ಕೌಶಿಕನು ತಪಸ್ಸು ಮಾಡುತ್ತಿದ್ದ ಕಾಲದಲ್ಲಿ ಅಯೋಧ್ಯೆಯಲ್ಲಿ ಇಕ್ಷ್ವಾಕು ವಂಶದ ತ್ರಿಶಂಕು ಎಂಬ ರಾಜನಿದ್ದನು. ಅವನು ಪರಾಕ್ರಮಯೂ, ಸತ್ಯವಂತನು, ರೂಪವಂತನು ಆಗಿದ್ದನು. ಅವನು ಧರ್ಮದಿಂದ ರಾಜ್ಯವಾಳುತ್ತಿದ್ದನು. ಆದರೆ ಅವನಿಗೆ ತನ್ನ ಸುಂದರವಾದ ಶರೀರದ ಬಗ್ಗೆ ಬಹಳ ಅಭಿಮಾನವಿತ್ತು. ಹೇಗಾದರೂ ಮಾಡಿ ತಾನು ತನ್ನ ಮನುಷ್ಯ ಶರೀರದೊಂದಿಗೆ ಸ್ವರ್ಗಕ್ಕೆ ಹೋಗಬೇಕೆಂದು ಅವನು ಅಪೇಕ್ಷೆ ಪಟ್ಟ. ಕುಲ ಗುರುಗಳಾದ ವಶಿಷ್ಠರ ಬಳಿಗೆ ಹೋಗಿ ಅವನು ತನ್ನ ಆಸೆಯನ್ನು ತೋಡಿಕೊಂಡ. ಗುರುಗಳೇ ಯಾವುದಾದರೂ ಒಂದು ಯಜ್ಞ ಮಾಡಿ ನನ್ನನ್ನು ಈ ದೇಹದೊಂದಿಗೆ ಸ್ವರ್ಗಕ್ಕೆ ಕಳುಹಿಸಿಕೊಡಿ ಎಂದು ಪ್ರಾರ್ಥಿಸಿದ. ವಶಿಷ್ಠರು ತ್ರಿಶಂಕು ನಿನಗೆ ನಿನ್ನ ಶರೀರದ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿನ ಅಭಿಮಾನ ಹುಟ್ಟಿದೆ ಈ ರೀತಿಯ ಮಮಕಾರ ಒಳ್ಳೆಯದಲ್ಲ. ವರ್ಗ ಪದವಿಯನ್ನು ಬಯಸುವವರು ಯಾವುದೇ ರೀತಿಯಾದ ಆಸೆ ಅಹಂಕಾರ ಮಮಕಾರಗಳನ್ನು ಹೊಂದಿರಬಾರದು. ಅದರಿಂದ ನೀನು ಮನುಷ್ಯ ದೇಹದಿಂದ ಸ್ವರ್ಗಕ್ಕೆ ಹೋಗುವುದು ಸಾಧ್ಯವಿಲ್ಲ ಎಂದರು

