ಕೊರೋನ ವೈರಸ್, ಈ ಹೆಸರನ್ನು ಕೇಳಿದರೆ ಸಾಕು ಜಗತ್ತು ಬೆಚ್ಚಿ ಬೀಳುತ್ತಿದ್ದೆ. ಚೀನಾದ ತಪ್ಪಿನಿಂದ ಹುಟ್ಟಿಕೊಂಡ ಈ ವೈರಸ್ ಜಗತ್ತಿನ್ನೆಲ್ಲೆಡೆ ನಿಧಾನವಾಗಿ ಹಬ್ಬಿ ಲಕ್ಷಾಂತರ ಜನರ ಪ್ರಾಣ ತೆಗೆದುಕೊಂಡಿತು. ಈ ರೀತಿಯ ರೋಗಗಳು ಜಗತ್ತನ್ನು ಕಾಡಿದ್ದು ಇದು ಮೊದಲೇನಲ್ಲ. ಇದಕ್ಕೂ ಮೊದಲು ಅನೇಕ ಭಯಾನಕ ರೋಗಗಳನ್ನು ಜಗತ್ತು ಕಂಡಿದ್ದು ಲಕ್ಷಾಂತರ ಜನರ ಪ್ರಾಣವನ್ನು ತೆಗೆದುಕೊಂಡು ಹೋಗಿದೆ. ಇಂದು ನಿಮಗೆ ಕೊರೋನ ವೈರಸ್ ತರಹ ಜಗತ್ತನ್ನು ಕಾಡಿದ 5 ಡೆಡ್ಲಿ ರೋಗಗಳ ಕುರಿತು ತಿಳಿಸಿಕೊಡುತ್ತೇವೆ ಮುಂದೆ ಓದಿ.

1. 1968 ಫ್ಲೂ ಪ್ಯಾಂಡೆಮಿಕ್

“ಇನ್ಫ್ಲೂಎಂಜ ಎ” ವೈರಾಣುವಿನಿಂದ ಜನಿಸಿದ ಈ ರೋಗವು ಜುಲೈ 13 1968 ರಂದು ಹಾಂಗ್ ಕಾಂಗ್ ದೇಶದಲ್ಲಿ ಮೊದಲು ಕಾಣಿಸಿಕೊಂಡಿದ್ದು.ನಂತರ ಸೆಪ್ಟೆಂಬರ್ ತಿಂಗಳು ತಲುಪುವಷ್ಟರಲ್ಲಿ ಭಾರತ, ಫಿಲಿಪೈನ್ಸ್, ಆಸ್ಟ್ರೇಲಿಯಾ ಮತ್ತು ಯುರೋಪ್ ಅನ್ನು ಪ್ರವೇಶಿಸಿತ್ತು. ಹೀಗೆ ನೋಡ ನೋಡುತ್ತಿದ್ದಂತೆ ಪ್ರಪಂಚದೆಲ್ಲೆಡೆ ಹಬ್ಬಿ ಬರೋಬ್ಬರಿ 10 ಲಕ್ಷ ಜನರ ಪ್ರಾಣವನ್ನು ಈ ರೋಗ ತೆಗೆದುಕೊಂಡಿತ್ತು.
ನೋಡಿದಿರಲ್ಲ ವೀಕ್ಷಕರೆ, ಪ್ರಪಂಚದೆಲ್ಲೆಡೆ ಅನೇಕ ಜನರ ಪ್ರಾಣವನ್ನು ಹೇಗೆ ಈ ರೋಗಗಳು ತೆಗೆದುಕೊಳ್ಳುತ್ತಿವೆ ಎಂದು. ಜನಸಂಖ್ಯೆ ಹೆಚ್ಚಾದಂತೆಲ್ಲ ಅದನ್ನು ನಿಭಾಯಿಸಲು ಮನುಷ್ಯರು ವಿಪಲವಾದರೆ ಪ್ರಕೃತಿಯೆ ಕ್ರೂರ ಕ್ರಮವನ್ನು ತೆಗೆದುಕೊಳ್ಳುತ್ತ ಹೋಗುತ್ತದೆ. ಪ್ರಕೃತಿಯು ಒಮ್ಮೆ ಮುನಿಸಿಕೊಂಡರೆ ಸಾಕು ಒಮ್ಮೆಲೇ ಲಕ್ಷ ಜನರ ಪ್ರಾಣವನ್ನು ತೆಗೆದುಕೊಳ್ಳುತ್ತದೆ, ಆದ್ದರಿಂದಲೇ “mother nature is a serial killer” ಎಂದು ಹೇಳುವುದು. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ

2. ಕಾಲರ ಪ್ಯಾಂಡೆಮಿಕ್

1899 ರಿಂದ 1923 ರ ಮಧ್ಯೆ ಹುಟ್ಟಿಕೊಂಡ ಈ ರೋಗವು ಜನಿಸಿದ್ದು ಭಾರತದಲ್ಲಿ. ಈ ರೋಗದಿಂದ ಸಂಪೂರ್ಣ ದೇಶದಲ್ಲಿ 8 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದರು. ನಂತರ ನಿಧಾನವಾಗಿ ಈ ರೋಗವು ಪ್ರಪಂಚದೆಲ್ಲೆಡೆ ಹಬ್ಬಿತು. ಕಲುಷಿತ ನೀರಿನಲ್ಲಿ ಈ ವೈರಾಣು ಇದ್ದು ಆ ನೀರನ್ನು ಸೇವಿಸುವುದರಿಂದ ದೇಹದ ಒಳಗೆ ಪ್ರವೇಶಿಸಿ ಸಂಪೂರ್ಣ ದೇಹವನ್ನು ನಿರ್ಭಲವನ್ನಾಗಿ ಮಾಡುತ್ತದೆ. ಈ ರೋಗದಿಂದ ಪ್ರಪಂಚದೆಲ್ಲೆಡೆ ಎಷ್ಟು ಜನರು ನಿಖರವಾಗಿ ಸತ್ತಿದ್ದಾರೆ ಎಂದು ತಿಳಿದುಬಂದಿಲ್ಲ. ಆದರೆ ಬ್ಯಾಂಕಾಕ್ ನಲ್ಲಿ 30 ಸಾವಿರ ಜನರು ಇದರಿಂದ ಸತ್ತಿದ್ದರು.

3. ಏಷ್ಯನ್ ಫ್ಲೂ

ಇಂದು ಪ್ರಪಂಚದೆಲ್ಲೆಡೆ ನಿಧಾನವಾಗಿ ಎಲ್ಲೆಡೆ ಹಬ್ಬುತ್ತಿರುವ ಕೋರೋನ ವೈರಸ್ ಗೆ ಮೂಲ ಕಾರಣವಾದ ದೇಶ ಚೀನ ಎಂದು ಎಲ್ಲರಿಗು ಗೊತ್ತು, ಇದೇ ರೀತಿ 1956-58 ರಲ್ಲಿ ಪ್ರಪಂಚದೆಲ್ಲೆಡೆ ಅನೇಕ ಜನರ ಪ್ರಾಣ ತೆಗೆದುಕೊಂಡ “ಏಷ್ಯನ್ ಫ್ಲೂ” ರೋಗಕ್ಕೂ ಕೂಡ ಚೀನಾ ದೇಶವೇ ಮೂಲ ಕಾರಣ. ಭಾತುಕೋಳಿಗಳ ಮೇಲೆ ಚೀನಾದ ವಿಜ್ಞಾನಿಗಳು ನಡೆಸಿದ ಆನುವಂಶಿಕ ರೂಪಾಂತರ(ಜೆನಿಟಿಕ್ ಮ್ಯೂಟೇಶನ್)ದಿಂದ ಈ ರೋಗವು ಜನಿಸಿತು. ಈ ರೋಗವು ಚೀನಾದಿಂದ ನಿಧಾನವಾಗಿ ಸಿಂಗಾಪುರ್, ಹಾಂಗ್ ಕಾಂಗ್, ಅಮೆರಿಕ ಹೀಗೆ ಪ್ರಪಂಚದೆಲ್ಲೆಡೆ ಹರಡಿ ಕೇವಲ 2 ವರ್ಷದಲ್ಲಿ 20 ಲಕ್ಷ ಜನರ ಪ್ರಾಣ ತೆಗೆದುಕೊಂಡಿತ್ತು.

