ಮನುಷ್ಯನೇ ಹಾಗೆ. ತನಗೆ ಇಷ್ಟವಾಗದ ಅಥವ ತನಗಿಂತ ಜೀವನದಲ್ಲಿ ಎತ್ತರಕ್ಕೆ ಏರಿದ ವ್ಯಕ್ತಿಗಳನ್ನು ಏನು ಬೇಕಾದರೂ ಮಾಡಲು ಸಿದ್ದವಿರುತ್ತಾನೆ. ಸಾಮಾನ್ಯ ಜನರ ಬಳಿ ಹಣ ಅಥವ ಅಧಿಕಾರ ಇರದ ಕಾರಣ ತಮ್ಮ ರಕ್ಷಣೆಗೆ ಪೋಲೀಸರ ಮೇಲೆಯೇ ಅವಲಂಬಿತರಾಗಿರುತ್ತಾರೆ. ಅಕಸ್ಮಾತ್ ಪೋಲಿಸರು ಕೂಡ ರಕ್ಷಣೆ ಕೊಡಲು ಮುಂದೆ ಬರಲಿಲ್ಲವೆಂದರೆ ತಮ್ಮನ್ನು ತಾವು ರಕ್ಷಿಸಿಕೊಳ್ಳದೆ ಬೇರೆ ದಾರಿ ಇರುವುದಿಲ್ಲ. ಆದರೆ ದೊಡ್ಡ ದೊಡ್ಡ ಸೆಲಬ್ರಿಟಿಗಳು, ರಾಜಕೀಯ ವ್ಯಕ್ತಿಗಳು, ವ್ಯವಹಾರಸ್ಥರು ಹಾಗು ಕೆಲವು ದೊಡ್ಡ ಡಾನ್ ಗಳು ತಮಗೆ ಯಾರಿಂದಲೂ ತೊಂದರೆಯಾಗಬಾರದು ಎಂದು ತಮ್ಮ ರಕ್ಷಣೆಗಾಗಿ ಬಾಡಿಗಾರ್ಡ್ ಗಳನ್ನು ಇಟ್ಟುಕೊಳ್ಳುತ್ತಾರೆ. ಹೀಗೆ ಪ್ರಪಂಚದ ಅನೇಕ ವ್ಯಕ್ತಿಗಳು ಸಾಕಷ್ಟು ಹಣ ಖರ್ಚು ಮಾಡಿ ಬಾಡಿಗಾರ್ಡ್ ಗಳನ್ನು ಇಟ್ಟುಕೊಂಡಿದ್ದಾರೆ. ಬಾಡಿಗಾರ್ಡ್ ಗಳನ್ನು ಇಟ್ಟುಕೊಂಡ ಮಾತ್ರಕ್ಕೆ ಎಲ್ಲರೂ ಸುರಕ್ಷಿತರಾಗಿ ಇರುತ್ತಾರೆ ಎಂದು ನೀವು ತಿಳಿದಿದ್ದರೆ ಅದು ತಪ್ಪು. ಈ ಬಾಡಿಗಾರ್ಡ್ ಗಳ ಕಣ್ಣು ತಪ್ಪಿಸಿ ದಾಳಿ ಮಾಡಿರುವ ಸಾಕಷ್ಟು ಉದಾಹರಣೆಗಳು ಇವೆ. ಆದರೆ ಪ್ರಪಂಚದಲ್ಲಿ ಕೆಲವು ವ್ಯಕ್ತಿಗಳಿದ್ದಾರೆ ಅವರಿಗೆ ಮಾತ್ರ ಅದೆಂತಹ ರಕ್ಷಣೆ ಇದೆಯೆಂದರೆ ಅವರ ಬಾಡಿಗಾರ್ಡ ಗಳ ಕಣ್ಣು ತಪ್ಪಿಸಿ ಅವರ ಹತ್ತಿರ ನುಸುಳಲು ಅದೆಷ್ಟೇ ಕಷ್ಟ ಪಟ್ಟರೂ ಸಾಧ್ಯವಾಗುವುದಿಲ್ಲ. ಬನ್ನಿ ಇಂದು ನಿಮಗೆ ಈ ರೀತಿಯಾದ ಬಲಿಷ್ಠ ಬಾಡಿಗಾರ್ಡ್ ಗಳನ್ನು ಹೊಂದಿರುವ ವ್ಯಕ್ತಿಗಳ ಬಗ್ಗೆ ತಿಳಿಸುತ್ತೇವೆ.

