ಮನುಷ್ಯನು ಬದುಕಲು ಬೇಕಾಗಿರುವ ಅತ್ಯಮೂಲ್ಯ ಅಂಶಗಳಲ್ಲಿ ಹಣ ಕೂಡ ಒಂದು. ಇಂದು ಈ ಜಗತ್ತು ನಡೆಯುತ್ತಿರುವುದೇ ಹಣದ ಮೇಲೆ. ಹಣವಿಲ್ಲದಿದ್ದರೆ ನಾಯಿಯು ಕೂಡ ನಿಮ್ಮನ್ನು ಮೂಸುವುದಿಲ್ಲ ಎನ್ನುವ ಮಾತು ಕೂಡ ಇದೆ. ಆದರೆ ಹಣ ಮಾಡಲು ಸಾಕಷ್ಟು ದಾರಿಗಳಿವೆ. ನಮ್ಮಲ್ಲಿರುವ ವಿದ್ಯೆಯನ್ನು ಬಳಸಿಕೊಂಡು ಹಣ ಮಾಡುವ ಜನರು ಒಂದೆಡೆ ಇದ್ದರೆ ಜನರ ಸಂಪತ್ತನ್ನು ಆಕ್ರಮವಾಗಿ ಕೊಳ್ಳೆ ಹೊಡೆಯುವ ವ್ಯಕ್ತಿಗಳು ಒಂದೆಡೆ ಇರುತ್ತಾರೆ. ನಮಗೆಲ್ಲ ಗೊತ್ತಿರುವ ಹಾಗೆ ಅನೇಕ ಶ್ರೀಮಂತ ವ್ಯಕ್ತಿಗಳು ಈ ಪ್ರಪಂಚದಲ್ಲಿ ಇರುವರು. ತಮ್ಮ ಬುದ್ದಿಶಕ್ತಿ ಹಾಗು ವ್ಯವಹಾರ ಜ್ಞಾನದಿಂದ ಕೋಟಿಗಟ್ಟಲೆ ಹಣ ಸಂಪಾದಿಸಿರುವ ಅವರುಗಳು ಇಂದು ಪ್ರಪಂಚದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಸೇರಿದ್ದಾರೆ. ತಮ್ಮ ಶ್ರಮದಿಂದ ಅನೇಕ ವರ್ಷಗಳ ಕಾಲ ಕಷ್ಟ ಪಟ್ಟು ಅತ್ಯಂತ ಶ್ರೀಮಂತ ವ್ಯಕ್ತಿ ಎನ್ನುವ ಹೆಗ್ಗಳಿಗೆ ಪಾತ್ರರಾಗಿರುವ ಉದಾಹರಣೆಯನ್ನು ನಾವೆಲ್ಲರು ನೋಡಿದ್ದೇವೆ. ಆದರೆ ಇಂದು ನಾನು ನಿಮಗೆ ಹೇಳ ಹೊರಟಿರುವುದು ಅಡ್ಡ ದಾರಿಯ ಮೂಲಕ ಹಣ ಸಂಪಾದಿಸಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಹಣಗಳಿಸಿರುವ ಖದೀಮರ ಬಗ್ಗೆ. ಡ್ರಗ್ಸ್ ಸಾಗಾಣೆ, ಸ್ಮಗ್ಲಿಂಗ್ ವ್ಯವಹಾರ, ರಿಯಲ್ ಎಸ್ಟೇಟ್ ವ್ಯವಹಾರ, ಅಕ್ರಮ ಶಸ್ತ್ರಾಸ್ತ್ರ ಸಾಗಾಣೆ ಹೀಗೆ ಅನೇಕ ಕಳ್ಳ ವ್ಯವಹಾರಗಳ ಮೂಲಕ ಬಿಲಿಯನ್ ಗಟ್ಟಲೆ ಹಣ ಸಂಪಾದಿಸಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಹಣ ಹೊಂದಿರುವ ಕ್ರಿಮಿನಲ್ಸ್ ಎನ್ನುವ ಹೆಗ್ಗಳಿಕೆಗೆ ಇವರುಗಳು ಪಾತ್ರರಾಗಿದ್ದಾರೆ. ಬನ್ನಿ ಇಂದು ನಿಮಗೆ ಈ ರೀತಿ ಆಕ್ರಮವಾಗಿ ಹಣಗಳಿಸಿ ಶ್ರೀಮಂತರಾದ ಕ್ರಿಮಿನಲ್ಸ್ ಗಳ ಸಂಪೂರ್ಣ ಮಾಹಿತಿ ನೀಡುತ್ತೇವೆ ಮುಂದೆ ಓದಿ.
