ಹಾಲಿವುಡ್ ಸಿನಿಮಾಗಳಲ್ಲಿ ಹಾಗು ಅನೇಕ games ಗಳಲ್ಲಿ ನಾವು zombies ಗಳ ಕುರಿತು ನೋಡಿದ್ದೇವೆ. ಸತ್ತಿರುವ ವ್ಯಕ್ತಿಗಳು ಎದ್ದು ನಡೆದಾಡುತ್ತ ಬದುಕಿರುವ ಮನುಷ್ಯರ ಮೇಲೆ ಹಾರಿ ಅವರುಗಳನ್ನು ಕಚ್ಚುತ್ತ ಅವರ ದೇಹದ ಮಾಂಸವನ್ನು ತಿನ್ನುವ ಈ zombie ಗಳನ್ನು ನೋಡುತ್ತಿದ್ದರೆ ಸಾಕಷ್ಟು ಭಯವಾಗುತ್ತದೆ. ಇವುಗಳನ್ನು ಶೂಟ್ ಮಾಡಿ ಕೊಲ್ಲುವ games ಗಳನ್ನು ಆಡುತ್ತಿದ್ದರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಆದರೆ ಸಿನಿಮಾಗಳಲ್ಲಿ ಹಾಗು games ಗಳಲ್ಲಿ ಇರುವ ರೀತಿ ಈ zombie ಗಳು ನಿಜ ಜೀವನದಲ್ಲಿ ಇರಲು ಸಾಧ್ಯವೆ? ಮೈ ಮೇಲೆ ಎಗರಿ ಮಾಂಸ ತಿನ್ನುವ zombie ಗಳಾಗಿ ಮನುಷ್ಯರು ಪರಿವರ್ತನೆಯಾಗುವ ಸಾಧ್ಯತೆಗಳಿವೆಯೇ ಎನ್ನುವುದಕ್ಕೆ ವಿಜ್ಞಾನಿಗಳು ಉತ್ತರ ನೀಡಿದ್ದು ಅವುಗಳನ್ನು ನೋಡುತ್ತಿದ್ದರೆ ಆಶ್ಚರ್ಯದ ಜೊತೆಗೆ ಭಯ ಆಗುತ್ತದೆ. ಏಕೆಂದರೆ ಅಕಸ್ಮಾತ್ ಈ ರೀತಿ ಏನಾದರು ನಿಜ ಆದರೆ ಪ್ರಪಂಚದಲ್ಲಿ ಯಾರು ಕೂಡ ಬದುಕುವುದಿಲ್ಲ. ಬನ್ನಿ ಮನುಷ್ಯರು zombie ಗಳಾಗಿ ಬದಲಾಗುವ ಸಾಧ್ಯತೆಗಳ ಕುರಿತು ವಿಜ್ಞಾನಿಗಳು ಏನು ಹೇಳಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳೋಣ.
1. ಟಾಕ್ಸಿಪ್ಲಾಸ್ಮಾ ಗೊಂಡಿ(TOXIPLASMA GONDII)
ಜಗತ್ತಿನಲ್ಲಿರುವ ಅತ್ಯಂತ ಭಯಾನಕ ವೈರಾಣುಗಳಲ್ಲಿ ಇದು ಕೂಡ ಒಂದಾಗಿದೆ. ಯಾವ ಜೀವಿಯ ಮೆದುಳಿನ ಒಳಗೆ ಈ ವೈರಾಣು ಸೇರಿಕೊಳ್ಳುತ್ತದೆ ಆ ಜೀವಿಯು ವಿಚಿತ್ರವಾಗಿ ಆಡಲು ಶುರು ಮಾಡುತ್ತದೆ. ಈ ವೈರಸ್ ಸಹಜವಾಗಿ ಇಲಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಬೆಕ್ಕುಗಳು