1. ವಾಲ್ಡಿಮೀರ್ ಲೆನಿನ್ ದೇಹ – Valdimir lenin dead body

ರಷ್ಯಾ ದೇಶದ ಸರ್ವಾಧಿಕಾರಿ ಹಾಗು ಕ್ರಾಂತಿಕಾರಿಯಾಗಿದ್ದ ಇವರು 1924 ರಲ್ಲಿ ಅನಾರೋಗ್ಯದಿಂದ ಅಸುನೀಗಿದರು. ಅಂದಿನಿಂದ ಇಲ್ಲಿಯವರೆಗೂ ಇವರ ದೇಹವನ್ನು ಒಂದು ಪಾರದರ್ಶಕವಾಗಿರುವ ಶವ ಪೆಟ್ಟಿಗೆಯಲ್ಲಿ ಇಟ್ಟು ಒಂದು ದೊಡ್ಡ ಗೋರಿಯ ಒಳಗೆ ಇರಿಸಿದ್ದು ಅದನ್ನು ರಷ್ಯಾ ದೇಶದ ವಿಶೇಷ ರಕ್ಷಣಾ ಪಡೆಗಳಲ್ಲಿ ಒಂದಾದ “ರಷ್ಯನ್ ಫೆಡರಲ್ ಪ್ರೊಟೆಕ್ಟಿವ್ ಸರ್ವಿಸ್” 24 ಗಂಟೆಗಳು ಕಾಯುತ್ತ ಇರುತ್ತದೆ. ಕೆಲವರು ಹೇಳುವ ಪ್ರಕಾರ ಇವರು ಒಬ್ಬ ಕ್ರಾಂತಿಕಾರಿಯಾಗಿದ್ದರಿಂದ ರಷ್ಯಾ ದೇಶದ ಸೇನೆಗೆ ಸ್ಪೂರ್ತಿ ಬರಲಿ ಎಂದು ಇವರ ದೇಹವನ್ನು ಈ ರೀತಿ ಇರಿಸಲಾಗಿದೆ ಎಂದು ನಂಬಲಾಗಿದೆ. ಈ ಶವ ಪೆಟ್ಟಿಗೆಯ ಬಳಿ ಹೋಗಲು ಇದುವರೆಗು ಯಾರಿಂದಲೂ ಸಾಧ್ಯವಾಗದ ಹಾಗೆ ಬಾಡಿಗಾರ್ಡ್ ಗಳು ಕಾಯುತ್ತಿದ್ದಾರೆ.

2. ಎಲ್ ಚಾಪೋ – El chapo

14 ಬಿಲಿಯನ್ ಡಾಲರ್ ಮೊತ್ತದ ಆಸ್ತಿ ಹೊಂದಿರುವ ಪ್ರಪಂಚದ ಶ್ರೀಮಂತ ಕ್ರಿಮಿನಲ್ ಈತನು. ಡ್ರಗ್ ಮಾಫಿಯಾದಲ್ಲಿ ವಿಶ್ವದಲ್ಲಿಯೇ ರಾಜನ ಹಾಗೆ ಮೆರೆದ ಮೆಕ್ಷಿಕೊ ದೇಶದ ಈ ಕ್ರಿಮಿನಲ್ ಕೊನೆಗೆ ಜೈಲು ಪಾಲಾದನು. ಜೈಲಿನಿಂದ ಎರಡು ಬಾರಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಈತನನ್ನು ಮತ್ತೆ ಬಂದಿಸಿದ ಪೊಲೀಸರು ಈಗ ಅತ್ಯಂತ ಸುರಕ್ಷಿತ ಸ್ಥಳದಲ್ಲಿ ಇಟ್ಟಿದ್ದಾರೆ. ಈಗಿರುವ ಜೈಲಿನಲ್ಲಿ ಈತನಿಗಾಗಿಯೇ ವಿಶೇಷವಾದ ಕೋಣೆಯಿದ್ದು ಆ ಕೋಣೆಯನ್ನು ಕಾಯಲು ಬಾಡಿ ಗಾರ್ಡ್ ಇರುವರು ಹಾಗು ಆ ಬಾಡಿಗಾರ್ಡ್ ಗಳನ್ನು ಕಾಯಲು ಇನ್ನೊಂದು ಬಾಡಿಗಾರ್ಡ್ ತಂಡವಿದೆ. ಈತನನ್ನು ಪ್ರತಿದಿನ ಬೇರೆ ಬೇರೆ ಕೋಣೆಯಲ್ಲಿ ಇಡಲಾಗುತ್ತದೆ. ಪ್ರಪಂಚದಲ್ಲಿ ಇಷ್ಟೊಂದು ರಕ್ಷಣೆಗೆ ಒಳಗಾಗಿರುವ ಏಕೈಕ ಖೈದಿ ಈತನು.

