1) ನಮ್ಮೆಲ್ಲರ ಬಳಿ ನಾಣ್ಯಗಳು ಇರುವುದು ಸಹಜ. ಆದರೆ ಎಂದಾದರು ಈ ನಾಣ್ಯಗಳನ್ನು ಎಲ್ಲಿ ಸಿಡ್ಡಪಡಿಸಲಾಗುತ್ತದೆ ಮತ್ತು ನಾಣ್ಯಗಳ ಮೇಲೆಯಿರುವ ಚಿಹ್ನೆ ಏನೆಂದು ಅರ್ಥ ನೀಡುತ್ತದೆ ಎಂದು ಎಂದಾದರು ಯೋಚಿಸಿದ್ದೀರ? ಬನ್ನಿ ಅದರ ಕುರಿತು ಈ ಸಂಗತಿಯಲ್ಲಿ ಮಾಹಿತಿ ನೀಡುವೆ. ನಮ್ಮ ದೇಶದ ನಾಣ್ಯಗಳು ಸಿದ್ದವಾಗುವುದು ಮುಂಬೈ, ಕೋಲ್ಕತ್ತಾದ ಅಲಿಪೋರ್, ಹೈದರಾಬಾದಿನ ಚೆರ್ಲಾಪಲ್ಲಿ ಮತ್ತು ಉತ್ತರಪ್ರದೇಶದ ನೋಯ್ಡಾದಲ್ಲಿ ನಾಣ್ಯಗಳನ್ನು ಸಿದ್ದಪಡಿಸಲಾಗುತ್ತದೆ.ಆದರೆ ನಿಮ್ಮ ಬಳಿಯಿರುವ ನಾಣ್ಯಗಳ ಮೇಲೆಯಿರುವ ಚಿಹ್ನೆ  ವಜ್ರದ ಆಕಾರದಲ್ಲಿ ಇದ್ದರೆ ಅದು ಮುಂಬೈ ನಗರದಲ್ಲಿ ಸಿದ್ದವಾಗಿರುವ ನಾಣ್ಯ ಎಂದರ್ಥ, ಕೋಲ್ಕತ್ತಾದ ಅಲಿಪೋರ್ ನಲ್ಲಿ ಸಿದ್ದವಾದ ನಾಣ್ಯದಲ್ಲಿ ಯಾವುದೇ ಗುರುತು ಇರುವುದಿಲ್ಲ. ಇನ್ನು ನಾಣ್ಯದಲ್ಲಿ ನಕ್ಷತ್ರದ ಗುರುತು ಇದ್ದರೆ ಅದು ಹೈದರಾಬಾದಿನ ಚೆರ್ಲಾಪಲ್ಲಿಯಲ್ಲಿ ಸಿದ್ದವಾಗಿದೆ ಎಂದರ್ಥ ಮತ್ತು ಕೊನೆಯದಾಗಿ ನಾಣ್ಯದಲ್ಲಿ ಒಂದು ಪುಟ್ಟ ಬಿಂದುವಿದ್ದರೆ ಅದು ಉತ್ತರಪ್ರದೇಶದ ನೋಯ್ಡಾದಲ್ಲಿ ಸಿದ್ದವಾಗಿದೆ ಎಂದರ್ಥ.

