"ಸಂಗತಿಗಳು"

ಈ ಜಗತ್ತಿಗೆ ಬೆಳಕು ನೀಡುತ್ತಿರುವ ಸೂರ್ಯ ಚಂದ್ರರು ತಮ್ಮ ಸುಂದರವಾದ ಪ್ರತಿ ಬಿಂಬಗಳಿಂದ ದಿನನಿತ್ಯ ಅಚ್ಚರಿಗೊಳಿಸುತ್ತವೆ . ಅದೇ ರೀತಿ ಈ ಸೌರಮಂಡಳದಲ್ಲಿ ಭೂಮಿಯು ಕೂಡ ಒಂದು ಸುಂದರವಾದ ಗ್ರಹ. ನಮ್ಮ ಭೂಮಿಯ ಮೇಲೆ ಸರಿ ಸುಮಾರು 195 ದೇಶಗಳಿವೆ ಆದರೆ ಈ ಎಲ್ಲಾ ದೇಶಗಳಲ್ಲಿ ಹಗಲು ರಾತ್ರಿ ಅನ್ನೋದು ಸಮಾನವಾಗಿ ಬರುತ್ತಿರುತ್ತವೆ. ಆದರೆ ಕೆಲವು ದೇಶಗಳಿದ್ದು ಆದೇಶಗಳಲ್ಲಿ ರಾತ್ರಿ ಅನ್ನುವುದು ಇರುವುದಿಲ್ಲ ಅನ್ನೋದು ನಿಮಗೆ ಗೊತ್ತಾ. ಹೌದು ನಮ್ಮ ಭಾರತ ದೇಶದಲ್ಲಾದರೆ 12 ಗಂಟೆ ಹಗಲು ಹಾಗೂ 12 ಗಂಟೆ ರಾತ್ರಿ ಇರುತ್ತದೆ ಅದು ಪ್ರತಿಯೊಬ್ಬರಿಗೆ ತಿಳಿದಿರುವ ತರ ವಿಷಯ ಆದರೆ ಕೆಲವು ಪ್ರದೇಶಗಳಿದ್ದು ಆ ಪ್ರದೇಶಗಳಲ್ಲಿ ಹಗಲು ರಾತ್ರಿ ಅನ್ನೋದು ಸಮಾನತೆಯಿಂದ ಇರುವುದಿಲ್ಲ ಅಲ್ಲಿಯ ಜನರ ದಿನಾಚರಣೆಯೂ ಕೂಡ ವಿಚಿತ್ರವಾಗಿರುತ್ತದೆ. ಪ್ರತಿಯೊಬ್ಬರಿಗೂ ಕೂಡ ಈ ವಿಷಯದ ಕುರಿತು ಪ್ರಶ್ನೆ ಹುಟ್ಟುವುದು ಸಹಜ, ಭೂಮಿ ಮೇಲೆ ಇರುವಂತಹ ಶೇಕಡವಾರು 95 ರಷ್ಟು ದೇಶಗಳಲ್ಲಿ ಹಗಲು ರಾತ್ರಿ ಅನ್ನೋದು ಸಮಾನವಾಗಿರುತ್ತದೆ ಇನ್ನು 5% ದೇಶಗಳಲ್ಲಿ ಹಗಲು ರಾತ್ರಿ ಅನ್ನೋದು ವಿಭಿನ್ನವಾಗಿರುತ್ತದೆ ಕೆಲವೊಮ್ಮೆ ವಾರದವರೆಗೆ ತಿಂಗಳದ ವರೆಗೆ ರಾತ್ರಿ ಅನ್ನುವುದೇ ಕಣ್ಮರೆಯಾಗಿರುತ್ತದೆ. ಇಂದು ನಾವು ಅಂತಹ ದೇಶಗಳ ಕುರಿತು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.

1) ಅಲಾಸ್ಕಾ (Alaska)