4. ಇನ್ಫ್ಲೂಎಂಜ ಪ್ಯಾಂಡೆಮಿಕ್

“ಇನ್ಫ್ಲೂಎಂಜಾ” ಎನ್ನುವ ವೈರಾಣುವಿನಿಂದ ಕಳೆದ 300 ವರ್ಷಗಳಲ್ಲಿ 9 ವಿವಿಧ ಡೆಡ್ಲಿ ರೋಗಗಳು ಜನಿಸಿದ್ದು ಸಂಪೂರ್ಣ ಮನುಷ್ಯಕುಲವನ್ನು ಕಾಡಿವೆ. ಅವುಗಳಲ್ಲಿ 1918 ರ ಇನ್ಫ್ಲೂಎಂಜ ಪ್ಯಾಂಡೆಮಿಕ್ ಕೂಡ ಒಂದು. ಈ ರೋಗವನ್ನು “ಸ್ಪ್ಯಾನಿಶ್ ಫ್ಲೂ” ಎಂದು ಕೂಡ ಕರೆಯಲಾಗುತ್ತದೆ. ಈ ರೋಗದಿಂದ ಅಂದು ಬರೋಬ್ಬರಿ 10 ಕೋಟಿ ಜನರು ಪ್ರಾಣ ಕಳೆದುಕೊಂಡಿದ್ದರು. ಇನ್ನು ಇದೇ ವೈರಾಣುವಿನಿಂದ 2009 ರಲ್ಲಿ ಪ್ರಪಂಚದೆಲ್ಲೆಡೆ “ಹಂದಿ ಜ್ವರ” ಎನ್ನುವ ರೋಗವು ಜನಿಸಿತ್ತು. ಇದರಿಂದ 4 ಲಕ್ಷ ಜನರು ಪ್ರಪಂಚದೆಲ್ಲೆಡೆ ಸತ್ತಿದ್ದರು.

5. ಬ್ಯೂಬಾನಿಕ್ ಪ್ಲೇಗ್

“ಎರ್ಸೀನಿಯ ಪೆಸ್ಟಿಸ್(Yersinia pestis)” ಎನ್ನುವ ಬ್ಯಾಕ್ಟೀರಿಯದಿಂದ ಹರಡುವ ಈ ರೋಗವು 1346 ರಿಂದ 1353 ರ ಮಧ್ಯೆ ಮಾನವ ಇತಿಹಾಸ ಕಂಡ ಅತ್ಯಂತ ಭಯಾನಕ ರೋಗ. ಈ ರೋಗದಿಂದ ಯುರೋಪ್ ಖಂಡದ ಶೇಖಡ 30 ರಿಂದ 60 ರಷ್ಟು ಜನಸಂಖ್ಯೆ ಸತ್ತು ಹೋಗಿತ್ತು. ಸತ್ತಿರುವ ಇಲಿಗಳ ಮೇಲೆ ಕೂಡುವ ನೊಣಗಳು ಆಹಾರದ ಮೇಲೆ ಕುಳಿತು ಆ ಆಹಾರವನ್ನು ಸೇವಿಸುವುದರಿಂದ ಈ ರೋಗ ಹರಡುತ್ತದೆ. ಅಂದು ಜಗತ್ತು ಕಂಡ ಅತ್ಯಂತ ಭಯಾನಕ ರೋಗವಾದ ಪ್ಲೇಗ್ ನಿಂದ ಪ್ರಪಂಚದೆಲ್ಲೆಡೆ ಬರೋಬ್ಬರಿ 8 ಕೋಟಿ ಜನರು ಸತ್ತಿದ್ದರು. ಇದನ್ನು ಇತಿಹಾಸದಲ್ಲಿ “ಬ್ಲ್ಯಾಕ್ ಡೆತ್” ಎಂದು ವರ್ಣಿಸಲಾಗಿದೆ.

Follow Karunadu Today for more Interesting Facts & Stories. 

Click here to Join Our Whatsapp Group