1) ಅಲ್ ಕಪೋನ್ – AL CAPONE
ಈತನ ಪೂರ್ಣ ಹೆಸರು “ಆಲ್ಫೋಂಸೆ ಗೇಬ್ರೀಯಲ್ ಕಪೋನೆ”. ಈತನನ್ನು ಎಲ್ಲರೂ “ಸ್ಕಾರ್ಫೇಸ್” ಎಂದು ಕರೆಯುತ್ತಿದ್ದರು. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ 1899ರಲ್ಲಿ ಜನಿಸಿದ ಈತನು ಮೊದಲಿಗೆ “ಫೈವ್ ಪಾಯಿಂಟ್ಸ್” ಎನ್ನುವ ಕ್ರಿಮಿನಲ್ಸ್ ಗ್ಯಾಂಗ್ ನಲ್ಲಿ ಇದ್ದವನು. ತನ್ನ 20ನೆಯ ವಯಸ್ಸಿನಲ್ಲಿ ಮೊದ ಮೊದಲು ಸಣ್ಣ ಪುಟ್ಟ ಕ್ರೈಮ್ ಮಾಡುತ್ತಿದ್ದ ಈತನು ಕಾಲ ಕಳೆದಂತೆ “ಜಾನಿ ಟೋರಿಓ” ಎನ್ನುವ ಪ್ರಸಿದ್ದ ಗ್ಯಾಂಗ್ ಸ್ಟರ್ ನ ಬಾಡಿಗಾರ್ಡ್ ಆಗಿ ಕೆಲಸ ಮಾಡಲು ಶುರು ಮಾಡಿದನು. “ಜಾನಿ ಟೋರಿಓ” ಆಕ್ರಮವಾಗಿ ಆಲ್ಕೋಹಾಲ್ ಸಾಗಾಣೆ ಮಾಡುವ ದಂಧೆ ನಡೆಸುತ್ತಿದ್ದ. ಆದರೆ ಅದೊಂದು ದಿನ ತನ್ನ ವೈರಿ ಗುಂಪಿನ ಜೊತೆಗೆ ನಡೆದ ಕಾಳಗದಲ್ಲಿ ಆತನಿಗೆ ತೀವ್ರ ಗಾಯಗಳಾದವು. ಆಗ ತನ್ನ ಸಂಪೂರ್ಣ ವ್ಯವಹಾರವನ್ನು ನಂಬಿಕಸ್ತನಾಗಿದ್ದ “ಅಲ್ ಕಪೋನ್” ಗೆ ನೀಡಿದನು. ಚಿಕಾಗೋ ನಗರದ ಭ್ರಷ್ಟ ರಾಜಕಾರಣಿಯಾಗಿದ್ದ “ವಿಲಿಯಮ್ ಥಾಮ್ಸನ್” ಮತ್ತು ಕೆಲ ಪೊಲೀಸ್ ಅಧಿಕಾರಿಗಳ ಸಹಾಯ ಪಡೆದು ಆಕ್ರಮ ಆಲ್ಕೋಹಾಲ್ ಸಾಗಾಣೆ ಮಾಡುವ ದಂಧೆಯನ್ನು ಮತ್ತಷ್ಟು ಬಲಪಡಿಸುತ್ತ ಹೋದ “ಅಲ್ ಕಪೋನ್” ವರ್ಷಕ್ಕೆ ಬರೋಬ್ಬರಿ 100 ಮಿಲಿಯನ್ ಅಮೆರಿಕನ್ ಡಾಲರ್ ಹಣ ಗಳಿಸಲು ಶುರು ಮಾಡಿದನು. ಅಂದರೆ ಇಂದಿನ ಲೆಕ್ಕಾಚಾರದ ಪ್ರಕಾರ ಅದು 1 ಬಿಲಿಯನ್ ಡಾಲರ್ ಗಿಂತ ಹೆಚ್ಚು. ಇದರೊಂದಿಗೆ 1950 ಕ್ಕಿಂತ ಮೊದಲು ಇದ್ದ ಅತ್ಯಂತ ಶ್ರೀಮಂತ ಕ್ರಿಮಿನಲ್ ಗಳ ಪಟ್ಟಿಯಲ್ಲಿ ಈತನು ಕೂಡ ಒಬ್ಬನಾಗಿದ್ದ. ಆದರೆ ಕೊನೆಗೆ 1947 ರಲ್ಲಿ ಹೃದಯಾಘಾತದಿಂದ ಈತನು ಅಸುನೀಗಿದನು.