interesting facts

ಅಲಸ್ಕ ಅಮೆರಿಕದಲ್ಲಿ ಇರುವಂತಹ ಅತಿ ದೊಡ್ಡ ರಾಜ್ಯ ಆಗಿರು ಈ ಅಲಾಸ್ಕಾ ಪ್ರದೇಶವು ಅಮೆರಿಕದ ಭೂ ಭಾಗ ಆಗುವುದಕ್ಕಿಂತ ಮುಂಚೆ ರಷ್ಯಾ ದೇಶಕ್ಕೆ ಸಂಬಂಧ ಪಟ್ಟ ಪ್ರದೇಶವಾಗಿತ್ತು. ಆದರೆ ಈ ಪ್ರದೇಶವನ್ನ ಅಮೆರಿಕ ದೇಶವು ರಷ್ಯಾ ದೇಶದಿಂದ ಹಲವು ದಶಕಗಳ ಹಿಂದೆ ಖರೀದಿ ಮಾಡುತ್ತದೆ ಈ ಅಲಸ್ಕ ಪ್ರದೇಶದಲ್ಲಿ ಮಂಜು ಸಾಕಷ್ಟು ಪ್ರಮಾಣದಲ್ಲಿ ಬೀಳುತ್ತಿರುತ್ತದೆ. ಈ ದೇಶದ ಇನ್ನೊಂದು ವಿಶೇಷ ಸಂಗತಿ ಏನಪ್ಪಾ ಅಂದರೆ ಮೇ 15 ರಿಂದ ಜುಲೈ 15 ರವರೆಗೆ ರಾತ್ರಿಯನ್ನು ಇರುವುದಿಲ್ಲ ಪ್ರತಿನಿತ್ಯ ಕೂಡ ಸೂರ್ಯನಿಂದಲೇ ಆವರಿಸಿಕೊಂಡಿರುತ್ತದೆ. ಈ ದೇಶದಲ್ಲಿ ರಾಜ್ಯ ಹನ್ನೆರಡು ಗಂಟೆ 30 ನಿಮಿಷಕ್ಕೆ ಸೂರ್ಯಸ್ತ ಆಗುತ್ತದೆ ಮತ್ತು 50 ನಿಮಿಷಗಳ ನಂತರ ಬೆಳಕಾಗುತ್ತದೆ. 50 ನಿಮಿಷಗಳು ಕತ್ತಲಾದರೂ ಕೂಡ ಅದು ಬೆಳಕಿನ ರೀತಿಯಲ್ಲಿ ಇರುತ್ತದೆ.

2) ಕೆನಡಾ (Canada)

canada

ಕೆನಡಾ ದೇಶ ಪ್ರಪಂಚದಲ್ಲಿರುವ ಎರಡನೇ ಅತಿ ದೊಡ್ಡ ದೇಶವಾಗಿರುವ ಕೆನಡಾ ದೇಶವು ಅತಿ ಹೆಚ್ಚು ಭೂ ಪ್ರದೇಶವು ಮಂಜಿನಿಂದ ಆವರಿಸಿಕೊಂಡಿರುತ್ತದೆ. ಈ ದೇಶದಲ್ಲಿ ಸೂರ್ಯೋದಯ ಕೂಡ ವಿಚಿತ್ರವಾಗಿರುತ್ತದೆ ಏಕೆಂದರೆ, ಕೇರಳ ದೇಶದಲ್ಲಿರುವ ಉತ್ತರ ಪಶ್ಚಿಮ ಭಾಗದಲ್ಲಿ ಸರಿ ಸುಮಾರು 51 ದಿನಗಳ ಕಾಲ ಬೆಳಕಿನಿಂದ ಕೂಡಿರುತ್ತದೆ.

3) ಫಿನ್ಲ್ಯಾಂಡ್ (Finland)

finland

ಫಿನ್ಲ್ಯಾಂಡ್ ಭೂಮಿ ಮೇಲೆ ಇರುವಂತಹ ಸುಂದರವಾದ ದೇಶಗಳಲ್ಲಿ ಈ ಫಿನ್ಲ್ಯಾಂಡ್ ದೇಶ ಕೂಡ ಒಂದು. ಅತಿಯಾದ ಕಾಡುಗಳು ಸುಂದರವಾದ ಜಲಪಾತಗಳು ಮತ್ತು ಹಿಮದಿಂದ ಕೂಡಿರುವ ಈ ಪ್ರದೇಶವು ಶುದ್ದವಾದ ವಾತಾವರಣ ಮತ್ತು ಆರೋಗ್ಯಕರ ಆಹಾರವನ್ನು ಒದಗಿಸಿಕೊಡುವ ಅದ್ಭುತವಾದ ಪ್ರವಾಸಿ ತಾಣವಾಗಿದೆ. ಈ ದೇಶದಲ್ಲಿ ಸರಿ ಸುಮಾರು 51 ದಿನಗಳ ಕಾಲ ಬೆಳಕಿನಿಂದ ಕೂಡಿರುತ್ತದೆ ಮತ್ತು ರಾತ್ರಿ ಅನ್ನೋದು ಕೂಡ ಬೆಳಕಿನ ರೀತಿಯೇ ಇರುತ್ತದೆ ಒಟ್ಟಾರೆಯಾಗಿ ಬೇಸಿಗೆ ಸಮಯದಲ್ಲಿ ಪ್ರವಾಸಿಗರು ಹೆಚ್ಚಾಗಿ ಬೇಟೆ ಹೇಳುವ ಸ್ಥಳವಾಗಿದೆ.

