ಮನುಷ್ಯ ಎನ್ನುವ ಪ್ರಾಣಿಯೇ ಹಾಗೆ, ಈ ಗ್ರಹದ ಮೇಲೆ ಎಲ್ಲಾ ಜೀವಿಗಳ ಮೇಲೆ ಹಾಗು ಪ್ರಕೃತಿಯ ಮೇಲೆ ದಬ್ಬಾಳಿಕೆ ನಡೆಸುತ್ತಲೇ ಇರುವನು. ಪ್ರಗತಿ ಎನ್ನುವ ಹೆಸರಿನಲ್ಲಿ ಅದೆಷ್ಟೋ ಮರಗಳನ್ನು ಕಡಿದು ಹಾಕಿ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಉಸಿರಾಡಲು ಆಮ್ಲಜನಕವಿಲ್ಲದೆ ತಾನೂ ಸಾಯುವುದಲ್ಲದೆ ಭೂಮಿಯ ಮೇಲೆ ವಾಸವಿರುವ ಅನೇಕ ಜೀವಿಗಳ ಪ್ರಾಣವನ್ನು ತೆಗೆದುಕೊಂಡು ಹೋಗುತ್ತಾನೆ. ಒಂದೆಡೆ ಈ ರೀತಿ ಪ್ರಕೃತಿಯನ್ನು ನಾಶ ಮಾಡುತ್ತಿರುವ ಮನುಷ್ಯರು ಗುಂಪು ಇದ್ದರೆ ಇನ್ನೊಂದೆಡೆ ಅದನ್ನು ಉಳಿಸಲು ಶ್ರಮ ಪಡುತ್ತಿರುವ ಮತ್ತೊಂದು ಗುಂಪಿದೆ. ನಮಗೆಲ್ಲ ಗೊತ್ತಿರುವ ಹಾಗೆ ಪ್ರಪಂಚದ ಕೆಲ ಕಾಡುಗಳಲ್ಲಿ ಈಗಲೂ ಕೂಡ ಕಾಡಿನ ಜನರು ವಾಸಿಸುತ್ತಿದ್ದಾರೆ. ಅವರುಗಳಿಗೆ ಹೊರಗಿನ ಪ್ರಪಂಚದ ಅರಿವೆ ಇಲ್ಲ. ತಾವು ವಾಸಿಸುತ್ತಿರುವ ಕಾಡೆ ಅವರ ಪ್ರಪಂಚವಾಗಿದೆ. ನಾಡಿನಲ್ಲಿ ವಾಸವಿರುವ ಜನರು ಕಾಡಿನಲ್ಲಿ ವಾಸವಿರುವ ಅವರನ್ನು ಪತ್ತೆ ಹಚ್ಚಿ ಭೇಟಿ ಮಾಡಲು ಹೋದರೆ ನಾಡಿನ ಜನರನ್ನು ಬೇರೆ ಗ್ರಹದ ಜೀವಿಗಳ ಹಾಗೆ ನೋಡುತ್ತಾರೆ. ದುರಾಲೋಚನೆ ತುಂಬಿರುವ ನಾಡಿನ ಜನರ ಜೊತೆ ಅವರುಗಳು ಬೇರೆಯಲು ಇಷ್ಟ ಪಡುವುದಿಲ್ಲ. ಕಾಡಿನಲ್ಲಿ ವಾಸವಿರುವ ಜನರಿಗೆ ಸಹಾಯ ಮಾಡುವ ನೆಪದಲ್ಲಿ ಅವರುಗಳನ್ನು ಕೊಂಡಿರುವ ಅನೇಕ ಉದಾಹರಣೆಗಳು ಈ ಜಗತ್ತಿನಲ್ಲಿ ಇವೆ. ತಮ್ಮ ಪಾಡಿಗೆ ತಾವು ಇದ್ದರೂ ಕೂಡ ಅವರನ್ನು ಈ ನಾಡಿನ ಜನರು ಬಿಡುವುದಿಲ್ಲ. ಆದರೆ ಇತ್ತೀಚೆಗೆ ಪ್ರಪಂಚದಲ್ಲಿ ಒಂದು ಘಟನೆ ನಡೆದಿದೆ. ನಾಡಿನ ಜನರ ವಿರುದ್ದ ಹೋರಾಡಿ ಕೊನೆಗೆ ಜಯಗಳಿಸಿದ ಕಾಡಿನ ಜನರ ಅಚ್ಚರಿಯ ಘಟನೆ ಅದು. ಅದನ್ನು ಕಂಡು ಪ್ರಪಂಚವೆ ಆ ಕಾಡಿನ ಜನರಿಗೆ ಸಲಾಂ ಹೊಡೆದಿತ್ತು. ಇಂದು ನಿಮಗೆ ಆ ಅಚ್ಚರಿಯ ಘಟನೆಯ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತೇವೆ ಮುಂದೆ ಓದಿ.
