ವಾಲ್ಮೀಕಿಯ ಮಹರ್ಷಿಯಾಗುವ ಮೊದಲು ಒಬ್ಬ ಸಾಮಾನ್ಯ ಬೇಡನಾಗಿದ್ದ ಕಾಡಿನಲ್ಲಿ ಬೇಟೆಯಾಡಿ ಇಲ್ಲವೇ ಜನರನ್ನು ಸುಲಿಗೆ ಮಾಡಿ ಬದುಕುವ ವ್ಯಕ್ತಿಯಾಗಿದ್ದ.ಪಾಪ ಪುಣ್ಯಗಳ ಪರಿಕಲ್ಪನೆ ಅವನಿಗೆ ಇರಲಿಲ್ಲ. ಒಮ್ಮೆ ನಾರದ ಮಹರ್ಷಿಗಳ ದರ್ಶನದ ನಂತರ ತಾನು ಮಾಡುತ್ತಿರುವ ಕಾಯಕದ ಬಗ್ಗೆ ಅರಿವು ಮೂಡಿ ತನ್ನ ಪಾಪಗಳ ಕೃತ್ಯಕ್ಕೆ ಪಶ್ಚಾತಾಪ ಹೇಗೆ ಮಾಡಿಕೊಳ್ಳುವುದು ಎಂದು ನಾರದರಿಗೆ ಕೇಳಿಕೊಂಡ ನಾರದ ಮಹರ್ಷಿಗಳು ವಾಲ್ಮೀಕಿಗೆ ಉಪದೇಶ ಮಾಡಿದರು. ಘೋರ ತಪಸ್ಸು ಮಾಡಿ ಮುಂದೆ ವಿಘ್ನ ವಿನಾಯಕ ಒಲುಮೆಯಿಂದ ಪ್ರಚಲಿತ ರಾಮಾಯಣ ಕಥೆಯನ್ನು ಬರೆದು ಪುನೀತರಾಗಿ ಬೇಡ ವಾಲ್ಮೀಕಿಯು ಮಹರ್ಷಿ ವಾಲ್ಮೀಕಿಯಾಗಿ ಬದಲಾದರು ಎಂದು ಪ್ರತಿತಿಯಿದೆ.

ಭಾರತ ದೇಶದ ಗಂಗಾ ನದಿಯ ಪ್ರದೇಶ ಬಹಳ ಪ್ರಸಿದ್ಧಿಯನ್ನು ಪಡೆದ ಸ್ಥಳ. ಅಲ್ಲಿ ಅನೇಕ ಸುಂದರವಾದ ಅರಣ್ಯಗಳು, ಆಶ್ರಮಗಳು ಇವೆ. ಮನೋಹರವಾದ ತಮಸಾ ನದಿ ಅಲ್ಲಿ ಹರಿಯುತ್ತದೆ. ಆ ನದಿಯ ದಡದಲ್ಲಿ ವಾಲ್ಮೀಕಿ ಮುನಿಯ ಆಶ್ರಮವಿದೆ.
ವಾಲ್ಮೀಕಿ ಒಬ್ಬ ಮಹಾ ಋಷಿಗಳು. ಅವರು ಪ್ರಚೇತಸ ಮುನಿಯ ಮಗ. ಅದರಿಂದ ಅವರಿಗೆ ಪ್ರಚೇತಸ ಎಂಬ ಹೆಸರು ಇತ್ತು. ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡಿದವರು ಅವರು. ಆಹಾರ ನಿದ್ರೆಗಳಿಲ್ಲದೆ, ದೇಹ ಅಲ್ಲಾಡದಂತೆ ನಿಶ್ಚಲವಾಗಿ, ಏಕಾಗ್ರತೆಯಿಂದ ಅವರು ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತಲೂ ದೊಡ್ಡದಾದ ಹುತ್ತ ಬೆಳೆದಿತ್ತು, ಸಂಸ್ಕೃತದಲ್ಲಿ ಹುತ್ತಕ್ಕೆ ವಲ್ಮೀಕಿ ಎಂದು ಹೆಸರು. ತಪಸ್ಸು ಮುಗಿಸಿದ ನಂತರ ಅವರು ಬೆಳೆದಿರುವ ಹುತ್ತನ್ನು. ಭೇದಿಸಿ ಹೊರಬಂದರು. ಅದರಿಂದ ಅವರಿಗೆ ವಾಲ್ಮೀಕಿ ಎಂಬ ಹೆಸರು ಬಂತು.ಒಂದು ದಿನ ನಾರದಮುನಿ ವಾಲ್ಮೀಕಿ ಆಶ್ರಮಕ್ಕೆ ಬಂದರು. ವಾಲ್ಮೀಕಿ ಮಹರ್ಷಿ ನಾರದರನ್ನು ಸ್ವಾಗತಿಸಿದರು. ಕೈ ಕಾಲು ತೊಳೆಯುವುದಕ್ಕೆ ನೀರು ಕೊಟ್ಟು ಸತ್ಕರಿಸಿದರು ಉತ್ತಮ ಆಸನದಲ್ಲಿ ಕುರಿಸಿ ಉಪಚರಿಸಿದರು.

ಆನಂತರ ನಾರದರನ್ನು ಕುರಿತು,”ಮುನಿಗಳೇ! ಈ ಲೋಕದ ಅತಿ ಶ್ರೇಷ್ಠನಾದ ವ್ಯಕ್ತಿಯೊಬ್ಬನ ಕಥೆಯನ್ನು ಕೇಳಬೇಕೆಂಬ ಆಸೆ ನನಗುಂಟಾಗಿದೆ. ಆ ವ್ಯಕ್ತಿಯು ಧರ್ಮವಂತನಾಗಿರಬೇಕು, ಸತ್ಯವಂತನಾಗಿರಬೇಕು, ನಿಷ್ಠೆ ವಂತನಾಗಿರಬೇಕು. ಅತಿ ಬಲಶಾಲಿಯು, ಪರಾಕ್ರಮಿಯು ಆಗಿರಬೇಕು. ಆತನು ಎಲ್ಲರ ಬಳಿಯೂ ಪ್ರಿಯನಾಗಿ ನಡೆದುಕೊಳ್ಳುವವನು, ದ್ವೇಷ ಅಸೂಯೆಗಳು ಇಲ್ಲದವನು ಆಗಿರಬೇಕು. ಆ ಮಹಾತ್ಮನು ಬುದ್ಧಿವಂತನಾಗಿರಬೇಕು. ದುಷ್ಟರನ್ನು ಸದೆಬಡಿಯುವವನೂ, ಸತ್ಪುರುಷನ ಕಾಪಾಡುವವನು ಆಗಿರಬೇಕು. ಅಂತಹ ವ್ಯಕ್ತಿಯು ಈ ಲೋಕದಲ್ಲಿ ಇರುವನೇ? ಹಾಗಿದ್ದರೆ ಆ ಧರ್ಮತ್ಮನ ಕಥೆಯನ್ನು ನನಗೆ ದಯವಿಟ್ಟು ಹೇಳಿರಿ ಎಂದು ಪ್ರಾರ್ಥಿಸಿದರು.

ನಾರದರು ಮಹಾಜ್ಞಾನಿಗಳು. ಬ್ರಹ್ಮದೇವರ ಸಂತಾನರು. ಮೂರು ಲೋಕಗಳಾದ ಸ್ವರ್ಗ, ಭೂಮಿ ಮತ್ತು ಪಾತಾಳಗಳಲ್ಲಿ ಸಂಚರಿಸುವವರು ಅವರು. ಅದರಿಂದ ಅವರಿಗೆ ತ್ರಿಲೋಕ ಸಂಚಾರಿ ಎಂಬ ಹೆಸರು ಇದೆ. ವಿಶ್ವದ ಎಲ್ಲಾ ವಿಷಯಗಳನ್ನು ಅವರು ಬಲ್ಲರು. ವಾಲ್ಮೀಕಿ ಮಹರ್ಷಿಯ ಪ್ರಶ್ನೆಯಿಂದ ಅವರಿಗೆ ಬಹಳ ಹರ್ಷವಾಯಿತು. ಮಹಾ ವ್ಯಕ್ತಿಯೊಬ್ಬನ ಕಥೆಯನ್ನು ಹೇಳುವ ಒಂದು ಅವಕಾಶ ದೊರಕಿತು ಎಂದು ಸಂತೋಷಗೊಂಡರು. ಅವರು,”ವಾಲ್ಮೀಕಿಯೇ! ನೀನು ಕೇಳಿದಂತಹ ಎಲ್ಲಾ ಗುಣಗಳನ್ನು ಹೊಂದಿರುವ ಮಹಾಪುರುಷರು ಈ ಲೋಕದಲ್ಲಿ ಸಿಗುವುದು ಅತಿ ವಿರಳ. ಆದರೂ ಪುರುಷನೊಬ್ಬನಿದ್ದಾನೆ. ಇಕ್ಷ್ವಾಕು ವಂಶದವನು. ಅವನೇ ಶ್ರೀರಾಮಚಂದ್ರ.