mother breast milk

2) ಸಹಜವಾಗಿ ನಾವುಗಳು ನಮ್ಮ ದೇಹವು ಸದೃಡವಾಗಿ ಬೆಳೆಯಬೇಕೆಂದು ವಿವಿಧ ರೀತಿಯ ಪೌಷ್ಟಿಕ ಆಹಾರಗಳನ್ನು ಸೇವಿಸುತ್ತೇವೆ. ಇದಕ್ಕೆಂದು ಸಾಕಷ್ಟು ಹಣವನ್ನು ಕೂಡ ನಾವು ಖರ್ಚು ಮಾಡಲು ಸಿದ್ದವಿರುತ್ತೇವೆ. ಆದರೆ ಒಬ್ಬ ವ್ಯಕ್ತಿಯ ದೇಹಕ್ಕೆ ಬೇಕಾಗುವಂತಹ ಎಲ್ಲಾ ರೀತಿಯ ಪೌಷ್ಟಿಕ ಅಂಶಗಳು ಒಂದೇ ಆಹಾರದಲ್ಲಿ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಬಗೆ ಬಗೆಯ ಆಹಾರಗಳನ್ನು ನಾವು ಸೇವಿಸುತ್ತೇವೆ. ಆದರೆ ಜಗತ್ತಿನಲ್ಲಿ ಒಂದು ಆಹಾರವಿದ್ದು ಅದರಲ್ಲಿ ಒಬ್ಬ ವ್ಯಕ್ತಿಗೆ ಬೇಕಾಗುವಂತಹ ಎಲ್ಲಾ ರೀತಿಯ ಪೌಷ್ಟಿಕ ಅಂಶಗಳು ಸಿಗುತ್ತವೆ. ಆ ಆಹಾರವೆ ತಾಯಿಯ ಎದೆಹಾಲು. ಹೌದು ಎಷ್ಟೇ ದುಡ್ಡು ಖರ್ಚು ಮಾಡಿ ಅದೆಂತಹ ಆಹಾರವನ್ನು ಸೇವಿಸಿದರು ಕೂಡ ಮನುಷ್ಯನ ದೇಹಕ್ಕೆ ಬೇಕಾಗುವಂತಹ ಎಲ್ಲಾ ರೀತಿಯ ಪೌಷ್ಟಿಕಾಂಶಗಳನ್ನು ಆ ಆಹಾರವು ಒದಗಿಸುವುದಿಲ್ಲ. ಆದರೆ ತಾಯಿಯ ಎದೆ ಹಾಲಿನಲ್ಲಿ ಮಾತ್ರ ಎಲ್ಲಾ ಬಗೆಯ ಪೌಷ್ಟಿಕಾಂಶಗಳಿರುತ್ತವೆ. ಅದಕ್ಕೆ ಅಲ್ಲವೆ ತಾಯಿಯನು ದೇವರು ಎಂದು ಪೂಜಿಸುವುದು.