2) ಸೂಸುಮು ಇಶಿ – Susumu Ishii
1924 ರಲ್ಲಿ ಜನಿಸಿದ ಈ ಜಪಾನ್ ದೇಶದ ಡಾನ್ ಎರಡನೆಯ ಪ್ರಪಂಚ ಯುದ್ದದಲ್ಲಿ ಜಪಾನ್ ದೇಶದ ಪರವಾಗಿ ವಾಯು ದಳದ ಆತ್ಮಾಹುತಿ ದಾಳಿಯ ತಂಡದಲ್ಲಿ ಇದ್ದನು. ಎರಡನೆಯ ಪ್ರಪಂಚ ಯುದ್ದದ ನಂತರ ಕೆಲಸವಿಲ್ಲದೆ ಅಲಿಯುತ್ತಿದ್ದ ಈತನು “ಇನಾಗ್ವ ಕೈ” ಎನ್ನುವ ಗ್ಯಾಂಗ್ ಸೇರಿಕೊಂಡನು. ರಿಯಲ್ ಎಸ್ಟೇಟ್ ದಂದೆಯಲ್ಲಿ ಹಣ ಗಳಿಸಲು ಶುರು ಮಾಡಿದ ಈತನು ಜಪಾನ್ ಅಷ್ಟೇ ಅಲ್ಲದೆ ಅಮೆರಿಕ, ಚೀನಾ ಮತ್ತು ಕೊರಿಯಾದಂತಹ ದೇಶಗಳಲ್ಲಿ ಕೂಡ ತನ್ನ ಅಕ್ರಮ ದಂದೆಯನ್ನು ವಿಸ್ತರಿಸಿದ್ದನು. ಇದರೊಂದಿಗೆ ವರ್ಷಕ್ಕೆ 4 ಬಿಲಿಯನ್ ಡಾಲರ್ ಹಣವನ್ನು ಗಳಿಸುತ್ತಿದ್ದ. ಕೇವಲ ರಿಯಲ್ ಎಸ್ಟೇಟ್ ದಂದೆಯಲ್ಲದೆ ಅನೇಕ ದಂದೆಗಳಲ್ಲೂ ಸಕ್ರಿಯನಾಗಿದ್ದ ಈತನು ಅದು ಯಾವುದೇ ಹೊಸ ದಂದೆಗೆ ಕೈ ಹಾಕಿದರು ಕೂಡ ಮಿಲಿಯನ್ ಗಟ್ಟಲೆ ಹಣಗಳಿಸುತ್ತಿದ್ದ. ಇದರೊಂದಿಗೆ ಪ್ರಪಂಚದಲ್ಲಿ ಅತ್ಯಂತ ಶ್ರೀಮಂತ ಕ್ರಿಮಿನಲ್ ಎನ್ನುವ ಹೆಗ್ಗಳಿಕೆಗೆ ಈತನು ಪಾತ್ರನಾಗಿದ್ದ. 1991 ರಲ್ಲಿ ಅಸುನೀಗಿದ ಮೇಲೆ ಈತನ ಅಂತ್ಯಕ್ರಿಯೆಗೆ ಬರೋಬ್ಬರಿ 6000 ಜನರು ಸೇರಿದ್ದರು.
