ಟೈಟಾನಿಕ್, ಈ ಹೆಸರನ್ನು ಕೇಳಿದರೆ ಸಾಕು ನಮಗೆ ನೆನಪು ಆಗುವುದು ಹಾಲಿವುಡ್ ಸಿನಿಮಾ. ಮನ ಮುಟ್ಟುವಂತಹ ಸಂಗೀತದಿಂದ ತುಂಬಿರುವ ಈ ಸಿನೆಮಾವು ಜಗತ್ತಿನ ಪ್ರಸಿದ್ದ ಸಿನೆಮಾಗಳಲ್ಲಿ ಒಂದಾಗಿದೆ. ಬಾಕ್ಸ್ ಆಫಿಸ್ ಕೊಳ್ಳೆ ಹೊಡೆದ ಈ ಸಿನೆಮಾ ಎಲ್ಲರ ಮನ ಗೆದ್ದಿತ್ತು. ಇದು ನಿಜವಾಗಿ ನಡೆದ ಘಟನೆಯ ಆದಾರದ ಮೇಲೆ ತೆಗೆದ ಸಿನಿಮಾ ಎಂದು ನಮ್ಮೆಲ್ಲರಿಗೂ ಗೊತ್ತೇ ಇದೆ. 1912 ರಲ್ಲಿ ಇಂಗ್ಲೆಂಡ್ ದೇಶದ “ಸೌತ್ ಹ್ಯಾಮ್ಟಾನ್” ನಗರದಿಂದ ಅಮೆರಿಕಾದ ನ್ಯೂಯಾರ್ಕ್ ನಗರಕ್ಕೆ ಹೊರಡುತ್ತಿದ್ದ ಈ ಬೃಹತ್ ಹಡಗು ಉತ್ತರ ಅಟ್ಲಾಂಟಿಕ್ ಸಮುದ್ರದ ಮದ್ಯೆ ದೊಡ್ಡ ಮಂಜು ಗಡ್ಡೆಗೆ ಬಡಿದು ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದರು. ಜಗತ್ತು ಕಂಡ ಕೆಟ್ಟ ದುರಂತಗಳಲ್ಲಿ ಇದು ಕೂಡ ಒಂದಾಗಿದೆ.
ಆದರೆ ಇಂದು ನಾವು ನಿಮಗೆ ಹೇಳ ಹೊರಟಿರುವುದು ಈ ಟೈಟಾನಿಕ್ ಕಥೆಯಲ್ಲ. ಇದರ ತರಹ ಇದ್ದ ಇನ್ನೆರಡು ಬೃಹತ್ ಹಡಗುಗಳ ಕಥೆ. ಈ ಎರಡು ಹಡಗುಗಳನ್ನು “ಟೈಟಾನಿಕ್ ಹಡಗಿನ ಸಹೋದರಿಯರು” ಎಂದು ಕರೆಯುತ್ತಾರೆ. ಈ ಹಡಗುಗಳು ಕೂಡ ಟೈಟಾನಿಕ್ ತರಹ ದೊಡ್ಡ ಹಡಗುಗಳಾಗಿದ್ದವು.
ಮೊದಲನೆಯ ಹಡಗಿನ ಹೆಸರು “ಬ್ರಿಟಾನಿಕ್”. ಇದರ ನಿರ್ಮಾಣವನ್ನು ಟೈಟಾನಿಕ್ ಹಡಗು ಮುಳುಗುವ ಒಂದು ವರ್ಷಕ್ಕಿಂತ ಮೊದಲು ಶುರು ಮಾಡಲಾಗಿತ್ತು, ಅಂದರೆ 1911ರಲ್ಲಿ. ಯಾವಾಗ ಟೈಟಾನಿಕ್ ಹಡಗು 1912 ರಲ್ಲಿ ಮುಳುಗಿತೋ ಆಗ ಈ ಹಡಗು ಕೂಡ ಅದೇ ತರಹ ಮುಳುಗದೆ ಇರಲಿ ಎಂದು ನಿರ್ಮಾಣ ಹಂತದಲ್ಲಿದ್ದ ಈ ಹಡಗಿಗೆ ಬೇಕಾಗಿರುವ ಕೆಲವು ವಿಶೇಷ ಸೌಕರ್ಯಗಳನ್ನು ಅಳವಡಿಸಲಾಯಿತು. 269 ಮೀಟರ್ ಉದ್ದ ಹಾಗು 53 ಮೀಟರ್ ಎತ್ತರ ಇದ್ದ ಈ ಹಡಗು ಟೈಟಾನಿಕ್ ಹಡಗಿಗಿಂತ ದೊಡ್ಡದಾಗಿತ್ತು. 20 ನೆಯ ಶತಮಾನದಲ್ಲಿ ನಿರ್ಮಾಣವಾದ ಅತ್ಯಂತ ದೊಡ್ಡ ಹಡಗುಗಳಲ್ಲಿ ಇದು ಕೂಡ ಒಂದಾಗಿತ್ತು. ಇಂಗ್ಲೆಂಡ್ ದೇಶದ “ಸೌತ್ ಹ್ಯಾಮ್ಟಾನ್” ಹಾಗು ಅಮೆರಿಕಾದ ನ್ಯೂಯಾರ್ಕ್ ಮದ್ಯೆ ಸಂಪರ್ಕ ಕಲ್ಪಿಸುವ ಸಲುವಾಗಿ ನಿರ್ಮಿಸಿದ್ದ ಈ ಹಡಗನ್ನು ಮೊದಲ ಪ್ರಪಂಚ ಯುದ್ದ ಆರಂಭವಾದ ಮೇಲೆ ಯುದ್ದದ ಹಡಗನ್ನಾಗಿ ಪರಿವರ್ತಿಸಲಾಯಿತು. ಈ ಹಡಗಿಗೆ ಸಂಪೂರ್ಣವಾಗಿ ಬಿಳಿ ಬಣ್ಣ ಹಚ್ಚಿ ಯುದ್ದದಲ್ಲಿ ಗಾಯಗೊಂಡ ಯೋಧರನ್ನು ಆರೈಕೆ ಮಾಡಲೆಂದು ಬಳಸಲಾಗುತ್ತಿತ್ತು ಆದ್ದರಿಂದ “ಬ್ರಿಟಾನಿಕ್” ಎನ್ನುವ ಈ ಹಡಗಿನ ಹೆಸರನ್ನು “ಮಜೆಸ್ಟಿ ಆಸ್ಪತ್ರೆಯ ಹಡಗು” ಎಂದು ಬದಲಾಯಿಸಲಾಯಿತು.
