ನಮಗೆಲ್ಲ ತಿಳಿದ ಹಾಗೆ ಭೂಮಿಯ ಮೇಲೆ ಅನೇಕ ಜೀವಿಗಳು ವಾಸಿಸುತ್ತಿವೆ. ಆದರೆ ಮನುಷ್ಯನು ಈ ಭೂಮಿಯ ಮೇಲೆ ಹೆಚ್ಚು ದಬ್ಬಾಳಿಕೆ ನಡೆಸುತ್ತಿರುವ ಜೀವಿಯಾಗಿದ್ದಾನೆ. ಆದರೆ ಮನುಷ್ಯನು ಭೂಮಿಯ ಮೇಲೆ ಸೃಷ್ಟಿಯಾಗುವುದಕ್ಕಿಂತ ಮೊದಲು ಅನೇಕ ರೀತಿಯ ಪ್ರಾಣಿಗಳು ಇಲ್ಲಿ ವಾಸಿಸುತ್ತಿದ್ದವು. ಅವುಗಳಲ್ಲಿ ಯಾವ ಜೀವಿಗಳು ಭೂಮಿಯ ಮೇಲೆ ಹೆಚ್ಚು ದಬ್ಬಾಳಿಕೆ ನಡೆಸುತ್ತಿದ್ದವು ಮತ್ತು ಅವುಗಳ ಗಾತ್ರ ಹೇಗಿತ್ತು ಎಂದು ತಿಳಿಸಿಕೊಡುತ್ತೇವೆ.
1) ಟೈರನೋಸಾರಸ್ (Tyrannosaurus)
68 ಮಿಲಿಯನ್ ವರ್ಷಗಳ ಹಿಂದೆ ಭೂಮಿಯ ಮೇಲೆ ವಾಸಿಸುತ್ತಿದ್ದ ಈ ಜೀವಿಯು ಅತ್ಯಂತ ಭಯಾನಕ ಜೀವಿಗಳಲ್ಲಿ ಒಂದಾಗಿತ್ತು. ಈ ಜೀವಿಯು ಯಾವ ಜೀವಿಗಳಿಗೂ ಹೆದರುತ್ತಿರಲಿಲ್ಲ. ಇದನ್ನು ಭೂಮಿಯ ಮೇಲೆ ವಾಸಿಸುತ್ತಿದ್ದ ಅತ್ಯಂತ ದೊಡ್ಡ carnivorous dinosaurs ಎಂದು ಪರಿಗಣಿಸಲಾಗಿದೆ. 6 ಮೀಟರ್ ಎತ್ತರ, 12 ಮೀಟರ್ ಉದ್ದ ಮತ್ತು 7 ಟನ್ ತೂಕವಿದ್ದ ಈ ಜೀವಿಯು 226 ಕೆಜಿ ಮಾಂಸವನ್ನು ಒಮ್ಮೆಲೆ ತಿನ್ನುವಷ್ಟು ಸಾಮರ್ಥ್ಯ ಹೊಂದಿತ್ತು. ಇದುವರೆಗು ಇದರ 30 ಕ್ಕಿಂತ ಹೆಚ್ಚು ಪಳೆಯುಳಿಕೆಗಳು ಸಿಕ್ಕಿದ್ದು ಅಮೇರಿಕದ ಪಶ್ಚಿಮ ಭಾಗದಲ್ಲಿ ಹೆಚ್ಚು ಸಿಕ್ಕಿವೆ. ಇದನ್ನು T-Rex ಎಂದು ಕೂಡ ಕರೆಯಲಾಗುತ್ತಿದ್ದು ಇದರ ಕುರಿತ ಮತ್ತೊಂದು ಆಶ್ಚರ್ಯಕರ ಸಂಗತಿ ಏನೆಂದರೆ ಇಷ್ಟು ದೊಡ್ಡ ಜೀವಿಗೆ ಪುಟ್ಟ ಕೈಗಳು ಇರುವುದು. ವಿಜ್ಞಾನಿಗಳಿಗೆ ಈ ಪುಟ್ಟ ಕೈಗಳನ್ನು ಈ ಜೀವಿಯು ಹೇಗೆ ಬಳಸಿಕೊಳ್ಳುತ್ತಿತ್ತು ಎನ್ನುವ ವಿಚಾರ ಇದುವರೆಗು ತಿಳಿದುಬಂದಿಲ್ಲ. ಕೆಲವು ವಿಜ್ಞಾನಿಗಳ ಪ್ರಕಾರ ಬೇರೆ ಜೀವಿಗಳ ಜೊತೆಗೆ ಕಾದಾಟಕ್ಕೆ ಇಳಿದಾಗ ಅಕಸ್ಮಾತ್ ಇದು ಕೆಳಗೆ ಬಿದ್ದರೆ ಮೇಲೆ ಏಳುವ ಸಲುವಾಗಿ ಈ ಪುಟ್ಟ ಕೈಗಳು ಸಹಾಯ ಮಾಡುತ್ತಿದ್ದವು ಎಂದು ಹೇಳುತ್ತಾರೆ. ಮತ್ತೆ ಕೆಲವು ವಿಜ್ಞಾನಿಗಳು ಈ ಎರಡು ಪುಟ್ಟ ಕೈಗಳನ್ನು ತಿನ್ನುವ ಸಲುವಾಗಿ ಇದು ಬಳಸಿಕೊಳ್ಳುತ್ತಿತ್ತು ಎಂದು ನಂಬಿದ್ದಾರೆ. ಆದರೆ ಈ ಕೈಗಳನ್ನು ಇದು ಹೇಗೆ ಬಳಸಿಕೊಳ್ಳುತ್ತಿತ್ತು ಎನ್ನುವುದು ಮಾತ್ರ ನಿಖರವಾಗಿ ಇದುವರೆಗು ತಿಳಿದುಬಂದಿಲ್ಲ.