3) ಕರ್ಲೋಸ್ ಏನ್ರೀಕ್- carlos enrique lehder rivas
ಕಾರು ಕಳ್ಳತನ ಮಾಡಿ ಮಾರಾಟ ಮಾಡಿ ಹಲವಾರು ಬಾರಿ ಜೈಲಿಗೆ ಹೋಗಿ ಬಂದಿದ್ದ ಈತನು ದಿನಗಳು ಕಳೆದಂತೆ “ಡ್ರಗ್ಸ್” ಸಾಗಿಸುವ ದಂದೆಗೆ ಇಳಿದು ತನ್ನದೇ ಆದ ಸೇನೆ ಕಟ್ಟಿಕೊಂಡು ದಕ್ಷಿಣ ಅಮೆರಿಕ ಮತ್ತು ಕೊಲಂಬಿಯಾ ದೇಶಗಳಲ್ಲಿ ಡ್ರಗ್ಸ್ ವಹಿವಾಟು ನಡೆಸುತ್ತ ವರ್ಷಕ್ಕೆ 2.7 ಬಿಲಿಯನ್ ಡಾಲರ್ ಹಣಗಳಿಸುತ್ತಿದ್ದನು.ತನ್ನದೇ ಆದ ಸ್ವಂತ “ಪ್ರೈವೇಟ್ ಜೆಟ್” ವಿಮಾನ ಹೊಂದಿದ್ದ ಈತನು 4.5 ಮಿಲಿಯನ್ ಡಾಲರ್ ಹಣ ಖರ್ಚು ಮಾಡಿ ಡ್ರಗ್ಸ್ ವಹಿವಾಟು ನಡೆಸಲೆಂದೆ ಒಂದು ದ್ವೀಪವನ್ನು ಕೊಂಡುಕೊಂಡಿದ್ದನು. ಆ ದ್ವೀಪದಲ್ಲಿ ನೂರಕ್ಕೂ ಹೆಚ್ಚು ಡ್ರಗ್ಸ್ ತಯಾರಿಸುವ ಮನೆಗಳು ಹಾಗು ಅದನ್ನು ಕಾಯಲು ಒಂದು ಸೇನೆ ಹಾಗು ಪರಿಣಿತಿ ಹೊಂದಿದ ನಾಯಿಗಳ ಹಿಂಡನ್ನೆ ಸಾಕಿದ್ದನು. ಆದರೆ ಕೊನೆಗೆ ಅಮೆರಿಕದ “ಎಫ್.ಬಿ.ಐ” ಕೈಗೆ ಸಿಕ್ಕು 135 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಈತನು ಕಂಬಿ ಎಣಿಸುತ್ತಿದ್ದಾನೆ.
4) ವಿಕ್ಟರ್ ಬೌಟ್ – Viktor Bout
ರಷ್ಯಾ ದೇಶದ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈತನು ಕಾಲ ಕಳೆದಂತೆ ತಪ್ಪು ದಾರಿಗೆ ಇಳಿದಿದ್ದನು. ಆಫ್ರಿಕಾದಲ್ಲಿ ಇರುವ ಉಗ್ರ ಸಂಘಟನೆಗಳಿಗೆ ಆಕ್ರಮವಾಗಿ ಶಶ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಈತನು ಪ್ರಪಂಚದ ಅನೇಕ ಉಗ್ರ ಸಂಘಟನೆಗಳ ಜೊತೆಗೆ ನಂಟು ಹೊಂದಿದ್ದ. ವರ್ಷಕ್ಕೆ ಬರೋಬ್ಬರಿ 6 ಬಿಲಿಯನ್ ಡಾಲರ್ ಹಣಗಳಿಸುತ್ತಿದ್ದ ಈತನು ಅಮೆರಿಕಾಕ್ಕೆ ಬೇಕಾಗಿದ್ದ ಕ್ರಿಮಿನಲ್ಸ್ ಗಳ ಪಟ್ಟಿಯಲ್ಲಿ ಇದ್ದನು. 2008 ರಲ್ಲಿ ಥೈಲ್ಯಾಂಡ್ ದೇಶದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಈತನು ಇಂದು ಕಂಬಿ ಎಣಿಸುತ್ತಿದ್ದಾನೆ. ಆದರೆ ನಾನು ಒಂದಲ್ಲ ಒಂದು ದಿನ ಅಮೆರಿಕ ಆದ್ಯಕ್ಷ ಡೊನಾಲ್ಡ್ ಟ್ರಂಪ್ ನನ್ನು ಕೊಂದೇ ಕೊಲ್ಲುವೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾನೆ.
