ನಾವು ನಮ್ಮ ತಪ್ಪುಗಳನ್ನು ಸರಿಮಾಡಿಕೊಳ್ಳಲಾಗದೆ ಬೇರೆಯವರನ್ನು ಬಹು ಬೇಗ ದೊಷಿಸುತ್ತೇವೆ. ಪಾಸ್ ಆದರೆ ನಮ್ಮ ಸ್ನೇಹಿತರ ಎದುರು ಮತ್ತು  ಮನೆಯವರ ಹತ್ತಿರ  ಜಂಬದಿಂದ, “ಹೇ ನೋಡಿದ್ರ ನನ್ನ ಆಯ್ಕೆ ಎಷ್ಟು ಸರಿಯಾಗಿತ್ತು, ನಿಮ್ಮ ಮಾತು ಕೇಳಿ ಆ ಕೋರ್ಸ್ ಮಾಡಿದಿದ್ದರೆ ಫೇಲ್ ಆಗುತ್ತಿದೆ” ಎನ್ನುತ್ತೇವೆ. ಅದೇ ಒಂದು ವೇಳೆ ನಾವು ಫೇಲ್ ಆದರೆ “ಎಲ್ಲಾ ನಮ್ಮ ಅಪ್ಪ-ಅಮ್ಮ ಅಥವಾ ಆ ಫ್ರೆಂಡ್ ಈ ಫ್ರೆಂಡ್ ಕಾರಣ, ನಾನು ಬೇಡ ಅಂದರೂ ಒತ್ತಾಯ ಮಾಡಿ ಈ ಕೋರ್ಸ್ ಗೆ ಸೇರಿಸಿದರು”, ಎಂದು ಹೇಳುತ್ತೇವೆ.

ಹೀಗೆ ಬೇರೆಯವರ ತಪ್ಪು ಇರದಿದ್ದರೂ ಸಹ ಅವರನ್ನು ತಪ್ಪಿತಸ್ಥರಾಗಿ ನಿಲ್ಲಿಸುವುದು ಎಷ್ಟು ಸರಿ? ಇದಕ್ಕೆ ಒಂದು ಉದಾಹರಣೆ ಇಲ್ಲಿದೆ ನೋಡಿ. ಒಂದೊಮ್ಮೆ ಒಬ್ಬ ತಂದೆ ತನ್ನ ಮಗನಿಗೆ ತುಂಬಾನೇ ಗಂಭೀರ ಕಾಯಿಲೆ ಆಗಿದೆ ಅದರಿಂದ ಅವನು ಮೂರ್ಛೆಹೋಗಿದ್ದಾನೆ ಎಂದು ಆಸ್ಪತ್ರೆಗೆ ಸೇರಿಸುತ್ತಾನೆ.
ಆಸತ್ರೆ ಸಿಬ್ಬಂಧಿ ತಕ್ಷಣ ಡಾಕ್ಟರ್ ಗೆ ಫೋನ್ ಮಾಡಿ ಒಂದು ತುರ್ತು ಕೇಸ್ ಇದೆ ತಕ್ಷಣ ಹೊರಟು ಬನ್ನಿ ಎಂದು ಹೇಳುತ್ತಾರೆ, ಅದಕ್ಕೆ ವೈದ್ಯನು ಕೂಡ ಬರುತ್ತೇನೆ ಎಂದು ತಿಳಿಸಿ ತಕ್ಷಣ ಅಲ್ಲಿಂದ ಹೊರಟು ಆಸ್ಪತ್ರೆಗೆ ಬಂದು ಶಸ್ತ್ರ ಚಿಕಿತ್ಸೆಗಾಗಿ ಸಮವಸ್ತ್ರ  ಧರಿಸುತ್ತಾನೆ.

ವೈದ್ಯರನ್ನು ಕಂಡು ಕಾಯಿಲೆಗೆ ಬಿದ್ದ ಮಗನ ತಂದೆ ಬಂದು, ಏನು ವೈದ್ಯರೇ ನಿಮಗೆ ಟೈಮ್ ಸೆನ್ಸ್ ಇದೆಯಾ? ಅಡ್ಮಿಟ್ ಮಾಡಿದ್ದು ಯಾವಾಗ ನೀವು ಚಿಕಿತ್ಸೆಗೆ ಬಂದಿದ್ದು ಯಾವಾಗ ಎಂದು ಕೇಳುತ್ತಾನೆ. ಅದಕ್ಕೆ ಡಾಕ್ಟರ್ ತಾಳ್ಮೆಯಿಂದಲೇ ದಯವಿಟ್ಟು ಕ್ಷಮಿಸಿ ನನ್ನ ಕಡೆಯಿಂದ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಬಂದಿದ್ದೇನೆ ಎಂದರು.
ಅಷ್ಟಕ್ಕೇ ಸುಮ್ಮನಾಗದ ಆ ತಂದೆ, ನಿಮಗೇನು ಗೊತ್ತಾಗಬೇಕು ತಂದೆಯ ಕಷ್ಟವೇನು ಎಂದು, ನಿಮ್ಮ ಮಗನಿಗೆ ಹೀಗೆ ಆಗಿದ್ದರೆ ಹೀಗೆ ಮಾಡ್ತಿದ್ರ ಎಂದು ಕೇಳಿದ. ಅದಕ್ಕೆ ಡಾಕ್ಟರ್, ದಯವಿಟ್ಟು ಕ್ಷಮಿಸಿ ಮತ್ತು ನನ್ನ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಹೇಳಿ ಆಪರೇಷನ್ ಕೊನೆಗೆ ಹೋದರು.