ಆದರೆ ತ್ರಿಶಾಂಕುವಿಗೆ ಇದರಿಂದ ಸಮಾಧಾನವಾಗಲಿಲ್ಲ ಅವನು ವಶಿಷ್ಠರ ಮಕ್ಕಳ ಬಳಿಗೆ ಬಂದ. ಅವರು ಮಹಾ ತಪಸ್ವಿಗಳು ತ್ರಿಶಂಕು ರಾಜ ವಶಿಷ್ಠ ಪುತ್ರರ ಬಳಿ ತನ್ನ ಆಸೆಯನ್ನು ತಿಳಿಸಿದ. ನಿಮ್ಮ ತಂದೆಯವರಾದ ವಸಿಷ್ಠರು ನನ್ನ ಅಪೇಕ್ಷೆಯನ್ನು ನಿರಾಕರಿಸಿಬಿಟ್ಟರು. ನೀವಾದರೂ ನನ್ನನ್ನು ನಿರಾಸೆಗೊಳಿಸಬೇಡಿ” ಎಂದು ಪ್ರಾರ್ಥಿಸಿದ. ತ್ರಿಶಂಕುವಿನ ಮಾತು ಕೇಳಿ ವಶಿಷ್ಠ ಪುತ್ರರಿಗೆ ಅಸಾಧ್ಯ ಕೋಪ ಬಂತು. ನಮ್ಮ ತಂದೆಯವರು ಸಾಧ್ಯವಿಲ್ಲ ಎಂದು ಹೇಳಿದ ಕೆಲಸವನ್ನು ನಾವು ಮಾಡಬೇಕೆಂದು ಕೋರುತ್ತಿರುವೆಯ? ಇದರಿಂದಾಗಿ ನೀನು ನಿನ್ನ ಗುರುಗಳಾದ ವಶಿಷ್ಟರಿಗೆ ಅಪಮಾನ ಮಾಡಿರುವೆ. ನೀನು ಭ್ರಷ್ಟನಾಗಿ ಹೋಗು ಎಂದು ಶಾಪ ಕೊಟ್ಟುಬಿಟ್ಟರು. ಕೂಡಲೇ ಸುಂದರ ರೂಪಿನ ತ್ರಿಶಂಕು ಕುರೂಪಿಯಾಗಿ ಹೋದ. ಬಂಗಾರದ ಬಣ್ಣದಿಂದ ಕಂಗೊಳಿಸುತ್ತಿದ್ದ ಅವನ ಶರೀರ ಇದ್ದಲಿನಂತೆ ಕಪ್ಪಾಯಿತು. ರೇಷ್ಮೆಯಂತೆ ನಯವಾಗಿದ್ದವನ ತಲೆಕೂದಲು ಬಲು ಒರಟೊರಟಾಗಿ ಜಟೆ ಕಟ್ಟಿಕೊಂಡಿತು. ಅವನ ಶರೀರವನ್ನು ಅಲಂಕರಿಸಿದ ಚಿನ್ನದ ಆಭರಣಗಳು ಕಬ್ಬಿಣದ್ದಾಗಿಬಿಟ್ಟವು. ಅವನು ಹುಟ್ಟಿದ ಬಟ್ಟೆ ಛಿದ್ರ ಛಿದ್ರವಾಗಿ ಹರಿದುಹೋಯಿತು. ತ್ರಿಶಂಕುವಿನ ಈ ರೂಪವನ್ನು ಕಂಡು ಅವನ ಹತ್ತಿರವಿದ್ದವರು ಹೆದರಿ ಓಡಿಹೋದರು. ಅವನ ಮಕ್ಕಳು ಮಂತ್ರಿಗಳು ಪ್ರಜೆಗಳು ತ್ರಿಶಂಕುವನ್ನು ಬಿಟ್ಟು ಹೊರಟು ಹೋದರು. ಸುಂದರ ರೂಪದಿಂದ ಸ್ವರ್ಗಕ್ಕೆ ಹೋಗುವ ಆಸೆ ಹೊಂದಿದ್ದ ಆ ರಾಜ ತನಗೆ ಈಗ ಇದ್ದ ರೂಪವನ್ನು ಕಳೆದುಕೊಂಡು ಬಿಟ್ಟ.

ಹೀಗೆ ಬಂಧುಗಳಿಂದ ತೊರೆಯಲ್ಪಟ್ಟ ತ್ರಿಶಂಕು ಕಾಡುಮೇಡುಗಳಲ್ಲಿ ಅಲೆದಾಡಿಕೊಂಡಿದ್ದ. ಒಂದು ದಿನ ಅವನು ಕೌಶಿಕನ ಆಶ್ರಮಕ್ಕೆ ಬಂದ. ಕೌಶಿಕನ ಬಳಿ ತನ್ನ ಅಳಲನ್ನು ತೋಡಿಕೊಂಡ. ಋಷಿಗಳೇ ನೀವೇ ನನ್ನನ್ನು ಕಾಪಾಡಬೇಕು ಎಂದು ಬೇಡಿಕೊಂಡ.