5) ದಾವೂದ್ ಇಬ್ರಾಹಿಂ – Dawood Ibrahim
ಈತನ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಭಾರತ ದೇಶಕ್ಕೆ ಸದಾ ತಲೆನೋವಾಗಿ ಕಾಡುತ್ತಿರುವ ಈತನನ್ನು ಪಾಕಿಸ್ತಾನವು ರಕ್ಷಣೆ ನೀಡುತ್ತಿರುವ ವಿಚಾರ ನಮಗೆಲ್ಲ ತಿಳಿದೇ ಇದೆ. 1991ರಲ್ಲಿ ನಡೆದ ಮುಂಬೈ ಸರಣಿ ಸ್ಪೋಟದ ಮಾಸ್ಟರ್ ಮೈಂಡ್ ಆಗಿರುವ ಈತನು 257 ಜನರ ಪ್ರಾಣ ತೆಗೆದುಕೊಂಡಿದ್ದಾನೆ. ಡ್ರಗ್ಸ್ ಸಾಗಾಣೆ, ಅಕ್ರಮ ಶಶ್ತ್ರಾಸ್ತ್ರ ಸಾಗಾಣೆ, ರಿಯಲ್ ಎಸ್ಟೇಟ್ ದಂಧೆ ಹೀಗೆ ಅನೇಕ ದಂದೆಗಳಲ್ಲಿ ಭಾಗಿಯಾಗಿರುವ ಈತನು ವರ್ಷಕ್ಕೆ ಬರೋಬ್ಬರಿ 6.7 ಬಿಲಿಯನ್ ಡಾಲರ್ ಹಣಗಳಿಸುತ್ತಿದ್ದಾನೆ. ಕರಾಚಿಯಲ್ಲಿ ಪಾಕಿಸ್ತಾನ ಸೇನೆಯಿಂದ ರಕ್ಷಣೆಗೆ ಒಳಗಾಗಿರುವ ಈತನನ್ನು “ಅಂತರಾಷ್ಟ್ರೀಯ ಭಯೋತ್ಪಾದಕ” ಎಂದು ಅಮೇರಿಕ ಘೋಷಿಸಿದ್ದು ಈತನನ್ನು ಹುಡುಕಿ ಕೊಟ್ಟವರಿಗೆ ಅಮೆರಿಕವು 25 ಮಿಲಿಯನ್ ಡಾಲರ್ ಬಹುಮಾನ ನೀಡುತ್ತದೆ.
6) ಪಬೊಲ ಎಸ್ಕೋಬಾರ್ – Pabola Escobar
ಕೊಲಂಬಿಯಾ ದೇಶದ ಈ ಕ್ರಿಮಿನಲ್ ಅನ್ನು ಡ್ರಗ್ಸ್ ಮತ್ತು ಕೋಕೇನ್ ಅಕ್ರಮ ಸಾಗಾಣೆಯಲ್ಲಿ ಮೀರಿಸುವವರು ಮತ್ತೊಬ್ಬರಿರಲ್ಲ. ಈತನನ್ನು “ಕಿಂಗ್ ಆಫ್ ಕೋಕೇನ್” ಎಂದು ಕರೆಯುತ್ತಿದ್ದರು. ಕೇವಲ ಡ್ರಗ್ಸ್ ಮತ್ತು ಕೋಕೇನ್ ಅಕ್ರಮ ಸಾಗಾಣೆಯಲ್ಲಿ ಮಾತ್ರವಲ್ಲದೆ ಕೊಲೆ, ಕಿಡ್ನಾಪ್ ಗಳಂತಹ ಕೆಲಸಗಳನ್ನು ಮಾಡಿಸುತ್ತಿದ್ದ ಈತನ ಬಳಿ ಬರೋಬ್ಬರಿ 25 ಬಿಲಿಯನ್ ಡಾಲರ್ ಮೊತ್ತದ ಆಸ್ತಿ ಇತ್ತು. ಇದರೊಂದಿಗೆ 1980ರ ವೇಳೆಯಲ್ಲಿ ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಈತನು ಏಳನೆಯ ಸ್ಥಾನದಲ್ಲಿ ಇದ್ದನು. ಕೆಲವು ಸಮೀಕ್ಷೆಯ ಪ್ರಕಾರ ಈತನು ದಿನಕ್ಕೆ 15 ಟನ್ ಕೋಕೇನ್ ಅನ್ನು ಆಕ್ರಮವಾಗಿ ಸಾಗಾಣೆ ಮಾಡುತ್ತಿದ್ದನಂತೆ. ಕೊನೆಗೆ ಈತನನ್ನು ಕೊಲಂಬಿಯಾ ದೇಶದ ವಿಶೇಷ ಸೇನಾ ಪಡೆಯು ಗುಂಡಿಕ್ಕಿ ಕೊಂದಿತು. ಈತನು ಸಾಯುವ ವೇಳೆಗೆ ಈತನ ಬಳಿ 30 ಬಿಲಿಯನ್ ಡಾಲರ್ ಮೊತ್ತದ ಆಸ್ತಿ ಇತ್ತು.
Follow Karunadu Today for more Interesting Facts & Stories.
Click here to Join Our Whatsapp Group