aramurtheeswarar temple

3) ಭಾರತವೆಂದರೆ ಸಾಕು ಹಾವಾಡಿಗರ ದೇಶ, ಅಲ್ಲಿ ಕೇವಲ ಬಡವರೇ ಇರುವರು, ಆ ದೇಶವು ತುಂಬಾ ಹಿಂದುಳಿದ ದೇಶವೆಂದು ಜಗತ್ತಿನ ಅನೇಕ ದೇಶಗಳು ನಮ್ಮನ್ನು ಆಡಿಕೊಂಡು ಅನೇಕ ಬಾರಿ ನಕ್ಕಿರುವ ವಿಷಯ ನಮಗೆಲ್ಲ ತಿಳಿದೇ ಇದೆ. ಆದರೆ ಪ್ರತಿ ಬಾರಿ ಈ ರೀತಿ ಅವರುಗಳು ಆಡಿಕೊಂಡು ನಕ್ಕಾಗ ಅನೇಕ ಉದಾಹರಣೆಗಳೊಂದಿಗೆ ನಮ್ಮ ದೇಶವು ಅದೆಷ್ಟು ಶ್ರೀಮಂತ ದೇಶವಾಗಿತ್ತು ಮತ್ತು ಅದೆಷ್ಟು ಅತ್ಯಾದುನಿಕತೆಯನ್ನು ಹೊಂದಿತ್ತು ಎಂದು ಅವರಿಗೆ ನಿರೂಪಿಸಿ ಅವರುಗಳ ಮುಖಕ್ಕೆ ಹೊಡೆದ ಹಾಗೆ ಉತ್ತರವನ್ನು ನಾವು ನೀಡಿದ್ದೇವೆ. ಇಂತಹ ಉದಾಹರಣೆಗಳಲ್ಲಿ ತಮಿಳುನಾಡಿನ ಕಾಲ ಭೈರವನಾಥ ದೇವಸ್ಥಾನದ ಕಂಬಗಳ ಮೇಲೆ ಇರುವ ಕೆತ್ತನೆಗಳು ಕೂಡ ಒಂದು. ಈ ಕಂಬಗಳ ಮೇಲಿರುವ ಕೆತ್ತನೆಯನ್ನು ಒಮ್ಮೆ ಗಮನಿಸಿ. ಮಗುವೊಂದು ತಾಯಿಯ ಗರ್ಭದಲ್ಲಿ ಇರುವಾಗ ಹೇಗಿರುತ್ತದೆ ಎನ್ನುವುದನ್ನು ಕೆತ್ತಲಾಗಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಸ್ಥಾನದ ಕಂಬಗಳ ಮೇಲೆ ಕೇವಲ ಇದಷ್ಟೇ ಅಲ್ಲದೆ ಚಂದ್ರ ಗ್ರಹಣದ ಕುರಿತು ಕೂಡ ಕೆತ್ತಲಾಗಿದೆ. ಈಗಿನ ಕಾಲದ ಹಾಗೆ ಯಾವುದೇ ರೀತಿಯ X-RAY ಇಲ್ಲದೆಯೆ ಮಗುವೊಂದು ತಾಯಿಯ ಗರ್ಭದಲ್ಲಿದ್ದಾಗ ಹೇಗೆ ಕಾಣುತ್ತದೆ ಎನ್ನುವುದನ್ನು ಪ್ರಾಚೀನ ಭಾರತದಲ್ಲಿ ಪತ್ತೆ ಮಾಡುತ್ತಿದ್ದರು. ಇನ್ನು ಈಗಿನ ವಿಜ್ಞಾನಿಗಳ ತರಹ ಟೆಲಿಸ್ಕೋಪ್ ಅನ್ನು ಬಳಸದೆ ಚಂದ್ರಗ್ರಹಣದ ಕುರಿತು ತಿಳಿದುಕೊಂಡಿದ್ದರು. ಇಂತಹ ಅದ್ಬುತ ಜ್ಞಾನವನ್ನು ಹೊಂದಿದ್ದ ನಮ್ಮ ದೇಶದ ಜನರನ್ನು ಕೇವಲವಾಗಿ ನೋಡುತ್ತಿದ್ದರು ವಿದೇಶದವರು.

Italy

4) ಹವಾಮಾನ ಬದಲಾವಣೆಯಿಂದ ಜಗತ್ತಿನಲ್ಲಿ ಏನೆಲ್ಲಾ ತೊಂದರೆಗಳು ಆಗುತ್ತಿದೆ ಎಂದು ನಮಗೆಲ್ಲ ಈಗಾಗಲೆ ತಿಳಿದಿದೆ.ಇದು ಗೊತ್ತಿದ್ದರೂ ಕೂಡ ನಮ್ಮ ಜಗತ್ತಿನಲ್ಲಿರುವ ಅನೇಕ ದೇಶಗಳು ಅದರ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಇದನ್ನು ತುಂಬಾ ಗಂಬೀರವಾಗಿ ಪರಿಗಣಿಸಿರುವ ಇಟಲಿ ಮತ್ತು ನ್ಯೂಜಿಲ್ಯಾಂಡ್ ದೇಶಗಳು ಈಗಿನಿಂದಲೆ ಒಳ್ಳೆಯ ಕ್ರಮವನ್ನು ತೆಗೆದುಕೊಂಡಿವೆ. ಇಟಲಿ ದೇಶವು ಹವಾಮಾನ ಬದಲಾವಣೆಯ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಲು ಪಠ್ಯ ಪುಸ್ತಕಗಳಲ್ಲಿ ಕೆಲ ಪಾಠಗಳನ್ನು ಅಳವಡಿಸಿದೆ. ಇದರಿಂದ ಮುಂಬರುವ ಪೀಳಿಗೆಗೆ ನಮ್ಮ ಭೂಮಿಯನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ತಿಳಿಯುತ್ತದೆ ಎನ್ನುವುದು ಅವರ ಉದ್ದೇಶ. ಇದೇ ರೀತಿ ನ್ಯೂಜಿಲ್ಯಾಂಡ್ ದೇಶದೆಲ್ಲೆಡೆ ಸಂಪೂರ್ಣವಾಗಿ ಪ್ಲಾಸ್ಟಿಕ್ ಅನ್ನು ನಿಷೇದಿಸಲಾಗಿದೆ.