ತ್ರಿಶಂಕುವಿನ ಕಥೆಯನ್ನು ಕೇಳಿದ ಕೌಶಿಕನಿಗೆ ಅವನ ಬಗ್ಗೆ ಮಾರುಕವುಂಟಾಯಿತು ಅವನಿಗೆ ಸಹಾಯ ಮಾಡಬೇಕು
ಎನಿಸಿತ್ತು. ತ್ರಿಶಂಕುವನ್ನು ಕುರಿತು ಮಹಾರಾಜ ನೀನು ಹೆದರಬೇಡ ನನಗೆ ತಿಳಿದಂತೆ ನೀನು ಧರ್ಮಸ್ಥಳ ಸತ್ಯವಂತ ಅದರಿಂದ ನೀನು ಸ್ವರ್ಗಕ್ಕೆ ಹೋಗಲು ಅರ್ಹನಾಗಿದ್ದೀಯ. ನಿನ್ನ ಗುರು ಪುತ್ರರ ಶಾಪದ ಬಗ್ಗೆ ಚಿಂತಿಸಬೇಡ ನಿನಗೆ ಒದಗಿರುವ ಭ್ರಷ್ಟತನವನ್ನು ನಾನು ಹೋಗಲಾಡಿಸುತ್ತೇನೆ ಮನುಷ್ಯ ರೂಪದಲ್ಲೇ ನೀನು ಸ್ವರ್ಗಕ್ಕೆ ಹೋಗುವಂತೆ ಮಾಡುತ್ತೇನೆ ಎಂದನು ಮನಸ್ಸಿಗೆ ಬಹಳ ಸಮಾಧಾನ ಆಯ್ತು.

ನಂತರ ಕೌಶಿಕನು ಆ ಅರಣ್ಯದಲ್ಲಿದ್ದ ಇತರ ಋಷಿಗಳಿಗೆ ಹೇಳಿ ಕಳುಹಿಸಿದನು. ಅವನ ಕರೆಗೆ ಓಗೊಟ್ಟು ಅನೇಕ ಋಷಿಮುನಿಗಳು ಬಂದರು ಕೌಶಿಕನು ಅವರಿಗೆ ತ್ರಿಶಂಕುವಿನ ಕಥೆಯನ್ನು ಹೇಳಿದನು. ತ್ರಿಶಂಕುವಿಗೆ ಬಹಳ ಅನ್ಯಾಯವಾಗಿದೆ ನಾವೆಲ್ಲ ತ್ರಿಶಂಕುವನ್ನು ಅವನ ಶರೀರ ಸಹಿತವಾಗಿಯೇ ಸ್ವರ್ಗಕ್ಕೆ ಕಳುಹಿಸೋಣ. ಎಂದನು.
ಇತರ ಋಷಿಗಳಿಗೆ ಕೌಶಕನನ್ನು ಕಂಡರೆ ಒಂದು ರೀತಿಯ ಭಯ ಅವನು ಮಹಾ ತಪಸ್ವಿ ಹಠವಾದಿ ಎಂಬುದನ್ನು ಎಲ್ಲರೂ ಕಂಡುಕೊಂಡಿದ್ದರು. ಅದರಿಂದ ಅವನ ಮಾತಿಗೆ ಎದುರಾಡದೆ ಒಪ್ಪಿಕೊಂಡರು.

