ಭಾರತವು ಸಂಸ್ಕೃತಿ ಸಂಪ್ರದಾಯಕ್ಕೆ ಹೇಗೆ ಹೆಸರುವಾಸಿದೆ, ಅದೇ ರೀತಿ ಭಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಗೆ ಇಡೀ ಪ್ರಪಂಚಕ್ಕೆ ಸ್ಪೂರ್ತಿದಾಯಕವಾಗಿದೆ. ಅಪಾರವಾದ ಭಗವಂತನ ಮೇಲೆ ಭಕ್ತಿ ಇಟ್ಟಿರುವ ಈ ಪುಣ್ಯಭೂಮಿಯಲ್ಲಿ ದಿನೇ ದಿನೇ ವಿಚಿತ್ರ ಹಾಗೂ ಅಚ್ಚರಿ ಉಂಟುಮಾಡುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿವೆ. ಅದು ಪ್ರಭು ಶ್ರೀರಾಮಚಂದ್ರನ ಭವ್ಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಹಿಂದೂ ದೇವರುಗಳಲ್ಲಿ ಹಿಂದುತ್ವದಲ್ಲಿ ಅಪಾರವಾದ ನಂಬಿಕೆ ಹಾಗೂ ಭಕ್ತಿ ಕಾಣಿಸುತ್ತಿದೆ. 2010ರ ಬಳಿಕ ಹಲವಾರು ರೀತಿಯ ವಿಸ್ಮಯಗಳು ಕಂಡುಬರುತ್ತಿದ್ದು ಹೊಸ ಹೊಸ ಜಾಗಗಳಲ್ಲಿ ಪುರಾತನ ದೇವಸ್ಥಾನಗಳು ಮಂಟಪಗಳು ದೇವರ ವಿಗ್ರಹಗಳು ಹಾಗೂ ಶಾಸನಗಳು, ಮತ್ತು ಅಪಾರವಾದ ಸಂಪತ್ತು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇಂತಹ ಒಂದು ಘಟನೆ ತೆಲಂಗಾಣ ರಾಜ್ಯದಲ್ಲಿ ಆಗಿರುವುದು ಅಚ್ಚರಿ ಉಂಟು ಮಾಡಿದೆ
ಪ್ರತಿದಿನ ದಿನಗೂಲಿ ಕೆಲಸಗಾರರನ್ನ ಕರೆಸಿಕೊಂಡು ಕೆಲಸ ಮಾಡಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದು ಹೊಲಗಳಲ್ಲಿ , ಗದ್ದೆಗಳಲ್ಲಿ,ಇನ್ನು ಬೇರೆ ಬೇರೆ ಕೆಲಸಗಳಲ್ಲಿ ಕಾರ್ಮಿಕರನ್ನ ತೊಡಗಿಸಿಕೊಳ್ಳುತ್ತಾರೆ, ಅದೇ ರೀತಿ ಇಂತಹದೊಂದು ಘಟನೆ ತೆಲಂಗಾಣದ ಜಗಿತ್ಯಾಲ ಜಿಲ್ಲೆಯಲ್ಲಿ ನಡೆದಿದೆ. ಕೆಲಸಗಾರರು ಗದ್ದೆಯಲ್ಲಿ ಗುಂಡಿಯನ್ನು ತೆಗೆಯುತ್ತಿರುವಾಗ ಅವರಿಗೆ ಅಚ್ಚರಿ ಉಂಟು ಮಾಡುವಂತಹ ಪುರಾತನ ವಿಗ್ರಹಗಳು ಪತ್ತೆಯಾಗಿವೆ. ಎಂಡಪಲ್ಲಿ ಮಂಡಲದ ಚರ್ಲಪಲ್ಲಿ ಗ್ರಾಮದಲ್ಲಿ ನಡೆದ್ದಿರುವಂತಹ ಈ ಘಟನೆ ಪ್ರತಿಯೊಬ್ಬರನ್ನು ಅಚ್ಚರಿ ಉಂಟು ಮಾಡಿದೆ. ಈ ವಿಷಯವನ್ನ ತಿಳಿದು ಗ್ರಾಮದಲ್ಲಿರುವ ಪ್ರತಿಯೊಬ್ಬರು ಕೂಡ ವಿಗ್ರಹಗಳು ಇರುವ ಜಾಗಕ್ಕೆ ಬಂದು ಸೇರಿದ್ದರು, ಆ ವಿಗ್ರಹಗಳಿಗೆ ಅರಿಶಿನ ಕುಂಕುಮವನ್ನು ಹಚ್ಚಿ ಪೂಜಿಸಿದ್ದಾರೆ. ನೆರೆದಿರುವ ಜನಗಳ ಮಧ್ಯೆ ಒಬ್ಬ ಮಹಿಳೆ ಅಪಾರ ಭಕ್ತಿಗೆ ಒಳಗಾಗಿ ಸ್ವಲ್ಪ ದಿನಗಳ ಕಾಲ ಅಲ್ಲಿಯ ಉಳಿದು ಊರ ಜನರಿಗೆ ಇಲ್ಲೊಂದು ದೇವಸ್ಥಾನವನ್ನು ಕಟ್ಟಿಸಿದರೆ ನಿಮಗೆ ಒಳ್ಳೆಯದಾಗುತ್ತೆ ಎಂದು ಹೇಳಿದರು.ಸರಿ ಸುಮಾರು 15 ವಿಗ್ರಹಗಳು ಪತ್ತೆಯಾಗಿದ್ದು, ಅವುಗಳಲ್ಲಿ ಆಂಜನೇಯ ಸ್ವಾಮಿ, ರಾಜೇಶ್ವರಿ, ಶಿವಲಿಂಗಗಳು, ಪೋಚಮ್ಮ ಇನ್ನಿತರ ವಿಗ್ರಹಗಳು ಬೆಳಕಿಗೆ ಬಂದಿವೆ.
ಈ ವಿಷಯ ತಿಳಿದು ಪುರಾತತ್ವ ಇಲಾಖೆಯು ಆ ಜಾಗಕ್ಕೆ ಬಂದು ಸಂಶೋಧನೆಯನ್ನು ನಡೆಸಿದ್ದಾರೆ. ವಿಗ್ರಹಗಳು ಈ ಜಾಗಕ್ಕೆ ಹೇಗೆ ಬಂದವು, ಎಷ್ಟು ವರ್ಷ ಹಳೆಯದು, ಯಾವ ರಾಜರ ಕಾಲದ್ದು ಎಂಬುದನೆಲ್ಲ ಪತ್ತೆಹಚ್ಚಲಿದ್ದಾರೆ.
Follow Karunadu Today for more Spiritual Information’s like this
Click here to Join Our Whatsapp Group
