ಭಾರತ, ಪ್ರಪಂಚದ ಅತಿ ದೊಡ್ಡ ಪ್ರಜಾ ಪ್ರಭುತ್ವ ಹೊಂದಿರುವ ದೇಶ. ಅನೇಕ ಧರ್ಮದ ಜನರನ್ನು ಹೊಂದಿರುವ ದೇಶ. ನೂರಾರು ಬಾಷೆಗಳಿಗೆ ನೆಲೆಯಾಗಿರುವ ಹಾಗು ಪ್ರಾಕೃತಿಕ ಸೊಬಗನ್ನು ಹೊಂದಿರುವ ಸುಂದರ ದೇಶ. ಈ ದೇಶಕ್ಕೆ ಸ್ವತಂತ್ರ ತಂದುಕೊಡಲು ಅದೆಷ್ಟೋ ಜನರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅನೇಕ ವರ್ಷಗಳ ಕಾಲ ಹೋರಾಡಿದ್ದಾರೆ. ಬ್ರಿಟೀಷರಿಂದ ದಬ್ಬಾಳಿಕೆಗೆ ಒಳಗಾಗಿದ್ದ ನಮ್ಮ ಭಾರತ ಮಾತೆ ಸಾಕಷ್ಟು ನೋವು ತಿಂದಿದ್ದಾಳೆ. ನಮ್ಮಲ್ಲಿದ್ದ ದೌರ್ಬಲ್ಯವನ್ನು ಕಂಡುಹಿಡಿದುಕೊಂಡು ಅದನ್ನು ಸುದುಪಯೋಗ ಪಡಿಸಿಕೊಂಡ ಬ್ರಿಟೀಷರು ನಮ್ಮ ದೇಶದಲ್ಲಿದ್ದ ರಾಜರುಗಳ ಮದ್ಯೆ ಜಗಳವಿಟ್ಟು ತಮ್ಮ ಅಧಿಕಾರ ಸ್ತಾಪಿಸಿದರು. ಯಾವಾಗ ಬ್ರಿಟೀಷರು ದಬ್ಬಾಳಿಕೆ ಮಾಡಲು ಶುರು ಮಾಡತೊಡಗಿದರೊ ಆಗಲೇ ಗೊತ್ತಾಗಿದ್ದು ನಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರಿಂದ ಈ ರೀತಿ ಗುಲಾಮರಾಗಿ ಬದುಕಬೇಕಾದಂತಹ ಪರಿಸ್ಥಿತಿ ಬಂತು ಎನ್ನುವುದು. ಈ ರೀತಿ ಕಂತ್ರಿ ಆಟವನ್ನು ಆಡಿ ನಮ್ಮ ದೇಶದ ಒಳಗೆ ಬಂದ ಬ್ರಿಟೀಷರು ಬರೋಬ್ಬರಿ 200 ವರ್ಷಗಳ ಕಾಲ ನಮ್ಮ ದೇಶವನ್ನು ಲೂಟಿ ಮಾಡಿ ಇಲ್ಲಿದ್ದ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದರು. ಕೊನೆಗೆ ಇನ್ನು ಹೀಗೆ ಬಿಟ್ಟರೆ ಅದೆಷ್ಟು ವರ್ಷಗಳ ಕಾಲ ಈ ಬ್ರಿಟೀಷರ ಕೈಯ್ಯಲ್ಲಿ ಇರಬೇಕಾಗುತ್ತದೋ ಎಂದು ಅರಿತ ನಮ್ಮ ದೇಶದ ಜನರು ನಿಧಾನವಾಗಿ ಒಗ್ಗೂಡಿ ಅವರ ವಿರುದ್ಧ ಹೋರಾಡಿದರು. ಸುಬಾಷ್ ಚಂದ್ರ ಬೋಸ್, ಭಗತ್ ಸಿಂಗ್, ಮಹಾತ್ಮ ಗಾಂಧೀಜಿ ಹೀಗೆ ಅನೇಕ ಪ್ರಮುಖರು ತಮ್ಮ ತಮ್ಮ ದಾರಿಯಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಕೊನೆಗೆ 1947 ರಲ್ಲಿ ನಮ್ಮ ದೇಶವನ್ನು ಸ್ವತಂತ್ರ ದೇಶವನ್ನಾಗಿ ಮಾಡಿದರು. ಆಗ ದೇಶದ ಜನರಿಗೆ ಒಗ್ಗಟ್ಟಿನಲ್ಲಿ ಎಷ್ಟು ಬಲವಿದೆ ಎಂದು ತಿಳಿಯಿತು. ಇನ್ನು ಮುಂದೆ ನಾವುಗಳು ಇದೇ ರೀತಿ ಒಗ್ಗಟ್ಟಿನಲ್ಲಿ ಇರಬೇಕು ಆಗ ಮತ್ತೆ ನಮ್ಮ ಮೇಲೆ ಯಾರೂ ದಬ್ಬಾಳಿಕೆ ನಡೆಸಲು ಬರುವುದಿಲ್ಲ ಎಂದು ದೇಶದ ಜನರ ಮನಸ್ಸಲ್ಲಿ ಮೂಡಿತ್ತು. ಆದರೆ ಈ ರೀತಿಯ ಮನೋಭಾವವು ಕೆಲ ಜನರ ಬಳಿ ಇರಲಿಲ್ಲ. ಸ್ವತಂತ್ರ ಸಿಕ್ಕ ಖುಷಿಯನ್ನು ಆಚರಿಸುವ ರಾಜ್ಯದ ರಾಜರು ಒಂದೆಡೆ ಇದ್ದರೆ ಇನ್ನೊಂದೆಡೆ ಭಾರತ ಎಂದು ಹೊಸದಾಗಿ ನಿರ್ಮಾಣವಾಗಿರುವ ದೇಶದ ಜೊತೆಗೆ ಸೇರದೆ ತಮ್ಮದೇ ಆದ ಹೊಸ ದೇಶವನ್ನು ಕಟ್ಟಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದ ರಾಜರುಗಳು ಇನ್ನೊಂದೆಡೆ. ಇಂದು ನಿಮಗೆ ಸ್ವತಂತ್ರ ಬಂದ ಮೇಲೆ ನಮ್ಮ ದೇಶದ ಜೊತೆ ಸೇರಲು ಹಿಂದೇಟು ಹಾಕಿದ್ದ ಆ ರಾಜ್ಯದ ಬಗ್ಗೆ ತಿಳಿಸಿಕೊಡುತ್ತೇನೆ.
1) ಕೇರಳ
ಭಾರತದ ಜೊತೆ ಸೇರಲು ಹಿಂದೇಟು ಹಾಕಿದ್ದ ಮೊಟ್ಟ ಮೊದಲ ರಾಜ್ಯ ಕೇರಳ. ಇದನ್ನು ಆಗ “ತ್ರಾವನಕೋರ್” ಎಂದು ಕರೆಯಲಾಗುತ್ತಿತ್ತು. ತನ್ನದೇ ಆದ “ತ್ರಾವನಕೋರ್” ಎನ್ನುವ ದೇಶ ಬೇಕು ಹಟ ಹಿಡಿದು ಕೂತಿದ್ದ ಅಲ್ಲಿನ ರಾಜರುಗಳ ಜೊತೆಗೆ ಭಾರತ ಸರ್ಕಾರ ಅನೇಕ ಬಾರಿ ಭೇಟಿ ಮಾಡಿ ಅವರ ಮನ ಒಲಿಸಲು ಯಶಸ್ವಿಯಾಯಿತು. ಇಂದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾದ ಕೇರಳವು ದೇಶದಲ್ಲಿಯೇ ಅತ್ಯಂತ ಸುಂದರ ರಾಜ್ಯವಾಗಿದೆ. ದೇವರ ನಾಡು ಎಂದು ಕರೆಯುವ ಈ ರಾಜ್ಯಕ್ಕೆ ಪ್ರತಿ ವರ್ಷ ಲಕ್ಷಾಂತರ ಜನರು ಬೇಟಿ ನೀಡುತ್ತಿದ್ದು ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ.