ಒಂದು ದೊಡ್ಡ ಯಾಗ ಆರಂಭವಾಯಿತು. ಆ ಯಾಗದಲ್ಲಿ ಕೌಶಿಕ ಋಷಿಯೇ ಮಂತ್ರಗಳಲ್ಲಿ ನಿಷ್ಠತರಾದ ಶಾಸ್ತ್ರೋಕ್ತವಾದ ರೀತಿಯಲ್ಲಿ ಯಜ್ಞಕಾರ್ಯಗಳನ್ನು ನೆರವೇರಿಸಿದರು. ಜಾಗದ ಕೊನೆಯ ಗಟ್ಟ ಬಂದಿತು. ಆಗ ಕೌಶಿಕ ಮುನಿಯು ಯಾಗದ ಹವಿಭಾರ್ಗವನ್ನು ಸ್ವೀಕರಿಸಲು ಸಮಸ್ತ ದೇವತೆಗಳನ್ನು ಆಹ್ವಾನಿಸಿದನು. ಆದರೆ ಯಾವ ದೇವತೆಯು ಕೌಶಿಕನ ಆಹ್ವಾನಕ್ಕೆ ಬರಲಿಲ್ಲ. ಆದರೂ ಚಿಂತೆಯಿಲ್ಲ. ಇಗೋ ಇದುವರೆಗಿನ ನನ್ನ ತಪಸ್ಸಿನ ಫಲವನ್ನು ನಿನಗೆ ಎರೆಯುತ್ತಿದ್ದೇನೆ. ಇದರ ಪ್ರಭಾವದಿಂದ ನೀನು ಶರೀರಸಹಿತನಾಗಿ ಸ್ವರ್ಗಕ್ಕೆ ಹೋಗು ಎಂದನು.

ಆ ಕೂಡಲೇ ಒಂದು ಅದ್ಭುತ ನಡೆಯಿತು ಅಲ್ಲಿದ್ದ ಮುನಿಗಳು ನೋಡ ನೋಡುತ್ತಿದ್ದಂತೆಯೇ ತ್ರಿಶಂಕು ಭೂಲೋಕದಿಂದ ಸ್ವರ್ಗ ಲೋಕ ಕಡೆಗೆ ಏರಿಕೊಂಡು ಹೋದ. ಸ್ವರ್ಗದ ಬಾಗಿಲು ತಲುಪಿದರು. ಆದರೆ ದೇವಲೋಕದ ರಾಜ ಇಂದ್ರ ತ್ರಿಶಾಂಕುವನ್ನು ಒಳಗಡೆ ಬಿಡಲಿಲ್ಲ. ನೀನು ಗುರು ಪುತ್ರರ ಶಾಪಕ್ಕೆ ಗುರಿಯಾಗಿರುವ ಭ್ರಷ್ಟ. ನಿನಗೆ ಸ್ವರ್ಗದಲ್ಲಿ ಪ್ರವೇಶವಿಲ್ಲ. ಎಂದು ಹೇಳುತ್ತಾ ತ್ರಿಶಂಕುವನ್ನು ಕೆಳಕ್ಕೆ ದಬ್ಬಿ ಬಿಟ್ಟ. ತ್ರಿಶಂಕು ತಲೆ ಕೆಳಗಾಗಿ ಭೂಮಿಯ ಕಡೆ ಬೀಳತೊಡಗಿದ. ಮಹರ್ಷಿಗಳೇ ನನ್ನನ್ನು ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡ.

