ಪ್ರತಿಯೊಬ್ಬರಿಗೂ ತಿಳಿದಿರುವಂತೆ ದ್ವಾಪರಯುಗದಲ್ಲಿ ನಡೆದ ಕೌರವ ಪಾಂಡವರ ನಡುವಿನ ಕುರು ಸಂಗ್ರಾಮ ಧರ್ಮ ಅಧರ್ಮದ ಯುದ್ಧವೆಂದೆ ಗಣನೀಯವಾಗಿತ್ತು. ಜಗತ್ತಿಗೆ ಮಾರಕವಾಗಿ ಪರಿಣಮಿಸಿದ್ದ. ಅಧರ್ಮಿಗಳಾದ ಕೌರವ ಸೇನೆಯನ್ನು ಮಣ್ಣಿಸಲು ಪಾಂಡವರ ಸಾಹಸ ಧೈರ್ಯಗಳು ಅಪರಿಮಿತವಾದದ್ದು.

ಆದರೆ ಅಧರ್ಮಿಗಳಾದ ಕೌರವರನ್ನು ಸಂಪೂರ್ಣವಾಗಿ ನಾಶಪಡಿಸಲು ಪಾಂಡವರ ಪಾತ್ರ ಎಷ್ಟು ಮಹತ್ವವಿತ್ತೋ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಕಲ ದೇವಾನುದೇವತೆಗಳಿಂದಲೂ ನೆರವೇರಿತು ಅನ್ನುವುದು ಅಷ್ಟೇ ಸತ್ಯ. ಪಾಂಡವರ ಪಕ್ಷದಲ್ಲಿ ಶ್ರೀ ಕೃಷ್ಣನೆಂಬ ಗೆಲ್ಲಲಾಗದ ಶಕ್ತಿ ಇದ್ದಿದ್ದರಿಂದಲೇ ಪಾಂಡವರಿಗೆ ಜಯ ಒಲಿದಿದ್ದು ಎಂಬುವುದು ಅಷ್ಟೇ ಸತ್ಯ.

ಇಂಥಹ ಕ್ರೂರ ಸಂಗ್ರಾಮಕ್ಕೂ ಮುನ್ನ ಎರಡು ಕಡೆಯ ಪಕ್ಷದವರು ಅಂದರೆ ಪಾಂಡವರು ಮತ್ತು ಕೌರವರು ತಮ್ಮ ತಮ್ಮ ಸೈನ್ಯವನ್ನು ಬಲಪಡಿಸಿಕೊಳ್ಳುವ ಸಂದರ್ಭದಲ್ಲಿದ್ದರು

ಆ ಸಮಯದಲ್ಲಿ ಸಕಲ ದೇವಾನುದೇವತೆಗಳು ದೇವಕಿ ನಂದನ, ಮಾಧವ, ಮೂರರಿಯಾದ ಶ್ರೀ ಕೃಷ್ಣನಿಗೆ ನಮಿಸಿ, ತಮಗೂ ಈ ಧರ್ಮ ಯುದ್ಧದಲ್ಲಿ, ಧರ್ಮದ ಪರವಾಗಿ ಕಾರ್ಯನಿರ್ವಹಿಸಲು ಅವಕಾಶಗಳನ್ನು ನೀಡಬೇಕೆಂದು ಕೇಳಿಕೊಂಡರು.

ಶ್ರೀ ಕೃಷ್ಣ ಪರಮಾತ್ಮನು ಪ್ರತಿಯೊಬ್ಬ ದೇವಾನುದೇವತೆಗಳಿಗೆ ಕರ್ತವ್ಯವನ್ನ ನಿಯೋಜಿಸುತ್ತಾ, ಕೊನೆಯದಾಗಿ ಶನಿ ಪರಮಾತ್ಮ ಭಗವಂತ ಈ ಮಹಾಭಾರತ ಯುದ್ಧದಲ್ಲಿ ನನ್ನ ಪಾತ್ರವೇನು ಎಂದು ಕೇಳಲು ರಣಾಂಗಣದಲ್ಲಿ ನಿನ್ನ ಪಾತ್ರವೇನು ಇರುವುದಿಲ್ಲ ಆದರೆ ನಿನ್ನ ದೃಷ್ಟಿ ಮಾತ್ರ ಕೌರವರ ಮೇಲೆ ಇರಲಿ, ಸಾಕು ಎಂದು ಹೇಳಿದನು.

Follow Karunadu Today for more Spiritual stories like this

Click here to Join Our Whatsapp Group