವತವಾದ ಮೌಂಟ್ ಫುಜಿ ಪರ್ವತದ ಉತ್ತರ ಭಾಗದಲ್ಲಿ 35 ಚದರಕಿಲೋಮೀಟರ್ ಜಾಗದಲ್ಲಿ ವಿಸ್ತಾರವಾಗಿರುವ ಈ ಕಾಡನ್ನು ಆತ್ಮಹತ್ಯೆಯ ಕಾಡು ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಈ ಸ್ಥಳದಲ್ಲಿ ಇದುವರೆಗೂ ಒಳ ಹೋದ ಅದೆಷ್ಟೋ ಜನರು ಸತ್ತಿದ್ದಾರೆ. 2003ರಲ್ಲಿ ಬರೋಬ್ಬರಿ 103 ಹೆಣಗಳು ಈ ಕಾಡಿನ ಒಳಗೆ ಸಿಕ್ಕಿವೆ. ಈ ಕಾಡಿನ ಒಳ ಒಮ್ಮೆ ಹೋದರೆ ದಿಕ್ಸೂಚಿಯು ಕೆಲಸ ಮಾಡುವುದಿಲ್ಲ, ಮೊಬೈಲ್ ಸಿಗ್ನಲ್ ಬರುವುದಿಲ್ಲ. ವಿಜ್ಞ್ಯಾನಿಗಳು ಹೇಳುವ ಪ್ರಕಾರ ಈ ಕಾಡಿನ ಒಳಗೆ ಮ್ಯಾಗ್ನೆಟಿಕ್ ಶಕ್ತಿ ಹೆಚ್ಚಿದ್ದು ಅದಕ್ಕಾಗಿ ಯಾವುದೇ ದಿಕ್ಸೂಚಿ ಅಥವಾ ಮೊಬೈಲ್ ಸಿಗ್ನಲ್ ಕೆಲಸ ಮಾಡುವುದಿಲ್ಲ. ಆದರೆ ಜಪಾನ್ ದೇಶದ ಜನರು ಈ ಕಾಡಿನ ಒಳ ಇರುವ ಮರಗಳಲ್ಲಿ ದೆವ್ವಗಳು ಸೇರಿಕೊಂಡಿದ್ದು ಅದಕ್ಕಾಗಿಯೇ ಈ ರೀತಿ ಆಗುತ್ತದೆ ಎಂದು ನಂಬಿದ್ದಾರೆ. ಇದರಲ್ಲಿ ಯಾವುದು ಸತ್ಯವೋ ಅಥವಾ ನಿಜವೋ ಗೊತ್ತಿಲ್ಲ ಆದರೆ ಒಮ್ಮೆ ಒಳ ಹೋಗಿ ದಾರಿ ತಪ್ಪಿದರೆ ಮರಳಿ ಹೊರ ಬರುವುದು ಅಸಾದ್ಯವಾಗಿದೆ.
ಇವುಗಳಷ್ಟೇ ಅಲ್ಲದೆ ಇನ್ನೂ ಅನೇಕ ನಿಗೂಡ ರಹಸ್ಯಗಳನ್ನು ಹೊಂದಿರುವ ಸ್ಥಳಗಳು ಈ ಪ್ರಪಂಚದಲ್ಲಿ ಇದ್ದು ಆ ರಹಸ್ಯಗಳನ್ನು ಭೇದಿಸಲು ವಿಜ್ಞ್ಯಾನಿಗಳು ಹರಸಾಹಸ ಪಡುತ್ತಿದ್ದಾರೆ. ವಿಜ್ಞ್ಯಾನ ಎಷ್ಟೇ ಮುಂದುವರೆದರೂ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಸುಲಭವಾಗಿಲ್ಲ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ.
Follow Karunadu Today for more Interesting Facts & Stories.
Click here to Join Our Whatsapp Group