2) ಅರ್ಜೆಂಟಿನೋಸಾರಸ್ (Argentinosaurus)
ಈಗಿನ ಅರ್ಜೆಂಟೈನಾ ದೇಶದಲ್ಲಿ 99.6 ಮಿಲಿಯನ್ ವರ್ಷಗಳ ಹಿಂದೆ ವಾಸಿಸುತ್ತಿದ್ದ ಈ ಜೀವಿಯ ಮೊದಲ ಪಳೆಯುಳಿಕೆ ಸಿಕ್ಕಿದ್ದು 1987 ರಲ್ಲಿ. ಭೂಮಿಯ ಮೇಲೆ ವಾಸಿಸುತ್ತಿದ್ದ ಅತ್ಯಂತ ದೊಡ್ಡ ಜೀವಿಯಾಗಿದ್ದ ಇದರ ಉದ್ದವು 39.7 ಮೀಟರ್ ಇತ್ತು ಅಂದರೆ ಒಂದು ಫುಟ್ಬಾಲ್ ಕ್ರೀಡಾಂಗಣದಷ್ಟು. ಇನ್ನು ಇದರ ತೂಕವು 100 ಟನ್ ವರೆಗು ಇತ್ತು. ಅಂದರೆ 10 ಆಫ್ರಿಕನ್ ಆನೆಗಳ ತೂಕವನ್ನು ಇದೊಂದೆ ಜೀವಿ ಹೊಂದಿತ್ತು. ಸಸ್ಯಾಹಾರಿಯಾಗಿದ್ದ ಈ ಜೀವಿಯು ಆಮೇಯ ವೇಗದಲ್ಲಿ ಓಡುತ್ತಿತ್ತು ಅಂದರೆ ಗಂಟೆಗೆ 8 ಕಿಲೋಮೀಟರ್ ವೇಗದಲ್ಲಿ.
3) ಗಿಗಾನೊಟೊಸಾರಸ್(Giganotosaurus)
Giganotosaurus ಅಂದರೆ “Giant Southern Lizard”. 97 ಮಿಲಿಯನ್ ವರ್ಷಗಳ ಹಿಂದೆ ಈಗಿನ ಅರ್ಜೆಂಟೈನಾ ದೇಶದಲ್ಲಿ ವಾಸಿಸುತ್ತಿದ್ದ ಈ ಬೃಹತ್ ಡೈನೋಸಾರ್ 13 ಮೀಟರ್ ಉದ್ದ ಹಾಗು 13 ಟನ್ ತೂಕವಿದ್ದವು. ಅಂದರೆ ಎರಡು ಆನೆಗಳಷ್ಟು ತೂಕವನ್ನು ಈ ಜೀವಿ ಹೊಂದಿದ್ದವು. ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಓಡಬಲ್ಲ ಶಕ್ತಿ ಹೊಂದಿದ್ದ ಈ ಜೀವಿಯು 6 foot ಉದ್ದದ ತಲೆಯನ್ನು ಹೊಂದಿದ್ದವು, ಅಂದರೆ ಒಬ್ಬ ಮನುಷ್ಯನ ಎತ್ತರದಷ್ಟು ತಲೆ. 80 ದೈತ್ಯಾಕಾರದ ಹಲ್ಲುಗಳನ್ನು ಹೊಂದಿದ್ದ ಈ ಜೀವಿಯ ಒಂದೊಂದು ಹಲ್ಲುಗಳು 20 ಸೆಂಟಿಮೀಟರ್ ನಷ್ಟು ಉದ್ದವಿದ್ದವು. ಇದರೊಂದಿಗೆ ಭೂಮಿಯ ಮೇಲೆ ವಾಸಿಸುತ್ತಿದ್ದ ಅತ್ಯಂತ ದೊಡ್ಡ ಡೈನೋಸಾರ್ ಗಳಲ್ಲಿ ಇದು ಕೂಡ ಒಂದಾಗಿತ್ತು.
4) ಟೈಟಾನೊಬೊವಾ(Titanoboa)
ಈಗಿನ ದಕ್ಷಿಣ ಅಮೆರಿಕದಲ್ಲಿ 60 ಮಿಲಿಯನ್ ವರ್ಷಗಳ ಹಿಂದೆ ವಾಸಿಸುತ್ತಿದ್ದ ಈ ಬೃಹತ್ ಹಾವು ಈಗಿರುವ ದೈತ್ಯ ಹಾವಾದ ಆನಾಕೊಂಡ ಹಾವಿಗಿಂತ ಎರಡು ಪಟ್ಟು ಉದ್ದ ಮತ್ತು ನಾಲ್ಕು ಪಟ್ಟು ಹೆಚ್ಚು ತೂಕವಿತ್ತು. ಇದರ ಪಳೆಯುಳಿಕೆಯು 2009 ರಲ್ಲಿ ಕೊಲಂಬಿಯಾದ ಕಲ್ಲಿದ್ದಲು ಮೈನಿಂಗ್ ಕೇಂದ್ರದಲ್ಲಿ ಸಿಕ್ಕಿತು. ಈ ಹಾವು ಇಷ್ಟೊಂದು ಬೃಹತ್ ಗಾತ್ರದಲ್ಲಿ ಬೆಳೆಯಲು ಪ್ರಮುಖ ಕಾರಣ ಇದು ವಾಸಿಸುತ್ತಿದ್ದ ಸ್ಥಳದ ವಾತಾವರಣ. ಯಾವ ಜಾಗದಲ್ಲಿ ತಾಪಮಾನ ಮತ್ತು Humidity ಹೆಚ್ಚಿರುತ್ತದೆ ಅಂತಹ ಸ್ಥಳಗಳಲ್ಲಿ cold blooded ಪ್ರಾಣಿಗಳು ಬೃಹತ್ ಗಾತ್ರದಲ್ಲಿ ಬೆಳೆಯುತ್ತವೆ. ಚಿಕ್ಕ ಪಕ್ಷಿಗಳಿಂದ ಹಿಡಿದು ಬೃಹತ್ ಗಾತ್ರದ ಮೊಸಳೆಗಳನ್ನು ನುಂಗುವಷ್ಟು ಸಾಮರ್ಥ್ಯ ಈ ಹಾವಿಗಿತ್ತು.
5) ಮೆಗಾಲೊಡಾನ್ (The Megalodon)
Megalodon ಅಂದರೆ “ದೊಡ್ಡ ಹಲ್ಲು” ಎಂದರ್ಥ. ಈ ರೀತಿ ಹೆಸರಿಡಲು ಕಾರಣ ಈ ಮೀನಿನ ಹಲ್ಲಿನ ಗಾತ್ರ. ಇದರ ಹಲ್ಲು ಬರೋಬ್ಬರಿ 17.8 ಸೆಂಟಿಮೀಟರ್ ನಷ್ಟು ಉದ್ದವಿತ್ತು, ಅಂದರೆ ಈಗಿನ ಶಾರ್ಕ್ ಮೀನಿನ ಹಲ್ಲುಗಳಿಗಿಂತ ಮೂರು ಪಟ್ಟು ದೊಡ್ಡದು. 3.6 ಮಿಲಿಯನ್ ವರ್ಷಗಳ ಹಿಂದೆ ಭೂಮಿಯ ಮೇಲಿರುವ ಎಲ್ಲಾ ಸಮುದ್ರಗಳಲ್ಲಿ ಜೀವಿಸುತ್ತಿದ್ದ ಈ ಬೃಹತ್ ಗಾತ್ರದ ಶಾರ್ಕ್ ಮೀನನ್ನು ಸಮುದ್ರದಲ್ಲಿ ವಾಸಿಸುತ್ತಿದ್ದ ಅತ್ಯಂತ ದೊಡ್ಡ ಶಾರ್ಕ್ ಮೀನು ಎಂದು ಪರಿಗಣಿಸಲಾಗಿದೆ. ಇದರ ಉದ್ದವು 18 ಮೀಟರ್ ಮತ್ತು ಇದರ ತೂಕವು 60 ಟನ್ ವರೆಗು ಇತ್ತು ಎಂದು ಪತ್ತೆ ಮಾಡಲಾಗಿದೆ. ಅಂದರೆ ಈಗಿರುವ ಶಾರ್ಕ್ ಮೀನುಗಳಿಗಿಂತ 3 ಪಟ್ಟು ಉದ್ದ ಹಾಗು 20 ಪಟ್ಟು ಹೆಚ್ಚು ತೂಕವನ್ನು ಈ ಜೀವಿ ಹೊಂದಿತ್ತು. ಇದರ ಕಡಿತದ ತಾಕತ್ತು 1,80,000 newtons ಗಳಷ್ಟು ಇತ್ತು. ಅಂದರೆ ತಿಮಿಂಗಲದಂತಹ ಜೀವಿಗಳನ್ನು ಕೇವಲ ಒಂದೇ ಒಂದು ಕಡಿತದಿಂದ ಛಿದ್ರಗೊಳಿಸುವ ತಾಕತ್ತು ಈ ಮೀನಿಗಿತ್ತು.
6) ಪ್ಟೆರಾನೊಡಾನ್(Pteranodon)
89 ಮಿಲಿಯನ್ ವರ್ಷಗಳ ಹಿಂದೆ Cretaceous Period ನಲಿ ಉತ್ತರ ಅಮೆರಿಕ ಭಾಗದಲ್ಲಿ ವಾಸಿಸುತ್ತಿದ್ದ ಈ ಬೃಹತ್ ಗಾತ್ರದ ಪಕ್ಷಿಯ ರೆಕ್ಕೆಗಳು 7 ಮೀಟರ್ ವರೆಗು ಇರುತ್ತಿದ್ದವು. ಅಂದರೆ ಈಗಿನ ರಣಹದ್ದುಗಳ ರೆಕ್ಕೆಗಳಿಗಿಂತ ಮೂರು ಪಟ್ಟು ಉದ್ದ ಹಾಗು 12 ಪಟ್ಟು ಹೆಚ್ಚು ತೂಕ. ಇದರ ಮೊದಲ ಪಳೆಯುಳಿಕೆಯು ಮೊಟ್ಟ ಮೊದಲು 1870 ರಲ್ಲಿ ಪತ್ತೆ ಮಾಡಲಾಯಿತು.
7) ಸ್ಪಿನೋಸಾರಸ್ (Spinosaurus)
112 ಮಿಲಿಯನ್ ವರ್ಷಗಳ ಹಿಂದೆ ಉತ್ತರ ಆಫ್ರಿಕಾದಲ್ಲಿ ವಾಸಿಸುತ್ತಿದ್ದ ಈ ಜೀವಿಯು 7 ಮೀಟರ್ ಎತ್ತರ, 16 ಮೀಟರ್ ಉದ್ದ ಹಾಗು 7500 ಕೆಜಿ ತೂಕದವರೆಗು ಇರುತ್ತಿದ್ದವು ಎಂದು ಸಿಕ್ಕಿರುವ ಪಳೆಯುಳಿಕೆಗಳ ಮೂಲಕ ತಿಳಿದುಬಂದಿದೆ.ಗಂಟೆಗೆ 17 ಕಿಲೋಮೀಟರ್ ವೇಗದಲ್ಲಿ ಓಡಬಲ್ಲ ಶಕ್ತಿ ಹೊಂದಿದ್ದ ಈ ಜೀವಿಯು ಒಂದು ಉಭಯವಾಸಿ ಪ್ರಾಣಿಯಾಗಿದ್ದು ಭೂಮಿ ಮತ್ತು ನೀರು ಎರಡರ ಮೇಲೂ ವಾಸಿಸಬಲ್ಲ ಶಕ್ತಿ ಇದಕ್ಕಿತ್ತು. ಈ ಜೀವಿಯನ್ನು ನೀವು Jurassic park ಸಿನಿಮಾದಲ್ಲಿ ಕಾಣಬಹುದಾಗಿದೆ. ಮಾಂಸಾಹಾರಿ ಪ್ರಾಣಿಯಾಗಿದ್ದ ಈ ಜೀವಿಯು ಆಗಿನ ಕಾಲದಲ್ಲಿದ್ದ ಅತ್ಯಂತ ದೊಡ್ಡ ಡೈನೋಸಾರಸ್ ಗಳಲ್ಲಿ ಒಂದಾಗಿತ್ತು.
