ಪುರಾತತ್ವ ಇಲಾಖೆಯೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಜಗತ್ತಿನಲ್ಲಿರುವ ಅನೇಕ ಪುರಾತನ ಅದ್ಬುತಗಳನ್ನು ಪತ್ತೆ ಮಾಡಿ ಅವುಗಳು ಎಷ್ಟು ವರ್ಷಗಳಷ್ಟು ಹಳೆಯದು ಎನ್ನುವುದನ್ನು ಪತ್ತೆ ಮಾಡುವ ಈ ಇಲಾಖೆಯಲ್ಲಿ ಸೇರಿಕೊಳ್ಳುವುದು ಅದೆಷ್ಟೋ ಜನರ ಕನಸಾಗಿದೆ. Carbon-Dating ವಿಧಾನದ ಮೂಲಕ ಯಾವುದೇ ಕಟ್ಟಡವಿರಲಿ,ಜೀವಿಗಳೆ ಇರಲಿ ಅಥವ ವಸ್ತುಗಳೆ ಇರಲಿ ಅವುಗಳ ಆಯಸ್ಸನ್ನು ಸುಲಭವಾಗಿ ಪತ್ತೆ ಮಾಡಬಲ್ಲರು ಪುರಾತತ್ವ ಇಲಾಖೆಯವರು. ಪ್ರತಿ ದೇಶದಲ್ಲೂ ಪುರಾತತ್ವ ಇಲಾಖೆಯು ಇದ್ದು ಒಂದೊಂದು ದೇಶದ ಪುರಾತತ್ವಜ್ಞರು ಪ್ರತಿ ವರ್ಷ ಹೊಸದಾದ ಆವಿಷ್ಕಾರಗಳನ್ನು ಮಾಡುತ್ತಿರುತ್ತಾರೆ. ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಆವಿಷ್ಕಾರ ಮಾಡುವ ಇವರುಗಳು ಇತ್ತೀಚೆಗೆ ಕೆಲ ಆವಿಷ್ಕಾರಗಳನ್ನು ಮಾಡಿದ್ದು ಅವುಗಳ ಕುರಿತು ಇಂದು ತಿಳಿದುಕೊಳ್ಳೋಣ.
1. ಪ್ರಾಚೀನ ಶಸ್ತ್ರಾಸ್ತ್ರಗಳು(Ancient Weapons)
ಇನ್ನು ನಮ್ಮ ದೇಶದಲ್ಲಿ ಇತ್ತೀಚೆಗೆ ಪುರಾತತ್ವ ಇಲಾಖೆಗೆ ಸಿಕ್ಕ ಅತ್ಯದ್ಬುತವಾದ ಆವಿಷ್ಕಾರದ ಕುರಿತು ತಿಳಿಸುತ್ತೇನೆ ಕೇಳಿ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ತಮ್ಮಿನಾಳ ಹಾಗು ಕಾತರಕಿ ಗ್ರಾಮದ ಹತ್ತಿರವಿರುವ ರಂಗನಾಥ ಗುಡ್ಡದ ಪ್ರದೇಶದಲ್ಲಿ ಸುಮಾರು 2 ಲಕ್ಷ ವರ್ಷ ಹಿಂದಿನ ಶಿಲಾಯುಗದ ಆಯುಧಗಳನ್ನು ಭಾರತೀಯ ಪುರಾತತ್ವ ಇಲಾಖೆಯ ತಂಡ ಪತ್ತೆ ಮಾಡಿದೆ. ಬೆಟ್ಟದ ಮೇಲ್ಭಾದಲ್ಲಿ ಸುಮಾರು ಅರ್ಧ ಕಿಲೋಮೀಟರ್ ನಷ್ಟು ವಿಸ್ತಾರ ಪ್ರದೇಶದಲ್ಲಿ ಶಿಲಾಯುಗದ ಆಯುಧಗಳು ಹರಡಿದ್ದು ಇವುಗಳಲ್ಲಿ ವಿವಿಧ ಮಾದರಿಯ ಕೈಗೊಡಲಿಗಳು, ಕೆತ್ತನೆಯ ಉಪಕರಣಗಳು ಹಾಗು ಕಲ್ಲಿನ ಆಯುಧಗಳು ಸಿಕ್ಕಿವೆ. ಸುಮಾರು 2 ಲಕ್ಷ ವರ್ಷಗಳ ಹಿಂದೆ ಹೇಗೆ ನಮ್ಮ ಪೂರ್ವಜರು ಪ್ರಾಣಿಗಳನ್ನು ಭೇಟೆಯಾಡಲು, ಆತ್ಮರಕ್ಷಣೆಗೆ ಹಾಗು ಹೋರಾಟಕ್ಕೆ ವಿವಿಧ ಆಯುಧಗಳನ್ನು ಬಳಸುತ್ತಿದ್ದರು ಎಂದು ಇದರಿಂದ ತಿಳಿದುಬರುತ್ತದೆ. ಇನ್ನು ನಮ್ಮ ಪುರಾತತ್ವ ಇಲಾಖೆಯ ತಂಡ ಹೇಳುವ ಪ್ರಕಾರ ಈ ಗುಡ್ಡದಲ್ಲಿ ಇಷ್ಟೊಂದು ಆಯುಧಗಳು ಪತ್ತೆಯಾಗಿರುವುದನ್ನು ನೋಡಿದರೆ ಇದು ಆದಿ ಮಾನವರ ಆಯುದ ತಯಾರಿಸುವ ನೆಲೆಯಾಗಿತ್ತು ಎಂದು ಹೇಳಬಹುದಂತೆ.
2. ವೋಮ್ಬಾಟ್ (WOMBAT)
WOMBAT ಎನ್ನುವ ಜೀವಿಯು ಆಸ್ಟ್ರೇಲಿಯಾದ ಕಾಡುಗಳಲ್ಲಿ ಸಿಗುವ ಅತ್ಯಂತ ಮುಗ್ದ ಪ್ರಾಣಿಗಳು. ಸಸ್ಯಾಹಾರಿ ಜೀವಿಗಳಾದ WOMBAT ಗಳು ಯಾರಿಗೂ ಹಾನಿ ಮಾಡದೆ ತಮ್ಮ ಪಾಡಿಗೆ ವಾಸಿಸುತ್ತವೆ. ಆದರೆ ಇತ್ತೀಚೆಗೆ ಆಸ್ಟ್ರೇಲಿಯಾದ queensland ನಲ್ಲಿ ಸಿಕ್ಕಿರುವ WOMBAT ಪಳೆಯುಳಿಕೆಯನ್ನು ಕಂಡು ಅಲ್ಲಿನ ಪುರಾತತ್ವ ಇಲಾಖೆಯವರಿಗೆ ಸಾಕಷ್ಟು ಆಶ್ಚರ್ಯವಾಗಿದೆ. ಏಕೆಂದರೆ ಈಗಿನ WOMBAT ಪ್ರಾಣಿಗಳ ಗಾತ್ರಕ್ಕಿಂತ ಸಾಕಷ್ಟು ಪಟ್ಟು ದೊಡ್ಡದಿರುವ ಪಳೆಯುಳಿಕೆ ಅದಾಗಿದೆ. ಬರೋಬ್ಬರಿ 1 ಲಕ್ಷ ವರ್ಷಗಳಿಗಿಂತ ಹಿಂದೆ ವಾಸಿಸುತ್ತಿದ್ದ ಈ ಜೀವಿಗಳು ಈಗ ಖಡ್ಗಮೃಗ ಪ್ರಾಣಿಗಳಷ್ಟು ದೊಡ್ಡದಿದ್ದವು ಎಂದು ಪುರಾತತ್ವ ಇಲಾಖೆಯು ಪತ್ತೆ ಮಾಡಿದೆ.