3. ವಾಲ್ದಿಮೀರ್ ಪುಟಿನ್ – Vladimir Putin

ರಷ್ಯಾದ ಅದ್ಯಕ್ಷರಾಗಿರುವ ಪುಟಿನ್ ಅವರು ಪ್ರಪಂಚದಲ್ಲಿಯೇ ಅತಿ ಹೆಚ್ಚು ರಕ್ಷಣೆಗೆ ಒಳಗಾಗಿರುವ ಅದ್ಯಕ್ಷರು. ಪ್ರಪಂಚ ಕಂಡ ಬಲಿಷ್ಠ ನಾಯಕರಲ್ಲಿ ಇವರು ಕೂಡ ಒಬ್ಬರು. ಇವರನ್ನು ಕೊಲ್ಲಲೆಂದು ಅನೇಕ ಬಾರಿ ಪ್ರಯತ್ನ ನಡೆದಿದ್ದು ಅದೃಷ್ಟವಶಾತ್ ಇವರಿಗೇನು ಆಗಿಲ್ಲ. ಇದೇ ಕಾರಣದಿಂದ ಇವರನ್ನು ಕಾಯಲೆಂದೇ ರಷ್ಯಾದ ವಿಶೇಷ ಪಡೆಗಳಲ್ಲಿ ಒಂದಾದ “ರಷ್ಯನ್ ಫೆಡರಲ್ ಪ್ರೊಟೆಕ್ಟಿವ್ ಸರ್ವಿಸ್” ಇವರಿಗೆ ರಕ್ಷಣೆ ನೀಡುತ್ತಿದೆ. ಅಮೇರಿಕಾದ ಅದ್ಯಕ್ಷರಿಗೂ ಇರದಂತಹ ರಕ್ಷಣೆಯು ಇವರಿಗಿದೆ.