8) ಲೀಡ್ಸಿಚ್ತಿಸ್ ಮೀನು(leedsichthys fish)
ಮಧ್ಯ Jurassic ಕಾಲದಲ್ಲಿ ಸಮುದ್ರದಲ್ಲಿ ವಾಸಿಸುತ್ತಿದ್ದ ಈ ಜೀವಿಯು ಒಂದು ಬೃಹತ್ ಮೀನಾಗಿತ್ತು. 19 ನೆಯ ಶತಮಾನದಲ್ಲಿ ಇದರ ಮೊದಲು ಪಳೆಯುಳಿಕೆಗಳು ಸಿಕ್ಕಿದ್ದವು. ಈ ಮೀನು ಈಗಿರುವ ಅತ್ಯಂತ ಬೃಹತ್ ಜೀವಿಯಾದ ತಿಮಿಂಗಲದ ಗಾತ್ರದಲ್ಲಿ ಇದ್ದವು. ಈ ಮೀನಿನ ದೇಹವು ಸಂಪೂರ್ಣವಾಗಿ ಎಲುಬುಗಳಿಂದ ಮಾಡಲಾಗಿರಲಿಲ್ಲ. ಕೆಲವು ಭಾಗದಲ್ಲಿ ಎಲುಬುಗಳೆ ಇಲ್ಲದೆ ಕೇವಲ ಮಾಂಸದಿಂದ ಜೋಡಿಸಲ್ಪಟ್ಟಿದ್ದವು.30 ಮೀಟರ್ ಉದ್ದದವರೆಗು ಇದ್ದ ಈ ಮೀನುಗಳು ಆಗಿನ ಕಾಲದಲ್ಲಿ ಸಮುದ್ರದಲ್ಲಿ ವಾಸಿಸುತ್ತಿದ್ದ ಬೃಹತ್ ಜೀವಿಗಳಲ್ಲಿ ಒಂದಾಗಿದ್ದವು.
9) ಪ್ಯಾರಾಸೆರೆಥೇರಿಯಮ್(Paraceratherium)
ಖಡ್ಗಮೃಗ ಪ್ರಜಾತಿಗೆ ಸೇರಿದ ಈ ಜೀವಿಯು 34 ಮಿಲಿಯನ್ ವರ್ಷಗಳ ಹಿಂದೆ ಭೂಮಿಯ ಮೇಲೆ ವಾಸಿಸುತ್ತಿದ್ದವು. ಈಗ ಹೇಗೆ ಭೂಮಿಯ ಮೇಲೆ ವಾಸಿಸುತ್ತಿರುವ ಅತ್ಯಂತ ದೊಡ್ಡ ಪ್ರಾಣಿ ಆನೆಯಾಗಿದೆ ಅದೇ ರೀತಿ 34 ಮಿಲಿಯನ್ ವರ್ಷಗಳ ಹಿಂದೆ ಭೂಮಿಯ ಮೇಲೆ ವಾಸಿಸುತ್ತಿದ್ದ ಅತ್ಯಂತ ದೊಡ್ಡ ಪ್ರಾಣಿ ಇದಾಗಿತ್ತು. ಈ ಜೀವಿಯ ಕುತ್ತಿಗೆಯು 1.3 ಮೀಟರ್ ಉದ್ದವಿತ್ತು ಅಂದರೆ ಈಗಿರುವ ಜಿರಾಫೆ ಕುತ್ತಿಗೆಯ ಹಾಗೆ. ಇನ್ನು ಇದರ ತೂಕವು 20 ಟನ್ ಇದ್ದು ಇದೊಂದು ಶಾಖಾಹಾರಿ ಜೀವಿಯಾಗಿತ್ತು ಎಂದು ಸಿಕ್ಕಿರುವ ಪಳೆಯುಳಿಕೆಗಳಿಂದ ತಿಳಿದುಬಂದಿದೆ.
