ಅದು, ಅಕ್ಟೋಬರ್ 19 2017. ಬ್ರಹ್ಮಾಂಡದ ಯಾವುದೋ ಒಂದು ಮೂಲೆಯಿಂದ ನಮ್ಮ ಸೌರ ಮಂಡಲಕ್ಕೆ ಒಂದು ವಿಚಿತ್ರವಾದ ದೈತ್ಯ ಧೂಮಕೇತು ಬಂದಿರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದರು. ಇದರ ಕುರಿತು ಅಧ್ಯಯನ ಮಾಡುತ್ತಾ ಹೋದಾಗ ಇದು ನಮ್ಮ ಸೌರ ಮಂಡಲದ ಹಾಗೆ ಇರುವ ಬೇರೊಂದು star system ನಿಂದ ಬಂದಿದೆ ಎನ್ನುವುದು ತಿಳಿದುಬಂದಿತು. ಇದಕ್ಕೆ oumuamua ಎಂದು ಹೆಸರಿಟ್ಟು ಇದರ ಕುರಿತು ಸಾಕಷ್ಟು ಅಧ್ಯಯನ ಮಾಡುತ್ತ ಹೋದ ವಿಜ್ಞಾನಿಗಳು ಇದರ ಉದ್ದವು 1000 ಮೀಟರ್ ನಷ್ಟಿದ್ದು ವೃತ್ತಾಕಾರವು 300 ಮೀಟರ್ ನಷ್ಟಿದೆ ಎನ್ನುವುದನ್ನು ಪತ್ತೆ ಮಾಡಿದರು. ಆದರೆ ಕೆಲವು ವಿಜ್ಞಾನಿಗಳು ಇದು ಧೂಮಕೇತು ಎಂದು ಒಪ್ಪದೆ ಅನ್ಯ ಗ್ರಹದ ಜೀವಿಗಳ ವಾಹನ ಎಂದು ಹೇಳಿದ್ದಾರೆ. ಅದೇನೇ ಇರಲಿ ಬೇರೆ ಸೌರ ಮಂಡಲದಿಂದ ನಮ್ಮ ಸೌರ ಮಂಡಲಕ್ಕೆ ಬಂದಂತಹ ಮೊಟ್ಟ ಮೊದಲ ವಸ್ತು ಇದಾಗಿದ್ದು ಇಂದಿಗೂ ಕೂಡ ಇದು ನಿಜವಾಗಿಯೂ ದೂಮಕೇತುವೆ ಅಥವ ಅನ್ಯ ಗ್ರಹದ ಜೀವಿಗಳ ವಾಹನವೆ ಎನ್ನುವುದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇದರ ಕುರಿತೆ ಹೆಚ್ಚು ತಲೆ ಕೆಡಿಸಿಕೊಂಡಿದ್ದ ವಿಜ್ಞಾನಿಗಳಿಗೆ 2019 ರಲ್ಲಿ ಮತ್ತೊಂದು ಧೂಮಕೇತುವು ಮತ್ತಷ್ಟು ತಲೆ ಕೆಡಿಸಿಕೊಳ್ಳುವ ಹಾಗೆ ಮಾಡಿತ್ತು. ಏಕೆಂದರೆ ಅದು ಕೂಡ oumuamua ತರಹ ಬೇರೊಂದು ಸೌರ ಮಂಡಲದಿಂದ ನಮ್ಮ ಸೌರ ಮಂಡಲಕ್ಕೆ ಪ್ರವೇಶಿಸಿತ್ತು. ಅಷ್ಟಕ್ಕೂ ಇದು ಬ್ರಹ್ಮಾಂಡದ ಯಾವ ಮೂಲೆಯಿಂದ ಬಂದಿತು? ಹಾಗು ಇದು ನಿಜವಾಗಿಯೂ ದೈತ್ಯಾಕಾರದ ಧೂಮಕೇತುವೋ ಅಥವ ಅನ್ಯ ಗ್ರಹದ ಜೀವಿಗಳ ವಾಹನವೊ? ಈ ಎಲ್ಲಾ ವಿಷಯಗಳ ಕುರಿತು ಇಂದು ನಿಮಗೆ ತಿಳಿಸಿಕೊಡುತ್ತೇವೆ.

ಅದು ಆಗಸ್ಟ್ 30,2019. Gennadiy Borisov ಎನ್ನುವ ರಷ್ಯಾ ದೇಶದ ವ್ಯಕ್ತಿಯು ಆಕಾಶದಲ್ಲಿ ಒಂದು ವಿಚಿತ್ರವಾದ ಆಕಾರದ ದೈತ್ಯ ಧೂಮಕೇತುವೊಂದನ್ನು ತಮ್ಮ ಟೆಲಿಸ್ಕೋಪ್ ಮೂಲಕ ಗಮನಿಸಿದರು. ಇವರು ವೃತ್ತಿಯಲ್ಲಿ ಒಬ್ಬ ಎಂಜಿನಿಯರ್ ಆಗಿದ್ದು Crimean Astronomical ಕೇಂದ್ರದಲ್ಲಿ ಟೆಲಿಸ್ಕೋಪ್ maintenance ಮಾಡುವುದು ಹಾಗು ಬಿಡುವಿನ ವೇಳೆಯಲ್ಲಿ ಬಾಹ್ಯಾಕಾಶದ ಅಧ್ಯಯನ ಮಾಡುವುದು ಇವರ ಕೆಲಸ. ಆಗಸ್ಟ್ 30ರ ರಾತ್ರಿಯ ವೇಳೆ ತಮ್ಮ ಟೆಲಿಸ್ಕೋಪ್ ಮೂಲಕ ಆಕಾಶದ ಕಡೆಗೆ ಗಮನಿಸುತ್ತಿರುವಾಗ ಚಲಿಸುತ್ತಿರುವ ವಸ್ತುವೊಂದನ್ನು ಅವರು ಗಮನಿಸಿದರು. ಅದು ಚಲಿಸುತ್ತಿರುವಂತಹ ದಾರಿಯನ್ನು ಕಂಡು ಅನುಮಾನಗೊಂಡ Borisov ಅವರು ಅದರ coordinates ಗಳನ್ನು ತಿಳಿದುಕೊಂಡು Minor Planet Centre ಗೆ ತಿಳಿಸಿದರು. ಆಗ ಇದರ ಕುರಿತು ಸರಿಯಾಗಿ ಅಧ್ಯಯನ ಮಾಡಿದ ಅಲ್ಲಿನ ವಿಜ್ಞಾನಿಗಳು ಇದು ಸೌರ ಮಂಡಲದಲ್ಲಿ ಕಾಣಸಿಗುವ ಧೂಮಕೇತು ಅಲ್ಲದೆ ಬೇರೆ ಏನೋ ಇದೆ ಅರಿತರು. ಆಗ ಇದಕ್ಕೆ 2I/Borisov ಎಂದು ಹೆಸರಿಟ್ಟರು. ಈ ಹೆಸರು ಇಡುವುದಕ್ಕಿಂತ ಮೊದಲು ಇದಕ್ಕೆ C/2019 Q4 Borisov ಎಂದು ಹೆಸರಿಡಲಾಗಿತ್ತು. ಇದರ ಕುರಿತು ಆಳವಾಗಿ ಅಧ್ಯಯನ ಮಾಡಲು ಶುರು ಮಾಡಿದ ವಿಜ್ಞಾನಿಗಳು ಇದು ಸೂರ್ಯನ ಬಲಿಷ್ಠ ಗುರುತ್ವಾಕರ್ಷಣೆಗೆ ಸಿಗದೆ ಸ್ವತಂತ್ರವಾಗಿ ಎಲ್ಲೆಂದರಲ್ಲಿ ಅಲೆದಾಡುತ್ತಿದೆ ಎಂದು ತಿಳಿಯಿತು. ಈ 2I Borisov ಕುರಿತ ಹೆಚ್ಚಿನ ಮಾಹಿತಿ ವಿಜ್ಞಾನಿಗಳಿಗೆ ತಿಳಿದದ್ದು ಡಿಸೆಂಬರ್ 28, 2019 ರಂದು. ಏಕೆಂದರೆ ಆ ದಿನದಂದೆ ಇದು ಭೂಮಿಯ ಸಮೀಪ ಹಾದುಹೋಯಿತು. ಇದರ ಗಾತ್ರ ಅದೆಷ್ಟು ದೊಡ್ಡದಿದೆ ಎಂದರೆ ಇದರ ಹಿಂದಿನ ಭಾಗವು, ಅಂದರೆ ದೂಳಿನ ಕಣಗಳು ಹಾಗು ಅನಿಲಗಳನ್ನು ತುಂಬಿಕೊಂಡಿರುವ tail ಭಾಗವೇ ಭೂಮಿಗಿಂತ 14 ಪಟ್ಟು ದೊಡ್ಡದಿದೆ.

ಇನ್ನು ಇದರ ಗಾತ್ರವು 975 ಮೀಟರ್ಸ್ ನಷ್ಟಿದೆ, ಅಂದರೆ 9 ಫುಟ್ಬಾಲ್ ಕ್ರೀಡಾಂಗಣದಷ್ಟು ಉದ್ದ. ಗಂಟೆಗೆ 1,77,000 ಕಿಲೋಮೀಟರ್ ನಷ್ಟು ವೇಗದಲ್ಲಿ ಸೌರ ಮಂಡಲದಲ್ಲಿ ಚಲಿಸುತ್ತಿದ್ದ ಈ ಧೂಮಕೇತುವು ಯಾವ star systemನಿಂದ ಬಂದಿದೆ ಎನ್ನುವುದನ್ನು ಪತ್ತೆ ಮಾಡುವಲ್ಲಿ ವಿಜ್ಞಾನಿಗಳು ವಿಫಲರಾಗಿದ್ದಾರೆ. ಇದರೊಂದಿಗೆ ಬೇರೆ star system ನಿಂದ ನಮ್ಮ ಸೌರ ಮಂಡಲಕ್ಕೆ ಬಂದಂತಹ ಮೊಟ್ಟ ಮೊದಲ ಧೂಮಕೇತು ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.