ಇಲಿಗಳನ್ನು ತಿನ್ನುವುದರಿಂದ ಈ ವೈರಾಣುವು ಇಲಿಗಳಿಂದ ಬೆಕ್ಕುಗಳ ದೇಹದ ಒಳಗೆ ಸೇರುತ್ತದೆ. ಇನ್ನು ಮನೆಯಲ್ಲಿ ಬೆಕ್ಕು ಸಾಕುವುದರಿಂದ ಬೆಕ್ಕಿನಿಂದ ಮನುಷ್ಯರಿಗೆ ಆ ವೈರಸ್ ಹರಡುತ್ತದೆ. ಭೂಮಿಯ ಮೇಲೆ 40% ನಷ್ಟು ಮನುಷ್ಯರ ದೇಹದಲ್ಲಿ ಈ ವೈರಸ್ ಇದೆ. ಇದಕ್ಕೆ ಕಾರಣ ಮನೆಯಲ್ಲಿ ಸಾಕಿರುವ ಬೆಕ್ಕುಗಳು. ಈ ವೈರಸ್ ತಗುಲಿರುವ ಇಲಿ ಅಥವ ಬೆಕ್ಕುಗಳಿಗೆ ಸಾವಿನ ಭಯವೇ ಇರುವುದಿಲ್ಲ. ಇನ್ನು ಈ ವೈರಸ್ ದೇಹದಲ್ಲಿ ಹೊಕ್ಕಿರುವ ಮನುಷ್ಯನಿಗೆ ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದೆನಿಸುತ್ತದೆ. ಅಕಸ್ಮಾತ್ ಈ ವೈರಸ್ ಏನಾದರೂ ಭವಿಷ್ಯದಲ್ಲಿ ರೂಪಾಂತರಗೊಳ್ಳಲು ಶುರು ಮಾಡಿದರೆ ಖಂಡಿತವಾಗಿಯೂ ಇದು ಮನುಷ್ಯ ಕುಲಕ್ಕೆ ಅಪಾಯಕಾರಿಯಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಅದೇನೇ ಹೇಳಿ ಮನುಷ್ಯನ ಆಧುನಿಕತೆಯ ಹುಚ್ಚು ಇರಬಹುದು ಅಥವ ಮನುಷ್ಯನ ಮೇಲೆ ಪ್ರಕೃತಿಯ ಕೋಪವಿರಬಹುದು, ಎರಡರಲ್ಲಿ ಒಂದು ಭವಿಷ್ಯದಲ್ಲಿ ಮನುಷ್ಯನನ್ನು zombie ಗಳಾಗಿ ಬದಲಾಗುವ ಹಾಗೆ ಮಾಡುವುದರಲ್ಲಿ ಅನುಮಾನವೇ ಇಲ್ಲ. ಅಕಸ್ಮಾತ್ ಮನುಷ್ಯರು ನಿಜವಾಗಿಯು zombie ಗಳಾಗಿ ಬದಲಾದರೆ ಭೂಮಿಯು ನರಕವಾಗುತ್ತದೆ.
2. ಸ್ಟೆಮ್ ಸೆಲ್ಸ್ ಹಾಗೂ ನ್ಯಾನೋ ವೈರಸ್ (STEM CELLS ಹಾಗು NANO VIRUS)