solar power plant

5) ನಮಗೆಲ್ಲ ತಿಳಿದ ಹಾಗೆ 2011 ರಲ್ಲಿ ಜಪಾನ್ ದೇಶದ ಪುಕುಶಿಮದಲ್ಲಿ ಆದ ಭಯಾನಕ ಸುನಾಮಿ ಮತ್ತು ಭೂಕಂಪದ ತೀವ್ರತೆಗೆ ಪರಮಾಣು ಸ್ಥಾವರದಿಂದ ಪರಮಾಣು ಸೋರಿಕೆಯಾಗಿ ಸಂಪೂರ್ಣ ನಗರವನ್ನು ಖಾಲಿ ಮಾಡಬೇಕಾದಂತಹ ಪರಿಸ್ಥಿತಿ ಬಂದದ್ದು ನೆನಪಿದೆ. ಅಂದಿನಿಂದ ಇಲ್ಲಿಯವರೆಗು ಆ ನಗರ ಮತ್ತು ಅದರ ಸುತ್ತ ಮುತ್ತಲಿನ ಸ್ಥಳದಲ್ಲಿ ಯಾರೂ ಕೂಡ ವಾಸಿಸುತ್ತಿಲ್ಲ. ಆದರೆ ಈಗ ಜಪಾನ ಸರ್ಕಾರ ಅದನ್ನು ಖಾಲಿ ಬಿಡಬಾರದೆಂದು ನಿರ್ಧರಿಸಿ ಅಲ್ಲಿ “ಸೋಲಾರ್ ವಿದ್ಯುತ್ ಸ್ಥಾವರ” ಮತ್ತು “ಪವನ ವಿದ್ಯುತ್ ಸ್ಥಾವರ” ವನ್ನು ನಿರ್ಮಿಸಿದ್ದು ಇದರಿಂದ ಹತ್ತಿರದಲ್ಲಿರುವ ಟೋಕಿಯೊ ನಗರಕ್ಕೆ ಬೇಕಾಗುವ ವಿದ್ಯುತ್ ಅನ್ನು ಅಲ್ಲಿಂದ ಸರಭರಾಜು ಮಾಡಲಾಗುತ್ತಿದೆ. ಯಾವ ಸ್ಥಳವನ್ನು ಉಪಯೋಗಕ್ಕೆ ಬಾರದ ಸ್ಥಳವೆಂದು ಜಗತ್ತು ತಿಳಿದಿತ್ತೋ ಅದೇ ಸ್ಥಳವನ್ನು ಉಪಯೋಗಕ್ಕೆ ಬರುವ ಹಾಗೆ ಮಾಡಿ ತೋರಿಸಿದೆ ಜಪಾನ್

ಈ ರೀತಿಯ ಹೆಚ್ಚಿನ ವಿಸ್ಮಯ ಸಂಗತಿಗಳಿಗೆ ಇಂದೇ ಕರುನಾಡು Today ಅನುಸರಿಸಿ

ನಮ್ಮ Whatsapp ಗ್ರೂಪ್‌ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ ​