1. ಪ್ರಪಂಚದಲ್ಲಿ ಇರುವ ಅನೇಕ ಜನರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ನೂರೆಂಟು ಬ್ಯೂಟಿ ಪ್ರಾಡಕ್ಟ್ ಗಳನ್ನು ಬಳಸುತ್ತಾರೆ. ಕೆಲವರು ಜಿಮ್ ಮತ್ತು ಯೋಗದಿಂದ ತಮ್ಮ ದೇಹದ ಫಿಟ್ನೆಸ್ ಅನ್ನು ಕಾಪಾಡಿಕೊಂಡರೆ ಮತ್ತೆ ಕೆಲವರು ಸಾಕಷ್ಟು ಹಣ ಖರ್ಚು ಮಾಡಿ ಸರ್ಜರಿ ಮಾಡಿಸಿಕೊಂಡರು ಕೂಡ ಸೌಂದರ್ಯವನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ನಮಗೆಲ್ಲ ತಿಳಿದ ಹಾಗೆ ಸಾಮಾಜಿಕ ಜಾಲತಾಣವಾದ “ಇನ್ಸ್ಟಾಗ್ರಾಂ” ನಲ್ಲಿ ತಮ್ಮ ಸುಂದರವಾಗಿರುವ ಫೋಟೋವನ್ನು ಹಾಕಿ ಪ್ರಸಿದ್ದಿಯಾಗಬೇಕೆಂದು ಪ್ರಪಂಚದಲ್ಲಿ ಇರುವ ಅನೇಕ ಜನರು ಇಷ್ಟ ಪಡುತ್ತಾರೆ. ಆದರೆ ಇದಕ್ಕೆಂದೆ ಕೆಲವರು ತಮ್ಮ ದೇಹವನ್ನೇ ಬದಲಿಸಿಕೊಳ್ಳುವಷ್ಟು ಹುಚ್ಚರಾಗಿದ್ದಾರೆ. ಅಂತಹವರಲ್ಲಿ “ಉಕ್ರೇನ್“ ದೇಶದ ಪ್ರಸಿದ್ದ ಮಾಡೆಲ್ “ವಲೇರಿಯಾ ಲುಕ್ಯಾನೋವಾ” ಕೂಡ ಒಬ್ಬಳು. ನಿಮಗೆಲ್ಲ ಪ್ರಸಿದ್ದ ಬಾರ್ಬಿ ಗೊಂಬೆಯ ಬಗ್ಗೆ ತಿಳಿದೇ ಇದೆ. ಪ್ರಪಂಚದಲ್ಲಿ ಇರುವ ಅತ್ಯಂತ ಸುಂದರವಾದ ಗೊಂಬೆಯಿದು. ಈ ಗೊಂಬೆಯ ಹಾಗೆಯೇ ತಾನು ಸುಂದರವಾಗಿ ಕಾಣಬೇಕೆಂದು ಈಕೆಯು ತನ್ನ ದೇಹ ಮತ್ತು ಕೂದಲಿನ ಬಣ್ಣವನ್ನು ಬದಲಾಯಿಸಿಕೊಂಡಿದ್ದಾಳೆ. ಈಕೆಯನ್ನು ಪ್ರಪಂಚದಲ್ಲಿ “ಹ್ಯೂಮನ್ ಬಾರ್ಬಿ ಗೊಂಬೆಯೆಂದು” ಕರೆಯಲಾಗುತ್ತಿದೆ. ಈಕೆಯ ಫೋಟೋವನ್ನು ಮೊದಲ ಬಾರಿಗೆ ನೋಡಿದಾಗ ಪ್ರಪಂಚವೆ ಅಚ್ಚರಿಗೊಂಡಿತ್ತು. ಏಕೆಂದರೆ ಈಕೆಯು ನೋಡಲು ಬಾರ್ಬಿ ಗೊಂಬೆಯ ತರಹವೇ ಇದ್ದಳು. ಈ ರೀತಿ ಹೇಗೆ ನೀವು ಬದಲಾವಣೆಯಾದಿರಿ ಎಂದು ಈಕೆಯನ್ನು ಕೇಳಿದರೆ ಯಾವುದೇ ಸರ್ಜರಿ ಮಾಡಿಸದೆ ಮಿತವಾದ ಆಹಾರವನ್ನು ಸೇವಿಸಿ ಈ ರೀತಿಯಾಗಿದ್ದೇನೆ ಎಂದು ಹೇಳಿದ್ದಾಳೆ. ಆದರೆ ಈಕೆಯ ಹಳೆಯ ಫೋಟೋಗಳನ್ನು ಈಗಿರುವ ಫೋಟೋಗಳಿಗೆ ಹೋಲಿಸಿ ನೋಡಿದರೆ ಸರ್ಜರಿ ಮಾಡಿಸದೆ ಈ ರೀತಿ ಆಗಲು ಸಾಧ್ಯವೇ ಇಲ್ಲ ಎಂದು ಜಗತ್ತು ಮಾತನಾಡಿಕೊಳ್ಳುತ್ತಿದೆ. ಅದೇನೇ ಇರಲಿ ನಿಜವಾದ ಗೊಂಬೆಯ ಹಾಗೆ ಕಾಣಲು ಈಕೆ ಮಾಡಿರುವ ಕಾರ್ಯಕ್ಕೆ ಮೆಚ್ಚಲೇಬೇಕು.

2. ನೀವೆಲ್ಲ ಆಕಾಶದಲ್ಲಿ ಹಕ್ಕಿಗಳು ಹಾರಡುವುದನ್ನು ನೋಡಿದ್ದೀರಿ. ಆದರೆ ಹಕ್ಕಿಗಳು ಗುಂಪಿನಲ್ಲಿ ಹಾರುವ ವೇಳೆ “V” ಆಕಾರದಲ್ಲಿಯೇ ಏಕೆ ಹಾರುತ್ತವೆ ಎಂದು ಒಮ್ಮೆಯಾದರು ನಿಮಗೆ ಅನ್ನಿಸಿದೆಯೇ? ಇದಕ್ಕೆ ನಿಮಗೆ ಉತ್ತರ ಗೊತ್ತಿಲ್ಲವೆಂದರೆ ಈಗ ತಿಳಿಸುತ್ತೇನೆ ಕೇಳಿ. “V” ಆಕಾರದಲ್ಲಿ ಹಾರುತ್ತಿರುವ ಹಕ್ಕಿಗಳನ್ನು ಒಮ್ಮೆ ಸರಿಯಾಗಿ ಗಮನಿಸಿ, ಎಲ್ಲರಿಗಿಂತ ಮುಂದೆ ಇರುವ ಹಕ್ಕಿಯು ಆ ಗುಂಪಿನ ನಾಯಕನ ಪಟ್ಟ ಹೊತ್ತಿರುತ್ತದೆ. ಈ ನಾಯಕ ಹಕ್ಕಿಯು ರೆಕ್ಕೆ ಬಡಿಯುತ್ತ ಗಾಳಿಯ ತೀವ್ರ ಒತ್ತಡವನ್ನು ಕೆಳಗೆ ತಳ್ಳುತ್ತ ಮುಂದೆ ಇರುವ ದಾರಿಯನ್ನು ತನ್ನ ಹಕ್ಕಿಯ ಗುಂಪಿಗೆ ಸುಗಮವಾಗಿ ಮಾಡಿಕೊಡುತ್ತದೆ. ಇದರಿಂದ ನಾಯಕ ಹಕ್ಕಿಯನ್ನು ಹಿಂಬಾಲಿಸುತ್ತಿರುವ ಉಳಿದ ಹಕ್ಕಿಗಳಿಗೆ ಹಾರಲು ಸುಲಭ ದಾರಿಯಾಗುತ್ತದೆ. ಹೀಗೆ ಹಾರುತ್ತ ಸಾಗುವಾಗ ದಾರಿಯಲ್ಲಿ ನಾಯಕ ಹಕ್ಕಿಗೆ ಸುಸ್ತಾದಾಗ ಅದರ ಜಾಗಕ್ಕೆ ಗುಂಪಿನಲ್ಲಿರುವ ಮತ್ತೊಂದು ಹಕ್ಕಿಯು ಹೋಗುತ್ತದೆ ಮತ್ತು ನಾಯಕ ಹಕ್ಕಿಯ ಜವಾಬ್ದಾರಿಯನ್ನು ತಾನು ತೆಗೆದುಕೊಳ್ಳುತ್ತದೆ. ಹೀಗೆ ಹಾರುತ್ತ ವಲಸೆ ಹೋಗುವ ಹಕ್ಕಿಗಳು ತಮ್ಮ ಗುರಿಯನ್ನು ತಲುಪುವವರೆಗು ನಾಯಕನ ಸ್ಥಾನ ಬದಲಾಯಿಸಿಕೊಳ್ಳುತ್ತ ಹೋಗುತ್ತವೆ.