4. ಮಾರ್ಕ್ ಜುಕರ್ಬರ್ಗ್ – Mark Zuckerberg

ಫೇಸ್ಬುಕ್ ಕಂಡು ಹಿಡಿದವರು ಯಾರು ಎಂದು ಕೇಳಿದರೆ ಚಿಕ್ಕ ಹುಡುಗನು ಕೂಡ ಉತ್ತರ ಹೇಳುತ್ತಾನೆ. ಅಷ್ಟೊಂದು ಪ್ರಸಿದ್ದಿಯಾಗಿದ್ದಾರೆ “ಮಾರ್ಕ್ ಜುಕರ್ಬರ್ಗ್”. ಇಷ್ಟೊಂದು ಪ್ರಸಿದ್ದಿಯಾದ ಮೇಲೆ ಅವರಿಗೆ ಶತ್ರುಗಳು ಕೂಡ ಹೆಚ್ಚಿರುತ್ತಾರೆ ಅಲ್ಲವೆ? ಇದೇ ಕಾರಣಕ್ಕೆ ಇವರ ರಕ್ಷಣೆಗೆಂದು ಜುಕರ್ಬರ್ಗ್ ಅವರು ಬರೋಬ್ಬರಿ 20 ಮಿಲಿಯನ್ ಡಾಲರ್ ಹಣ ಖರ್ಚು ಮಾಡಿ ವಿಶೇಷ ರಕ್ಷಣಾ ತಂಡವನ್ನು ಇಟ್ಟುಕೊಂಡಿದ್ದಾರೆ. ದಿನದ 24 ಘಂಟೆಗಳು ಕೂಡ ಇವರನ್ನು ಈ ರಕ್ಷಣಾ ತಂಡವು ಕಾಯುತ್ತಿರುತ್ತದೆ. ಭಯೋತ್ಪಾದಕರು ಕೂಡ ಇವರ ಮೇಲೆ ಕಣ್ಣಿಟ್ಟಿರುವುದರಿಂದ ಇವರ ರಕ್ಷಣೆಗೆ ಅಮೇರಿಕ ಸರ್ಕಾರ ಕೂಡ ಸಹಾಯ ಮಾಡುತ್ತಿದೆ. ಇದಕ್ಕೂ ಮೊದಲು ಪ್ರಸಿದ್ದ “ಒರಾಕಲ್” ಕಂಪನಿಯ ಸಂಸ್ಥಾಪಕ “ಲ್ಯಾರಿ ಎಲಿಸನ್” ಅವರು 1.8 ಮಿಲಿಯನ್ ಡಾಲರ್ ಖರ್ಚು ಮಾಡಿ ತಮ್ಮ ಆತ್ಮ ರಕ್ಷಣೆಗೆಂದು ವಿಶೇಷ ತಂಡವನ್ನು ಇಟ್ಟುಕೊಳ್ಳುವ ಮೂಲಕ ಪ್ರಪಂಚದಲ್ಲಿಯೇ ಅತಿ ಹೆಚ್ಚು ಖರ್ಚು ಮಾಡಿ ರಕ್ಷಣಾ ತಂಡವನ್ನು ಇಟ್ಟುಕೊಂಡಿರುವ ಕಂಪನಿಯ ಸಂಸ್ಥಾಪಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಆದರೆ ಈಗ “ಮಾರ್ಕ್ ಜುಕರ್ಬರ್ಗ್” ಅವರು ಮೊದಲ ಸ್ಥಾನದಲ್ಲಿ ಇದ್ದಾರೆ.

5. ಪೋಪ್ – Pope

ಪ್ರಪಂಚದಲ್ಲಿಯೇ ಅತಿ ಹೆಚ್ಚು ರಕ್ಷಣೆಗೆ ಒಳಗಾಗಿರುವ “ಧಾರ್ಮಿಕ ಗುರು” ಇವರು. “ಕ್ಯಾಥೊಲಿಕ್ ಚರ್ಚ್” ಗಳ ಧರ್ಮ ಗುರುವಾಗಿರುವ ಇವರು ರೋಮ್ ದೇಶದ “ವ್ಯಾಟಿಕನ್ ನಗರ”ದಲ್ಲಿ ಇದ್ದು ಇವರನ್ನು 500 ವರ್ಷಗಳ ಇತಿಹಾಸವಿರುವ ರೋಮ್ ಸಾಮ್ರಾಜ್ಯದ ಸೈನಿಕರು ಕಾಯುತ್ತಿದ್ದಾರೆ. ಪ್ರಪಂಚದಲ್ಲಿ ಇರುವ ಅತ್ಯಾದುನಿಕ ಶಸ್ತ್ರಾಸ್ತ್ರಗಳು ಈ ಸೈನಿಕರ ಬಳಿ ಇದ್ದು ವ್ಯಾಟಿಕನ್ ನಗರವನ್ನು ಯಾವಾಗಲು ಗಸ್ತು ತಿರುಗುತ್ತಿರುತ್ತಾರೆ. ಇಷ್ಟೊಂದು ರಕ್ಷಣೆಯನ್ನು ಬೇರೆ ಯಾವ ಧರ್ಮದ ಗುರುವಿಗೂ ಪ್ರಪಂಚದಲ್ಲಿ ನೀಡಿಲ್ಲ.

