ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ಅದರ ಪರಿಣಾಮ ನಾವೇ ಅನುಭವಿಸಬೇಕಾಗುತ್ತದೆ. ನಮಗೆ ಸೂಕ್ತವಲ್ಲದ ಸ್ಥಳದಲ್ಲಿ ಇರಬೇಕೋ ಬೇಡವೋ ಎಂದು ಸರಿಯಾದ ಸಮಯದಲ್ಲಿ ನಿರ್ಧಾರ ಕೈಗೊಳ್ಳದಿದ್ದರೆ ಅದರಿಂದ ಮುಂದಾಗುವ ಕೆಟ್ಟ ಪರಿಣಾಮಕ್ಕೆ ನಾವೇ ಜವಬ್ದಾರರು, ಅದು ಹೇಗೆ ಎಂದು ನೋಡೋಣ ಬನ್ನಿ

ಅಡುಗೆ ಮನೆಯಲ್ಲಿ ನೀರು ತುಂಬಿದ ಪಾತ್ರೆಯನ್ನು ಸ್ಟವ್ ಮೇಲೆ ಕಾಯಿಸಲು ಇಟ್ಟಿದ್ದರು ಕೆಲ ಕ್ಷಣಗಳ ನಂತರ ಅದರ ಮೇಲೆ ಕಪ್ಪೆಯೊಂದು ಬಂದು ಕುಳಿತುಕೊಂಡಿತು. ನೀರು ಕಾಯಿಸಲು ಇಟ್ಟಿರುವುದನ್ನು ಕಪ್ಪೆ ಗಮನಿಸಿರಲಿಲ್ಲ, ಆ ಪಾತ್ರೆಯ ಮೇಲೆ ಕುಳಿತುಕೊಳ್ಳುವುದರಿಂದ ಮುಂದಾಗುವ ಪರಿಣಾಮವನ್ನೂ ಅರಿಯಲಿಲ್ಲ.

ಕಪ್ಪೆ ಕುಳಿತ ಕೆಲ ಕ್ಷಣಗಳ ನಂತರ ಪಾತ್ರೆ ಸ್ವಲ್ಪ ಬಿಸಿಯಾಯಿತು, ಆದರೆ ಕಪ್ಪೆ ಆ ತಾಪಕ್ಕೆ ಹೊಂದಿಕೊಂಡು ಅಲ್ಲಿಯೇ ಕುಳಿತುಕೊಂಡಿತು. ಕೆಲ ಸಮಯದ ನಂತರ ಅದು ತಣ್ಣಗಾಗುತ್ತದೆ ಎಂದು ಅದು ಭಾವಿಸಿತ್ತು. ಆದರೆ, ಅದು ಸಮಯ ಕಳೆದಂತೆ ಇನ್ನೂ ಬಿಸಿಯಾಗತೊಡಗಿತು.

ಇನ್ನು ಕೆಲ ಕ್ಷಣಗಳ ನಂತರ ತಾಪಮಾನ ಇನ್ನೂ ಹೆಚ್ಚಿತು. ಕಪ್ಪೆ ಆಯ ತಪ್ಪಿ ಆ ಪಾತ್ರೆಯಲ್ಲಿದ್ದ ಬಿಸಿ ನೀರಿನಲ್ಲಿ ಬಿದ್ದಿತು. ಅಲ್ಲಿಂದಲೂ ಸಹ ಅದು ಹೊರಗೆ ಬರಲು ಪ್ರಯತ್ನಿಸದೆ ಆ ನೀರಿನ ತಾಪಮಾನದ ಜೊತೆ ತನ್ನ ದೇಹದ ಉಷ್ಣಾಂಶವನ್ನು ಸರಿಹೊಂದಿಸಿಕೊಂಡಿತು.

ಆ ಕಪ್ಪೆ ಹಾಗೆಯೇ ಕೆಲ ಕ್ಷಣಗಳ ವರೆಗೆ ಆ ಪಾತ್ರೆಯಲ್ಲಿಯ ನೀರಿನಲ್ಲೇ ಕುಳಿತುಕೊಂಡಿತು, ಕೆಲ ಕ್ಷಣಗಳ ನಂತರ ನೀರು ಕುದಿಯಲು ಶುರುವಾಯಿತು ಕಪ್ಪೆಗೆ ಆ ಬಿಸಿ ತಾಳಲಾಗಲಿಲ್ಲ. ಹೂರಗೆ ಜಿಗಿಯಲು ಪ್ರಯತ್ನಿಸಿತು, ಆದರೆ ಅದಕ್ಕೆ ಸಾದ್ಯವಾಗಲಿಲ್ಲ, ನೀರಿನ ತಾಪಮಾನದಿಂದ ಅದು ತನ್ನ ಶಕ್ತಿಯನ್ನು ಕೆಳೆದುಕೊಂಡಿತ್ತು, ಕಪ್ಪೆ ಆ ಪಾತ್ರೆಯಿಂದ ಹೊರಗೆ ಜಿಗಿಯಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗಲೇಯಿಲ್ಲ, ಒಂದು ವೇಳೆ ಅದು ಮೊದಲೇ ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರ ಕೈಗೊಂಡಿದ್ದರೆ ಅದು ಪ್ರಾಯಶಃ ಬದುಕುತ್ತಿತ್ತು ಆದರೆ ಅದರ ವಿಳಂಬ ನಿರ್ಧಾರದಿಂದ ಆದ ಪರಿಣಾಮವನ್ನು ಅದು ಅನುಭವಿಸಬೇಕಾಯಿತು.

ಅದಕ್ಕೆ ಹೇಳುವುದು ಸಮಯ ಎಲ್ಲರಿಗಿಂತಲೂ ದೊಡ್ಡದು ಎಂದು, ನಾವು ಸಮಯಕ್ಕೆ ಎಷ್ಟು ಬೆಲೆಕೊಡುತ್ತೇವೆ ಎನ್ನುವುದರ ಮೇಲೆ ನಮ್ಮ ಭವಿಷ್ಯ ನಿರ್ದಾರವಾಗುತ್ತದೆ. ಸರಿಯಾದ ಸಮಯದಲ್ಲಿ, ಸರಿಯಾದ ವೇಳೆಯಲ್ಲಿ ನಿಮಗೆ ಸೂಕ್ತವಾದ ಸರಿಯೆನ್ನಿಸಿದ ನಿರ್ಧಾರ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದೊಂದು ದಿನ ಕಪ್ಪೆಗಾದ ಗತಿ ನಮಗೂ ಆಗಬಹುದು.

For more Stories follow Karunadu Today

Click here to Join Our Whatsapp Group