3. ಜರ್ಮನಿ ಸಮಾದಿ (Germany Tomb)
ಇನ್ನು ಈಗ ಜರ್ಮನಿ ದೇಶದಲ್ಲಿ ಪುರಾತತ್ವ ಇಲಾಖೆಗೆ ಸಿಕ್ಕ ಅತ್ಯದ್ಬುತವಾದ ಆವಿಷ್ಕಾರದ ಕುರಿತು ತಿಳಿದುಕೊಳ್ಳೋಣ. ಒಬ್ಬ ವ್ಯಕ್ತಿಯು ತಾನು ಖರೀದಿಸಿದ ಜಾಗದಲ್ಲಿ chicken farm ಅನ್ನು ನಿರ್ಮಾಣ ಮಾಡಲು ನಿರ್ಧರಿಸಿದ. chicken farm ನಿರ್ಮಾಣ ಮಾಡುವ ವೇಳೆ ತೆಗೆದ ಬುನಾದಿಯ ಕೆಳಗೆ ಸಿಕ್ಕ 6 ಅಸ್ಥಿಪಂಜರಗಳನ್ನು ಕಂಡು ಭಯ ಪಟ್ಟ ವ್ಯಕ್ತಿಯು ಪೊಲೀಸರಿಗೆ ಇದರ ಕುರಿತು ತಿಳಿಸಿದ. ಪೊಲೀಸರು ಈ ಅಸ್ಥಿಪಂಜರದ ಜೊತೆಗೆ ಕೆಲ ಮೃತ ಪ್ರಾಣಿಗಳ ಆಸ್ತಿಪಂಜರ ಹಾಗು ಬಂಗಾರ ಇರುವುದನ್ನು ಕಂಡು ಇದು ಪ್ರಾಚೀನ ಕಾಲದ ಅಸ್ಥಿಪಂಜರವೆಂದು ಅರಿತು ಪುರಾತತ್ವ ಇಲಾಖೆಗೆ ತಿಳಿಸಿದರು. ಇವುಗಳ ಸಂಪೂರ್ಣ ಅಧ್ಯಯನ ನಡೆಸಿದ ಪುರಾತತ್ವ ಇಲಾಖೆಯು ಈ ಅಸ್ಥಿಪಂಜರಗಳು ಮಹಿಳೆಯದಾಗಿದ್ದು ಸುಮಾರು 2000 ವರ್ಷಗಳಷ್ಟು ಹಿಂದಿನದ್ದಾಗಿದೆ ಎಂದು ಪತ್ತೆ ಮಾಡಿದರು. ಇನ್ನು ಈ ಅಸ್ಥಿಪಂಜರಗಳ ಜೊತೆಗೆ ಆಗಿನ ಕಾಲದಲ್ಲಿ ಪೂಜಿಸಲಾಗುತ್ತಿದ್ದ ಜರ್ಮನ್ ದೇವರುಗಳ ವಿಗ್ರಹ ಕೂಡ ಸಿಕ್ಕಿದೆ. ಇದರಿಂದ ಈ ಮಹಿಳೆಯರ ದೇಹವನ್ನು ದೇವರಿಗೆ ಬಳಿ ನೀಡಲಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ಅಸ್ಥಿಪಂಜರಗಳು ಸಿಕ್ಕ ಸುತ್ತ ಮುತ್ತಲಿನ ಸ್ಥಳದಲ್ಲಿ ಇದೇ ರೀತಿಯ ಅನೇಕ ಅಸ್ಥಿಪಂಜರಗಳು ಸಿಕ್ಕಿದ್ದು ಕಳೆದ 40 ವರ್ಷದಲ್ಲಿ ಜರ್ಮನ್ ಪುರಾತತ್ವ ಇಲಾಖೆಗೆ ಸಿಕ್ಕ ಅತ್ಯಂತ ದೊಡ್ಡ ಆವಿಷ್ಕಾರ ಇದಾಗಿದೆ.
4. ತಿಮಿಂಗಲದ ಅಸ್ಥಿಪಂಜರ
ಥೈಲ್ಯಾಂಡ್ ದೇಶದ ಬ್ಯಾಂಕಾಕ್ ನಗರದ ಪಶ್ಚಿಮ ದಿಕ್ಕಿನಲ್ಲಿರುವ ದ್ವೀಪವೊಂದರ ಬಳಿ ನವೆಂಬರ್ 2020ರಂದು ಒಬ್ಬ ವ್ಯಕ್ತಿಗೆ ದೈತ್ಯವಾದ ಪಳೆಯುಯಿಕೆ ಸಿಕ್ಕಿತು. ಇದರ ಕುರಿತು ಸಂಶೋದನೆ ನಡೆಸಿದ ಥೈಲ್ಯಾಂಡ್ ದೇಶದ ಪುರಾತತ್ವ ಇಲಾಖೆಯು ಇದು 5000 ವರ್ಷಗಳ ಹಿಂದೆ ವಾಸಿಸುತ್ತಿದ್ದ ತಿಮಿಂಗಲವೊಂದರ ಪಳೆಯುಳಿಕೆಯಾಗಿದೆ ಎಂದು ಪತ್ತೆ ಮಾಡಿದ್ದಾರೆ. ಬರೋಬ್ಬರಿ 12 ಮೀಟರ್ ಉದ್ದವಿರುವ ಈ ತಿಮಿಂಗಲದ ಪಳೆಯುಳಿಕೆಯ ತಲೆಯ ಬಾಗದ ಬುರುಡೆಯೆ 3 ಮೀಟರ್ ಉದ್ದವಿದೆ.