ಇತ್ತ ಭೂಲೋಕದಲ್ಲಿದ್ದ ಕೌಶಿಕನಿಗೆ ತ್ರಿಶಂಕುವಿನ ಕೂಗು ಕೇಳಿಸಿತು. ಅವನಿಗೆ ಇಂದ್ರನ ಮೇಲೆ ಅಸಾಧ್ಯ ಕೋಪ ಬಂತು. ಸಿಡಿಲಿನ ಧ್ವನಿಯಲ್ಲಿ ತ್ರಿಶಂಕು ನಿಲ್ಲು ಎಂದು ಕೂಗಿದ. ಆ ಕೂಡಲೇ ಮತ್ತೊಂದು ಅದ್ಭುತ ನಡೆಯಿತು ಕೆಳಗೆ ಬೀಳುತ್ತಿದ್ದ ತ್ರಿಶಂಕು ಭೂಮಿಗೂ ಸ್ವರ್ಗಕ್ಕೂ ನಡುವೆ ಹಾಗೆ ತಲೆಕೆಳಗಾಗಿ ನಿಂತ. ಮಹರ್ಷಿಗಳಿಂದ ಸುತ್ತುವರೆದಿದ್ದ ಕೌಶಿಕ ಇಂದ್ರನ ಮೇಲಿನ ಕೋಪದಿಂದ ನಡುಗುತ್ತಾ ಇಂದ್ರ ಇಗೋ ನನ್ನ ಶಕ್ತಿಯನ್ನು ನೋಡು ನಾನೀಗ ಹೊಸ ಸ್ವರ್ಗವನ್ನೇ ಸೃಷ್ಟಿಸುತ್ತೇನೆ. ಬೇರೊಬ್ಬ ಇಂದ್ರನನ್ನೇ ಹುಟ್ಟಿಸುತ್ತೇನೆ ಎಂದು ಘೋಷಿಸಿದ. ಅಂತರಿಕ್ಷದ ದಕ್ಷಿಣ ದಿಕ್ಕಿನಲ್ಲಿ ಇನ್ನೊಂದು ಸ್ವರ್ಗ ಲೋಕವನ್ನೇ ಸೃಷ್ಟಿಸಿದ. ಅದರಲ್ಲಿ ಹೊಸ ಹೊಸ ದೇವತೆಗಳನ್ನು ಸೃಷ್ಟಿಸಲಾರಂಭಿಸಿದನು.

ಆಗ ದೇವತೆಗಳಿಗೆ ಬಹಳ ಹೆದರಿಕೆಯಾಯಿತು. ಅವರೆಲ್ಲ ಇಂದ್ರನ ಜೊತೆಗೂಡಿ ಕೌಶಿಕನ ಬಳಿಗೆ ಬಂದರು. ಕೌಶಿಕ ನಿನ್ನ ಕೋಪವನ್ನು ಬಿಡು ನಿನ್ನ ಸೃಷ್ಟಿ ಅತ್ಯದ್ಭುತವಾಗಿದೆ. ತ್ರಿಶಂಕು ಈಗ ಇರುವ ಕಡೆಗೆ ಇರಲಿ. ಅವನಿಗೆ ಸ್ವರ್ಗ ಲೋಕದ ಎಲ್ಲಾ ಸುಖ ಸಂತೋಷಗಳು ಅಲ್ಲಿಗೆ ಸಿಗುವಂತೆ ಮಾಡುತ್ತೇವೆ. ನೀನು ಈಗ ಸೃಷ್ಟಿಸಿರುವ ನಕ್ಷತ್ರಗಳು ದೇವತೆಗಳು ಹಾಗೆಯೇ ಇರಲಿ. ಆದರೆ ಹೊಸ ಇಂದ್ರನನ್ನು ಮಾತ್ರ ಸೃಷ್ಟಿಸಬೇಡ ಎಂದು ಪ್ರಾರ್ಥಿಸಿದರು. ಕೌಶಿಕನು ಶಾಂತನಾದ ಹೇಗೋ ತ್ರಿಶಂಕುವಿಗೆ ಸ್ವರ್ಗ ಸಿಕ್ಕಿದಂತಾಗಿತ್ತು. ಅದರಿಂದ ದೇವತೆಗಳ ಪ್ರಾರ್ಥನೆಯಂತೆ ಕೌಶಿಕ ತಾನು ಕೈಗೊಂಡಿದ್ದ ಸೃಷ್ಟಿ ಕಾರ್ಯವನ್ನು ನಿಲ್ಲಿಸಿದ.

Follow Karunadu Today for more Stories like this

Click here to Join Our Whatsapp Group