3. ನಮಗೆಲ್ಲ ತಿಳಿದ ಹಾಗೆ ನಮ್ಮ ಭೂಮಿಯ ಮೇಲಿರುವ ಅತ್ಯಂತ ಎತ್ತರದ ಪರ್ವತವೆಂದರೆ ಅದು “ಮೌಂಟ್ ಎವರೆಸ್ಟ್”.ಆದರೆ ನಮ್ಮ ಸೌರ ಮಂಡಲದಲ್ಲಿರುವ ಅತ್ಯಂತ ಎತ್ತರದ ಪರ್ವತ ಯಾವುದು ಗೊತ್ತೆ? ಅದು ಮಂಗಳ ಗ್ರಹದ ಮೇಲಿರುವ “ಒಲಂಪಸ್ ಮಾನ್ಸ್”. ಇದು ಮೌಂಟ್ ಎವರೆಸ್ಟ್ ಪರ್ವತಕ್ಕಿಂತ 3 ಪಟ್ಟು ಎತ್ತರವಿದೆ. ಇದು ಒಂದು ಜ್ವಾಲಾಮುಖಿ ಪರ್ವತವಾಗಿದ್ದು ನೆಲದಿಂದ ಬರೋಬ್ಬರಿ 25 ಕಿಲೋಮೀಟರ್ ಎತ್ತರವಿದೆ.

4. ತಂತ್ರಜ್ಞಾದಲ್ಲಿ ಅದೆಷ್ಟೇ ಬದಲಾವಣೆಗಳು ಆದರೂ ಕೂಡ ನಮ್ಮ ಜನರು ನ್ಯೂಸ್ ಪೇಪರ್ ಗಳನ್ನು ಓದುವುದನ್ನು ಮಾತ್ರ ಇನ್ನೂ ನಿಲ್ಲಿಸಿಲ್ಲ. ಯಾವ ನ್ಯೂಸ್ ಪೇಪರ್ ಗಳನ್ನು ನೀವು ಓದುತ್ತೀರೊ ಅದರಲ್ಲಿ ಎಂದಾದರೂ 4 ವಿವಿಧ ಬಣ್ಣದ ಚಿಹ್ನೆಗಳು ಇರುವುದನ್ನು ಎಂದಾದರು ಗಮನಿಸಿದ್ದೀರ? ಅಕಸ್ಮಾತ್ ನೀವು ಗಮನಿಸಿದ್ದು ಆ ಚಿಹ್ನೆಗಳ ಅರ್ಥವೇನು ಎಂದು ನಿಮಗೆ ಅನ್ನಿಸಿದ್ದರೆ ಅದಕ್ಕೆ ಉತ್ತರ ಹೇಳುವೆ ಕೇಳಿ. ನಮಗೆಲ್ಲ ತಿಳಿದ ಹಾಗೆ ಕೆಂಪು, ಹಳದಿ ಮತ್ತು ನೀಲಿ ಬಣ್ಣಗಳು ಕೂಡಿಕೊಂಡರೆ ಮಾತ್ರ ಉಳಿದ ಬಣ್ಣಗಳು ಹುಟ್ಟಿಕೊಳ್ಳುವುದು. ನ್ಯೂಸ್ ಪೇಪರ್ ಗಳಲ್ಲಿ ಪ್ರಿಂಟ್ ಆಗಿ ಬರುವ ಫೋಟೋಗಳನ್ನು ಈ ಪ್ರಮುಖ 3 ಬಣ್ಣಗಳಿಂದಲೇ ಪ್ರಿಂಟ್ ಮಾಡುವುದು. ಇನ್ನು ಕಪ್ಪು ಬಣ್ಣವನ್ನು ನ್ಯೂಸ್ ಪೇಪರ್ ಗಳಲ್ಲಿ ಅಕ್ಷರಗಳ ಪ್ರಿಂಟ್ ಮಾಡಲು ಬಳಸಲಾಗುತ್ತದೆ. ಈ 4 ಬಣ್ಣಗಳನ್ನು ಮಿಶ್ರಣ ಮಾಡಿ ನ್ಯೂಸ್ ಪೇಪರ್ ಸಿದ್ದಗೊಳಿಸಲಾಗುತ್ತದೆ.