ನಮಗೆಲ್ಲ ಗೊತ್ತಿರುವ ಹಾಗೆ ಪ್ರಪಂಚದಲ್ಲಿ ಇರುವ ಅತ್ಯಂತ ದೊಡ್ಡ ಕಾಡೆಂದರೆ ಅದು “ಅಮೆಜಾನ್”. ನಾಲ್ಕು ದೇಶಗಳಲ್ಲಿ ವಿಸ್ತಾರವಾಗಿರುವ ಈ ಕಾಡಿನಲ್ಲಿ ಕೋಟ್ಯಾನು ಕೋಟಿ ಜೀವಿಗಳು ವಾಸವಿದ್ದು ಈ ಕಾಡಿನಿಂದ ಶೇಖಡ 25ರಷ್ಟು ಆಮ್ಲಜನಕ ಉತ್ಪತ್ತಿಯಾಗುತ್ತಿದೆ. ಈ ಕಾಡಿನಲ್ಲಿ ಕೇವಲ ಪ್ರಾಣಿ ಪಕ್ಷಿಗಳು ಮಾತ್ರವಲ್ಲದೆ ಕಾಡಿನ ಜನರು ಕೂಡ ವಾಸವಿರುವರು. ಆಧುನಿಕ ಜಗತ್ತಿನ ಸಂಪರ್ಕವಿಲ್ಲದ ಅದೆಷ್ಟೋ ಕಾಡು ಜನರ ಹಿಂಡು ಈ ಬೃಹತ್ ಕಾಡಿನಲ್ಲಿ ವಾಸವಿದೆ. ದಕ್ಷಿಣ ಅಮೇರಿಕ ಭಾಗದಲ್ಲಿ ಈ ಅಮೆಜಾನ್ ಕಾಡಿನ ಕೆಲವು ಭಾಗವು ವಿಸ್ತಾರವಾಗಿದ್ದು ಈ ಕಾಡಿನ ಸುತ್ತ “ಎಕುಎಡರ್” ಎನ್ನುವ ದೇಶವಿದೆ. ಪೆರು ಮತ್ತು ಕೊಲಂಬಿಯಾ ದೇಶದ ಜೊತೆಗೆ ಗಡಿ ಹಂಚಿಕೊಂಡಿರುವ ಈ ದೇಶವು ದಟ್ಟ ಅರಣ್ಯ ಹೊಂದಿದ್ದು ಅನೇಕ ಜೀವಿಗಳಿಗೆ ನೆಲೆಯಾಗಿದೆ ಅಷ್ಟೇ ಅಲ್ಲದೆ “ವರೋನಿ” ಎನ್ನುವ ಕಾಡು ಜನರ ಜನಾಂಗವಿದ್ದು ನೂರಾರು ವರ್ಷಗಳಿಂದ ಆ ದೇಶದ ದಟ್ಟ ಅರಣ್ಯದಲ್ಲಿ ವಾಸಿಸುತ್ತಿದೆ. ಅದು 2011 “ಎಕುಎಡರ್” ದೇಶದ ಸರ್ಕಾರವು ದಟ್ಟ ಅರಣ್ಯ ಇರುವ ಜಾಗದ ಮಿಲಿಯನ್ ಘಟ್ಟಲೆ ಎಕರೆ ಪ್ರದೇಶದಲ್ಲಿ “ತೈಲ” ಇದೆಯೆಂದು ಪತ್ತೆ ಹಚ್ಚಿತು. ಆದರೆ ಆ ಪ್ರದೇಶದಲ್ಲಿ ಆದಿವಾಸಿಗಳು ವಾಸಿಸುತ್ತಿರುವುದರಿಂದ ಅಷ್ಟೊಂದು ಎಕರೆ ಅರಣ್ಯ ಪ್ರದೇಶವನ್ನು ನಾಶ ಮಾಡಿ ಅಲ್ಲಿ ತೈಲವನ್ನು ಹೊರತೆಗೆಯುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದ್ದರಿಂದ ಒಂದು ಕಮಿಟಿಯನ್ನು ರಚಿಸಿ ಆದಿವಾಸಿಗಳನ್ನು ಬೇಟಿ ಮಾಡಿ ಆ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ಅಥವ ನಾಡಿಗೆ ಬಂದು ಆಧುನಿಕ ಜನರ ಜೊತೆ ಬೆರೆಯುವಂತೆ ಅವರಿಗೆ ತಿಳಿಸಲು ಸೂಚಿಸಿತು.
ಸರ್ಕಾರದ ಆದೇಶದಂತೆ “ವರೋನಿ” ಆದಿವಾಸಿಗಳಿಗೆ ಇದನ್ನು ತಿಳಿಸಲು ಹೋದ ಕಮಿಟಿಯ ಕೈಗೆ ಆದಿವಾಸಿಗಳು ಸಿಗಲಿಲ್ಲ. ಏಕೆಂದರೆ ಆ ಸಮಯದಲ್ಲಿ ಭೇಟೆ ಆಡಲೆಂದು ಬೃಹತ್ ಅರಣ್ಯದ ಬೇರೆ ಭಾಗಕ್ಕೆ ಅವರು ಹೋಗಿದ್ದರು. ಇದನ್ನೇ ಲಾಭವನ್ನಾಗಿ ಪಡೆದುಕೊಂಡ ಅಲ್ಲಿನ ಸರ್ಕಾರ ಕಾಡಿನ ಜನರ ಅಪ್ಪಣೆ ಇಲ್ಲದೆ ಅವರುಗಳು ವಾಸವಿರುವ ಅರಣ್ಯ ಪ್ರದೇಶವನ್ನು ನಾಶ ಮಾಡಿ ಅಲ್ಲಿ ತೈಲ ಹೊರತೆಗೆಯುವ ಕೆಲಸಕ್ಕೆ ಮುಂದಾಯಿತು. ಅಷ್ಟರಲ್ಲಾಗಲೇ ಈ ಸುದ್ದಿಯು ಆ ಆದಿವಾಸಿಗಳಿಗೆ ತಿಳಿಯಿತು. ತಾವು ವಾಸವಿರುವ ಜಾಗವನ್ನು ಹೇಗಾದರು ಮಾಡಿ ಉಳಿಸಿಕೊಳ್ಳಬೇಕೆಂದು ಆ ಕಾಡಿನ ಜನರು ತೀರ್ಮಾನಿಸಿದರು. ಇದಕ್ಕೂ ಮೊದಲು ರಸ್ತೆ ಕಾಮಗಾರಿ ಮತ್ತು ಅಬಿವೃದ್ದಿಯ ಹೆಸರಲ್ಲಿ ತಾವು ವಾಸಿಸುತ್ತಿರುವ ಕಾಡಿನ ಭಾಗವನ್ನು ಕಳೆದುಕೊಂಡಿದ್ದ ಈ ಆದಿವಾಸಿಗಳಿಗೆ ನಗರದಲ್ಲಿ ವಾಸವಿರುವ ಜನರ ಮೇಲೆ ನಂಬಿಕೆ ಹೋಗಿತ್ತು. ಆದ್ದರಿಂದ ಹೇಗಾದರು ಮಾಡಿ ಹೋರಾಡಿ ತಾವಿರುವ ಕಾಡನ್ನು ಉಳಿಸಿಕೊಳ್ಳಬೇಕೆಂದು ತೀರ್ಮಾನಿಸಿದರು. ಆಗ ಆ ಆಧಿವಾಸಿಗಳ ಕೆಲ ಜನರು ಶಕ್ತಿಯಿಂದ ಹೋರಾಡಿದರೆ ನಾವು ಗೆಲ್ಲಲು ಸಾಧ್ಯವಿಲ್ಲ ಯುಕ್ತಿಯಿಂದ ಹೋರಾಡಿ ಗೆಲ್ಲಬೇಕು ಎಂದು ಗುಂಪಿನ ನಾಯಕರಿಗೆ ಸಲಹೆ ನೀಡಿದರು. ಆಗ ಅವರು ನಗರದಲ್ಲಿರುವ ಕೆಲ ಜನರ ಬಳಿ ಹೋಗಿ ತಮ್ಮ ಸಮಸ್ಯೆ ಹೇಳಿಕೊಳ್ಳೋಣ ಅವರುಗಳು ಏನಾದರು ಸಹಾಯ ಮಾಡುತ್ತಾರೆಯೇ ಎಂದು ನೋಡೋಣ ಎಂದು ತೀರ್ಮಾನಿಸಿದರು. ಆಗ ನಗರದ ಕೆಲ ಜನರ ಬಳಿ ಹೋದ ಈ ಕಾಡು ಜನರು ಅವರ ಕಷ್ಟ ಹೇಳಿಕೊಂಡು ಸಹಾಯ ಕೇಳಿದರು. ಇದನ್ನು ಕೇಳಿದ “ಎಕುಎಡರ್” ದೇಶದ ಜನರು ಒಬ್ಬರಾಗಿ ಅವರಿಗೆ ಸಹಾಯ ಮಾಡಲು ಮುಂದೆ ಬರತೊಡಗಿದರು. ಈ ವಿಷಯ ಅದೆಷ್ಟು ವೇಗವಾಗಿ ದೇಶದೆಲ್ಲೆಡೆ ಹಬ್ಬಿತೆಂದರೆ ದೇಶದ ಅರ್ಧದಷ್ಟು ಜನರು ಇವರಿಗೆ ಸಹಾಯ ಮಾಡಲು ಮುಂದೆ ಬಂದರು. ಇದನ್ನು ಕಂಡು ಆಧಿವಾಸಿಗಳು ನಗರದಲ್ಲಿ ಕೂಡ ಒಳ್ಳೆ ಜನರಿದ್ದಾರೆ ಎಂದು ಅರಿತರು. ನಗರದಲ್ಲಿ ಹೇಗೆ ನ್ಯಾಯ ಪಡೆಯುತ್ತಾರೆ ಎನ್ನುವ ವಿಧಾನವನ್ನು ಕೆಲ ಜನರು ಆಧಿವಾಸಿಗಳಿಗೆ ತಿಳಿಸಿದರು. ಅವರು ಹೇಳಿದಂತೆ ಕೋರ್ಟಿನಲ್ಲಿ ಕೇಸು ದಾಖಲಿಸಿದರು.