10) ಸಾರ್ಕೋಸುಚಸ್(Sarcosuchus)
ಮೊಸಳೆಯ ಪ್ರಜಾತಿಗೆ ಸೇರಿದ ಈ ಜೀವಿಯು ಭೂಮಿಯ ಮೇಲೆ 145 ಮಿಲಿಯನ್ ವರ್ಷಗಳ ಹಿಂದೆ ವಾಸಿಸುತ್ತಿದ್ದವು. ಇವುಗಳ ಪಳೆಯುಳಿಕೆ ಸಿಕ್ಕಿರುವುದರ ಆಧಾರದ ಮೇಲೆ ಇವುಗಳ ಉದ್ದ ಮತ್ತು ತೂಕವನ್ನು ಕಂಡುಹಿಡಿದಾಗ ಇವುಗಳು ಬರೋಬ್ಬರಿ 9.5 ಮೀಟರ್ ಉದ್ದದವರೆಗು ಬೆಳೆಯುತ್ತಿದ್ದವು ಹಾಗು 4.5 ಟನ್ ತೂಕ ಹೊಂದಿರುತ್ತಿದ್ದವು ಎಂದು ತಿಳಿದುಬಂದಿದೆ. ಇದು ಇಲ್ಲಿಯವರೆಗು ಭೂಮಿಯ ಮೇಲೆ ವಾಸಿಸಿರುವ ಅತ್ಯಂತ ದೊಡ್ಡ ಮೊಸಳೆಯ ಪ್ರಜಾತಿಯಾಗಿದೆ. ಇದರ ಕಡಿತದ ತಾಕತ್ತು ಬರೋಬ್ಬರಿ 9 ಟನ್ ಇತ್ತು. ಅಂದರೆ ಈಗಿನ ಮೊಸಳೆಗಳ ಕಡಿತದ ತಾಕತ್ತಿಗಿಂತ ಸಾಕಷ್ಟು ಪಟ್ಟು ಹೆಚ್ಚು.
ಇದರ ಕುರಿತ ಮತ್ತೊಂದು ಆಶ್ಚರ್ಯಕರ ಸಂಗತಿ ಏನೆಂದರೆ ಇಷ್ಟು ದೊಡ್ಡ ಜೀವಿಗೆ ಪುಟ್ಟ ಕೈಗಳು ಇರುವುದು. ವಿಜ್ಞಾನಿಗಳಿಗೆ ಈ ಪುಟ್ಟ ಕೈಗಳನ್ನು ಈ ಜೀವಿಯು ಹೇಗೆ ಬಳಸಿಕೊಳ್ಳುತ್ತಿತ್ತು ಎನ್ನುವ ವಿಚಾರ ಇದುವರೆಗು ತಿಳಿದುಬಂದಿಲ್ಲ. ಕೆಲವು ವಿಜ್ಞಾನಿಗಳ ಪ್ರಕಾರ ಬೇರೆ ಜೀವಿಗಳ ಜೊತೆಗೆ ಕಾದಾಟಕ್ಕೆ ಇಳಿದಾಗ ಅಕಸ್ಮಾತ್ ಇದು ಕೆಳಗೆ ಬಿದ್ದರೆ ಮೇಲೆ ಏಳುವ ಸಲುವಾಗಿ ಈ ಪುಟ್ಟ ಕೈಗಳು ಸಹಾಯ ಮಾಡುತ್ತಿದ್ದವು ಎಂದು ಹೇಳುತ್ತಾರೆ. ಮತ್ತೆ ಕೆಲವು ವಿಜ್ಞಾನಿಗಳು ಈ ಎರಡು ಪುಟ್ಟ ಕೈಗಳನ್ನು ತಿನ್ನುವ ಸಲುವಾಗಿ ಇದು ಬಳಸಿಕೊಳ್ಳುತ್ತಿತ್ತು ಎಂದು ನಂಬಿದ್ದಾರೆ. ಆದರೆ ಈ ಕೈಗಳನ್ನು ಇದು ಹೇಗೆ ಬಳಸಿಕೊಳ್ಳುತ್ತಿತ್ತು ಎನ್ನುವುದು ಮಾತ್ರ ನಿಖರವಾಗಿ ಇದುವರೆಗು ತಿಳಿದುಬಂದಿಲ್ಲ.
Follow Karunadu Today for more Interesting Facts & Stories.
Click here to Join Our Whatsapp Group