ಇದು ಭವಿಷ್ಯದಲ್ಲಿ medical science ಗೆ ಒಂದು ವರದಾನ ಆಗಬಹುದು ಆದರೆ ಅದರ ಜೊತೆಗೆ ಜಗತ್ತಿಗೆ ಅಪಾಯ ಕೂಡ ಆಗಬಹುದು. ಪ್ರಪಂಚದಲ್ಲಿ ಕೆಲ ವಿಜ್ಞಾನಿಗಳಿದ್ದು ಅವರು NANO BOTS ಮೇಲೆ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಈ nano bots ಎನ್ನುವುದು ಪುಟ್ಟ ಸಿಲಿಕಾನ್ ಚಿಪ್ ಆಗಿದ್ದು ಇದನ್ನು ಮನುಷ್ಯನ ಮೆದುಳಿನ ಒಳಗೆ ಜೋಡಣೆ ಮಾಡಬಹುದು. ಈ ರೀತಿ ಮಾಡುವುದರಿಂದ ವ್ಯಕ್ತಿಯು ಸತ್ತ ನಂತರವು ಕೂಡ ಆತನ ಮೆದುಳು ಅನೇಕ ದಿನಗಳ ಕಾಲ ಕಾರ್ಯನಿರ್ವಹಿಸುತ್ತಿರುತ್ತದೆ. ಈ nano bots ಬಳಸಿಕೊಂಡು ಮೆದುಳಿನ ಒಳಗೆ ನರಗಳನ್ನು ಮರಳಿ ಜೋಡಣೆ ಮಾಡಬಹುದು. ಈ ಚಿಪ್ ಮೇಲೆ ಈಗ ಅನೇಕ ಪ್ರಯೋಗಗಳು ನಡೆಯುತ್ತಿವೆ. ಆದರೆ ಭವಿಷ್ಯದಲ್ಲಿ ಈ ಚಿಪ್ ಯಶಸ್ವಿಯಾಗಿ ಕಾರ್ಯವಹಿಸಿದರೆ ಇದನ್ನು ಅನೇಕ ವ್ಯಕ್ತಿಗಳು ದುರ್ಭಳಕೆ ಮಾಡಿಕೊಳ್ಳಬಹುದು. ಸತ್ತಿರುವ ವ್ಯಕ್ತಿಯನ್ನು ಬದುಕಿಸಿ ಆತನನ್ನು ತಾವುಗಳು ಹೇಳುವ ಹಾಗೆ ಕೇಳುವಂತೆ ಮಾಡಿಕೊಳ್ಳಬಹುದು. ಇದರ ಜೊತೆಗೆ ಮನುಷ್ಯನು stem cells ಗಳ ಮೂಲಕ ಕೂಡ ಮೆದುಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ಈ stem cells ಗಳಿಂದ ದೇಹದಲ್ಲಿ ಕಾರ್ಯವಹಿಸದ ಅನೇಕ ಅಂಗಾಂಗಗಳನ್ನು’ಮರಳಿ ಕಾರ್ಯವಹಿಸುವ ಹಾಗೆ ಮಾಡಬಹುದಾಗಿದೆ. ಇದರ ಜೊತೆಗೆ ವ್ಯಕ್ತಿಯು ಉಗ್ರವಾಗುವ ಹಾಗೆ ಕೂಡ ಮಾಡಬಹುದು. ಅದೆಷ್ಟು ಉಗ್ರವೆಂದರೆ ತನ್ನ ದಾರಿಗೆ ಅಡ್ಡ ಬರುವ ವ್ಯಕ್ತಿಗಳನ್ನು ಕೊಲ್ಲುವ ಮಟ್ಟಕ್ಕು ಹೋಗಬಹುದು. ಭವಿಷ್ಯದಲ್ಲಿ ಭೂಮಿಯ ಯಾವುದಾದರು ಮೂಲೆಯಲ್ಲಿರುವ ಒಬ್ಬ ತಲೆ ಕೆಟ್ಟ ವಿಜ್ಞಾನಿಯು ಈ stem cells ಹಾಗು nano virus ಅನ್ನು ದುರುಪಯೋಗ ಪಡಿಸಿಕೊಂಡರೆ ಅದರಿಂದ ಮನುಷ್ಯ ಕುಲವು zombie ಆಗಿ ಪರಿವರ್ತನೆ ಆಗುವುದರಲ್ಲಿ ಅನುಮಾನವಿಲ್ಲ.