ಶ್ರೀರಾಮನು ಮಹಾ ಪರಾಕ್ರಮಿಯು, ಧೀರನೂ ಆಗಿದ್ದಾನೆ. ಅವನು ಸತ್ಯವಂತ, ನೀತಿವಂತ, ಬುದ್ಧಿವಂತ ಮತ್ತು ಮಹಾಬಲಶಾಲಿ. ಅವನು ಅಜಾನುಬಾಹು. ಅಂದರೆ ಉದ್ದವಾದ ತೋಳುಗಳನ್ನು ಹೊಂದಿದವನು. ಅವನ ಎದೆ ವಿಶಾಲವಾಗಿದೆ. ಸುಲಕ್ಷಣವಾದ ಶಿರಸನ್ನು ಅವನು ಹೊಂದಿದ್ದಾನೆ. ಅವನ ಶರೀರ ತುಂಬಾ ಆಕರ್ಷಕವಾಗಿದೆ. ಅವನ ದೇಹದ ಆಕರ್ಷಣೆ ತುಂಬಾ ಮನೋಹರವಾಗಿದೆ. ಮಿಂಚುವ ಮೈ ಬಣ್ಣದಿಂದ ಕೂಡಿ ಅವನು ಸರ್ವಂಗ ಸುಂದರ ನಾಗಿದ್ದಾನೆ. ಶ್ರೀ ರಾಮನು ಧರ್ಮವಾದಿ, ಸತ್ಯಸಂಧನೂ, ಗುರು ಹಿರಿಯರನ್ನು ಗೌರವ ಭಾವದಿಂದ ಕಾಣುತ್ತಿದ್ದವನು. ಪ್ರಜೆಗಳ ಹಿತದಲ್ಲೇ ನಿರತನಾಗಿರುವವನು ಆಗಿದ್ದಾನೆ. ಅವನು ಶತ್ರು ಧ್ವಂಸಕ, ಶರಣಾಗತರಕ್ಷಕ. ಶ್ರೀರಾಮುಲು ಋಗ್ವೇದ,ಯಜುರ್ವೇದ ,ಸಾಮವೇದ, ಅಥರ್ವಣ ವೇದಗಳನ್ನೂ. ವೇದಗಂಗಾಳದ ಶಿಕ್ಷಣ, ವ್ಯಾಕರಣ, ಛಂದಸ್ಸು, ಜ್ಯೋತಿಷ್ಯ, ಕಲ್ಪ ಮತ್ತು ನಿರುಕ್ತಗಳನ್ನು ಬಲ್ಲವನು. ಅವನು ಸಕಲ ಶಾಸ್ತ್ರಗಳ ತತ್ವವನ್ನು ತಿಳಿದಿದ್ದಾನೆ. ಶ್ರೀ ರಾಮನು ಬಿಲವಿದ್ಯೆಯಲ್ಲಿ ಪ್ರವೀಣ ಶಾಸ್ತ್ರ ವಿದ್ಯೆಗಳಲ್ಲಿ ಅವನು ಮಹಾಪ್ರವೀಣ. ಶ್ರೀ ರಾಮನು ಎಲ್ಲರಲ್ಲೂ ಮೃದುವಾಗಿ ನಡೆದುಕೊಳ್ಳುತ್ತಾನೆ. ಅವನು ನ್ಯಾಯ ಅನ್ಯಾಯಗಳ ವಿಮರ್ಶೆಯಲ್ಲಿ ಪಕ್ಷಪಾತವಿಲ್ಲದೆ ವರ್ತಿಸುತ್ತಾನೆ. ಹೀಗಾಗಿ ನದಿಗಳು ಸಮುದ್ರದ ಬಳೆಗೆ ಹೋಗುವಂತೆ, ಸಜ್ಜನರು ಯಾವಾಗಲೂ ಶ್ರೀ ರಾಮನ ಸನ್ನಿಧಿಗೆ ಹೋಗುತ್ತಿರುತ್ತಾರೆ.