“ಎಕುಎಡರ್” ದೇಶದ ಸರ್ವೋಚ್ಚ ನ್ಯಾಯಾಲಯವು ಈ ಕೇಸನ್ನು ಗಂಭೀರವಾಗಿ ತೆಗೆದುಕೊಂಡು ಅಲ್ಲಿನ ಸರ್ಕಾರದ ವಿಚಾರಣೆ ನಡೆಸಲು ಶುರು ಮಾಡಿತು. ಬರೋಬ್ಬರಿ 9 ವರ್ಷಗಳ ಸುಧೀರ್ಘ ವಿಚಾರಣೆಯ ಬಳಿಕ ಅಲ್ಲಿನ ನ್ಯಾಯಾಲಯವು ಏಪ್ರಿಲ್ 26, 2019 ರಂದು ತೀರ್ಪು ನೀಡಿತು. ಆದಿವಾಸಿಗಳ ಅನುಮತಿ ಪಡೆಯದೆ ಅವರು ನೆಲೆಸಿರುವ ಕಾಡನ್ನು ನಾಶ ಮಾಡಲು ಮುಂದಾಗಿದ್ದ ಸರ್ಕಾರಕ್ಕೆ ಛೀಮಾರಿ ಹಾಕಿ ದಂಡವನ್ನು ವಿಧಿಸಿತು. ಇದಷ್ಟೇ ಅಲ್ಲದೆ ಇನ್ನು ಮುಂದೆ ದೇಶದ ಯಾವುದೇ ಅರಣ್ಯ ಪ್ರದೇಶವನ್ನು ನಾಶ ಮಾಡಬೇಕೆಂದರೆ ಮೊದಲು ಕೋರ್ಟಿನ ಅಪ್ಪಣೆ ಆನಂತರ ಆದಿವಾಸಿಗಳ ಅಪ್ಪಣೆ ಪಡೆಯಬೇಕೆಂದು ತೀರ್ಪು ಹೊರಡಿಸಿತು. ಇದನ್ನು ಕೇಳಿದ ಆದಿವಾಸಿಗಳು ಸಂತೋಷ ಪಟ್ಟು ಕೋರ್ಟಿನಲ್ಲಿ ನ್ಯಾಯಾದೀಶರಿಗೆ ಹಾಗು ಸರ್ಕಾರದ ಪರವಾಗಿ ವಾದಿಸುತ್ತಿದ್ದ ವಕೀಲರಿಗೆ “ಇಷ್ಟು ವರ್ಷಗಳ ಕಾಲ ಹೋರಾಡಿದ್ದಕ್ಕೆ ನಮಗೆ ಕೊನೆಗೂ ನ್ಯಾಯ ಸಿಕ್ಕಿತು, ನಾವು ನಿಮ್ಮಷ್ಟು ಬುದ್ದಿವಂತರಲ್ಲ, ನಮಗೆ ಕಾಡೇ ಸರ್ವಸ್ವ ದಯವಿಟ್ಟು ಅದನ್ನು ನಾಶ ಮಾಡಲು ಮತ್ತೆ ಇನ್ಯಾವತ್ತು ಪ್ರಯತ್ನ ಪಡಬೇಡಿ, ಕಾಡನ್ನು ನೀವು ಉಳಿಸದಿದ್ದರೆ ಮುಂದೆ ಅದರಿಂದ ಸಂಪೂರ್ಣ ಭೂಮಿಗೆ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಈ ತೀರ್ಪು ಹೊರ ಬರುತ್ತಿದ್ದಂತೆ ಆ ದೇಶದ ಪ್ರಮಖ ನಗರಗಳಲ್ಲಿ ಒಂದಾದ “ಪುಯೋ”ದ ಬೀದಿಗಳಲ್ಲಿ ನೂರಾರು ಆದಿವಾಸಿಗಳು ಮತ್ತು ಅವರಿಗೆ ಬೆಂಬಲ ನೀಡಿದ ಜನರು ತಮಗೆ ಸಿಕ್ಕ ವಿಜಯವನ್ನು ಸಂಭ್ರಮದಿಂದ ಆಚರಿಸಿದರು. ಇದನ್ನು ಕಂಡು ವಿಶ್ವದ ಅನೇಕ ರಾಷ್ಟ್ರಗಳು ಆದಿವಾಸಿಗಳಿಗೆ ಶಬಾಷ್ ಎಂದು ಬೆನ್ನು ತಟ್ಟಿದೆ
Follow Karunadu Today for more Interesting Facts & Stories.
Click here to Join Our Whatsapp Group