4) ಐಸ್‌ಲ್ಯಾಂಡ್ ( Iceland)

iceland

ಐಸ್ಲ್ಯಾಂಡ್ ಯುರೋಪ್ ದೇಶದ ಉತ್ತರ ಭಾಗದಲ್ಲಿ ಕಂಡುಬರುವ ದೇಶವು ಅತಿ ಕಮ್ಮಿ ಜನಸಂಖ್ಯೆ ಹೊಂದಿರುವಂತಹ ಪ್ರದೇಶವಾಗಿದೆ. ಈ ದೇಶದಲ್ಲಿ ಮೇ 15 ರಿಂದ ಜುಲೈ 15 ರವರೆಗೆ ಸೂರ್ಯನಿಂದ ಆವರಿತಗೊಂಡಿರುತ್ತದೆ ಮತ್ತು ಈ ಪ್ರದೇಶದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಬೃಹತ್ ಗಾತ್ರದ ಹಿಮ ಪರ್ವತಗಳು ಜಲಪಾತಗಳು ಮತ್ತು ಜ್ವಾಲಾಮುಖಿಗಳಿಂದ ಉಂಟಾಗಿರುವ ನೈಸರ್ಗಿಕ ದೃಶ್ಯಗಳು ಹೆಚ್ಚಾಗಿ ಕಂಡುಬರುತ್ತವೆ ಹಾಗೆ ಅತಿ ಹೆಚ್ಚು ಜನರು ಕೂಡ ಬೇಸಿಗೆ ಸಮಯದಲ್ಲಿ ಭೇಟಿ ನೀಡುವ ಪ್ರವಾಸಿ ತಾಣವಾಗಿದೆ

5) ನಾರ್ವೆ (Narway)

Narway

ನಾರ್ವೆ, ಮಧ್ಯರಾತ್ರಿಯ ಸೂರ್ಯವನ್ನು ಅನುಭವಿಸುವ ದೇಶವಾಗಿದೆ. ಇಲ್ಲಿನ ವಿಶೇಷತೆಯಾದ ಮಧ್ಯರಾತ್ರಿಯ ಸೂರ್ಯವು, ಬೇಸಿಗೆ ಸಮಯದಲ್ಲಿ, 24 ಗಂಟೆಗಳ ಕಾಲ ಬೆಳಕು ನೀಡುತ್ತದೆ.

ಜೂನ್ ತಿಂಗಳಲ್ಲಿ, ನಾರ್ವೆಯ ಉತ್ತರ ಭಾಗದಲ್ಲಿ ಸೂರ್ಯ ಮುಂಜಾನೆ 3 ಗಂಟೆಗೆ ಉದಯವಾಗುತ್ತದೆ ಮತ್ತು ರಾತ್ರಿ 12 ಗಂಟೆಯ ನಂತರವೂ ಮುಚ್ಚುವುದಿಲ್ಲ. ಇದು ಪ್ರವಾಸಿಗಳಿಗೆ ಅಪೂರ್ವ ಅನುಭವವನ್ನು ನೀಡುತ್ತದೆ.

ನಾರ್ವೆಯ ಅಲ್ಟೆನ್‌ಡಾಲ್, ಲೋಫೋಟೆನ್ ಮತ್ತು ನಾರ್ವೆ ನದಿಯ ಹತ್ತಿರದ ಪ್ರದೇಶಗಳು, ಮಧ್ಯರಾತ್ರಿಯ ಸೂರ್ಯವನ್ನು ನೋಡಲು ಅತ್ಯುತ್ತಮ ಸ್ಥಳಗಳಾಗಿವೆ.

6) ಸ್ವೀಡನ್ (Sweden)

sweden

ಸ್ವೀಡನ್, ಸೂರ್ಯನ ಬೆಳಕಿನ ಬದಲಾವಣೆಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿ, ಬೇಸಿಗೆ ಸಮಯದಲ್ಲಿ, ಸೂರ್ಯವು ಮಧ್ಯರಾತ್ರಿ 12 ಗಂಟೆಯ ನಂತರವೂ ಬೆಳಕು ನೀಡುತ್ತದೆ.

ಡಾಲರ್‌ನೆ ಮತ್ತು ಉಪ್ಸಾಲಾ ನಗರಗಳು, ಸ್ವೀಡನಲ್ಲಿನ ಸೂರ್ಯನ ಬೆಳಕಿನ ವೈಶಿಷ್ಟ್ಯವನ್ನು ಅನುಭವಿಸಲು ಉತ್ತಮ ಸ್ಥಳಗಳಾಗಿವೆ. ಇಲ್ಲಿ, ಪ್ರಕೃತಿಯ ವೈವಿಧ್ಯ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಅನುಭವಿಸಬಹುದು.

ಸ್ವೀಡನಲ್ಲಿನ ಬೆಳಕು ಮತ್ತು ರಾತ್ರಿ ಸಮಯದ ಬದಲಾವಣೆಗಳು, ಸ್ಥಳೀಯ ಜನರ ಜೀವನಶೈಲಿಗೆ ಮಹತ್ವಪೂರ್ಣ ಪರಿಣಾಮವನ್ನು ಬೀರುತ್ತವೆ.

Follow Karunadu Today for more Top ten like this

Click here to Join Our Whatsapp Group