2) ಜೋಧ್ ಪುರ್
ಇಂದಿನ ರಾಜಸ್ತಾನ ರಾಜ್ಯದ ರಾಜಧಾನಿಯಾಗಿರುವ ಜೋಧ್ ಪುರ್ ಅನ್ನು 1947 ರಲ್ಲಿ ಮಹಾರಾಜ ಹನ್ವಂತ ಸಿಂಗ್ ಆಳುತ್ತಿದ್ದನು. ಭಾರತಕ್ಕೆ ಸ್ವತಂತ್ರ ಸಿಕ್ಕ ಮೇಲೆ ಭಾರತದ ಜೊತೆ ಸೇರಲು ಈತ ಹಿಂದೇಟು ಹಾಕಿದ್ದನು. ಇದಕ್ಕೆ ಕಾರಣ ತನ್ನ ನಗರಕ್ಕೆ ಹತ್ತಿರವಿದ್ದ ಪಾಕಿಸ್ತಾನದ ಜೊತೆ ಸೇರಲು ಈತ ಇಷ್ಟ ಪಡುತ್ತಿದ್ದ. ಪಾಕಿಸ್ತಾನವು ಈ ರಾಜನಿಗೆ ತಮ್ಮ ಹೊಸದಾದ ದೇಶದ ಜೊತೆ ಸೇರಲು ಅನೇಕ ಆಸೆಗಳನ್ನು ತೋರಿಸಿದ್ದರು ಆದರೆ ಭಾರತ ಸರ್ಕಾರವು ಈತನ ಮನ ಒಲಿಸುವಲ್ಲಿ ಯಶಸ್ವಿಯಾಯಿತು. ಕೊನೆಗೆ ಭಾರತದ ಜೊತೆ ಸೇರಿದ ಈತನು ರಾಜಸ್ಥಾನ ಎನ್ನುವ ರಾಜ್ಯದ ನಿರ್ಮಾಣಕ್ಕಾಗಿ ಸಹಿ ಹಾಕಿದ. ಇಂದು ನಮ್ಮ ದೇಶದಲ್ಲಿ ಎಲ್ಲಾದರು ಸುಂದರವಾದ ಕೋಟೆಗಳನ್ನು ನೋಡಬೇಕೆಂದರೆ ರಾಜಸ್ಥಾನಕ್ಕೆ ಬೇಟಿ ನೀಡುತ್ತಾರೆ. ಅಂದು ಈ ರಾಜನು ಅಕಸ್ಮಾತ್ ಪಾಕಿಸ್ತಾನದ ಜೊತೆ ಸೇರಿದಿದ್ದರೆ ಅಲ್ಲಿರುವ ಕೋಟೆಗಳು ಹಾಗು ಅನೇಕ ಸುಂದರವಾದ ದೇವಸ್ಥಾನಗಳು ದ್ವಂಸವಾಗುತ್ತಿದ್ದವು.
3) ಭೋಪಾಲ್
ಇಂದಿನ ಮಧ್ಯಪ್ರದೇಶ ರಾಜಧಾನಿಯಾದ ಭೋಪಾಲ್ ಅನ್ನು ಆಳುತ್ತಿದ್ದ ಮುಸ್ಲಿಂ ದೊರೆಯು ಅಂದು ಭಾರತದ ಜೊತೆ ಸೇರದೆ ಪಾಕಿಸ್ತಾನದ ಜೊತೆ ಸೇರಲು ಇಚ್ಚಿಸಿದ್ದ. ಆದರೆ ಅಲ್ಲಿನ ಜನರು ಭಾರತದ ಜೊತೆ ಸೇರಲು ಇಚ್ಚಿಸಿದ್ದನ್ನು ಕಂಡ ರಾಜನು ಕೊನೆಗೆ ಬೇರೆ ದಾರಿಯಿಲ್ಲದೆ ಭಾರತ ದೇಶದ ಅಂಗವಾಗಿ ಇರಲು ಭಾರತ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡ.
4) ಜುನಗಾಧ್
ಇಂದಿನ ಗುಜರಾತ್ ರಾಜ್ಯದಲ್ಲಿ ಇರುವ ಈ ನಗರವು ಅಂದು “ಜುನಗಾಧ್” ಎನ್ನುವ ರಾಜ್ಯವಾಗಿತ್ತು. ಇದನ್ನು ಬಬೈ ಎನ್ನುವ ಮುಸ್ಲಿಂ ರಾಜವಂಶಸ್ತರು ಆಳುತ್ತಿದ್ದರು. ಆಗಿನ ರಾಜನಾಗಿದ್ದ “ಮಹಮ್ಮದ್ ಮಹಬತ್ ಖಂಜಿ 2” ಭಾರತಕ್ಕೆ ಸ್ವತಂತ್ರ ಸಿಕ್ಕ ಮೇಲೆ ಭಾರತದ ಜೊತೆ ಸೇರದೆ ಪಾಕಿಸ್ತಾನದ ಜೊತೆ ಸೇರಲು ಅಲ್ಲಿನ ಸರ್ಕಾರದ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಆ ರಾಜನ ವಿರುದ್ಧ ಜುನಗಾಧ್ ರಾಜ್ಯದ ಜನರು ಚಳುವಳಿ ಪ್ರಾರಂಬಿಸಿದರು.