3. NEUROTOXIC CHEMICALS
ಇವುಗಳು ಅತ್ಯಂತ ವಿಷಪೂರಿತ ಹಾಗು ಅಪಾಯಕಾರಿ chemicals.ಇದಕ್ಕೆ ಉತ್ತಮ ಉದಾಹರಣೆಯೆಂದರೆ ಅದು puppar ಮೀನುಗಳ ಹಾಗು blue ringed octopus ಗಳ ಒಳಗಿರುವ “Tetrodotoxin”. ಈ ವಿಷಪೂರಿತ chemicals ಗಳು ಮೊದಲು ಮನುಷ್ಯರ ಮೆದುಳಿನಲ್ಲಿರುವ central nervous system ಮೇಲೆ ದಾಳಿ ಮಾಡಿ ಮೆದುಳು ಕೆಲಸ ಮಾಡುವುದನ್ನೇ ನಿಲ್ಲಿಸುತ್ತವೆ. ಆದರೆ ಮನುಷ್ಯನು ಮಾತ್ರ ಜೀವಂತವಾಗಿ ಇರುವ ಹಾಗೆ ಮಾಡುತ್ತವೆ. ಅನೇಕ ವರ್ಷಗಳ ಕೆಳಗೆ ಹೈತಿ ದೇಶದ ಜನಗಳು ಒಂದು ವಿಚಿತ್ರವಾದ powder ಅನ್ನು ಬಳಸುತ್ತಿದ್ದರು. ಆ powder ಅನ್ನು ಯಾವ ಮನುಷ್ಯರ ಮೇಲೆ ಎಸೆಯುತ್ತಾರೆ ಆ ಮನುಷ್ಯರು ಸತ್ತ ಹಾಗೆ ಆಗುತ್ತಿದ್ದರು. ಆದರೆ ಅವರ ಮೆದುಳನ್ನು ಮಾತ್ರ powder ಎಸೆದ ವ್ಯಕ್ತಿಯು ತನ್ನ ಹತೋಟಿಗೆ ತೆಗೆದುಕೊಂಡು ತಾನು ಹೇಳಿದ ಹಾಗೆ ಆ ವ್ಯಕ್ತಿಗಳು ಕೇಳುವ ರೀತಿ ಮಾಡುತ್ತಿದ್ದರು. ಇದನ್ನೇ ಈಗಿನ ಆಧುನಿಕ ವಿಜ್ಞಾನಿಗಳು ವಿಷಪೂರಿತ NEUROTOXIC ಎಂದು ಹೇಳುತ್ತಿರುವುದು. ಅಕಸ್ಮಾತ್ ಯಾವುದಾದರು ದೇಶದ ವಿಜ್ಞಾನಿಗಳು ಇಂತಹ ವಿಷಪೂರಿತ chemical ಕಂಡು ಹಿಡಿದು ಜೈವಿಕ ಅಸ್ತ್ರವಾಗಿ ಬಳಸಿ ದೇಶಗಳ ಮೇಲೆ ದಾಳಿ ಮಾಡಿದರೆ ಆ ದೇಶದ ಜನಗಳು zombie ಗಳ ತರಹ ಆಗುತ್ತಾರೆ. ಭವಿಷ್ಯದಲ್ಲಿ ಇಂತಹ ಒಂದು ಯುದ್ದವೇನಾದರು ನಡೆದರೆ ಆಗ ಮನುಷ್ಯ ಕುಲವೆ zombie ಗಳಾಗಿ ಬದಲಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
4. OPHIOCORDYCEPS GENUS
ಭೂಮಿಯ ಮೇಲೆ 200ಕ್ಕಿಂತ ಹೆಚ್ಚು fungus ಗಳಿವೆ, ಅವುಗಳಲ್ಲಿ ಕೆಲವು fungus ಗಳು ಪ್ರಾಣಿಗಳಿಗೆ ಹಾಗು ಕೀಟಗಳಿಗೆ ಸದಾ ಅಪಾಯಕಾರಿಯಾಗಿವೆ. ಅಂತಹ ಅಪಾಯಕಾರಿ fungus ಗಳಲ್ಲಿ OPHIOCORDYCEPS GENUS fungus ಕೂಡ ಒಂದು. ಈ fungus ಅದೆಷ್ಟು ಅಪಾಯಕಾರಿಯೆಂದರೆ ಕೀಟಗಳ ಒಳಗೆ ಇವುಗಳು ಸೇರಿಕೊಂಡು ಅವುಗಳನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತವೆ. ಇದರ ಅರ್ಥ ದೇಹವು ಮಾತ್ರ ಆ ಕೀಟಗಳದ್ದಾಗಿರುತ್ತದೆ ಆದರೆ ಅವುಗಳು ಈ fungus ಹೇಳಿದ ಹಾಗೆ ನಡೆದುಕೊಳ್ಳುತ್ತವೆ. ಈ fungus ಅದೆಷ್ಟು ಅಪಾಯಕಾರಿಯೆಂದರೆ ಕೀಟಗಳು ಸತ್ತ ಮೇಲೂ ಕೂಡ ಅವುಗಳ ಒಳಗೆ ಇವು ಜೀವಂತವಾಗಿರುತ್ತವೆ. ಕೀಟಗಳ ದೇಹದ ಒಳಗೆ ಸೇರಿದ ಮೇಲೆ ಈ fungus ಮಾಡುವ ಮೊದಲ ಕೆಲಸ ಆ ಕೀಟವನ್ನು ಕತ್ತಲು ತುಂಬಿರುವ ಜಾಗಕ್ಕೆ ಕರೆದುಕೊಂಡು ಹೋಗುವುದು. ನಂತರ ಅದರ ಮೆದುಳನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು. ಇಷ್ಟೊಂದು ಅಪಾಯಕಾರಿಯಾಗಿರುವ fungus ಮನುಷ್ಯರನ್ನು ಕೂಡ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವಂತಹ ಘಟನೆಗಳು ಜಗತ್ತಿನಲ್ಲಿ ಇದುವರೆಗು ನಡೆದಿಲ್ಲ.ಆದರೆ ಅಕಸ್ಮಾತ್ ಭವಿಷ್ಯದಲ್ಲಿ ಪ್ರಕೃತಿಯ ಕೋಪಕ್ಕೆ ಮನುಷ್ಯರು ತುತ್ತಾದರೆ ಇಂತಹ ಭಯಾನಕ fungus ಗಳು ವೈರಸ್ ಗಳ ಜೊತೆಗೆ ಸೇರಿಕೊಂಡು ಮನುಷ್ಯರನ್ನು zombie ಗಳ ತರಹ ಪರಿವರ್ತನೆ ಮಾಡುವುದರಲ್ಲಿ ಅನುಮಾನವೇ ಇಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
5. RABIES
ಈ ರೋಗಕ್ಕೆ ತುತ್ತಾಗುವ ನಾಯಿಗಳನ್ನು ನೀವು ನೋಡಿರಬಹುದು. ಹುಚ್ಚು ಹಿಡಿದು ಕಂಡ ಕಂಡ ಜನರಿಗೆ ಕಚ್ಚುತ್ತಿರುತ್ತವೆ. ಯಾವ ವ್ಯಕ್ತಿಗೆ ಕಚ್ಚುತ್ತವೆ ಆ ವ್ಯಕ್ತಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಸಿಗದಿದ್ದರೆ ಆತನು ಕೂಡ ಆ ನಾಯಿಯ ರೀತಿ ಆಗುತ್ತಾನೆ. ಅಂದರೆ, ಮತ್ತೊಬ್ಬ ವ್ಯಕ್ತಿಗೆ ಕಚ್ಚುತ್ತ ಹೋಗುತ್ತಾನೆ. ನಮಗೆಲ್ಲ ತಿಳಿದ ಹಾಗೆ ಕೊರೋನ ವೈರಸ್ ರೂಪಾಂತರಗೊಳ್ಳುತ್ತದೆ. ಇದೇ ಕಾರಣದಿಂದಲೇ ಈ ವೈರಸ್ ಗೆ ಲಸಿಕೆ ಕಂಡುಹಿಡಿದು ಅದನ್ನು ಕಟ್ಟಿ ಹಾಕುವುದು ಅಸಾಧ್ಯವಾಗುತ್ತಿರುವುದು. ಅಕಸ್ಮಾತ್ rabies ವೈರಾಣು ಕೂಡ ಕೊರೋನ ರೀತಿ ರೂಪಾಂತರಗೊಳ್ಳುವ ಹಾಗೆ ಇದ್ದಿದ್ದರೆ ಅದರಿಂದಾಗಿ ಮನುಷ್ಯನು zombie ರೀತಿ ಪರಿವರ್ತನೆ ಆಗುವುದರಲ್ಲಿ ಅನುಮಾನವೇ ಇರುತ್ತಿರಲಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಕಸ್ಮಾತ್ ಭವಿಷ್ಯದಲ್ಲಿ ರೂಪಾಂತರಗೊಳ್ಳುವ rabies ರೀತಿಯ ವೈರಾಣುವೊಂದು ಬಂದರೆ ಖಂಡಿತವಾಗಿ ನಾವು ಭೂಮಿಯ ತುಂಬೆಲ್ಲಾ zombiesಗಳನ್ನು ನೋಡಬಹುದು.
Follow Karunadu Today for more Interesting Facts & Stories.
Click here to Join Our Whatsapp Group