5. ಗುಹೆಯ ಚಿತ್ರಗಳು(Cave Paintings)
ಭೂಮಿಯ ಮೇಲೆ ಕೆಲವು ಗುಹೆಗಳಿದ್ದು ಅವುಗಳ ಒಳಗೆ ಅನೇಕ ಕಲಾಕೃತಿಗಳನ್ನು ನಾವು ನೋಡಬಹುದಾಗಿದೆ. ಈ ಕಲಾಕೃತಿಗಳನ್ನು ಆದಿ ಮಾನವರು ಮಾಡಿದ್ದು ಒಂದೊಂದು ಕಲಾಕೃತಿಯು ಒಂದೊಂದು ಅರ್ಥವನ್ನು ಹೇಳುತ್ತದೆ. ಇದೇ ರೀತಿಯ ಅನೇಕ ಗುಹೆಗಳು ಪ್ರಪಚದೆಲ್ಲೆಡೆ ಇವೆ, ಆದರೆ 2017 ರಲ್ಲಿ ಕೊಲಂಬಿಯಾದ bogota ನಗರದಿಂದ 400 ಕಿಲೋಮೀಟರ್ ದೂರದಲ್ಲಿರುವ “Serrania de la Lindosa” ಪರ್ವತ ಪ್ರದೇಶಗಳ ಮಧ್ಯೆ ಇರುವ ದಟ್ಟ ಅರಣ್ಯವೊಂದರ ಒಳಗೆ ಇರುವಂತಹ ಗುಹೆಯಲ್ಲಿ ಸಿಕ್ಕ ಕಲಾಕೃತಿಗಳನ್ನು british-colombian ಪುರಾತತ್ವ ಇಲಾಖೆಯ ತಂಡವು ಪತ್ತೆ ಮಾಡಿತು. ಬರೋಬ್ಬರಿ 12 ಕಿಲೋಮೀಟರ್ ವರೆಗು ಗುಹೆಯ ಒಳಗಿರುವ ಕಲ್ಲುಗಳ ಮೇಲೆ ಕಲಾಕೃತಿಗಳನ್ನು ಕೆತ್ತಲಾಗಿದೆ. ಇದರ ಕುರಿತು ಅಧ್ಯಯನ ನಡೆಸಿದ ವಿಜ್ಞಾನಿಗಳು ಈ ಕಲಾಕೃತಿಗಳನ್ನು 12,500 ವರ್ಷಗಳ ಹಿಂದೆ ಕೆತ್ತಲಾಗಿದೆ ಎಂದು ತಿಳಿದುಬಂದಿದ್ದು ಆಗ ಭೂಮಿಯ ಮೇಲೆ ಇದ್ದಂತಹ ಅನೇಕ ವಿವಿಧ ಬಗೆಯ ಜೀವಿಗಳನ್ನು ಈ ಗುಹೆಯ ಗೋಡೆಯ ಮೇಲೆ ಚಿತ್ರಿಸಲಾಗಿದೆ.