6. ಕಿಮ್ ಜಾಂಗ್ ಉನ್ – kim jong un

ಈತನ ಹೆಸರನ್ನು ಕೇಳಿದರೆ ಜಗತ್ತೇ ನಡಗುತ್ತದೆ. ದೀಪಾವಳಿ ಹಬ್ಬಕ್ಕೆ ಹೇಗೆ ಪಟಾಕಿ ಹಾರಿಸುತ್ತೇವೆ ಹಾಗೆಯೇ ತನ್ನ ಹುಟ್ಟು ಹಬ್ಬದ ಆಚರಣೆಗೆ “ಪರಮಾಣು ಬಾಂಬ್” ಹಾರಿಸಿದಂತಹ ವಿಚಿತ್ರ ಸರ್ವಾದಿಕಾರಿ ಈತನು. ಉತ್ತರ ಕೊರಿಯಾದ ಈ ಸರ್ವಾದಿಕಾರಿಯನ್ನು ಕಂಡರೆ ಅಮೇರಿಕವು ಕೂಡ ಭಯ ಪಡುತ್ತದೆ. ಜಗತ್ತಿಗೆ ಅತ್ಯಂತ ಮಾರಕವಾಗಿರುವ ಈ ಸರ್ವಾಧಿಕಾರಿಯ ಮೇಲೆ ಅನೇಕ ದೇಶಗಳ ಕಣ್ಣಿದೆ. ಹೇಗಾದರೂ ಮಾಡಿ ಈತನನ್ನು ಕೊಲ್ಲಬೇಕು ಎಂದು ಅಮೇರಿಕ ಕೂಡ ಸಾಕಷ್ಟು ಪ್ರಯತ್ನ ಪಟ್ಟಿದೆ. ಆದರೆ ಈತನನ್ನು ಕೊಲ್ಲುವುದು ಅಷ್ಟು ಸುಲಭವಲ್ಲ ಏಕೆಂದರೆ ಈತನ ರಕ್ಷಣೆಗೆಂದೇ ಬರೋಬ್ಬರಿ 1 ಲಕ್ಷ ಸೈನಿಕರು ಇರುವ “ಸುಪ್ರೀಂ ಗಾರ್ಡ್ ಕಮ್ಯಾಂಡ್” ಎನ್ನುವ ಒಂದು ಸೇನೆಯೇ ಇದೆ. ಉತ್ತರ ಕೊರಿಯಾ ಬಿಟ್ಟು ಬೇರೆ ದೇಶಕ್ಕೆ ಈತನು ಹೋದಾಗ ಅಕಸ್ಮಾತ್ ಈತನ ಮೇಲೆ ಯಾರಾದರು ದಾಳಿ ಮಾಡಲು ಪ್ರಯತ್ನ ಪಟ್ಟರೆ ಆ ದೇಶದ ಮೇಲೆ ಪರಮಾಣು ಬಾಂಬ್ ಗಳ ಸುರಿಮಳೆಯನ್ನೇ ಈ ಸೇನೆ ಮಾಡುತ್ತದೆ. 2015 ರಲ್ಲಿ ಮೊದಲ ಬಾರಿಗೆ ಉತ್ತರ ಕೋರಿಯ ದೇಶ ಬಿಟ್ಟು ಸಿಂಗಾಪುರಕ್ಕೆ ಬಂದಿದ್ದ ವೇಳೆ ಈತನಿಗೆ ಕಾವಲಿಗಿದ್ದ ರಕ್ಷಕರನ್ನು ಕಂಡು ಜಗತ್ತೇ ದಂಗಾಗಿತ್ತು.