ಇದನ್ನು ಕಂಡ ಭಾರತ ಸರ್ಕಾರವು ಅಲ್ಲಿನ ಜನರಿಗೆ ಯಾವ ದೇಶದ ಜೊತೆಗೆ ಸೇರಲು ತಮಗೆ ಇಷ್ಟವಿದೆ ಎನ್ನುವ ಅಭಿಪ್ರಾಯವನ್ನು ತಿಳಿಸಲು ಹೇಳಿದರು. ಆಗ ಶೇಖಡ 90 ರಷ್ಟು ಜನರು ಭಾರತದ ಜೊತೆ ಸೇರಲು ತಮಗಿಷ್ಟ ಎಂದು ಅಭಿಪ್ರಾಯ ತಿಳಿಸಿದರು. ಬೇರೆ ದಾರಿ ಇಲ್ಲದೆ ಆ ಮುಸ್ಲಿಂ ರಾಜನು ಭಾರತದ ಜೊತೆ ಸೇರಬೇಕಾಯಿತು. ಅಂದು ಆ ಜನರು ಚಳುವಳಿ ನಡೆಸದೆ ಇದ್ದಿದ್ದರೆ ಇಂದು ನಾವು ಗುಜರಾತ್ ಎನ್ನುವ ರಾಜವನ್ನು ಕಾಣುತ್ತಿರಲಿಲ್ಲ. ಈ ರೀತಿ ಗುಜರಾತ್ ಅನ್ನು ಕಳೆದುಕೊಂಡ ಮೇಲೆ ಭಾರತದ ಮೇಲೆ ದ್ವೇಷ ಸಾದಿಸಲು ಶುರು ಮಾಡಿದ ಪಾಕಿಸ್ತಾನವು ಈಗ ಕಾಶ್ಮೀರದಲ್ಲಿ ಇರುವ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಎಂದು ಬೊಬ್ಬೆ ಹೊಡೆಯುತ್ತಿದೆ.
5) ಹೈದರಾಬಾದ್
ಆಂಧ್ರಪ್ರದೇಶದ ರಾಜಧಾನಿಯಾಗಿರುವ ಹೈದರಾಬಾದನ್ನು 1947 ರಲ್ಲಿ ನಿಜಾಮರ ರಾಜ ಮನೆತನಕ್ಕೆ ಸೇರಿದ್ದ “ಒಸಮಾನ್ ಅಲಿ ಖಾನ್ ಮತ್ತು ಆಸಿಫ್ ಜಾಹ್” ಆಳುತ್ತಿದ್ದರು. ತಮಗೆ ಸ್ವಂತತ್ರ ದೇಶ ಬೇಕು ಎಂದು ಹಟ ಹಿಡಿದು ಕೂತಿದ್ದ ಇವರುಗಳ ಮನ ಒಲಿಸಲು ಭಾರತ ಸರ್ಕಾರ ಅದೆಷ್ಟೇ ಪ್ರಯತ್ನ ಪಟ್ಟರೂ ಕೂಡ ತಮ್ಮ ನಿಲುವನ್ನು ಇವರು ಬದಲಿಸಲಿಲ್ಲ. ಆಗ ಬೇರೆ ದಾರಿ ಇಲ್ಲದೆ ಆಗಿನ ಪ್ರಧಾನಿ ಜವಹಾರ್ ಲಾಲ್ ನೆಹರು ಅವರು ಭಾರತೀಯ ಸೇನೆಯ ಸಹಾಯದಿಂದ “ಆಪರೇಷನ್ ಪೋಲೋ” ಕೈಗೊಂಡು ಹೈದರಾಬಾದಿನ ಮೇಲೆ ದಾಳಿ ನಡೆಸಿದರು. ಈ ಭಯಂಕರ ದಾಳಿಯಲ್ಲಿ 30 ರಿಂದ 40 ಸಾವಿರ ಜನರು ಸತ್ತಿದ್ದರು. ಕೊನೆಗೆ ಸೋಲು ಒಪ್ಪಿಕೊಂಡ ಈ ನಿಜಾಮರು ಭಾರತ ಸರ್ಕಾರದ ಜೊತೆಗೆ ಸೇರುವುದರೊಂದಿಗೆ ಭಾರತ ದೇಶದ ಮೊಟ್ಟ ಮೊದಲ ರಾಜ್ಯ ಆಂಧ್ರಪ್ರದೇಶ ಆಯಿತು.
Follow Karunadu Today for more Interesting Facts & Stories.
Click here to Join Our Whatsapp Group