6. ಎಲಿಸ್ ನಗರ (ELIS City)
ನಮಗೆಲ್ಲ ತಿಳಿದ ಹಾಗೆ ಗ್ರೀಸ್ ದೇಶವು ರೋಮನ್ನರು ಆಳಿದಂತಹ ಒಂದು ಅದ್ಬುತ ದೇಶ. ಹುಡುಕುತ್ತಾ ಹೋದಂತೆಲ್ಲ ರೋಮನ್ನರ ಕಾಲದಲ್ಲಿ ಬಳಸುತ್ತಿದ್ದ ಅನೇಕ ಆಯುಧಗಳು, ವಾಸಿಸುತ್ತಿದ್ದ ಕಟ್ಟಡಗಳು ಹಾಗು ನಗರ ಪ್ರದೇಶಗಳು ಸಿಗುತ್ತವೆ. ಇಂತಹ ಸ್ಥಳಗಳಲ್ಲಿ ELIS ನಗರ ಕೂಡ ಒಂದು. ಈ ಸ್ಥಳವು ಪ್ರಾಚೀನ ರೋಮನ್ನರ ಕಾಲದಲ್ಲಿ ಒಂದು ಜಿಲ್ಲೆಯಾಗಿತ್ತು. ಇಲ್ಲಿ ಅನೇಕ ಕಟ್ಟಡಗಳು ಹಾಗು ಅಸ್ಥಿಪಂಜರಗಳನ್ನು ಪುರಾತತ್ವ ಇಲಾಖೆಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
7. ಲಯುಬ ಆನೆಮರಿ (LYUBA)
2007 ರ ಮೇ ತಿಂಗಳಿನಲ್ಲಿ ರಷ್ಯಾದ “Yuri Khudi” ಎನ್ನುವ ಭೇಟೆಗಾರನೊಬ್ಬನು Yamal Pennisula ಪ್ರಾಂತ್ಯದಲ್ಲಿ ಜಿಂಕೆಯನ್ನು ಭೇಟೆಯಾಡಲು ಹೋದಾಗ ಈ ಪುಟ್ಟ ಆನೆಮರಿಯನ್ನು ಕಂಡನು. ಅದನ್ನು ನೋಡಿದ ಮೇಲೆ ಇದು ಪುರಾತನ ಕಾಲದ mammoth ಎಂದು ಅರಿತ yuri ತನ್ನ ಸ್ನೇಹಿತನ ಜೊತೆಗೂಡಿ ಹತ್ತಿರದ ಮ್ಯೂಸಿಯಮ್ ಗೆ ಇದರ ಕುರಿತು ತಿಳಿಸಿದ. ಹೆಲಿಕಾಪ್ಟರ್ ಸಹಾಯದಿಂದ ಈ baby mammoth ಇದ್ದ ಸ್ಥಳಕ್ಕೆ ತೆರಳಿದ ಮ್ಯೂಸಿಯಂ ಅಧಿಕಾರಿಗಳು ಪೊಲೀಸರ ಸಹಾಯದಿಂದ ಕೆಸರಿನಲ್ಲಿ ಮುಚ್ಚಿಹೋಗಿದ್ದ ಈ baby mammoth ಅನ್ನು ಹೊರತೆಗೆದರು. ಇನ್ನು ಈ ಜೀವಿಯನ್ನು ಹುಡುಕಿಕೊಟ್ಟಿದ್ದಕ್ಕೆ yuri ಅವರಿಗೆ ಏನು ಸಹಾಯ ಬೇಕು ಎಂದು ಕೇಳಿದಾಗ ತನ್ನ ಹೆಂಡತಿಯ ಹೆಸರಾದ LYUBA ಅನ್ನು ಈ ಪುಟ್ಟ ಮರಿಗೆ ಇಡಬೇಕು ಎಂದು ಕೇಳಿಕೊಂಡನು. ಆದ್ದರಿಂದಲೆ ಈ baby mammoth ಗೆ LYUBA ಎಂದು ಹೆಸರು ಬಂದಿರುವುದು. ಇನ್ನು carbon-dating ವಿಧಾನದ ಮೂಲಕ ಇದರ ಆಯಸ್ಸನ್ನು ಪತ್ತೆ ಮಾಡಿದಾಗ ಈ ಜೀವಿಯು ಬರೋಬ್ಬರಿ 41 ಸಾವಿರ ವರ್ಷಗಳಷ್ಟು ಹಳೆಯದ್ದು ಎಂದು ತಿಳಿದುಬಂದಿದ್ದು ಹುಟ್ಟಿ ಕೇವಲ 35 ದಿನಗಳ ಒಳಗೆ ಇದರ ಮರಣವಾಗಿದೆ. ಇದುವರೆಗು ರಷ್ಯಾದಲ್ಲಿ ಸಿಕ್ಕ ಪ್ರಾಚೀನ discoveries ಗಳಲ್ಲಿ ಇದು ಅತ್ಯಂತ ಹಳೆಯದಾಗಿದ್ದು ಇದರ ಕುರಿತು national geographic ಚಾನೆಲ್ ನವರು ಒಂದು ವಿಶೇಷ documentry ಕೂಡ ರಚಿಸಿದ್ದಾರೆ.