7. ಜೇಜಿ ಮತ್ತು ಬಿಯನ್ಸಿ – Jay Z and Beyonce

ಪ್ರಸಿದ್ದ ಪಾಪ್ ಮ್ಯುಸಿಕ್ ತಾರೆಯರಾದ ಇವರಿಬ್ಬರು ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ಸೆಲಬ್ರಿಟಿಗಳು. ಇವರಿಬ್ಬರ ಒಟ್ಟು ಆಸ್ತಿಯು 1.25 ಬಿಲಿಯನ್ ಡಾಲರ್. ಇಷ್ಟೊಂದು ಮೊತ್ತದ ಆಸ್ತಿ ಹೊಂದಿದ ಮೇಲೆ ಇವರ ಮೇಲೆ ಸಾಕಷ್ಟು ಜನರ ಕಣ್ಣು ಇದ್ದೇ ಇರುತ್ತದೆ ಅಲ್ಲವೆ. ಅದೊಂದು ದಿನ ತನ್ನ ಹೆಂಡತಿ ಬಿಯನ್ಸಿ ಮೇಲೆ ಒಬ್ಬ ಫ್ಯಾನ್ ದಾಳಿ ಮಾಡಲು ಪ್ರಯತ್ನ ಮಾಡಿದ್ದನ್ನು ಕಂಡ ಜೇಜಿಯು ಅಂದಿನಿಂದ ತನ್ನ ಹೆಂಡತಿಯನ್ನು ಕಾಯಲು 4 ಮಿಲಿಯನ್ ಡಾಲರ್ ಹಣ ಖರ್ಚು ಮಾಡಿ ವಿಶೇಷವಾದ ಬಾಡಿ ಗಾರ್ಡ್ ತಂಡವನ್ನು ಇಟ್ಟಿದ್ದಾನೆ. ಇಷ್ಟೇ ಅಲ್ಲದೆ ತನ್ನ ಹೆಂಡತಿಗಾಗಿ ಗುಂಡು ನಿರೋಧಕ ಕಾರನ್ನು ಕೂಡ ವಿಶೇಷವಾಗಿ ಖರೀದಿಸಿದ್ದಾನೆ. ಇದು ಸಾಮಾನ್ಯ ಕಾರಲ್ಲ ಅಮೇರಿಕಾದ ಅದ್ಯಕ್ಷರಾಗಿದ್ದ ಬರಾಕ್ ಒಬಾಮ ಅವರ ರಕ್ಷಣೆಗಾಗಿ ಅಮೇರಿಕ ಸೇನೆಯು ಬಳಸುತ್ತಿದ್ದಂತಹ ಗುಂಡು ನಿರೋಧಕ ಕಾರು ಇದು. ಇದರ ಜೊತೆಗೆ ತಾವಿಬ್ಬರು ಇರುವ ಮನೆಯ ಸುತ್ತ ಬೃಹತ್ ಗೋಡೆಯನ್ನು ನಿರ್ಮಿಸಿದ್ದು ಅದರ ಬೆಲೆ ಬರೋಬ್ಬರಿ 88 ಮಿಲಿಯನ್ ಅಮೇರಿಕನ್ ಡಾಲರ್. ಇಷ್ಟೊಂದು ಖರ್ಚು ಮಾಡಿ ರಕ್ಷಣೆ ಪಡೆಯುತ್ತಿರುವ ಜಗತ್ತಿನ ಏಕೈಕ ಸೆಲಬ್ರಿಟಿ ಇವರಿಬ್ಬರಾಗಿದ್ದಾರೆ.

8. ಬಿಲ್ ಗೇಟ್ಸ್ – Bill Gates

ಇವರ ಬಗ್ಗೆ ಯಾರಿಗೆ ಗೊತ್ತಿಲ್ಲ ನೀವೇ ಹೇಳಿ. ಜಗತ್ತಿನಲ್ಲಿ ತಂತ್ರಜ್ಞಾದಲ್ಲಿ ಹೊಸ ಚಮತ್ಕಾರವನ್ನೇ ಮಾಡಿದ ಇವರು ಅನೇಕ ಬದಲಾವಣೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಅಮೇರಿಕದ ವಾಷಿಂಗ್ಟನ್ ನಗರದಲ್ಲಿರುವ ಇವರ ಮನೆಗೆ ಆದುನಿಕ ತಂತ್ರಜ್ಞಾನದಿಂದ ರಕ್ಷಣೆ ನೀಡಲಾಗಿದೆ. ಇದರ ಜೊತೆಗೆ ಅಮೇರಿಕದ ಸೇನೆಯಲ್ಲಿ ವಿಶೇಷ ತರಬೇತಿ ಪಡೆದ ತಂಡವು ಇವರ ಮನೆಯನ್ನು ಕಾಯುತ್ತಿದೆ.

Follow Karunadu Today for more Interesting Facts & Stories. 

Click here to Join Our Whatsapp Group