ಅದು ಜಟಿಲವಾದ ಆಪರೇಷನ್, ಸುದೀರ್ಘ 3 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ವೈದ್ಯನು ಹೊರಗೆ ಬಂದು, ನಿಮ್ಮ ಮಗ ಈಗ ಸುರಕ್ಷಿತವಾಗಿದ್ದಾನೆ ಏನು ಚಿಂತೆ ಇಲ್ಲ, ಒಂದು ವಾರದಲ್ಲಿ ಗುಣಮುಖನಾಗುತ್ತಾನೆ ಎಂದು ಹೇಳಿ ಹೋಗುತ್ತಾನೆ, ಅವರಿಗೆ ಖುಷಿಯ ಜೊತೆಗೆ ಅಚ್ಚರಿಯಾಯಿತು.
ಆಗ ಹತ್ತಿರವೇ ಇದ್ದ ನರ್ಸ್ ಅನ್ನು ಕರೆದು, ವೈದ್ಯರು ನನ್ನ ಮಗನಿಗೆ ಏನಾಗಿತ್ತು ಎಂದು ಹೇಳಲಿಲ್ಲ ಅಷ್ಟು ತರಾ-ತುರಿಯಲ್ಲಿ ಎಲ್ಲಿಗೆ ಓಡಿಹೋದರು, ಅಷ್ಟಕ್ಕೂ ಏನಾಗಿದೆ ಎಂದು ಕೇಳಿದನು. ಅದಕ್ಕೆ ನರ್ಸ್ ಹೇಳಿದಳು, ನೆನ್ನೆ ಡಾಕ್ಟರ್ ಅವರ ಮಗ ಕಾಯಿಲೆಯಿಂದ ಮರಣ ಹೊಂದಿದರು, ಇಂದು ಅವರ ಅಂತ್ಯಕ್ರಿಯೆ ಇದೆ, ನಾನು ಅವರಿಗೆ ಕರೆ ಮಾಡಿದಾಗ ಅಲ್ಲಿಯೇ ಇದ್ದರು, ನಿಮ್ಮ ಮಗನ ಎಮೆರ್ಜೆನ್ಸಿ ಕೇಸ್ ಗಾಗಿ ಅಂತಿಮಕ್ರಿಯೆಯನ್ನು ಅರ್ಧಕ್ಕೆ ಬಿಟ್ಟು ಇಲ್ಲಿಗೆ ಬಂದಿದ್ದರು, ಈಗ ಅದನ್ನು ಪೂರ್ಣಗೊಳಿಸಲು ಹೋಗುತ್ತಿದ್ದಾರೆ ಎಂದಳು.

ನರ್ಸ್ ಬಾಯಿಯಿಂದ ಆ ಮಾತುಗಳನ್ನು ಕೇಳಿದ ಆ ಹುಡುಗನ ತಂದೆ ದಂಗಾದ. ಡಾಕ್ಟರ್ ನ ಸ್ಥಿತಿಯ ಬಗ್ಗೆ ಗೊತ್ತಿರದೆ ಅವರಿಗೆ ಇಲ್ಲ-ಸಲ್ಲದ ಮಾತುಗಳಿಂದ ಬೈದೆನಲ್ಲ ಎಂದು ಮರುಗಿದ. ತನ್ನ ಮಗನ ಅಂತ್ಯಕ್ರಿಯೆಯನ್ನು ಬಿಟ್ಟು ನನ್ನ ಮಗನ ಜೀವ ಉಳಿಸಲು ಬಂದ ಆ ವೈದ್ಯನಿಗೆ ಮನಸ್ಸಿನಲ್ಲಿಯೇ ಧನ್ಯವಾದ ಹೇಳಿದ.

For more Stories follow Karunadu Today

Click here to Join Our Whatsapp Group