8. ಹಸಿರು ಮಂಜುಗಡ್ಡೆ – Green Iceberg
ನಮಗೆಲ್ಲ ತಿಳಿದ ಹಾಗೆ ಅಂಟಾರ್ಟಿಕಾದಲ್ಲಿ ಇರುವಂತಹ ದೈತ್ಯ ಮಂಜುಗಡ್ಡೆಗಳು ಬಿಳಿ ಅಥವ ನೀಲಿ ಬಣ್ಣದಲ್ಲಿ ಇರುತ್ತವೆ. ಆದರೆ 2016 ರಲ್ಲಿ ಅಂಟಾರ್ಟಿಕಾದಲ್ಲಿ ಇರುವ ಮಂಜುಗಡ್ಡೆಗಳ ಕುರಿತು ಅಧ್ಯಯನ ನಡೆಸಲು ಹೋಗಿದ್ದ ಅಮೇರಿಕದ ಪುರಾತತ್ವ ಇಲಾಖೆಯ ತಂಡವೊಂದು ಹಸಿರು ಬಣ್ಣದ ದೈತ್ಯ ಮಂಜುಗಡ್ಡೆಯೊಂದನ್ನು ನೋಡಿ ಆಶ್ಚರ್ಯ ಪಟ್ಟಿದ್ದರು. ಈ ಮಂಜುಗಡ್ಡೆಯು ಈ ರೀತಿ ಹಸಿರು ಬಣ್ಣದಲ್ಲಿ ಇರಲು ಕಾರಣವೇನು ಎಂದು ಪತ್ತೆ ಮಾಡಲು ಶುರು ಮಾಡಿದ ವಿಜ್ಞಾನಿಗಳು ಇದರ sample ಅನ್ನು ಸಂಗ್ರಹಿಸಿ ಸತತ 4 ವರ್ಷಗಳ ಕಾಲ ಅಧ್ಯಯನ ಮಾಡಿದರು. ಮೊದ ಮೊದಲು ಇದಕ್ಕೆ ಕಾರಣ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ಎಂದು ತಿಳಿಯಲಾಗಿತ್ತು. ಆದರೆ ನಂತರ ಮಂಜುಗಡ್ಡೆಗಳ ಕೆಳಗಿರುವ ಅನೇಕ ಪ್ರಾಚೀನ ಜೀವಿಗಳ ದೇಹದ ಒಳಗಿರುವ microscopic protein ಈ ಮಂಜುಗಡ್ಡೆಯ ಒಳಗೆ ಸೇರಿಕೊಂಡಿದ್ದು ಅದರಿಂದಲೇ ಈ ಮಂಜುಗಡ್ಡೆಯು ಹಸಿರು ಬಣ್ಣದಲ್ಲಿದೆ ಎಂದು ಕಂಡುಹಿಡಿಯಲಾಯಿತು. ಆದರೆ ಇಷ್ಟಕ್ಕೂ ಸುಮ್ಮನಾಗದ ವಿಜ್ಞಾನಿಗಳು ಇದರ ಕುರಿತು ಹೆಚ್ಚು ಸಂಶೋದನೆ ಮಾಡುತ್ತ ಹೋದಾಗ ತಿಳಿದುಬಂದ ಸಂಗತಿ ಏನೆಂದರೆ ಅಂಟಾರ್ಟಿಕಾದಲ್ಲಿರುವ iron oxide ನಿಂದಾಗಿಯೇ ಈ ಮಂಜುಗಡ್ಡೆಯು ಹಸಿರು ಬಣ್ಣದಲ್ಲಿದೆ ಎನ್ನುವುದು.
Follow Karunadu Today for more Interesting Facts & Stories.
Click here to Join Our Whatsapp Group