ನವೆಂಬರ್ 21, 1916 ರಂದು “ಕಿಯಾ” ಎನ್ನುವ ದ್ವೀಪದ ಹತ್ತಿರ ಈ ಹಡಗು ಹೋಗುತ್ತಿರುವ ವೇಳೆ ಇದರ ಮೇಲೆ ಜರ್ಮನಿಯವರು ಬಾಂಬ್ ಹಾಕಿದರು. ಇದರಿಂದ ಹಡಗಿನ ಕೆಲ ಭಾಗವು ದ್ವಂಸವಾಗಿ ಸಮುದ್ರದ ನೀರು ಒಳ ಬರಲು ಶುರುವಾಯಿತು. ಆಗ ಅದರ ಕ್ಯಾಪ್ಟನ್ ಹೇಗಾದರೂ ಮಾಡಿ ಹಡಗಿನಲ್ಲಿ ಇರುವ ಎಲ್ಲರನ್ನೂ ಬದುಕಿಸಬೇಕು ಎಂದು ತುರ್ತು ಸೇವೆಯ ಹಡಗಿನಲ್ಲಿ ಎಲ್ಲರನ್ನೂ ಹತ್ತಿರದಲ್ಲಿ ಕಾಣುತ್ತಿರುವ ದ್ವೀಪಕ್ಕೆ ಕಳುಹಿಸಿದನು. ಆದರೆ ಕೆಲ ಜನರು ಜೋರಾಗಿ ತಿರುಗುವ ಹಡಗಿನ “ಪ್ರೋಪೆಲ್ಲರ್” ಒಳ ಸಿಕ್ಕು ಸತ್ತು ಹೋದರು. ಹೇಗೋ ಹೆಚ್ಚು ಜನರು ಸಾಯದೆ ಹತ್ತಿರದ ದ್ವೀಪ ಸೇರಿಕೊಂಡರು. ಇದರಿಂದ ಹೇಗೆ ಟೈಟಾನಿಕ್ ಹಡಗು ನೀರಿನಲ್ಲಿ ಮುಳುಗಿತೋ ಹಾಗೆಯೇ ಈ ಹಡಗು ಕೂಡ 31 ಜನರ ಪ್ರಾಣ ತೆಗೆದುಕೊಂಡು ಸಮುದ್ರದ ತಳ ಭಾಗ ಸೇರಿತು.
ಎರಡನೆಯ ಹಡಗಿನ ಹೆಸರು “ಒಲಿಂಪಿಕ್”. 269 ಮೀಟರ್ ಉದ್ದ ಹಾಗು 53 ಮೀಟರ್ ಎತ್ತರವಿದ್ದ ಈ ಹಡಗನ್ನು ಟೈಟಾನಿಕ್ ಹಡಗಿನ ಜೊತೆಗೆ ನಿರ್ಮಾಣ ಮಾಡಲಾಗಿತ್ತು. 1911 ರಲ್ಲಿ ಸಮುದ್ರಕ್ಕಿಳಿದ ಈ ಹಡಗು ಮೊದಲ ಪ್ರಪಂಚ ಯುದ್ದದ ವೇಳೆಯಲ್ಲಿ ಸೇನೆಗೆಂದು ಉಪಯೋಗವಾಗಿತ್ತು.ಟೈಟಾನಿಕ್ ಹಾಗು “ಬ್ರಿಟಾನಿಕ್”. ಹಡಗಿನ ತರಹ ಯಾವುದೇ ದುರಂತಕ್ಕೆ ಒಳಗಾಗದೆ ಬದುಕಿಳಿದ ಏಕೈಕ ಹಡಗಿದು. 1934ರ ವರೆಗೂ ಸೇವೆ ಸಲ್ಲಿಸಿದ ನಂತರ ಈ ಹಡಗನ್ನು ಸೇವೆ ಇಂದ ನಿವೃತ್ತಿ ಮಾಡಲಾಯಿತು. ಇದನ್ನು ನಿರ್ಮಿಸಿದ ಕಂಪನಿಯು ಈ ಹಡಗಿನ ಭಾಗಗಳನ್ನು ಹರಾಜು ಹಾಕಿ ಮಾರಾಟವಾಗದ ಭಾಗಗಳನ್ನು ಗುಜುರಿಗೆ ಹಾಕಿದರು.
Follow Karunadu Today for more Interesting Facts & Stories.
Click here to Join Our Whatsapp Group