ಶ್ರೀರಾಮಲು ಗಾಂಭೀರ್ಯದಲ್ಲಿ ಸಮುದ್ರರಾಜನಂತೆಯೂ, ಧೈರ್ಯದಲ್ಲಿ ಹಿಮಾವಂತನಂತೆಯೂ ಇದ್ದಾನೆ. ಅವನು ವಿಷ್ಣುವಿನಂತೆ ಪರಾಕ್ರಮಿಯೂ, ಚಂದ್ರನಂತೆ ಆನಂದವನ್ನು ಕೊಡುವವನು ಆಗಿದ್ದಾನೆ. ಅವನಿಗೆ ಕೋಪ ಬಂದರೆ ಅಗ್ನಿಯ ಸ್ವರೂಪವೇ ಸರಿ. ಆದರೆ ತಾಳ್ಮೆಯಲ್ಲಿ ಭೂದೇವಿಯ ಹಾಗೆ, ದಾನದಲ್ಲಿ ಕುಬೇರನ ಹಾಗೆ ಇದ್ದಾನೆ. ಸತ್ಯದಲ್ಲಿ ಸಾಕ್ಷಾತ್ ಧರ್ಮದೇವತೆಯ ಅವತಾರವೇ ಸರಿ.

ಇಂತಹ ಸರ್ವಗುಣ ಭೂಷಣನಾದ ಶ್ರೀ ರಾಮನು ದಶರಥ ಮಹಾರಾಜನ ಹಿರಿಯ ಪುತ್ರ. ಅವನು ಜನಕರಾಜನ ಮಗಳಾದ ಸೀತಾದೇವಿಯನ್ನು ವಿವಾಹವಾದನು. ಶ್ರೀರಾಮನಿಗೆ ರಾಜ ಪಟ್ಟಾಭಿಷೇಕ ಆಗುವ ಸಮಯದಲ್ಲಿ ಅವನ ಚಿಕ್ಕಮ್ಮ ಕೈಕೇಯಿಗೆ ತನ್ನ ಮಗ ಭರತನೇ ರಾಜನಾಗಬೇಕು ಎಂಬ ದುರ್ಬುದ್ಧಿ ಹುಟ್ಟಿತು. ಅದಕ್ಕಾಗಿ ಅವಳು ಶ್ರೀ ರಾಮನು 14 ವರ್ಷ ವನವಾಸಕ್ಕೆ ಹೋಗಬೇಕೆಂದು ಅಪೇಕ್ಷಿಸಿದಳು. ಚಿಕ್ಕಮ್ಮನ ಇಚ್ಚಿಯಂತೆ ಶ್ರೀರಾಮನು ತನ್ನ ಪತ್ನಿಯೋಡನೆ ಕಾಡಿಗೆ ಹೋದನು. ಅವನು ಕಾಡಿನಲ್ಲಿದ್ದಾಗ ರಾವಣನೆಂಬ ರಾಕ್ಷಸನು ಸೀತೆಯನ್ನು ಮೋಸದಿಂದ ಅಪಹರಿಸಿದಳು. ಶ್ರೀರಾಮನು ಸೀತೆಯನ್ನು ಹುಡುಕುತ್ತಾ ಕಿಸ್ಕಿಂದಗೆ ಹೋಗಿ, ಸುಗ್ರೀವನೆಂಬ ಕಪಿ ವೀರನ ಸ್ನೇಹ ಬೆಳೆಸಿದನು. ಸುಕ್ರೀಭನ ಸಹಾಯದಿಂದ ರಾವಣನ ರಾಜ್ಯವಾದ ಲಂಕೆಯ ಮೇಲೆ ದಾಳಿ ಮಾಡಿದನು. ರಾವಣನನ್ನು ಕೊಂದು ಸೀತೆಯನ್ನು ಮರಳಿ ಪಡೆದನು. ಅರಣ್ಯ ವಾಸದ ಅವಧಿ ಮುಗಿದ ನಂತರ ಅಯೋಧ್ಯೆಗೆ ಹಿಂದಿರುಗಿ ಎಲ್ಲರ ಅಪೇಕ್ಷೆಯಂತೆ ಪಟ್ಟಾಭಿಷೇಕವನ್ನು ಸ್ವೀಕರಿಸಿದನು ಎಂದು ಶ್ರೀರಾಮನ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿದರು.

Follow Karunadu Today for more Stories like this

Click here to Join Our Whatsapp Group