5. ಭೂಮಿಯ ಮೇಲೆ ಅದೆಷ್ಟೋ ಜಾಗಗಳಿದ್ದು ಅಲ್ಲಿ ಮನುಷ್ಯನಿಗೆ ಪ್ರವೇಶವಿಲ್ಲ. ಅಂತಹ ಅನೇಕ ವಿಸ್ಮಯ ಸ್ಥಳಗಳಲ್ಲಿ ಬ್ರೆಜಿಲ್ ದೇಶದ “Sao Paulo” ನಗರದ ಹತ್ತಿರವಿರುವ ಒಂದು ದ್ವೀಪ. ಈ ದ್ವೀಪಕ್ಕೆ ಹೋದವರು ಇದುವರೆಗೂ ಯಾರು ಜೀವಂತವಾಗಿ ಮರಳಿ ಬಂದಿಲ್ಲ. ಏಕೆಂದರೆ ಈ ದ್ವೀಪದಲ್ಲಿ ವಿಷಕಾರಿ ಹಾವುಗಳೇ ತುಂಬಿಕೊಂಡಿವೆ. ಈ ದ್ವೀಪವನ್ನು “ಹಾವುಗಳ ದ್ವೀಪ” ಎಂದು ಕೂಡ ಕರೆಯುತ್ತಾರೆ. ಇಲ್ಲಿಗೆ ಅನೇಕ ಜನರು ಭೇಟಿ ಕೊಟ್ಟು ಸತ್ತಿದ್ದರಿಂದ ಈ ದ್ವೀಪಕ್ಕೆ ಮನುಷ್ಯರಿಗೆ ಹೋಗಲು ಅಲ್ಲಿನ ಸರ್ಕಾರ ನಿಷೇಧ ಹೇರಿದೆ. ಈ ದ್ವೀಪದಲ್ಲಿ ಅದೆಂತಹ ವಿಷಕಾರಿ ಹಾವುಗಳು ಇವೆಯೆಂದರೆ ಪ್ರಪಂಚದಲ್ಲಿಯೇ ಅತ್ಯಂತ ವಿಷಕಾರಿ ಹಾವಾದ “ಗೋಲ್ಡನ್ ಲೆನ್ಸ್ ಹೆಡ್” ಹಾವು ಕೂಡ ಇದೇ ದ್ವೀಪದಲ್ಲಿ ಇರುವುದು. ಈ ಹಾವಿನ 1 ಗ್ರಾಂ ವಿಷ 50 ಜನರನ್ನು ಕೊಲ್ಲುವಷ್ಟು ಸಾಮರ್ಥ್ಯ ಹೊಂದಿದೆ.

ಈ ರೀತಿಯ ಹೆಚ್ಚಿನ ವಿಸ್ಮಯ ಸಂಗತಿಗಳಿಗೆ ಇಂದೇ ಕರುನಾಡು Today ಅನುಸರಿಸಿ

ನಮ್ಮ Whatsapp ಗ್ರೂಪ್‌ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ ​